ಕಾವ್ಯಯಾನ

ಕಾವ್ಯಯಾನ

ನೂತನ ಅವರ ಹೊಸ ಕವಿತೆ ನೂತನ ದೋಶೆಟ್ಟಿ ಸಾಲುಗಟ್ಟಿದ ವಾಹನಗಳ ಸಂದಿನಲ್ಲಿಚಟಚಟನೆ ಜಿಗಿಯುವ ಪುಟ್ಟ ಕಾಲುಗಳುದೇಹವಿಡೀ ಲೋಹದ ಗೋಲದೊಳಗೆ ತೂರಿಕೈಕಾಲು ಬಿಡಿಬಿಡಿಯಾಗಿ ಹೊರಬರುವ ಆಟ ಮಿಂಚುವ ಕಣ್ಣುಗಳ ಸುತ್ತ ಕಪ್ಪು ಕಾಡಿಗೆಸೆರೆ ಹಿಡಿಯುವ ದಾಹಮಿರಮಿರನೆ ಹೊಳೆವ ಕದಪುಗಳುಬಾಲ್ಯವನ್ನು ನುಂಗಿ ಉಬ್ಬಿ ಗರಿಗರಿಯಾಗುತ್ತಿರುವವು ಒಡ್ಡಿದ ಕೈಮೇಲೆ ಬೀಳುವ ಕನಸ ಕಾಸುಗಳುಸಂಜೆಗತ್ತಲಲ್ಲಿ ಕರಗುವುದ ತಿಳಿದೂಸುಡುಬಿಸಿಲಲಿ ಮೈ ಮಣಿಸುವ ಕಸುವುಸೊಂಟಕ್ಕೆ ಬಿಗಿದ ದಾವಣಿಯುಸಡಿಲವಾಗುವುದಕ್ಕೆ ಪೂರ್ವಹಾದಿಬದಿಯ ದೊಂಬರಾಟದಲ್ಲಿ ತಯಾರಿ ಬಡಿಯುವವನ ತಮಟೆ ತಾಳಕ್ಕೆಬಾಗಿ ಬಳುಕುವ ನೋಡುಕಣ್ಸನ್ನೆ, ಕೈಸನ್ನೆ, ಬಾಯ್ಸನ್ನೆಗಳ ಪಾಠಉಣ್ಣುವ ಅನ್ನದಲಿ ಸುಖ […]

ಕಾವ್ಯಯಾನ

ಆಸೆ ಪೂಜಾ ನಾಯಕ್ ಝಗಝಗಿಸುವಾ ಆಸೆನಳನಳಿಸುವಾ ಆಸೆಮೊಮ್ಮೊದಲ ವಸಂತ ಋತು,ಕೋಗಿಲೆಗೆ ಕಂಠದ ಮಾಧುರ್ಯವ ಹೊರಹೊಮ್ಮಿಸುವ ಆಸೆ.ಕವಿಗೆ ಕಾವ್ಯದಾ ರಚನೆಯಮೇಲಾಸೆಕಲಾಕಾರನಿಗೆ ಚಿತ್ರ ಬಿಡಿಸುವ ಆಸೆಶಿಲ್ಪಿಗೆ ಮೂರ್ತಿಯ ಕೆತ್ತುವುದರಲ್ಲಾಸೆನಟರಾಜನಿಗೆ ತನ್ನ ನೃತ್ಯದಾಮೇಲಾಸೆಪ್ರೇಮಿಗೆ ಪ್ರೇಯಸಿಯೊಡಗೂಡಿ ನಲಿಯುವಾ ಆಸೆ ಮಾಗಿಯ ಚಳಿಯು ಇನಿಯನಿಗೆ ಆದರೆ,ಚಂದ್ರನ ಬೆಳದಿಂಗಳು ಗೆಳತಿಗೆಹತ್ತಾರು ಬಣ್ಣದಾ ಕನಸಿನಾ ಲೋಕದೊಳು ಚಿಟ್ಟೆಯ ಹಾಗೆ ನಲಿ-ನಲಿದು,ಏಕಾಂತದಲಿ ಕುಳಿತಾಗ ಕವಿತೆಯ ಬರೆದು, ಎಲ್ಲರೊಡಗೂಡಿ ಹಾಡುವ ಆಸೆ ಎನಗೆ.ಆಸೆ ಎಂಬುದು ಬಿಡಲಿಲ್ಲ ಗೌತಮ ಬುದ್ಧನನೇಅವನಿಗೂ ಕೂಡ ಇತ್ತೊಂದು ಆಸೆ,ಆಸೆಯ ಬಿಡಬೇಕು ಎನ್ನುವ ಮಹದಾಸೆ.ಆಸೆ ಎಂಬುದು ಎಲ್ಲರಾ […]

ಕಾವ್ಯಯಾನ

ತಿರುಗಾಟ ಭಾಗ್ಯ ಸಿ ಏಕೆ ತಿರುಗುವೆ ಅತ್ತಿಂದಿತ್ತಅತ್ತ ಪ್ರಳಯ ಇತ್ತ ಕೋಲಾಹಲತಿನ್ನುವ ಕೂಳಿಗೂ ಪರದಾಟ ಅಲ್ಲಿತುಸುವೆ ಹೆಚ್ಚಾಗಿ ಕಿತ್ತಾಡುತ್ತಿರುವರಿಲ್ಲಿ ಮೌಲ್ಯಾಧಾರಿತ ಸಮಸ್ಯೆಗಳು ಸಾಕಷ್ಟಿವೆಕ್ಲಿಷ್ಟತೆಗಳು ಜೇಡರ ಬಲೆಯಂತಾಗಿವೆಹೊರಾಡಬೇಕಿದೆ ಒಳಗಿನ ಶತ್ರುವಿನೊಂದಿಗೆಸಮಾಜ ಸ್ವಾಸ್ಯ ಕಾಪಾಡುವ ಗುರಿಯೊಂದಿಗೆ ಮಣ್ಣು, ಗಾಳಿ, ಬೆಳಕು ನೀರಿನ ಮಿಶ್ರಣಹೋದರೆ ಹೋಯಿತು ಬೆಲೆ ಇಲ್ಲಆತ್ಮ ಸತ್ಯವದು ಹೊಲಸು ಮಾಡಿಕೊಳ್ಳಬೇಡಿಲೆಕ್ಕ ತೀರಿಸಲೇ ಬೇಕು ಮರೆಯಬೇಡಿ ಏಕೆ ತಿರುಗುವೆ ಅತ್ತಿಂದಿತ್ತತಿರುಗಾಟ ಪರಿಹಾರವಲ್ಲಎಣೆ ಬಲೆಯನು ಬಿಗಿಯಾಗಿಬೀಳಲಿ ಮಿಕ ತಲೆಕೆಳಗಾಗಿ *****************************************

ಪುಸ್ತಕಸಂಗಾತಿ

ಹೋಗಿ ಬಾ ಮಗಳೆ. ಹೋಗಿ ಬಾ ಮಗಳೇ ಲೇಖಕರು: ಡಾ||ವಿರೂಪಾಕ್ಷ ದೇವರಮನೆಪ್ರಕಾಶಕರು: ಸಾವಣ್ಣ ಎಂಟರ್ಪ್ರೈಸಸ್ಪುಸ್ತಕದ ಬೆಲೆ: ೧೫೦.೦೦ರೂ ಡಾ||ವಿರೂಪಾಕ್ಷ ದೇವರಮನೆಯವರಿಂದ ರಚಿತವಾದ “ಹೋಗಿ ಬಾ ಮಗಳೇ” ಜವಾಬ್ದಾರಿಯುತ ಅಪ್ಪನೊಬ್ಬ ತನ್ನ ಮಗಳಿಗೆ ವೈವಾಹಿಕ ಜೀವನದ ಅನೇಕ ಆಗು ಹೋಗುಗಳ ಬಗ್ಗೆ ಹಿತವಾಗಿ ಮುಖಾಮುಖಿ ಮಾತನಾಡಿದಂತೆ ತೋರುವ ಪುಸ್ತಕ ರೂಪದ ಕೈಗನ್ನಡಿ. ಮದುವೆ ಎನ್ನುವ ಮೂರಕ್ಷರಗಳೊಂದಿಗೆ ಆರಂಭವಾಗುವ ಎರಡು ವಿಭಿನ್ನ ಕುಟುಂಬಗಳ ನಡುವಿನ ಸೇತುವೆ. ಯಾವುದೇ ಮದುವೆಯ ಸಂದರ್ಭದಲ್ಲಿ ಎರಡೂ ಕಡೆ ಕೊಂಚವಾದರೂ ತಕರಾರಿಲ್ಲದೇ ಕಾರ್ಯಕ್ರಮ ನೆರವೇರದು. ಮದುವೆ […]

ಕಾಡುವ ವಿಚಾರ…

ಕಾಡುವ ವಿಚಾರ… ವಸುಂಧರಾ ಕದಲೂರು               ಆ ದಿನ ನಿಜಕ್ಕೂ ಬಹಳ ಕಳವಳಪಟ್ಟಿದ್ದೆ. ಏನು ಮಾಡಿದರೂ ನನಗೆ ನಂಬಿಕೆ ಮೂಡುತ್ತಿರಲಿಲ್ಲ. ಏಕೋ ಎದೆಯಾಳದಲಿ ತೀವ್ರ ನೋವಾಗುತ್ತಿರುವ ಅನುಭವ. ಆ ಕ್ಷಣಕ್ಕೆ ಆಶಾಭಂಗದ ಅರ್ಥವೂ, ದಿಗ್ಭ್ರಮೆ ಎಂಬುದರ ಪರಿಚಯವೂ ಆಗಿಹೋಯಿತು. ಎಳೆ ಮನದ ಭಿತ್ತಿಯಲಿ  ಉದಿಸಿದ ದುಃಖ ಹಸಿ ನೆಲದಲ್ಲಿ ಬೇರೂರಿದ ಬೀಜದಂತಾಯ್ತು.       ಹೌದು, ಮೊದಲ ಬಾರಿಗೆ ಪ್ರೀತಿಯ ‘ಗಾಂಧಿ’ ಅವರ ಸಾವು ಹೇಗಾಯಿತೆಂದು ತಿಳಿದಾಗ ನನಗಾದ ಅನುಭವವೇ ಈ ಮೇಲಿನದ್ದು. ‘ಮಹಾತ್ಮ […]

ಸೃಜನಶೀಲರಾಗಿ ಯಶಸ್ವಿ ವ್ಯಕ್ತಿಗಳಾಗಿ ಸಾಮಾನ್ಯವಾಗಿ ನಾವು ಮಾಮೂಲಿ ಕೆಲಸಗಳನ್ನು ಮಾಮೂಲಿ ರೀತಿಯಲ್ಲಿ ಮಾಡಿ ಅತ್ಯದ್ಭುತ ಫಲಿತಾಂಶ ಬಯಸುತ್ತೇವೆ. ನಾವು ಮಾಡುತ್ತಿರುವ ಕೆಲಸವನ್ನು ಎಂದಿನಂತೆ ಮಾಡುವ ರೀತಿಯಲ್ಲಿಯೇ ಮುಂದುವರೆಸಿದರೆ ಹಿಂದೆ ಬಂದ ಫಲಿತಾಂಶವೇ ಬರುವುದು ಸಹಜ. ಕೆಲವರು ನಾವು ಮಾಡುತ್ತಿರುವ ಕೆಲಸವನ್ನೇ ಮಾಡಿ ನೋಡ ನೋಡುತ್ತಿದ್ದಂತೆ ಗೆಲುವು  ಪಡೆಯುತ್ತಾರೆ. ಎಲ್ಲರ ನೆದರಿನಲ್ಲಿಯೂ ಮಿಂಚುತ್ತಾರೆ.ತಾವೂ ಹಿಗ್ಗಿ ಹಲಸಿನಕಾಯಿಯಾಗುತ್ತಾರೆ.  ಅದನ್ನು ನಾವು ಬೆರಗುಗಣ್ಣುಗಳಿಂದ ನೋಡುತ್ತಲೇ ಇದ್ದು ಬಿಡುತ್ತೇವೆ. ಅವರು ಅದೃಷ್ಟವಂತರು ಎಂಬ ಹಣೆಪಟ್ಟಿ ಕಟ್ಟುತ್ತೇವೆ. “ಮನುಷ್ಯನು ತನ್ನ ಕುರಿತು ತಾನೇನು ಅಂದುಕೊಳ್ಳುತ್ತಾನೋ […]

ಮಕ್ಕಳು ಮತ್ತು ನಿಸರ್ಗ ನನ್ನನ್ನು ಮತ್ತೆ ಮತ್ತೆ ಹಿಡಿದಿಡುತ್ತವೆ ತಮ್ಮಣ್ಣ ಬೀಗಾರ ಮಕ್ಕಳ ಸಾಹಿತಿ ತಮ್ಮಣ್ಣ ಅವರ ಕುರಿತು… ತಮ್ಮಣ್ಣ ಬೀಗಾರ ಅವರು ಯಲ್ಲಾಪುರದ ಬೀಗಾರದವರು.‌1959 ನವ್ಹೆಂಬರ್ 22 ರಂದು ಜನಿಸಿದರು. ಸ್ನಾತಕೋತ್ತರ ಪದವೀಧರ , ಸಿದ್ದಾಪುರದ ಬಿದ್ರಕಾನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕಳೆದ 37 ವರ್ಷಗಳಿಂದ ಮಕ್ಕಳ ಜೊತೆ ಮಕ್ಕಳಾಗಿದ್ದರು. ಮಕ್ಕಳ ಸಾಹಿತ್ಯದ ಬಗ್ಗೆ ಬರೆಯುವವರು ವಿರಾಳತೀ ವಿರಳ. ಅದರೆ ತಮ್ಮಣ್ಣ ಮಕ್ಕಳ ಸಾಹಿತ್ಯವನ್ನು ತಮ್ಮ ಅಭಿವ್ಯಕ್ತಿಯಾಗಿ ಆಯ್ಕೆ […]

ಕಾವ್ಯಯಾನ

ಸ್ವಾತಿ ಹನಿ ಅನಿತಾ ಕೃಷ್ಣಮೂರ್ತಿ ಕಂಡಿಲ್ಲ ನೇರವಾಗಿ ನಾನೆಂದು ನಿನ್ನಕಂಡಿದ್ದು ಆ ಬಾನಿನ ಮೇಘಗಳಲಿ.ಈ ತಂಪೆರೆವ ತಂಗಾಳಿಯಲಿನಗುತಿರುವ ಗುಲಾಬಿಯ ಪಕಳೆಯಲಿ. ಕಂಡಿಲ್ಲ ನೇರವಾಗಿ ನಾನೆಂದು ನಿನ್ಜಕಂಡಿದ್ದು ಇಬ್ಬನಿಯ ಪಾರದರ್ಶಕತೆಯ ನುಣುಪಿನಲಿ,ಆ ಆಗಸದ ಬಾನಾಡಿಯ ಹಾರಾಟದಲಿಕಪ್ಪೆಚಿಪ್ಪಲಿ ಅಡಗಿ ಸ್ವಾತಿಹನಿಯ ಮುತ್ತಿನಲಿ. ಕಂಡಿಲ್ಲ ನೇರವಾಗಿ ನಾನೆಂದು ನಿನ್ನಕಂಡಿದ್ದು ನಾ ಬರೆವ ಪದಗಳ ಭಾವದಲಿ,ಮಿಂಚಾಗಿ ಮಿಂಚಿ, ಸಂಚನು ತರುವ ಆಲೋಚನೆಯಲಿ,ಎದೆಯ ಏರಿಳಿತದ ಬಡಿತದಲಿ. ************************

ಪುಸ್ತಕ ಸಂಗಾತಿ

ಚರಿತ್ರೆಯ ಪುಟಗಳ ಕಟ್ಟ ಹೊತ್ತ ಪರಿಸರದ ಕಥಾ ಮಾಲೆ. ಮಧ್ಯಘಟ್ಟ – ಕಾದಂಬರಿಶಿವಾನಂದ ಕಳವೆಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ. ಪರಿಸರದ ಬಗೆಗಿನ ಕಾಳಜಿ ಮತ್ತು ಜ್ಞಾನ, ಅಪಾರ ತಿರುಗಾಟ, ಗ್ರಾಮೀಣರ ಒಡನಾಟ ಮತ್ತು ಅಧ್ಯಯನಪೂರ್ಣ ಬರಹಗಳ ಮೂಲಕ ಹೆಸರಾದವರು ಪತ್ರಕರ್ತ ಶಿವಾನಂದ ಕಳವೆ. ಶಿರಸಿಯ ಬಳಿಯ ಕಳವೆಯಲ್ಲಿ ಅವರ ನೇತೃತ್ವದ ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರ, ಕಾನ್ಮನೆ – ಪರಿಸರಾಸಕ್ತರ, ಪತ್ರಿಕೋದ್ಯಮ ವಿದ್ಯಾರ್ಥಿಗಳ ಆಸಕ್ತಿಯ ಕೇಂದ್ರವಾಗಿದೆ. ಅವರು ಈ ಹೊತ್ತಿಗೆಯಲ್ಲಿ ಮತ್ತಿಘಟ್ಟ ಎಂಬ ಕಾನನದ ನಡುವಿನ ಪ್ರದೇಶದ ಕಥನವನ್ನು […]

ನೆಲೆ ಸಂಭ್ರಮ – 2020

ನೆಲೆ ಸಂಭ್ರಮ – 2020 ಫೇಸ್ಬುಕ್ ನಲ್ಲಿ ಕಾವ್ಯ ಓದುವುದರ ಮೂಲಕ ಕತೆ ಕೇಳುತ್ತಲೇ ಚಿಂತನೆಗಳನ್ನು ಮೆಲುಕು ಹಾಕುವುದರ ಜೊತೆಗೆ ನೆಲೆ ಸಂಭ್ರಮವನ್ನು ಆಚರಿಸೋಣ ಬನ್ನಿ…… ಎನ್ನುತ್ತಲೇ ಆರಂಭವಾದ ಸಿಂದಗಿಯ ನೆಲೆ ಪ್ರಕಾಶನ ಸಂಸ್ಥೆಗೆ ಇದೀಗ ನಾಲ್ಕು ದಶಕಗಳನ್ನು ಪೂರೈಸುತ್ತಿದೆ. ಇದರ ಹುಟ್ಟಿಗೆ ಪ್ರಮುಖ ಕಾರಣರು ಇದರ ಜೋಡಿ ಸ್ಥoಭದಂತಿರುವ ಡಾ. ಎಂ ಎಂ ಪಡಶೆಟ್ಟಿ ಹಾಗೂ ಡಾ. ಚನ್ನಪ್ಪ ಕಟ್ಟಿಯವರು. ಹವ್ಯಾಸಕ್ಕಾಗಿ ಹುಟ್ಟಿಕೊಂಡ ಸಂಸ್ಥೆ ಸ್ಥಳೀಯ ಲೇಖಕರ ಹಾಗೂ ಮಹಿಳೆಯರ ಕೃತಿಗಳ ಪ್ರಕಟಣೆಗೆ ಆದ್ಯತೆ ನೀಡುವುದರ […]

Back To Top