ಅಂಕಣ ಬರಹ
‘ ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ.
ಸಾಧಕಿಯರ ಯಶೋಗಾಥೆ
ಸಮಾಜ ಸೇವಕಿ ಅಬಲಾ ಬೋಸ್ (೧೮೬೫-೧೯೫೧)
ಅಬಲಾ ಲೇಡಿ ಬೋಸ್ ಒಬ್ಬ ಭಾರತೀಯ ಸಮಾಜ ಸೇವಕಿ. ಮಹಿಳಾ ಶಿಕ್ಷಣಕ್ಕಾಗಿ ಮತ್ತು ವಿಧವಾ ಮಹಿಳೆಯರಿಗಾಗಿ ಮಾಡಿದ ಉತ್ತಮ ಕೆಲಸಗಳಿಗಾಗಿ ಇವರು ಹೆಸರುವಾಸಿಯಾಗಿದ್ದಾರೆ.
ಅಬಲಾ ಬೋಸ್‌ರವರು ೮ ಆಗಸ್ಟ್ ೧೮೬೫ ರಂದು ಬ್ರಿಟೀಷ್ ಭಾರತದ ಬ್ಯಾರಿಸಲ್, ಬಂಗಾಳದ ಪ್ರೆಸಿಡೆನ್ಸಿಯಲ್ಲಿ ಜನಿಸಿದರು. ಇವರ ತಂದೆ ಬ್ರಹ್ಮಸಮಾಜ ಸುಧಾರಕರಾದ ದುರ್ಗಾ ಮೋಹನದಾಸ್, ಇವರ ಸಹೋದರ ಸಲೇ ರಂಜನ್ ದಾಸ್ ಮತ್ತು ಸಹೋಸರಿ ಸರಳಾ ರೈ ಹಾಗೂ ಇವರ ಸಹೋದರ ಸಂಬಂಧಿ ಭಾರತದ ಮುಖ್ಯ ನ್ಯಾಯಮೂರ್ತಿ ಸುಧಿರ ರಂಜನ್ ದಾಸ್. ಅಬಲಾರವರು ವಿಜ್ಞಾನಿ ಸರ್ ಜಗದೀಶ್ ಚಂದ್ರ ಬೋಸ್ ಅವರನ್ನು ೧೮೮೭ ರಲ್ಲಿ ವಿವಾಹವಾದರು.
ಅಬಲಾರವರು ತಮ್ಮ ಆರಂಭಿಕ ಶಿಕ್ಷಣವನ್ನು ಬಂಗಾಳ ಮಹಿಳಾ ವಿದ್ಯಾಲಯ ಮತ್ತು ಬೇಥೂನ್ ಸ್ಕೂಲ್‌ನಲ್ಲಿ ಪಡೆದರು. ೧೮೮೧ ರಲ್ಲಿ ಈ ಶಾಲೆಯಲ್ಲಿ ಮಹಿಳೆಯರಿಗೆ ವಿಧ್ಯಾರ್ಥಿ ವೇತನದ ಜೊತೆಗೆ ಶಾಲೆಯಲ್ಲಿ ಪ್ರವೇಶವನ್ನು ನೀಡುತ್ತಿದ್ದರು. ಅಬಲಾರವರಿಗೆ ಕಲ್ಕತ್ತಾ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ದೊರೆಯದ ಕಾರಣ ೧೮೮೨ ರಲ್ಲಿ ಮದ್ರಾಸ್ (ಈಗಿನ ಚೆನೈ) ಗೆ ಮೆಡಿಷನ್ ಅಧ್ಯಯನ ಮಾಡಿದರು. ಅಲ್ಲಿ ಅವರಿಗೆ ಬಂಗಾಳ ಸರ್ಕಾರವು ಮೆಡಿಷನ್ ಅಧ್ಯಯನಕ್ಕಾಗಿ ವಿಧ್ಯಾರ್ಥಿ ವೇತನವನ್ನು ನೀಡಿತು. ಅಬಲಾರವರು ಮೆಡಿಷನ್ ಅಂತಿಮ ವರ್ಷದ ಪರೀಕ್ಷೆಯನ್ನು ಬರೆದು ಫಲಿತಾಂಶ ಪ್ರಕಟಣೆಗಾಗಿ ಕಾಯದೇ ಅನಾರೋಗ್ಯದ ಕಾರಣ ತಮ್ಮ ಊರಿಗೆ ತೆರಳಿದರು.
ಮಾಡರ್ನ್ ರಿವ್ಯೂ ಎಂಬ ನಿಯತಕಾಲಿಕೆಯು ಅಸ್ತಿವಾದವನ್ನು ಒಬ್ಬ ಶಿಕ್ಷಣ ತಜ್ಞೆಯ ಜೊತೆಗೆ ಒಬ್ಬ ಸ್ತ್ರೀವಾದಿಯೂ ಕೂಡ ಆಗಿದ್ದಾರೆ’ ಎಂದು ಬರೆದು ಪ್ರಕಟಿಸಿತು. ಅಬಲಾರವರು ಸದಾ ಮಹಿಳೆಯರು ಉತ್ತಮ ಶಿಕ್ಷಣ ಪಡೆಯಬೇಕು ಎಂದು ವಾದಿಸುತ್ತಿದ್ದರು. ಅಬಲಾರವರು ‘ಹುಡುಗಿಯರು ಗಂಡನ ಸೇವೆಯಲ್ಲಿ ಅಥವಾ ಅತ್ತೆ ಮಾವನ ಮನೆಯಲ್ಲಿ ಹೊಂದಿಕೊಂಡು ಹೋಗಲು ಕಲಿಸುತ್ತೇವೆ ಜೊತೆಗೆ ಅದಕ್ಕೆ ಸಂಬಂಧಿಸಿದ ಹಾಗೆ ಶಿಕ್ಷಣವನ್ನು ನೀಡುತ್ತೇವೆ ಹೊರತು ಅವರು ಕೂಡ ಯಾಕೆ ಪುರುಷರ ಸಮಾನರಲ್ಲ ಎಂದು’ ಯಾವಾಗಲೂ ವಾದಿಸುತ್ತಿದ್ದರು. ಅಬಲಾರವರು ಹೇಗಿಲ್ಲ ಮಹಿಳೆಯರ ಕುರಿತು ವಿಶೇಷ ಕಾಳಜಿ ಹೊಂದಲು ಕಾರಣವು ಇತ್ತು. ತನ್ನ ಜೊತೆಗೆ ಬೆಥೂನ್ ಶಾಲೆಯಲ್ಲಿ ಓದುತ್ತಿದ್ದ ಸಹಪಾಠಿ ಕಾಮಿನಿ ರಾಯ್‌ಯವರಿಂದ ಮಹಿಳಾವಾದ ಅಥವಾ ಸ್ತ್ರೀವಾದವನ್ನು ಕಲಿತಿದ್ದರು.
ಅಬಲಾ ಬೋಸ್‌ರವರು ೧೯೧೦ ರಿಂದ ೧೯೩೬ರ ವರೆಗೆ ಬಹ್ಮೋ ಬಾಲಿಕಾ ಶಿಕ್ಷಾಲಯದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.
ಅಬಲಾರವರು ೨೬ ಏಪ್ರಿಲ್ ೧೯೫೧ ರಂದು ನಿಧನರಾದರು. ಅಬಲಾರವರ ಬಳಕೆಯ ಕೆಲವು ವಸ್ತುಗಳು ಇಂದಿಗೂ ದಕ್ಷಿಣ ಅಮೇರಿಕಾದ ಡಿಜಿಟಲ್ ಅಕ್ಟೇವ್ (ಸಾಡಾ) ದಲ್ಲಿ ಇರಿಸಲಾಗಿದೆ.
….
ಡಾ.ಸುರೇಖಾ ರಾಠೋಡ್
ಸುರೇಖಾ ರಾಠೋಡ್ ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು: ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿದೆ