ಕವಿತೆಯೆಂದರೆ

ಗಜಲ್

ಗಜಲ್ ಅಂತರಂಗದ ಪ್ರೀತಿಯ ದೀಪ ಬೆಳಗಬೇಕಿದೆ ತೂಗುದೀಪವೇವಿರಹವು ಮಂಜಿನ ಹೂವಾಗಿ ಕರಗಬೇಕಿದೆ ತೂಗುದೀಪವೇ ಒಲುಮೆಯ ಮಧುರ ನಕ್ಷತ್ರಗಳ ಎಣಿಕೆಯ ಎಷ್ಟೋ ರಾತ್ರಿಗಳು ಕಳೆದಿವೆಹೃದಯಗಳ ಬಡಿತ ಕೇಳುತ ಕರಗಳಲ್ಲಿ ಬೆರೆಯಬೇಕಿದೆ ತೂಗುದೀಪವೇ ಬೇವಫಾ ನಾವಿಬ್ಬರೂ ಅಲ್ಲ ಜನುಮಾಂತರ ಬಂಧನ ಬದಲಾಗುವುದೆಸ್ಪಂದಿಸಿದ ಭಾವ ರಾಗ ರಾಗಿಣಿಯರು ಬಾಳಬೇಕಿದೆ ತೂಗುದೀಪವೇ ಚಾತಕ ಪಕ್ಷಿಯಂತೆ ಕಾಯುತಿರುವೆ ನಿನ್ನೊಲುಮೆಯ ಗುಟುಕಿಗಾಗಿಹೃದಯಗಳಲ್ಲಿ ಮೂಡಿದ ಪ್ರೀತಿಯು ನೀಗಬೇಕಾಗಿದೆ ತೂಗುದೀಪವೇ ಆಮಂತ್ರಣ ನೀಡದೆ ಬರುವ ಸಾವು ಬರುವ ಮುನ್ನವೇ ಮಾಜಾದುಃಖ ದುಮ್ಮಾನ ಬಿಟ್ಟು ಒಂದಾಗಬೇಕಿದೆ ತೂಗುದೀಪವೇ ಮಾಜಾನ್ ಮಸ್ಕಿ

ಸರಣಿ ಬರಹ ಅಂಬೇಡ್ಕರ್ ಓದು ಭಾಗ-6 ಜಾತಿಯತೆಯ ಕರಾ‌ಳ ಸ್ಪರ್ಶ ಪುಸ್ತಕಗಳೆಂದರೆ ಅಂಬೇಡ್ಕರರಿಗೆ ಅದಮ್ಯ ಪ್ರೀತಿ, ನ್ಯೂಯಾರ್ಕ ನಗರದಲ್ಲಿನ ಪುಸ್ತಕ ಅಂಗಡಿಗಳಿಗೆ ಭೇಟಿಕೊಟ್ಟು ಸಾವಿರಾರು ಪುಸ್ತಕಗಳನ್ನು ಖರಿದಿಸಿ ಮುಂಬಯಿಗೆ ಕಳುಹಿಸಿ ಕೊಡುತ್ತಾರೆ. ಅಮೇರಿಕಾದ ನಿಗ್ರೋ ಜನರಿಗೆ ಸ್ವಾತಂತ್ರ್ಯ ಕಲ್ಪಿಸಿದ 14ನೇ ತಿದ್ದುಪಡಿ ಅಂಬೇಡ್ಕರರ ಮೇಲೆ ಅಗಾದ ಪ್ರಭಾವ ಬಿರಿತ್ತು. ಭೂಕರ .ಟಿ. ವಾಸಿಂಗ್ಟನ್ ರವರು 1915ರಲ್ಲಿ ನಿಧನರಾದಾಗ ಅಂಬೇಡ್ಕರರು ಅಮೇರಿಕಾದಲ್ಲಿಯೇ ಇದ್ದರು. ಅವರು ನಿಗ್ರೋ ಜನರಿಗೆ ಸ್ವಾತಂತ್ರ್ಯ, ಶಿಕ್ಷಣ ಹಾಗೂ ಉದ್ಯೋಗವನ್ನು ಕಲ್ಪಿಸಿಕೊಟ್ಟಿದ್ದರು. ಅಂಬೇಡ್ಕರರಿಗೆ ಭಾರತದಲ್ಲಿನ ಕೋಟಿ […]

ಅಂಕಣ ಸಂಗಾತಿ ಗಜಲ್ ಲೋಕ ಶ್ರೀದೇವಿಯವರ ಗಜಲ್ ಸಿರಿ ಸಂಪತ್ತು ಹಲೋ…. ಏನು ಮಾಡ್ತಾ ಇದ್ದೀರಾ, ಏನು ಓದುತ್ತಾ ಇದ್ದೀರಾ …? ಇಂದು ತಮ್ಮ ಮನವನ್ನು ತಣಿಸಿದ, ತಣಿಸುತ್ತಿರುವ ಓರ್ವ ಗಜಲ್ ಗೋ ಅವರ ಹೆಜ್ಜೆ ಗುರುತುಗಳೊಂದಿಗೆ ನಿಮ್ಮ ಮುಂದೆ ಬಂದಿದ್ದೇನೆ. ಶುಭ ಮುಂಜಾವು.. ಭುವನೇಶ್ವರಿಯ ಮಕ್ಕಳಾದ ಕನ್ನಡದ ಮನಸುಗಳಿಗೆ ನಮಸ್ಕಾರಗಳು….  “ಸ್ವರ್ಗದ ವಾಸ್ತವತೆ ನಮಗೆ ತಿಳಿದಿದೆ ಆದರೆ ಹೃದಯವನ್ನು ಸಂತೋಷವಾಗಿಟ್ಟುಕೊಳ್ಳಲು ಇದೊಂದು ಒಳ್ಳೆಯ ಆಲೋಚನೆ ‘ಗಾಲಿಬ್‘”                                     –ಮಿರ್ಜಾ ಗಾಲಿಬ್         ಮನುಷ್ಯ ಭಾವನೆಗಳ ಗೊಂಚಲು. […]

ಬೆವರು

ನಮ್ಮ ದೈನಂದಿನ ಬದುಕಿನಲ್ಲಿ ಬೆವರುವುದು ಅತ್ಯಂತ ಸಾಮಾನ್ಯ ಕ್ರಿಯೆ. ಆದರೆ ಕೆಲವು ವಿಶೇಷ ಸಂದರ್ಭಗಳಲ್ಲಿ ಅದು ಉದ್ದೀಪನಗೊಂಡು ಹೆಚ್ಚಾಗುತ್ತದೆ

ಅಂಕಣ ಸಂಗಾತಿ ನೆನಪಿನದೋಣಿಯಲಿ ದಸರಾ ಮೈಸೂರು ದಸರಾ  ಎಷ್ಟೊಂದು ಸುಂದರಾ  ಚೆಲ್ಲಿದೆ ನಗೆಯಾ ಪನ್ನೀರ  ಎಲ್ಲೆಲ್ಲೂ ನಗೆಯಾ ಪನ್ನೀರ  ಬಾಲ್ಯ ಎಂದರೆ ಹಬ್ಬಗಳ ಆಚರಣೆ ಮನದಲ್ಲಿ ಎಂದಿಗೂ ಹಸಿರು . ಅದರಲ್ಲೂ ಮೈಸೂರಿನಲ್ಲಿ ಹುಟ್ಟಿ ಬೆಳೆದ ನನಗೆ ದಸರಾ ಎಂದರೆ ಜೀವನದ ಒಂದು ಅವಿಭಾಜ್ಯ ಅಂಗದಂತೆ.   ದಸರೆಯನ್ನು ನೆನಪು ಮಾಡಿಕೊಳ್ಳದ ನೆನಪಿನ ದೋಣಿಯ ಪಯಣ ಅರ್ಥಹೀನ ಅನ್ನಿಸಿಬಿಡುತ್ತದೆ. ಹಾಗಾಗಿಯೇ ಇಂದಿನ ನೆನಪಿನ ದೋಣಿಯ ಯಾನವಿಡೀ ದಸರೆಯ ಸ್ಮರಣೆ.   ನವರಾತ್ರಿ ದಸರಾ ಎಂದರೆ ಧಾರ್ಮಿಕ ಆಧ್ಯಾತ್ಮಿಕ ಸಾಂಸ್ಕೃತಿಕ […]

ಕಾವ್ಯ ಸಂಗಾತಿ ನೀನಿರಲು ಅನಿತಾ ನಸುಕಿನಲಿ ಹಸಿರೆಲೆಯ ಮೇಲೆಬಿದ್ದ ಇಬ್ಬನಿ ಬೇಡಿದೆ ಭಗವಂತನಜಗವ ಬೆಳಗುವ ದಿನಕರನ ಕಿರಣಸ್ಪರ್ಶಿಸಲು ಮೊಗ್ಗಾಗಿ ಅರಳಿದ ಸುಂದರ ಸುಮಹಾತೊರೆಯುತಿದೆ, ಏಳು ಬೆಟ್ಟಗಳಮೇಲೇರಿ ನಿಂತ ಆ ದೇವರಕಾಲ ಬಳಿ ಸೇರಲು! ಗುಡಿಯ ಘಂಟೆ ಧ್ಯಾನಿಸುತಿದೆಸುಶ್ರಾವ್ಯವಾಗಿ ತನ್ನ ಸದ್ದುಜಗನ್ನಿಯಮಕನ ತಲುಪಲು! ಗರ್ಭಗುಡಿಯ ಪ್ರಣತಿಕಾಯುತಿದೆ ಕರುಣಮಯ ಪರಮಾತ್ಮನಮುಖಾರವಿಂದವ ಉಜ್ವಲಿಸಲು! ಜಗದ ಪ್ರತಿ ಚಲನೆಯೂ ನೀನಾಗಿರಲುಧ್ಯಾನಿಸದೆ ಇರಲಾರದುಈ ಮನವು, ಅನುಕ್ಷಣವೂನನ್ನೊಳಗೆ ನೀನಿರಲು!

Back To Top