ಜೀವತೆತ್ತ ಕನಸುಗಳು

ಕಾವ್ಯ ಸಂಗಾತಿ

ಜೀವತೆತ್ತ ಕನಸುಗಳು

ಕನಸುಗಳ ಬುತ್ತಿ ಕಟ್ಟಿ,
ಹೆಗಲಿಗೇರಿಸಿ,
ಸಾಗುತ್ತಾ ಹೊರಟೆ.

ಕನಸುಗಳ ಜೊತೆಗೆ ರಾಶಿರಾಶಿ
ಆಸೆಗಳ ಪಯಣ
ಬಿಡದೆ ಸಾಗಿತ್ತು.

ದಾಹ ನೀಗಿಸಿ, ಹಸಿವ ಮರೆಸಿ,
ನಡೆದ ದಾರಿಗಳೆಲ್ಲಾ
ಮಾರುದ್ದವಾಗುತ್ತಿದ್ದವು.

ಕಲ್ಲು-ಮುಳ್ಳುಗಳು
ನಿಧಾನವಾಗಿ ಪಾದವನ್ನಲ್ಲ,
ಹೃದಯವನ್ನೇ ಇರಿದವು.

ಹೆಜ್ಜೆ ಇಟ್ಟಲ್ಲೆಲ್ಲಾ
ಹೂ- ಗಂಧವಿರಲಿ,
ಮಣ್ಣಗಮವೂ ಮರೆಯಾಗಿತ್ತು.

ಕತ್ತಲಲ್ಲಿ ಹುಟ್ಟಿಕೊಂಡ
ಎಷ್ಟೋ ಕನಸುಗಳು
ಬೆಳಕ ಬಾಗಿಲಲ್ಲಿ
ಮಕಾಣೆ ಮಲಗುತ್ತಿದ್ದವು.

ಇದ ಕಂಡು ಕಾಣಲಾಗದೇ,
ತಾಳಲಾಗದೇ,ನನಸುಗಳಿರಲಿ
ಕನಸುಗಳೇ ಜೀವತೆತ್ತವು.


ಒಲವು

Leave a Reply

Back To Top