ವಿರಹಾಂತರಂಗ

Pink Flame Abstract Wallpaper

ಸಂತೋಷಕುಮಾರ ಅತ್ತಿವೇರಿ

ನಿನ್ನ ಕಾಣದೆ ಮಾತನಾಡದೆ
ಕ್ಷಣವೇ ಯುಗವು ಅನುದಿನ
ಕಡಲೇ ಇರದ ಬರಿಯ ಮರಳು
ಬೆಂಗಾಡು ಬದುಕು ಪ್ರತಿಕ್ಷಣ

ಆಲಿಸುವ ದನಿಗಳಲೆಲ್ಲ ಬರಿ
ನಿನದೆ ಸೊಲ್ಲಿನ ಹೊಳಲಿದೆ
ಎಲ್ಲ ಲೋಹದ ಝಣಕೃತಿಯಲು
ನಿನದೆ ನೂಪುರ ದನಿಯಿದೆ


‌‌‌‌‌‌‌
ಕೊರಳ ಕಾರ್ಮೋಡ ಬಿಗಿದಿದೆ
ಹೊತ್ತು ಕಂಬನಿಯಾಗರ
ನಿನ್ನವಜ್ಞೆಯ ತಂಪು ತಾಗಿ
ಹನಿಗೂಡಿತೆಂಬುದೆ ಬೇಸರ

ಸುರಿದ ಮೇಲಿನ್ನೇನಿದೆ
ಖಾಲಿ ಆಗಸ ಈ ಮನ
ನಿನ್ನ ಪ್ರೀತಿಯ ಮಳೆಯಬಿಲ್ಲಿಗೆ
ಕಾದು ಗುನುಗಿದೆ ತಾನನ

***********

25 thoughts on “

  1. ಸುಂದರ ಅತಿ ಸುಂದರ ರಚನೆ ಮನ ಮುಟ್ಟುವಂತಿದೆ
    ಧನ್ಯವಾದಗಳು ಆತ್ಮೀಯ

  2. ವಿರಹ… ಅಂತರಂಗ… ಖಾಲಿ ಧ್ವನಿ… ಕೊರಗು ಧ್ವನಿ… ವೇದನೆ.. ತುಂಬಾ ಅದ್ಬುತ ಸಾಲುಗಳು.. ಮುಂದುವರೆಸಿ

  3. ಏನ್ ಗುರು. ಒಳ್ಳೆ ಕವನ ಬರೀತಾ ಇದೀರಾ? ಸೂಪರ್

  4. ಏನ್ ಗುರು. ಒಳ್ಳೆ ಕವನ ಬರೀತಾ ಇದೀರಾ? ಸೂಪರ್

  5. ತಾನನ ತನನ ಕುಣಿಸಿದ ಯವ್ವನ
    ನವ ತರುಣ ಈ ದಿನ ಬರೆದಾನ
    ಸುಂದರ ಕವನ ಯವ್ವನದಾ ಈ ದಿನ
    ಮುಗಿಯದಿರಲಿ ಈ ಯುಗದತನ

    ಹಾಡ ಹರೆಯಲಿ ಕುಣಿಯಲಿ ತನುಮನ
    ಸದಾ ಜೀವನದಿ ತುಂಬಿರಲಿ ಮಡದಿಯ ಆನನ
    ಕಾನನದ ಜೀವನದಲಿ ಮರೆದಿರಲಿ ಜನರಮನ
    ಇದೆ ನನ್ನ ಮನದ ಋಣ ಭೊರ್ಘರೆಯಲಿ ಸದಾ ನಿನ್ನ ಕವನ

    ಅನೇಕ ಜನ ಕವಿಯಾಗಲು ಮಾರ್ಗದರ್ಶನ
    ಅದೇ ನಿನ್ನ ಕವನದ ಗುಣ ನನಗೂ ಅದೇ ಕಾರಣ
    ಮರೆಯದಿರು ಜೀವನದ ಕ್ಷಣಗಳಣ
    ಕವಿಗೆ ಕವಿಯಾಗಿ ಮೆರೆಯುವೇ ನೀನ

  6. ಕವನ ಓದಿ ಏನೋ ಕಳೆದುಕೊಂಡ ನೋವು ಆದರೆ ಹೇಳೊಕೆ ಆಗದು…ತುಂಬಾ ಚೆನ್ನಾಗಿ ಬರೆದಿರುವೆ ಗೆಳೆಯ

Leave a Reply

Back To Top