ಕಾದಂಬರಿಕಾರರು
ಉತ್ತಮ ಕಾದಂಬರಿಕಾರರು ಚಂದ್ರು ಪಿ.ಹಾಸನ ಕುಂಬಾರ ಮಾಡಿದ ಕುಡಿಕೆಯಲ್ಲಿ ನಿಷ್ಕಲ್ಮಶ ಮನಸ್ಸಿನ ಎಣ್ಣೆ ತುಂಬಿ ಒಗ್ಗಟ್ಟಿನ ಬತ್ತಿಯನ್ನು ಹಚ್ಚಿದಾಗ ಆ ಕುಂಬಿಕೆಯು ದೀಪವೆಂಬ ಹೆಸರನ್ನು ಪಡೆಯುತ್ತದೆ.ಅದು ಹೊರಹೊಮ್ಮುವ ಪ್ರಶಾಂತ ಕಿರಣಗಳು ಅಡಗಿಸಿ ಕೊಳ್ಳುತ್ತಿರುವ ನಕಾರಾತ್ಮಕತೆಯನ್ನು ಹೊಡೆದೋಡಿಸಿ ಧನಾತ್ಮಕತೆಯನ್ನು ತುಂಬುತ್ತದೆ. ಎಲ್ಲೆಡೆ ಪ್ರಶಾಂತತೆಯನ್ನು ಹೊಮ್ಮುತ್ತದೆ.ಇದರಿಂದ ಜೀವಿಗಳ ಚೈತನ್ಯ ಪ್ರಾಪ್ತಿಯಾಗುವುದಿಲ್ಲದೆ ಬೆಳವಣಿಗೆ ಹೊಸ ಜೀವಿಗಳ ಉದಯ ಹೀಗೆ ಪ್ರತಿಯೊಂದರಲ್ಲೂ ತನ್ನ ಸ್ಥಾನವನ್ನು ಬೆಳೆಸಿ ತನ್ನ ಸುತ್ತಲೂ ಉತ್ತಮ ಪರಿಸರವನ್ನು ಸೃಷ್ಟಿಸುತ್ತದೆ. ಇಂತಹ ದೀಪದಂತೆ ಅಲ್ಲಲ್ಲಿ ಕಾದಂಬರಿಕಾರರು ಜನಿಸಿದ್ದು, ಆಧುನಿಕ ಕನ್ನಡ […]
ಕಾವ್ಯಯಾನ
ಜಿಂಕೆಗೆ ಜೀವ ಬರಲು ಧಾಮಿನಿ ಪ್ರಿಯಾ ಜಿಂಕೆಯಂತೆ ಚಿಮ್ಮುತ್ತಿದ್ದೆನು ನಾನು ಕಾರಣ ನೀನು ನನ್ನ ಸಹಕಾರದಿಂದಲೇ ಮುಗಿದಿತ್ತೆಲ್ಲ ಜೀವನ ಪೂರ್ತಿ ನಡೆಯುವಂತದ್ದಲ್ಲ ಮೈಮೇಲೆ ಹರಿದಾಡಿದಂತೆ ಹಾವು ಮುದಗೊಳಿಸುವಂತ ಕಾವು ಹಾವಿನೊಂದಿಗೆ ಸರಸವೇ ನಾಗಮಂಡಲ ನೋಡಿಲ್ಲವೇ ಬೆಣ್ಣೆಯಂತಹ ಮೈ ಕರಗಿತ್ತಲ್ಲಾ ಸೈ ಕೈ ಕಾಲುಗಳಿಗೆ ಎಂತದೋ ಹುರುಪು ಇಲ್ಲಿ ಬಲಾತ್ಕಾರವಿಲ್ಲ ಸಮರ್ಪಣೆಯೇ ಒನಪು ಜಿಂಕೆಯಂತೆಯೇ ಗಾಬರಿಯಾಗಿದ್ದೆನಾ ಕಾರಣ ನೀನೇನಾ ? ಎಂತಾ ಅದ್ರಷ್ಟವಂತೆಯೇ ನೀ ಇವನನ್ನು ಇವನೇ ಎಂದುಕೋ ಬೇಡ ಬಿಡಿ ಇಲ್ಲಿ ಅವನೇತಕೋ ಏನೂ ಕಡಿಮೆಯಿಲ್ಲ ಸಂಭ್ರಮಕೋ […]
ಕಾವ್ಯಯಾನ
ತಾರೆಗಣ್ಣು ಸ್ವಭಾವ ಕೋಳಗುಂದ ಪಾದಗಳು ಬಿರುಕು ಬಿಟ್ಟಿವೆ ನೆರಕೆ ಬಳಿದು ವರ್ಷವಾಗುತ್ತಾ ಬಂತು ದೀಪದ ಕಮಟು ಆರಿಲ್ಲ ಓರೆ ಕದ ಮುಚ್ಚಿಲ್ಲ ಪದೇ ಪದೇ ಗುಯ್ಗುಡುವ ಸೊಳ್ಳೆ ರೇಗಿಸುತ್ತಲೇ ತಾಳ್ಮೆಗೆ ಸವಾಲು ಇನ್ನೂ ಕುದಿ ಬಂದಿಲ್ಲ ಚಿಪ್ಪು ಹಸೀಟ್ಟು ಒಯ್ದು ತಿರುವಿ ಕಟ್ಟಲು ಅದರ ಗೊಣ್ಣೆ ಆಗಾಗ ಇಣುಕುತ್ತ ಸ್ವಾರೆಗೂ ಗಂಗ್ಳಕ್ಕೂ ಕಣ್ಣು ಕೊಂಡಿ ಹಾಕುತ್ತಿದೆ ಉರಿಯದ ಹೊಲೆ, ಹಾಲಿಲ್ಲದ ಮೊಲೆ ಹರುಕು ಅಂಗಿ ಹಸಿವಿನ ಜೊತೆ ಕಾದು ಕಾದು ಸೋತಿತ್ತು ತೇಪೆಗೆ ಸೂಜಿಗಣ್ಣಾಗಿ ಸೂರಂಚಲಿ ತೂಗಿತ್ತು […]
ಪ್ರಸ್ತುತ
ಮತ್ತೆ ಸಿಕ್ಕಿದ್ದಳು ವಸಂತ ಪ್ರಮೀಳಾ .ಎಸ್.ಪಿ. ನಿತ್ಯವೂ ಶಾಲೆಗೆ ಹೋಗುವ ದಾರಿಯುದ್ದಕ್ಕೂ ನನ್ನ ಗಂಡನನ್ನು ಬೈದುಕೊಂಡೇ ಹೋಗುತ್ತೇನೆ.ಇವರಿಂದ ನನಗೆ ಸಮಯ ಮೀರಿತು,ಮನೆಗೆ ಬಂದ ಅತಿಥಿಗಳು ಹೊರಡಲು ಸಿದ್ಧರಾದರೂ ಅವರಿಗೆ ತಿಂಡಿ ಕಾಫಿ ಕೊಡಲು ಅದೇಶಿಸುತ್ತಾರೆ.ಇಲ್ಲವೋ ಹೊರಟ ಹೊತ್ತಿಗೆ ಚಹಾ ಕೇಳುತ್ತಾರೆ ಎಂದೆಲ್ಲಾ ಅಂದುಕೊಂಡು ಆತುರದಲ್ಲಿ ಹೋಗುವ ದಾರಿಯಲ್ಲಿ ಸಿಗುವ ಮನೆ ‘ವಸಂತಳದ್ದು’. ಸಂಜೆ ಬರುವ ವೇಳೆಗೆ ಬಾಗಿಲಲ್ಲಿ ನಿಂತು ಮುಗುಳ್ನಗೆ ಬೀರಿ ಮಾತು ಪ್ರಾರಂಭಿಸುತ್ತಾಳೆ.ಒಂದೊಂದು ದಿನಕ್ಕೆ ಒಂದೊಂದು ಘಟನೆ ಹೇಳಿಬಿಡುತ್ತಾಳೆ.ಹಾಗೆಂದು ಎಂದೂ ಸಂಪೂರ್ಣವಾಗಿ ಹೇಳಿದಳು ಎಂದಿಲ್ಲ.ಇಡೀ ಬೀದಿಯಲ್ಲಿ […]
ಅನುವಾದ ಸಂಗಾತಿ
ಮೂಲ ಕವನ ಡಾ.ಶಿವಕುಮಾರ್ ಮಾಲಿಪಾಟೀಲ,ಗಂಗಾವತಿ ಅವರ “ದೇವರು ಹೇಳುತ್ತಿದ್ದಾನೆ ವಿಶ್ರಾಂತಿ ಪಡೆಯಿರಿ” ಇಂಗ್ಲೀಷಿಗೆ ನಾಗರೇಖಾ ಗಾಂವಕರ್ ಸಂಗಾತಿಯ ಓದುಗರಿಗೆ ಮೂಲ ಮತ್ತು ಅನುವಾದಿತ ಕವಿತೆಗಳೆರಡನ್ನೂ ಇಲ್ಲಿ ನೀಡಿದೆ ದೇವರು ಹೇಳುತ್ತಿದ್ದಾನೆ ಸಾಕು ನೀವೀಗ ವಿಶ್ರಾಂತಿ ಪಡೆಯಿರಿ ಗುಡಿ, ಗುಂಡಾರ, ಮಸೀದಿ, ಚರ್ಚೆಗಳಿಗೆ ಬಹಳಷ್ಟು ಅಲೆದಿದ್ದಿರಿ, ಮನವಿಲ್ಲದೆ ನನ್ನನ್ನು ಬಹಳಷ್ಟು ಹುಡುಕಿದ್ದಿರಿ ಸಾಕು ನೀವೀಗ ವಿಶ್ರಾಂತಿ ಪಡೆಯಿರಿ ಕಾಯಕ ಬಿಟ್ಟು ಸಾಮೂಹಿಕ ಭಜನೆ, ಪ್ರಾರ್ಥನೆ ಏನೇನೋ ಜಾತ್ರೆ ,ಉತ್ಸವಗಳನ್ನು ಮಾಡಿದಿರಿ ಸಾಕು ನೀವೀಗ ವಿಶ್ರಾಂತಿ ಪಡೆಯಿರಿ. ಅನ್ನ ,ಆಹಾರವಿದ್ದರೂ […]
ಕಾವ್ಯಯಾನ
ಕೊರೊನ ಕಾಲದಲ್ಲಿ… ಶ್ವೇತಾ ಎಂ ಯು. ಕರೋನಾ ಕಾಲದಲ್ಲಿ ಕೂತುಂಡು ಮೈ ಭಾರ ಹೆಚ್ಚಿಸಿದವರ ನಡುವೆ ದುಡಿಮೆಯಿಲ್ಲದೆ ಜೀವಭಯದಿಂದ ಬದುಕೊ ಹಠವು ನಾಳೆ ಹೇಗೆಂದು ಸೊರಗಿದವರು ಅನಾಯಾಸವಾಗಿ ಸಿಕ್ಕ ರಜೆಗೆ ಹಾಯಾಗಿ ಪ್ರವಾಸ ಮಾಡಲಾಗದೆ ಮರುಗುತಿರುವ ಮಂದಿಯ ನಡುವೆ ತವರ ಸೇರಿಕೊಳ್ಳಲು ಉಟ್ಟ ಬಟ್ಟೆಯಲಿ ಬರಿಗಾಲಲ್ಲಿ ನಡೆದು ಬೀದಿ ಪಾಲಾದವರು ಚೆಂದ ಸೀರೆಯುಟ್ಟು ತುಟಿಗೊಂದಿಷ್ಟು ಹೆಚ್ಚೇ ರಂಗು ಬಳಿದ ಲಲನೆಯರು ರಾಜಕೀಯ ಭವಿಷ್ಯವು ಲೆಕ್ಕಾಚಾರವು ಸಹಾಯ ಹಸ್ತ ಚಾಚಿ ತೆಗೆದ ಸೆಲ್ಫಿಗೆ ನಗುವ ಚೆಲ್ಲಿ, ಕೈ ಚಾಚಿದ […]
ಕಾವ್ಯಯಾನ
ಗಝಲ್ ಹೇಮಗಂಗಾ ಕೊರೋನಾ ಕನಸುಗಳ ಕಮರಿಸಿದೆ ಮರಳಿ ಊರ ಸೇರುವುದು ಹೇಗೆ ? ಹಾಳು ಸುರಿವ ಬೀದಿ ಮಸಣವಾಗಿದೆ ಮರಳಿ ಊರ ಸೇರುವುದು ಹೇಗೆ ? ಶಾಂತವಾಗಿ ಹರಿಯುತ್ತಿದ್ದ ಬಾಳಕಡಲಿನಲಿ ಎಣಿಸದ ಉಬ್ಬರವಿಳಿತ ಇರುವ ನೆಲೆ ಜೀವಗಳ ನಲುಗಿಸಿದೆ ಮರಳಿ ಊರ ಸೇರುವುದು ಹೇಗೆ ? ದುಡಿಮೆ ಆದಾಯವಿಲ್ಲದ ಬದುಕು ನರಕಸದೃಶವಲ್ಲದೇ ಮತ್ತೇನು ? ತಿನ್ನುವ ಅನ್ನಕೂ ತತ್ವಾರವಾಗಿದೆ ಮರಳಿ ಊರ ಸೇರುವುದು ಹೇಗೆ ? ಅನುಕಂಪವಿಲ್ಲದ ಸಾವು ಹಗಲಲ್ಲೂ ಭೀತಿಯ ಕಾರಿರುಳ ಹರಡಿದೆ ಬೆದರಿದ ಮನ […]
ಕಾವ್ಯಯಾನ
ಗಝಲ್ ಸಹದೇವ ಯರಗೊಪ್ಪ ಬದುಕಿಗೆ ಅರ್ಥ ಕಲ್ಪಿಸಲು ಉಲಿದೆ ನೀ ಬರಲೇ ಇಲ್ಲ ಒಲವಿಗೆ ಬಲವ ತುಂಬಲು ಕೂಗಿದೆ ನೀ ಬರಲೇ ಇಲ್ಲ ಬೆವರಿನ ಅಂಬಲಿ ಉಂಡು ಒಡಲ ಹಂಬಲ ತಣಿಸುವೆ ಬಾ ಪ್ರೇಮದ ಎಲ್ಲೆ ಮೀರಲು ಗೋಗರೆದೆ ನೀ ಬರಲೇ ಇಲ್ಲ ಇರುಳ ಕಾಲುದಾರಿ ಕತ್ತಲು ಮೆತ್ತಿ ಮೈ ಮುರಿಯುತಿದೆ ಭಾವನೆಗಳ ಬೆಳಕಲಿ ಒಂದಾಗಲು ಕರೆದೆ ನೀ ಬರಲೇ ಇಲ್ಲ ಮದಿರೆಯಲಿ ಅಧರ ಕಳಚಿ ನೂರು ನವಿಲು ಕುಣಿದಂತಾಗಿದೆ ಭಾರವಾದ ತನು ಹಗುರುಗೊಳಿಸಲು ಕೈ ಚಾಚಿದೆ […]
ಕಾವ್ಯಯಾನ
ಗಝಲ್ ಈರಪ್ಪ ಬಿಜಲಿ ಕಗ್ಗೊಲೆಯಾದ ಕನಸುಗಳನು ಗಂಟುಕಟ್ಟಿ ಹೊತ್ತುಕೊಂಡು ನಡೆದಿದ್ದೇವೆ ಹತ್ಯೆಯಾದ ಮನಸುಗಳನು ವಸ್ತ್ರದಲಿ ಸುತ್ತಿಕೊಂಡು ನಡೆದಿದ್ದೇವೆ ।। ವಿಧಿಯಾಟಕೆ ಬದುಕು ಬಲಿಯಾಗಿ ಕೊನೆಯಾದಂತೆ ಕಾಣುತಿದೆ ಬೂಟಾಟಿಕೆ ಮಾತಿಗೆ ಮರುಳಾಗಿ ಬಾಳಬಂಡಿ ಹತ್ತಿಕೊಂಡು ನಡೆದಿದ್ದೇವೆ ।। ಶ್ರಮಿಕರು ಸತ್ತರು ನೆತ್ತರು ಬೀದಿಬೀದಿಗೆಲ್ಲ ನದಿಯಾಗಿ ಹರಿದಿದೆ ಧನಿಕರು ಮೂಗಿಗೆ ಸವರಿದ ತುಪ್ಪವನು ಮೆತ್ತಿಕೊಂಡು ನಡೆದಿದ್ದೇವೆ ।। ಹೊತ್ತೊತ್ತಿಗೂ ಅನ್ನಆಹಾರ ನೀರಿಲ್ಲದೇ ಕ್ಷಣಕ್ಷಣವು ಬಳಲಿದೇವು ಉಸಿರಳಿವ ಮುನ್ನ ಗೂಡುನೆನೆದು ಮನೆ ಸೇರುವಾಸೆ ಕಟ್ಟಿಕೊಂಡು ನಡೆದಿದ್ದೇವೆ।। ಬೆಂದುಬೆಂಡಾದ ಜೀವಿಗಳ ಮೊಗದಲಿ ಬಿಜಲಿ […]
ಕಥಾಯಾನ
ಮನದ ಮುಗಿಲ ಹಾದಿ ರೇಶ್ಮಾ ಗುಳೇದಗುಡ್ಡಾಕರ್ ಕುಸುಮಾ- ಸರಳ ರೂಪ ,ಯಾವ ಹಮ್ಮು ಬಿಮ್ಮುಗಳಿಗೆ ಅವಳಲ್ಲಿ ಜಾಗವಿರಲಿಲ್ಲ . ಬ್ಯಾಂಕ್ ಒಂದರ ಉದ್ಯೋಗ. ಪ್ರತಿಷ್ಠಿತ ಕಂಪನಿಯಲ್ಲಿ ಉನ್ನತ ಹುದ್ದೆ ಯ ಪತಿ ಅತ್ತೆ-ಮಾವನ ಒಬ್ಬನೇ ಮಗ. ಮುಂದಿನ ಬೀದಿಯಲ್ಲಿ ನಾದಿನ ಮನೆ ಸ್ಥಿತಿ ವಂತ ಕುಟುಂಬ . ಮದುವೆಯಾಗಿ ಹತ್ತು ವರ್ಷ ಕಳೆದರೂ ಅವಳಿಗೆ ಮಗುವಿನ ಭಾಗ್ಯ ಇರಲಿಲ್ಲ . ಇದಕ್ಕೆ ಅವಳಲ್ಲಿ ಯಾವ ದೋಷವು ಇರಲಿಲ್ಲ..!!! . ತನ್ನಲ್ಲಿ ಇಲ್ಲದ ತಪ್ಪಿಗೆ ಅವಳಲ್ಲಿ ಮಾಗಲಾರದ ಗಾಯವಾಗಿ […]