ಮಕ್ಕಳದಿನದ ಸಂಭ್ರಮ
ಮಕ್ಕಳ ಕವಿತೆಗಳು ಸಂತೆಬೆನ್ನೂರು ಫೈಜ್ನಾಟ್ರಾಜ್ ನಮ್ಮ ಚಂದ್ರ ನಮ್ಮ ಚಂದ್ರ ಬಾನಿಗೊಬ್ಬ ಚಂದಿರ ದೇಶಕ್ಕೊಬ್ಬ ಚಂದಿರ ಅವನೇ ಸುಭಾಸ್ ಚಂದಿರ//ಬಾ// ಶಕ್ತಿ ಕೊಡಿ ರಕ್ತ ಕೊಡಿ ಸ್ವತಂತ್ರ ಕೊಡುವೆ ಎಂದನು ಸ್ವಾರ್ಥ ಬಿಡಿ ನಿಸ್ವಾರ್ಥ ದುಡಿ ದೇಶಕದುವೆ ಹೆಮ್ಮೆ ಎಂದನು//ಬಾ// ಜೈ ಹಿಂದ್ ಜೈ ಹಿಂದ್ ಜೈಕಾರ ಕೂಗುತ ಎಂದಿಗೂ ಮುನ್ನುಗ್ಗಿ ಏನೇ ಬರಲಿ ಒಗ್ಗಟ್ಟಿರಲಿ ದೇಶಭಕ್ತರು ಒಂದಾದರೆ ಅದೇ ಸುಗ್ಗಿ //ಬಾ// ಒಂದೆ ನಾಡು ಒಂದೆ ತಾಯಿ ನಾವೆಲ್ಲರೂ ಭಾರತಾಂಬೆ ಮಕ್ಕಳು ಹಿಂದು-ಮುಸ್ಲಿಂ ಯಾರೇ ಇರಲಿ […]
ಕಾವ್ಯಯಾನ
ಅಂಬೇಡ್ಕರ್ ಕೆಂಪಗೆ ಕಣ್ಣು ಬಿಟ್ಟಿದ್ದಾರೆ ! ಬಿದಲೋಟಿ ರಂಗನಾಥ್ ನಮ್ಮ ನಾಡಿಮಿಡಿತದಲ್ಲಿರುವ ಅಂಬೇಡ್ಕರ್ ಕೆಂಪಗೆ ಕಣ್ಣು ಬಿಟ್ಟಿದ್ದಾರೆ ಅವರೇ ಜನ್ಮವಿತ್ತ ಸಂವಿಧಾನದ ಕೂಸು ಅವರದಲ್ಲವೆಂದವರ ವಿರುದ್ಧ. ಅಲ್ಪತಿಳಿದವರ ಕುತಂತ್ರ ಬೆಳೆಯುವ ಮಕ್ಕಳ ಮನಸುಗಳ ನೆಲದ ಮೇಲೆ ವಿಷ ಬೀಜ ಕುದಿಯುವ ರಕ್ತದಲಿ ಅಂಬೇಡ್ಕರ್ ಕಣ್ಣೀರು.! ಸುಡುತ್ತದೆ ಕೋಮುವಾದಿಗಳ ಲೇಖನಿಯನ್ನು ಹೊಲಸು ಮನಸನ್ನು ನೀವೆ ತೋಡುವ ಖೆಡ್ಡಕ್ಕೆ ನೀವೆ ಮುಗ್ಗರಿಸುವಿರಿ ಭೀಮನು ನಡೆದ ನೆಲ ಬೆವರುತ್ತಿದೆ ಅಪಮಾನ ಅವಮಾನದ ಕರುಳು ಸುಡುತ್ತ ಮನದಲಿ ಕುಂತ ಶಾಂತಿಯ ಪಾರಿವಾಳಕ್ಕೆ ರಕ್ತಪಾತದ […]
ನಾನು ಕಂಡ ಹಿರಿಯರು.
ಪ್ರೋ.ಎ.ಎನ್.ಮೂರ್ತಿರಾವ್ ಡಾ.ಗೋವಿಂದ ಹೆಗಡೆ ಪ್ರೊ ಎ ಎನ್ ಮೂರ್ತಿರಾವ್ (೧೯೦೦-೨೦೦೩) ೧೯೮೭ರ ಒಂದು ದಿನ. ಮೈಸೂರಿನಲ್ಲಿ ನಾನು ಎಂ ಬಿ ಬಿ ಎಸ್ ಓದುತ್ತಿದ್ದ ಸಮಯ. ಅಂದು ಕಾಲೇಜಿನ ವಿದ್ಯಾರ್ಥಿ ಸಂಘದ ವಾರ್ಷಿಕ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದ್ದವು. ಉದ್ಘಾಟನೆಗೆ ಬಂದವರು ೮೭ರ ಹರೆಯದ ವಾಮನಮೂರ್ತಿ ಪ್ರೊ.ಎ ಎನ್ ಮೂರ್ತಿರಾವ್. ಬಿಳಿಯ ಪಂಚೆ, ತುಂಬುತೋಳಿನ ಸಾದಾ ಅಂಗಿಯಲ್ಲಿದ್ದರು. ಅವರು ೧೯೮೪ರ ಅಖಿಲ ಭಾರತೀಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ಎಂಬುದನ್ನು ಬಿಟ್ಟರೆ ನನಗೂ ಹೆಚ್ಚು ಗೊತ್ತಿರಲಿಲ್ಲ. ಕಾರ್ಯದರ್ಶಿ ಅವರನ್ನು ಸ್ವಾಗತಿಸಿ […]
ಕಾವ್ಯಯಾನ
ಪಯಣ ಶಂಭುಗೌಡ.ಆರ್.ಗಂಟೆಪ್ಪಗೌಡ್ರ) ಬೆವರ ಬಸಿಯಬಹುದೇ ಹೇಳು ನೀನು ಶ್ರಮದ ಕವಾಟ ತಟ್ಟದೇ “ಬೆಳಕು” ಕತ್ತಲ ಸಮಾದಿಯ ಮೇಲೊಬ್ಬ ಗೊತ್ತಿಲ್ಲದೇ ಇಟ್ಟು ಹೋದ ಮೊಗ್ಗಲ್ಲದ ಹೂ “ಪ್ರೀತಿ” ಮುಚ್ಚಿದ ಕಣ್ಣೊಡಲೊಳಗಿನ ದಿವ್ಯ ಚೇತನ ಬೆಳಕು ಮತ್ತೆ ಪ್ರೀತಿ ಸಂಗತಿ ಎರಡಾದರೂ ಬೆಳಗುವ ತತ್ವವೊಂದೇ, ಬದುಕೊಂದು ಎರಡು ಬಾಗಿಲು ತೆರೆದರೊಂದು ಮುಚ್ಚುವುದು ಮತ್ತೊಂದು ತೆಗೆದು ಮುಚ್ಚುವ ಮಧ್ಯೆ ತನ್ನ ತನವ ಬಚ್ಚಿಟ್ಟು ಪರರ ಮೆಚ್ಚಿಸುವ ಬಣ್ಣದಾಟವೇನು ಬದುಕು ಹೇಳು ನೀನು ; ಕಾಣದವನ ಸೂತ್ರಗಳ ಬೀಜಾಕ್ಷರಗಳು ನಾವು ಒಬ್ಬರನ್ನೊಬ್ಬರು ಕೂಡಲೂ […]
ಲಹರಿ
ಖಾಸಗಿ ಬಸ್ ಪಯಣ ಜಿ.ಹರೀಶ್ ಬೇದ್ರೆ ಇದು ನಿಮ್ಮ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಇದನ್ನು ಓದಿದ ಮೇಲಾದರೂ ಗಮನಿಸಿ, ನಾನು ಹೇಳಿದ್ದು ನಿಜವೆನಿಸಿ ನೀವು ನಗದಿದ್ದರೆ ಹೇಳಿ. ಅಂಥಹ ವಿಚಾರ ಏನೂ ಅಂತೀರಾ, ಅದೇ ಬಸ್ಸಗಳು ಹಾಗೂ ಅದರಲ್ಲಿನ ಸಂಚಾರ. ಅದರಲ್ಲಿ ಸಿಗುವ ವಿವಿಧ ರೀತಿಯ ಅನುಭವಗಳು. ನೋಡಿ ಸರ್ಕಾರಿ ಬಸ್ಸುಗಳು ತುಂಬಾ ಗೌರವಸ್ಥ ಹೆಣ್ಣಿನಂತೆ ನಿಲ್ದಾಣಕ್ಕೆ ಬಂದು ಊರಿಂದ ಊರಿಗೆ ಹೋದರೆ, ಖಾಸಗಿ ಬಸ್ಸುಗಳು ಆಗ ತಾನೇ ಪ್ರಾಯಕ್ಕೆ ಬಂದ ಹುಡುಗಿ ಎಲ್ಲರೂ ತನ್ನನೇ […]
ಕಾವ್ಯಯಾನ
ಬಿಕರಿ ಡಾ.ಗೋವಿಂದ ಹೆಗಡೆ ಇಲ್ಲಿ ಪ್ರೀತಿ ಸಿಗುತ್ತದೆ’ ಬೋರ್ಡು ಹಾಕಿ ಕುಳಿತಿದ್ದೇನೆ ಯಾರೊಬ್ಬರೂ ಸುಳಿಯುತ್ತಿಲ್ಲ.. ಅದೇನು, ಕೋವಿಯಂಗಡಿ ಮುಂದೆ ಅಷ್ಟೊಂದು ಸರತಿಯ ಸಾಲು!
ಶಿವಮೊಗ್ಗ ಜಿಲ್ಲೆಯ ಚಳುವಳಿಗಳು
ಡಾ.ಸಣ್ಣರಾಮ ಹಿಂದಿನ ವಾರದ ಮುಂದುವರೆದ ಭಾಗ ಕರ್ನಾಟಕದಲ್ಲಿ ಶಿವಮೊಗ್ಗ ಜಿಲ್ಲೆ ವೈಶಿಷ್ಟ್ಯಪೂರ್ಣವಾದುದು. ಈ ಜಿಲ್ಲೆಯಲ್ಲಿ ಸದ್ಯ ಏಳು ತಾಲ್ಲೂಕುಗಳಿವೆ. ಅವುಗಳಲ್ಲಿ ನಾಲ್ಕು ಅತೀ ಹೆಚ್ಚು ಮಳೆಯಾಗುವ ತಾಲ್ಲೂಕುಗಳಾದರೆ, ಮೂರು ಸಾಧಾರಣ ಮಳೆಯಾಗುವ ತಾಲ್ಲೂಕುಗಳು. ದಕ್ಷಿಣ ಭಾರತದ ‘ಚಿರಾಪುಂಜಿ’ ಎಂದು ಪ್ರಖ್ಯಾತವಾಗಿರುವ ಆಗುಂಬೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿದೆ. ದಟ್ಟ ಮಲೆನಾಡು ಅರೆಮಲೆನಾಡು ಭಾಗಗಳು ಜಿಲ್ಲೆಗೆ ಪ್ರಾಕೃತಿಕ, ಸಾಂಸ್ಕೃತಿಕ ವೈಶಿಷ್ಟತೆಯನ್ನು ತಂದುಕೊಟ್ಟಿದೆ. ಭಾಷೆಯ ಬಳಕೆಯಲ್ಲಿಯೂ ಈ ಏಳು ತಾಲ್ಲೂಕುಗಳು ಸೂಕ್ಷ್ಮವಾಗಿ ಭಿನ್ನತೆ ಕಂಡು ಬರುತ್ತದೆ. ಈ ಭಿನ್ನತೆ ಮತ್ತು ವೈಶಿಷ್ಟತೆ ಅಲ್ಲಿನ […]
ಅನಿಸಿಕೆ
ನಗರಗಳಲ್ಲಿ ದುಡಿಯುವ ಹುಡುಗರ ಕಷ್ಟ ಐಶ್ವರ್ಯ ಎಲ್ಲೇ ಹೋದ್ರು, ಎಷ್ಟೊತ್ತಿಗೆ ಮನೆಗೆ ಬಂದ್ರು ಯಾಕೆ, ಏನು ಅನ್ನೊ ಪ್ರಶ್ನೆಗಳನ್ನ ಹುಡ್ಗುರಿಗೆ ಮಾತ್ರ ಕೇಳಲ್ಲ ಅನ್ನೋದು ಪ್ರತಿಯೊಂದು ಮನೆಯಲ್ಲಿರೊ ಅಕ್ಕ ತಂಗಿಯರ ವಾದ. ನನ್ನನ್ನೂ ಸೇರ್ಸಿ…..ನಾವು ಅಪ್ಪ ಅಮ್ಮನ ಹತ್ರ ಜಾಸ್ತಿ ಜಗಳ ಮಾಡೋದು ಇದೊಂದೇ ವಿಷಯಕ್ಕೆ ಅನ್ಸತ್ತೆ. ನಮಗೂ ಹುಡ್ಗುರ ತರ ಫ್ರೀಡಂ ಬೇಕು ಅಂತ. ಹೆಣ್ಣು ಕೂಡ ಗಂಡಿನಷ್ಟೇ ಸಮಾನಳು, ಪ್ರತಿಯೊಂದು ಕ್ಷೇತ್ರದಲ್ಲೂ ಹೆಣ್ಣು ಗಂಡಿಗೆ ಸರಿ ಸಮನಾಗಿ ನಿಂತಿದ್ದಾಳೆ ಅಂತ ನಾವೆಷ್ಟೇ ಬಾಯ್ ಬಡ್ಕೊಂಡು […]
ಕಾವ್ಯಯಾನ
ಸುತ್ತ ಸುಳಿವ ಗಾಳಿಯಲ್ಲೇ ಪುಳಕ
ಗಂಧಕ್ಕಾಗಿ ಕಾದ ಮೂಗು
ಬಂಡುಣಲು ದುಂಬಿ
ಜೇನ್ನೊಣಗಳ ಪೈಪೋಟಿ
ಎರಗಿ ದಳದಳ ಕಿತ್ತು
ಹೊಸಕಲು ತಯಾರಾಗುವ ಕೈಗಳೂ
ಕಾವ್ಯಯಾನ
ಮಗಳು ಲಕ್ಷ್ಮಿಕಾಂತ್ ಮಿರಜಕರ ಮಗಳು ಹುಟ್ಟಿದ್ದಾಳೆ ತಂದಿದ್ದಾಳೆ ಜೊತೆಯಲ್ಲಿಯೇ ಹೆಡೆಮುರುಗಿ ಕಟ್ಟಿ ವಸಂತನನ್ನು ಮನೆಯಲ್ಲೀಗ ನಿತ್ಯ ದೀಪಾವಳಿ ಮನ ತುಂಬಾ ಬೆಳದಿಂಗಳ ಓಕುಳಿ ಮಗಳು ಮುಗುಳ್ನಗುತ್ತಿದ್ದಾಳೆ ಮಾಯವಾಗುತ್ತಿವೆ ಜಗದ ಜಂಜಡಗಳು ಒಂದೇ ಗುಕ್ಕಿಗೆ ಕರಗಿ ಅವಳ ನಿಷ್ಕಲ್ಮಶ ನಗುವಿನ ಮೋಡಿಗೆ ಬಂದು ಬೀಳುತ್ತಿವೆ ಗಗನದ ನಕ್ಷತ್ರಗಳೆಲ್ಲಾ ಅವಳ ಸುಕೋಮಲ ಮೃದು ಪಾದದ ಅಡಿಯಲ್ಲಿ ಮಗಳು ಅಂಬೆಗಾಲಿಡುತ್ತಿದ್ದಾಳೆ ಅವಳ ಎಳೆದೇಹದ ಸ್ಪರ್ಷ ಸಂಚಾರವಾಗುತ್ತಲೇ ಅರ್ಥ ಕಳೆದುಕೊಳ್ಳುತ್ತಿವೆ ದೊಡ್ಡವರ ಸಿನಿಕತನದ ಮಾತುಗಳು ಮಗಳು ಮಾತನಾಡುತ್ತಿದ್ದಾಳೆ ಕಪಟವರಿಯದ ಮಗಳ ತೊದಲುಮಾತುಗಳಿಗಿಂತ ಶ್ರೇಷ್ಟವೇನಲ್ಲ […]