ಕವಿತೆಯೆಂದರೆ

ಕಾವ್ಯ ಸಂಗಾತಿ

ಕವಿತೆಯೆಂದರೆ

ಬತ್ತಿದ ಮೊಲೆಯೊಳಗೆ ಮಗುವೊಂದು ಮೊಗವಿಡಲು ಮತ್ತೆ ಮತ್ತೆ ತವಕಿಸುವುದು,
ಇಲ್ಲದ ಎದೆಹಾಲಿನಾಸೆಗಲ್ಲ,
ಹಸಿವನ್ನು ಮರೆಸುವ ಮಮತೆಗಾಗಿ

ಸತ್ಯ
ಗೊತ್ತಿರುವ ಹಾಗೆ
ತಾಯಿಗೂ ಮಗುವಿಗೂ,

ಕವಿತೆಗೂ ಅನ್ನಿಸಿಬಿಡುತ್ತದೆ
ಒಮ್ಮೊಮ್ಮೆ ಹೀಗೆ,

ಪ್ರತಿಕ್ರಿಯೆಯೂ
ಆಗಬಲ್ಲುದು ಕವಿತೆ
ಕ್ರೂರವಾದಾಗ ವರ್ತಮಾನ!

ಅಪ್ಪನ ಪಾದಕ್ಕಂಟಿದ ಮಣ್ಣ ಕಣಗಳ ಮುಂದೆ
ನಿರ್ಜೀವ ಅಕ್ಷರಗಳ ಕವಿತೆಗಳೂ ಮಂಡಿಯೂರಿದಾಗ…

ಬತ್ತಿದ ಮೊಲೆಗಳ ಚೀಪಿ
ತುಟಿ ಸವರಿಕೊಂಡು ಹುಸಿನಗುವ ಮಗುವಿನ ಹಾಗೆ,

ಕವಿಗೂ…
ಅನಿಸುವುದು ಒಮ್ಮೊಮ್ಮೆ
ತಾನೂ ಮನುಷ್ಯನೆಂದು.


           ಬಿ.ಶ್ರೀನಿವಾಸ

Leave a Reply

Back To Top