ಕಾವ್ಯಯಾನ

ಮಳೆಯ ಹಾಡು

Watering process of thin green sprout

ಚೈತ್ರಾ ಶಿವಯೋಗಿಮಠ

ನೆಲದ ಮೇಲೆ ಪುಟಿದು
ಚಿಮ್ಮುವ ಸ್ಫಟಿಕದ ಮಣಿಗಳೋ?
ಬಾನು ಉಲಿಯುವ ಪ್ರೀತಿ
ಪ್ರೇಮದ ದನಿಗಳೋ!

ಹನಿ ಹನಿಯ ಪೋಣಿಸಿ
ಹೆಣೆದ ರತ್ನ ಖಚಿತ ಹಾರವೋ?
ಭುವಿಯ ಒಡಲ ಹಸಿವ
ತಣಿಸುವ ಆಹಾರವೋ?

ಮೇಘ ಮಾಲೆಯ ಒಡಲ
ತುಂಬಿ ತುಳುಕುವ ಜೀವಕಳೆಯೋ?
ಭೂರಮೆಯ ಗರ್ಭಕ್ಕಿಳಿದು ಜೀವ
ಚಿಗುರಿಸೊ ಜೀವನ ಸೆಲೆಯೋ?

ಕವಿಯ ಮನದಿ ಭಾವ
ಸ್ಫುರಿಸುವ ದಿವ್ಯ ಸಿಂಚನವೋ?
ಜೀವ-ಭಾವಗಳೆರಡು ತಣಿಸಲು
ಮಳೆಯ ಹಾಡಿನ ರಿಂಗಣವು

******

2 thoughts on “ಕಾವ್ಯಯಾನ

  1. ಪ್ರಶ್ನೆಗಳಲ್ಲೇ ಮಳೆಯ ವಿವರ,ವ್ಯಾಖ್ಯಾನ ನೀಡಿ…ಜೀವ ಭಾವಗಳ ಬೆಸೆದ ಜೀವ ಸೆಲೆಯ ಕವಿತೆ

Leave a Reply

Back To Top