ಕಾವ್ಯಯಾನ

ತಿರುಗಾಟ

ಭಾಗ್ಯ ಸಿ

ಏಕೆ ತಿರುಗುವೆ ಅತ್ತಿಂದಿತ್ತ
ಅತ್ತ ಪ್ರಳಯ ಇತ್ತ ಕೋಲಾಹಲ
ತಿನ್ನುವ ಕೂಳಿಗೂ ಪರದಾಟ ಅಲ್ಲಿ
ತುಸುವೆ ಹೆಚ್ಚಾಗಿ ಕಿತ್ತಾಡುತ್ತಿರುವರಿಲ್ಲಿ

ಮೌಲ್ಯಾಧಾರಿತ ಸಮಸ್ಯೆಗಳು ಸಾಕಷ್ಟಿವೆ
ಕ್ಲಿಷ್ಟತೆಗಳು ಜೇಡರ ಬಲೆಯಂತಾಗಿವೆ
ಹೊರಾಡಬೇಕಿದೆ ಒಳಗಿನ ಶತ್ರುವಿನೊಂದಿಗೆ
ಸಮಾಜ ಸ್ವಾಸ್ಯ ಕಾಪಾಡುವ ಗುರಿಯೊಂದಿಗೆ

ಮಣ್ಣು, ಗಾಳಿ, ಬೆಳಕು ನೀರಿನ ಮಿಶ್ರಣ
ಹೋದರೆ ಹೋಯಿತು ಬೆಲೆ ಇಲ್ಲ
ಆತ್ಮ ಸತ್ಯವದು ಹೊಲಸು ಮಾಡಿಕೊಳ್ಳಬೇಡಿ
ಲೆಕ್ಕ ತೀರಿಸಲೇ ಬೇಕು ಮರೆಯಬೇಡಿ

ಏಕೆ ತಿರುಗುವೆ ಅತ್ತಿಂದಿತ್ತ
ತಿರುಗಾಟ ಪರಿಹಾರವಲ್ಲ
ಎಣೆ ಬಲೆಯನು ಬಿಗಿಯಾಗಿ
ಬೀಳಲಿ ಮಿಕ ತಲೆಕೆಳಗಾಗಿ

*****************************************

4 thoughts on “ಕಾವ್ಯಯಾನ

  1. ನಾವು lekka chuktha ಮಾಡುವ ಕಾಲ ಬಂದಿದೆ. ನಾವು ಇನ್ನೂ jagrutharagilladiruvudarinda ಪ್ರಕೃತಿ ತನಗೆ ತಾನೇ ಜಾಗೃತಿ ಮೂಡಿಸುತ್ತಿದೆ. Nice poem for present situation.

Leave a Reply

Back To Top