ನೀನಿನ್ನೂ ಅಪರಿಚಿತನೇನು….?

ನೀನಿನ್ನೂ ಅಪರಿಚಿತನೇನು….?

ಅನುವಾದಿತ ಕವಿತೆ ನೀನಿನ್ನೂ ಅಪರಿಚಿತನೇನು….? ಇಂಗ್ಲೀಷ್ ಮೂಲ-ವಿಜಯಲಕ್ಷ್ಮೀ ಪುಟ್ಟಿ ಕನ್ನಡಕ್ಕೆ-ಸಮತಾ ಆರ್. ನೀನಿನ್ನೂ ಅಪರಿಚಿತನೇನು….? ಇತ್ತೀಚೆಗೆ ಯಾಕೋನೀ ಅಪರಿಚಿತ ಅನಿಸತೊಡಗಿಮತ್ತಿನ್ನೊಮ್ಮೆ ನಂಟು ಬೆಳೆಸಲು ಯತ್ನಿಸಿದರೂಎದೆಯಲ್ಲಿ ಏನೋಪ್ರಶ್ನೆಯೊಂದುತಡಕುತಿದೆಏನಾಯಿತು?ಯಾಕೀ ಕೋಪ?ನನ್ನ ತಪ್ಪೇನು?ಎದುರಾದಾಗ ಹೇಗೆ ದಿಟ್ಟಿಸಲಿ ನಿನ್ನ ಕಣ್ಣ ? ಆದರೂ ಹೊಸ ಭರವಸೆ,ಹೊಸ ಪಯಣ,ಹೊಸ ಪ್ರಮಾಣ ಕಾಯುತಿರುವೆಹೃದಯತುಂಬಿ ನಾ..ಯಾರದೋ ಆಗಮನಅರಿಯದ ತಳಮಳ ಗಲಿಬಿಲಿ ಸುಗಂಧವೊಂದು ಗಾಳಿಯಲಿ ತೇಲಿದಂತೆ ನಿನ್ನ ಸಾವಿರಾರು ನೆನಪುಗಳು. ಇಂದೇನಿದು ನನ್ನಲ್ಲಿ,ಯಾವತ್ತೂ ನಾನರಿಯದ ಈ ಚಡಪಡಿಕೆ.ಹಿಂದೆಂದೂ ಇರದಿದ್ದ ಮನೋಕಾಮನೆ.ಕಾತುರದ ಕಂಗಳು ಹುಡುಕುತ್ತಿವೆ ನಿನ್ನನ್ನೇ.ಎನ್ನ ಜೀವನದ ಹೊತ್ತಿಗೆಯ ಚಿತ್ರಪಟವಾದಅವನಿಗಾಗಿ […]

ನಿರಾಕರಣ

ಕಥೆ ನಿರಾಕರಣ ಎಸ್.ನಾಗಶ್ರೀ ರಾಮಕ್ಕನವರು ಅವರ ರೇಷ್ಮೆಸೀರೆಗಳನ್ನೆಲ್ಲಾ ನೆಂಟರಿಷ್ಟರಿಗೆ, ಆಪ್ತರಿಗೆ ಹಂಚಿ ಇನ್ನು ಮೇಲೇನಿದ್ದರೂ ಹತ್ತಿ ಸೀರೆಯಷ್ಟೇ ಉಡುವುದೆಂಬ ನಿರ್ಧಾರ ಪ್ರಕಟಿಸಿದಾಗ ಅವರಿಗೆ ಎಪ್ಪತ್ತೈದಾಗಿತ್ತು. ಹಾಲಿಗೆ ಅರಿಶಿನ ಬೆರೆಸಿದಂತಹ ಮೈಬಣ್ಣ, ಕಡುಗಪ್ಪು ಕಣ್ಣು, ತುಸು ಉದ್ದವಾದ ಮೂಗು, ತುಂಬುದುಟಿ, ಪುಟ್ಟ ಚೆಂಡಿನ ಗಾತ್ರದ ತುರುಬಿನ ರಾಮಕ್ಕ ನೋಡಿದರೆ, ಮತ್ತೆ ತಿರುಗಿ ನೋಡಬೇಕೆನ್ನಿಸುವ ಲಕ್ಷಣವಂತೆ. ಮುತ್ತೈದೆಯಾಗಿದ್ದಾಗಿನ ಕಾಲದಲ್ಲಿ ಮಹಾಲಕ್ಷ್ಮಿಯೇ ಎಂದು ಜನ ಕೈಯೆತ್ತಿ ಮುಗಿಯುತ್ತಿದ್ದರಂತೆ. ಕರಿಮಣಿ ಸರ, ಕಾಲುಂಗುರ ತೆಗೆದರೂ ಚಿನ್ನದ ಸರ, ವಜ್ರದ ಮೂಗುತಿ, ಚಿನ್ನದ ಎರಡೆರಡು […]

ನಮ್ಮ ನಡುವಿನ  ಜೀವಪರ ಕಾಳಜಿಯ ಕವಯಿತ್ರಿ ವಿಜಯಶ್ರೀ ಹಾಲಾಡಿಯವರು  ಸಂಗಾತಿಗಾಗಿ ಬರೆಯುತ್ತಿದ್ದಾರೆ. ಅಂಕಣದ ಮೊದಲ ಕಂತು ನಿಮ್ಮ ಮುಂದಿದೆ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಈ ಅಂಕಣ ಪ್ರಕಟವಾಗಲಿದೆ

ಧಾರಾವಾಹಿ ಆವರ್ತನ ಅದ್ಯಾಯ-35 ಗುರೂಜಿಯವರು ರೋಹಿತ್ ನ ನಿರುತ್ಸಾಹವನ್ನು ಗಮನಿಸಿದರಾದರೂ ಅದನ್ನು ಗಣನೆಗೆ ತೆಗೆದುಕೊಳ್ಳದೆ, ‘ದಾರಿ ಬಹಳ ಸುಲಭದ್ದೇ ರೋಹಿತರೇ. ನಮ್ಮ ಜನಸಾಮಾನ್ಯರಲ್ಲಿ ಯಾವೊಂದು ಹೊಸ ಬದಲಾವಣೆ ತರಬೇಕಿದ್ದರೂ ಅಥವಾ ಅವರು ತಮ್ಮ ಜೀವನದಲ್ಲಿ ಯಾವುದೇ ಲಾಭ, ಯಶಸ್ಸು ಗಳಿಸಬೇಕಿದ್ದರೂ ಅಂಥವರೊಳಗೆ ಯಾವುದಾದರೊಂದು ವಿಷಯದಲ್ಲಿ ಅತಿಯಾದ ಭಯವಿರಬೇಕು. ಆಗಲೇ ಅವರು, ನಮ್ಮ ದೇವರು ದಿಂಡರುಗಳ ಮೊರೆ ಹೋಗಲು ಸಾಧ್ಯ ಎಂಬುವುದನ್ನು ನಾವು ಅನುಭವದಿಂದಲೇ ಕಂಡಿದ್ದೇವೆ. ಹೀಗಾಗಿ ಅವರಲ್ಲಿ ಅಂಥ ಸಾತ್ವಿಕ ಭಯವೊಂದನ್ನು ನಾವು ಸೃಷ್ಟಿಸಬೇಕು. ಅದು ಹೇಗೆ? […]

ಅಂಕಣ ಬರಹ

‘ ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ‌.

ಸಾಧಕಿಯರ ಯಶೋಗಾಥೆ

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

ನಾಯಕ

ಅವನೇನು ಸಾಮಾನ್ಯನಲ್ಲ;
ಅಚ್ಯುತನ ಜನನ ತಾಣ ಪ್ರಾಪ್ತಿ ಕೆಲಸಗಳಲಿ
ಅನವರತ ನಿರತನಾದರೂ ಸಿಕ್ಕಿಬೀಳದವ

ಮಾತಾಗುವ ಮೌನ ಮತ್ತು ಮೌನದೊಳಗಣ ಮಾತು

ವೇದಿಕೆಯಲ್ಲಿದ್ದ ಮತ್ತೊಬ್ಬ ಮುಖಂಡ ಮೌನವಾಗಿ ಗಲ್ಲದ ಮೇಲೆ ಕೈಯ್ಯಿಟ್ಟು ಕುಳಿತಿದ್ದ. ತನ್ನ ವಿರುದ್ಧ ಬಂದ ಅಭಿಪ್ರಾಯಗಳನ್ನು ಆತ ಮನಸ್ಸಿಗೆ ಹಚ್ಚಿಕೊಂಡಂತೆ ಕಾಣಿಸಲೇ ಇಲ್ಲ. ಆತನ ಮೌನಪರ್ವತವನ್ನು ಮೀರುವುದು ತಮ್ಮಿಂದಾಗದ ಕೆಲಸ ಎಂದುಕೊಂಡ ಭಿನ್ನಾಭಿಪ್ರಾಯಿಗಳು ಆತನನ್ನು ಕೆಣಕುವುದಕ್ಕೆ ಹೋಗಲೇ ಇಲ್ಲ.

Back To Top