ಗಂಗಾಧರ.ಎಂ.ಬಡಿಗೇರ ಕವಿತೆಗಳು
ಕವಿತೆ-01
ಸಂತಸದ ಕ್ಷಣಗಳು
ಅನುಗಾಲ ಆನಂದ ನೀಡಲಿ
ಸಂಕಷ್ಟದ ದಿನಗಳು
ಅನಾಥವಾಗಿ ಓಡಿ ಹೋಗಲಿ
ನೋವುಗಳು ನಲಿವಿನ
ತೋರಣ ಕಟ್ಟಲಿ……!!
ನಲಿವುಗಳು ಒಲವಿನ
ರಂಗೋಲಿ ಹಾಕಲಿ….!!
ನೀವಿಡುವ ಪ್ರತಿ ಹೆಜ್ಜಗಳು
ಇತಿಹಾಸ ಸೃಷ್ಟಿಸಲಿ
ನೀವಾಡುವ ಪ್ರತಿ ಮಾತುಗಳು ಮೌನ ಮುರಿದು ಪ್ರೀತಿಯ ಹೂ
ಮಳೆಗರಿಯಲಿ….!!
ಬತ್ತಿ ಹೋದ ಸಂಬಂಧಗಳ
ವರತೆಗಳು ಜೀನುಗಿ ಬರಲಿ
ಬಿತ್ತಿದ ಬೆಳಗಳಲಿ ಬತ್ತದ
ಬೆಳದಿಂಗಳ ಸೃಷ್ಟಿ……!!
ಜೀವ ಭಾವಗಳ ದೃಷ್ಟಿಯಾಗಲಿ….!!
ಬದುಕು ಜಟಕಾ ಬಂಡಿಗೆ
ಗೆಲುವಿನ ಬಲವಿರಲಿ
ಬರವಣಿಗೆಯ ಬಾಹುಗಳಲಿ
ಭಾವನೆಗಳ ಬೆಳಕು ಮೂಡಲಿ……!!
ಗಜಲ್ಗಳ ಸಾಲುಗಳಲಿ
ಪ್ರೇಮದ ಮಹಲ್ ಇರಲಿ
*****
ಕವಿತೆ-02
ಕಾಯುತ್ತಿರುವೆ ನಿನಗಾಗಿ
ಕಾಯ್ದ ಕಂಗಳು ಬತ್ತಿ ಹೋಗಿವೆ……….!!
ನೆಯ್ದ ನೇಕಾರನ ಕರ ವಸ್ತ್ರದಿ
ರೆಪ್ಪೆಗಳು ಮೂಕ ವೇದನೆ
ಅನುಭವಿಸಿವೆ…..!!
ಸೋತು ಹೋದ ಮನಕೆ
ನಿನ್ನದೊಂದು ನಗೆಯ ಸಾಕು
ಸಣ್ಣದೊಂದು ಸ್ವರ ತೇಲಿ
ಬಂದರೆ ಈ ನೇಸರಿನ ಉಸಿರಂತೆ…. !!
ಬೇಸರ ಕಳೆದು ಬಿಸಿಲ
ಕಂಬಳಿ ಹೊದ್ದಂತೆ…!!
ನೇಗಿಲು ನೆಲದ ಬಸಿರು ಕೆದಕಿದಂತೆ…..!!
ನಿನ್ನ ನೆನಪು ಎದೆಯ
ಹೊಲವ ಹೊಕ್ಕಿದೆ…!!
ಕಕ್ಕಾ ಬಿಕ್ಕಿಯಾದ ನೋಟಗಳು…..!!
ಕಾರಣ ಹೇಳದೆ ನುಣಚಿ
ಕೊಳ್ಳುತಿವೆ ….!!
ನೀ ಹಚ್ಚಿಟ್ಟ ಹಣತೆಯೊಳಗೆ
ಒಳಿತು ಕೆಡುಕುಗಳ ಹಾದಿ
ಅರಿತು ನಡೆದರೆ……!!
ಭದ್ರ ಬುನಾದಿ…..!!
ಮರೆತು ನಡೆದರೆ….!!
ಪ್ರಬುದ್ದತೆಯ ಸಮಾದಿ..!!
ನೀ ನಕ್ಕರೆ ಆಗಸದ
ಮೋಡಗಳು ಚುಂಬಿಸಿದಂತೆ
ನೀ ನಡೆದರೆ ತಾರೆಗಳು
ಹೊಂಬೆಳಕ ಚೆಲ್ಲಿದಂತೆ
ನೀ ನುಡಿದರೆ….!!
ಮುಗಿಲಲಿ ಕೊಲ್ಮಿಂಚಂತೆ
ಕಾಯುತಿರುವೆ
ನಿಧಗಾಗಿ……!!
ಸಮರಸವೇ ಜೀವನ
ಸೋಮರಸವೇ ಯೌವ್ವನ
ಪ್ರೇಮರಸವೇ ಪಾವನ…!!
ಪ್ರೀತಿ ತೀರವೇ ಹೂ ಬನ..!!
*****
ಕವಿತೆ-03
ಬರಿತೀನಿ ನನ್ನೊಳಗಿನ ಭಾವಗಳ ಬಳ್ಳಿ ಬೆಳೆದು
ಊರುಕೇರಿ ಹಬ್ಬುವಂಗ
ಬರಿತೀನಿ….!!
ಬರಿತೀನಿ ಜಾತಿಗೀತಿಗಳ
ಗೀಳು ಕಳೆದು ಒಡಲಾಳದ
ಪ್ರೀತಿ ಚಿಗುರುವಂಗ ಬರಿತೀನಿ….!!
ಬರಿತೀನಿ ಸಾಧನೆಗಳ ಶಿಖರ
ವೇರಿ ಪ್ರಖರತೆ ಒಡಮೂಡಿ
ಪ್ರಬುದ್ದತೆ ಮನಗಳು ಮೆಚ್ಚುವಂಗ ಬರಿತೀನಿ….!!
ಬರಿತೀನಿ ನಾನು ನನ್ನದೆನ್ನುವ
ಹಮ್ಮೀನ ಕೋಟೆಗಳ ಕಡಿದು
ಒಮ್ಮನಸ್ಸಿನ ಪ್ರೇಮ ಉಕ್ಕುವಂಗ ಬರಿತೀನಿ…..!!
ಬರಿತೀನಿ ಎದೆಯೊಳಗಿನ
ನೋವು ಹಾಡಾಗಿ ಒಲಿದ
ಹೃದಯಗಳು ಒಂದಾಗಂಗ
ಬರಿತೀನಿ……!!
ಬರಿತೀನಿ ಅರಿವು ಆಚಾರದ
ಮಧ್ಯ ವಿಚಾರಗಳ ಕವಾಲಿ
ಕೇಳುವಂಗ ಬರಿತೀನಿ…!!
ಬರಿತೀನಿ ಬೆಂದ ಮನಗಳಲಿ
ಅಂದದ ಸಾಲುಗಳ ಮಧು
ಹೀರುವಂಗ ಬರಿತೀನಿ….!!
ಬರಿತೀನಿ ಲೋಕ ಲಾಕಗಳ
ಮಧ್ಯ ಪ್ರೇಮಧರೆಯ ಲೋಕ ಸೃಷ್ಟಿಯು ಜಗದ
ದೃಷ್ಟಿಯಾಗುವಂಗ
ಬರಿತೀನಿ…….!!
ಬರಿತೀನಿ ನಾ ಬರಿತೀನಿ
ನೀ ಬರಿತೀನಿ ಅನ್ನುವರ
ಮಧ್ಯ ಬರೆದ ಬರವಣಿಗೆ
ಬೆಳಕು ಬತ್ತದ ಬೆಳದಿಂಗಳ
ಆಗುವಂಗ ಬರಿತೀನಿ….!!
ಬರಿತೀನಿ ನನ್ನಕ್ಕ ತಂಗಿಯರ
ಎದೆಯ ನೋವುಗಳ ಮರೆಸಿ
ನಿಮ್ಮೊಂದಿಗೆ ನಾವಿದ್ದೇವೆಂಬ
ಭಾವ ಮೂಡುವಂಗ
ಬರಿತೀನಿ……..!!