ಪುಸ್ತಕ ಸಂಗಾತಿ
ಜಾಂಬ್ಳಿ ಟುವಾಲು ಜಾಂಬ್ಳಿ ಟುವಾಲು ಕಥಾಸಂಕಲನ ಲೇಖಕರು- ರಾಜು ಹೆಗಡೆ ಪ್ರಕಾಶನ – ಅಂಕಿತ ಪುಸ್ತಕ ಶಿರಸಿಯಲ್ಲಿ ಕನ್ನಡ ಉಪನ್ಯಾಸಕರಾಗಿರುವ ಪ್ರೊ.ರಾಜು ಹೆಗಡೆ ಉತ್ತರ ಕನ್ನಡದ ಪ್ರಮುಖ ಕವಿ ಮತ್ತು ಕಥೆಗಾರ.ಉ.ಕದ ಗಡಿರೇಖೆಯೊಳಗೆ ತಮ್ಮ ಕಥಾಲೋಕ ಸೃಷ್ಟಿಸಿಕೊಂಡು ಇಲ್ಲಿಯೇ ನೆಲೆಸಿರುವ ಬರಹಗಾರ. ಜಾಂಬ್ಳಿ ಟುವಾಲು ಎಂಬ ಹೆಸರಿನ ಯಾವುದೇ ಕಥೆ ಇಲ್ಲಿಲ್ಲ. ಆದರೆ ‘ಕುರುರಾಯ ಇದನೆಲ್ಲ ಕಂಡು..’ ಎಂಬ ಕಥೆಯಲ್ಲಿ ಟವೆಲ್ ಇಟ್ಟು ಹೋದವರ ಜಗಳದ ಪ್ರಸಂಗ ಬರುತ್ತದೆ. ಕಥೆಗಳನ್ನು ಜಾಂಬ್ಳಿ – ಇಲ್ಲಿ ಆರು ಕಥೆಗಳು […]
ಕಾವ್ಯಯಾನ
ರೆಕ್ಕೆ ಮುರಿದಾಗ… ಚೇತನಾ ಕುಂಬ್ಳೆ ಲೋಹದ ಹಕ್ಕಿಯೊಂದು ರೆಕ್ಕೆ ಮುರಿದುಕೊಂಡು ಪ್ರಪಾತಕ್ಕೆ ಬಿದ್ದಾಗ, ಅಲ್ಲಿ ಉರುಳಿ ಬಿದ್ದು ಅಸುನೀಗಿದ್ದು ಬರೇ ಜೀವಗಳು ಮಾತ್ರ ಆಗಿರಲಿಲ್ಲ. ಹಲವು ಕುಟುಂಬಗಳ ಆಧಾರಸ್ತಂಭಗಳಾಗಿತ್ತು. ಅಲ್ಲಿ ಕಳೆದುಕೊಂಡದ್ದು ಸ್ನೇಹ ಸಂಬಂಧಗಳ ಕೊಂಡಿಯಾಗಿತ್ತು. ಒಬ್ಬರಿಗೆ ಪ್ರೀತಿಯ ಒಡಹುಟ್ಟಿದವರು ಮತ್ತೊಬ್ಬರಿಗೆ ಸ್ನೇಹಿತರು ಮಗದೊಬ್ಬರಿಗೆ ಬಾಳಿಗೆ ಬೆಳಕಾಗಿದ್ದ ಹೆತ್ತವರು ಕೆಲವರಿಗೆ ಜೀವದುಸಿರಾಗಿದ್ದ ಬಾಳಸಂಗಾತಿಗಳು, ಕರುಳಬಳ್ಳಿಗಳು ಮತ್ತೂ ಕೆಲವರಿಗೆ ಸಂಬಂಧಿಕರು ಲೋಹದ ಹಕ್ಕಿಯೊಂದು ರೆಕ್ಕೆ ಮುರಿದುಕೊಂಡು ಪ್ರಪಾತಕ್ಕೆ ಬಿದ್ದಾಗ, ಅಲ್ಲಿ ನುಚ್ಚುನೂರಾದದ್ದು ಕೇವಲ ದೇಹಗಳೂ ಎಲುಬುಗಳೂ ಮಾತ್ರವಾಗಿರಲಿಲ್ಲ ಹೆಣೆದಿಟ್ಟ […]
ಕಾವ್ಯಯಾನ
ತಂಗಾಳಿ! ಕೆ.ಬಿ.ವೀರಲಿಂಗನಗೌಡ್ರ ಅವಳೆಂದರೆ.. ತೊರೆದವನಿಗೆ ಅರಳಿಮರವಾದವಳು ಅವಳೆಂದರೆ.. ಕೂಡಬೇಕೆಂದವನಿಗೆ ಅನುಭವಮಂಟಪವಾದವಳು ಅವಳೆಂದರೆ.. ಹೋರಾಟಗಾರನಿಗೆ ಊರುಗೋಲಾಗಿ ನಿಂತವಳು ಅವಳೆಂದರೆ.. ಸಮತೆಯೆಂದವನಿಗೆ ತಕ್ಕಡಿ ಹಿಡಿದು ನಿಂತವಳು ಅವಳೆಂದರೆ.. ಎದೆಯದನಿಗೆ ಸ್ವಾತಿ ಹನಿಯಾದವಳು ಅವಳೆಂದರೆ.. ಬೆಳೆಸಲೆಂದೇ ಬೇರಾಗಿ ಕೆಳಗಿಳಿದವಳು ಅವಳೆಂದರೆ.. ಕಾಣದ ತಂಗಾಳಿ ಅರ್ಥವಾಗದ ಅಮೂರ್ತ. *******
ಕವಿತೆ ಕಾರ್ನರ್
ಕಣ್ನೀರಾಗುತ್ತೇನೆ! ಕಗ್ಗತ್ತಲ ಇರುಳೊಳಗೆ ಬೀದಿ ದೀಪಗಳ ನೆರಳುಗಳಾಟದೊಳಗೆ ಮುಸುಕೊದ್ದು ಮಲಗಿದ ನಿನ್ನ ಶಹರದೊಳಗೆ ಅಡ್ಡಾಡುತ್ತೇನೆ ನಿಶಾಚರನಂತೆ ಹಗಲು ಕಂಡ ಬೀದಿಯ ಹುಡುಕಿ ಇರುಳು ಅಲೆಯುತ್ತೇನೆ ಎತ್ತರದ ನಿನ್ನ ಮನೆಯ ಮಹಡಿಯಮೇಲೆ ಕವಿದ ಕಪ್ಪು ಮೋಡಗಳಾಚೆ ಇಣುಕುತ್ತಿರುವ ಚಂದ್ರನ ನಿದ್ದೆಗಣ್ಣಿನ ನಗುವಿಗೆ ಹೋಲಿಸಿ ನಿನ್ನ ಮಂದಹಾಸವ ನಾಚುತ್ತೇನೆ! ಮೂಡಿದ ಸೂರ್ಯನ ಎಳೆ ಕಿರಣಗಳು ನಿನ್ನಂಗಳದಲ್ಲಿ ಚಿತ್ತಾರ ಬಿಡಿಸುವ ದಿವ್ಯ ಮುಂಜಾವದಲ್ಲಿ ಮೈಮುರಿಯುತ್ತ ಹೊರಬಂದ ನಿನ್ನ ಮುದುಡಿದ ಸೀರೆಯ ನಿರಿಗೆಗಳಲ್ಲಿ ಅಡಗಿರಬಹದಾದ ಹಿಂದಿನ ರಾತ್ರಿಯ ಕನಸುಗಳಲ್ಲಿ ನನ್ನ ಹುಡುಕುತ್ತೇನೆ! ಕಾಣದ […]
ಪುಸ್ತಕ ಸಂಗಾತಿ
ನಾನು ಅಘೋರಿಯಲ್ಲ “ನಾನು ಅಘೋರಿಯಲ್ಲ”” – Santoshkumar Mehandale 10 ವರ್ಷದ ಹಿಂದೆಯೇ ತರಂಗದಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ, ರಾಜ್ಯಮಟ್ಟದ ಜನಪ್ರಿಯ ಕಾದಂಬರಿ ಎಂದೆನಿಸಿಕೊಂಡ, (ಬಹುಶ ಹಲವು ಪ್ರಶಸ್ತಿಯೂ ) ಪುಸ್ತಕ…. ನನ್ನ ಬಹುದೊಡ್ಡ ಹೊಟ್ಟೆಯುರಿ ಅಂದ್ರೆ ಈ ಲೇಖಕರು, ಇವರ ಬರಹಗಳು ನಂಗೆ ಪರಿಚಯವಾದದ್ದು ತೀರ ಇತ್ತೀಚಿಗೆ, ಇಷ್ಟು ವರ್ಷ ನಾನೀ ಲೇಖಕರ ಪುಸ್ತಕ ಬರಹ ಎಲ್ಲಾ ಮಿಸ್ ಮಡ್ಕೊಂಡೇ ಅಂತನ್ನಿಸೋದು ಇವರ ಕೆಲವು ಪುಸ್ತಕಗಳು ಸಿಗದಿದ್ದಾಗ, ಅವನು ಗಂಧರ್ವ…. ಯಾವ ಪ್ರೀತಿಯೂ…. ಓದಿದ ನಂತರ […]
ಪ್ರಸ್ತುತ
ಕ್ವಾರಂಟೈನ್ ರಜೆ ಯಲ್ಲಿ ಆತ್ಮಾವಲೋಕನ.. ವಿದ್ಯಾಶ್ರೀ. ಎಸ್.ಅಡೂರ್ ಹಿಂದೆಂದೂ ಕಂಡು, ಕೇಳಿ ಅರಿಯದ…..ಮುಂದೆಂದೂರ ಈ ರೀತಿಯೂ ಆಗಬಹುದೇ ಎಂದು ಖಾತ್ರಿಯೇ ಇಲ್ಲದಂತಹ ವಿದ್ಯಮಾನವೊಂದು ಜಗತ್ತಿನಾದ್ಯಂತ ತಾಂಡವವಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಹೌದು…ನಾನು ಕೊರೊನ ಬಗೆಗೆಯೇ ಹೇಳುತ್ತಿರುವುದು. ಯಾರಿಗೆ ಪಥ್ಯವಾದರೂ…ಆಗದಿದ್ದರೂ…ಪ್ರಕೃತಿಯ ಮುಂದೆ ಹುಲುಮಾನವ ತೃಣಕ್ಕೆ ಸಮಾನವಾಗಿದ್ದಾನೆ.ಜಗತ್ತಿನ ದೊಡ್ಡಣ್ಣ ಎನ್ನಲಾಗುವ ಅಮೇರಿಕಾದಂತಹ ದೇಶವೇ ಸೋತು ಸುಣ್ಣವಾಗಿದೆ. ವೈಜ್ಞಾನಿಕವಾಗಿ,… ವೈಚಾರಿಕವಾಗಿ….ಯೋಚಿಸುವಾಗ ಅನೇಕ ತರ್ಕಬದ್ಧ ವಿಚಾರಗಳನ್ನು ಪುಟಗಟ್ಟಲೆ ಮಂಡಿಸಬಹುದು..ಚರ್ಚಿಸಬಹುದು. ನಾನು..ನೀನು ಎಂದು ಅನೇಕ ತಾಕಲಾಟ-ಮೇಲಾಟ ಗಳನ್ನು ಮಾಡಬಹುದು. ದೊಂಬಿ-ಗಲಾಟೆಗಳನ್ನು ಎಬ್ಬಿಸಬಹುದು. […]
ಕಾವ್ಯಯಾನ
ಸರಸ ಬಾಲಕೃಷ್ಣ ದೇವನಮನೆ ಹುಣ್ಣಿಮೆಯ ಶೃಂಗಾರದಾಟಕೆಉದ್ರೇಕಗೊಂಡು ಮೊರೆಯುತ್ತಿದೆ ಕಡಲುದಂಡೆಯಲ್ಲಿ…ಎದೆಯಿಂದ ನಾಭಿಯಲಿ ಸುಳಿದುತೊಡೆಸಂಧಿಯಲಿ ಕುದಿಯುತ್ತಿದೆ ಉಸಿರು… ಮೌನವನು ಹೊದ್ದ ತಿಂಗಳುಮುಚ್ಚಿದ ರೆಪ್ಪೆ; ಕಚ್ಚಿದ ತುಟಿ,ಕಿವಿಯ ಪದರದಲಿ ಮುಲುಕಾಟದಾಲಾಪ,ಕುಳಿರ್ಗಾಳಿ ಸೋಕಿದ ಬೆರಳುಮೈಮುರಿದ ತೋಳುಉಸಿರಿನೇರಿಳಿತಕಿಬ್ಬೊಟ್ಟೆಯಲಿ ಬಿಗಿತ;ನಡುವಿಂದ ಕಾಲ್ಸೆಳೆತ. ಚದುರಿದ ಮರಳುಹಾಸಿಗೆ, ಕೆದರಿದ ಮುಂಗುರುಳುಗೀರಿದ ಬೆನ್ನುಉಕ್ಕಿದ ಬೆವರು ಹರಿದುಒಡಲೊಳಗೆ ಜೀವಜಲ ಪುಟಿದುಗರ್ಭಗಡಲಲ್ಲಿ ಪುಳಕ..! ಮೊರೆತ ತಗ್ಗಿದ ಕಡಲು ಶಾಂತಪ್ರಶಾಂತ ಮುಗುಳು ಧನ್ಯ!! *******
ಕಥಾಯಾನ
ಒಂದು ವಿಶೇಷ ದಿನ ಮಲಯಾಳಂ ಮೂಲ: ಪೂನತಿಲ್ ಕುಞಬ್ದುಳ್ಳ ಕನ್ನಡಕ್ಕೆ ಚೇತನಾ ಕುಂಬ್ಳೆ ಹಲವು ವರ್ಷಗಳ ನಂತರ, ಅವನು ಚಂದ್ರಿಕಳ ಮನೆಗೆ ಬಂದ. ಕೇವಲ ಚಂದ್ರ ಎಂಬ ಹೆಸರು ಅವನಿಗಿದ್ದದ್ದರಿಂದ ಮಾತ್ರ ಚಂದ್ರಿಕ ಆತನನ್ನು ಧ್ಯಾನಿಸಿದ್ದಲ್ಲ. ಅವನು ಸಿ.ಸಿ ಚಂದ್ರ. ಚಂದ್ರನ್ ಆಂಡ್ ಬ್ರದರ್ಸ್ ನ ಮ್ಯಾನೇಜಿಂಗ್ ಪಾರ್ಟ್ನರ್ ಆಗಿದ್ದ. ಅವರಿಗೆ ನೂರಾರು ಟ್ರಕ್ಕುಗಳೂ, ಹತ್ತಿ ಬಟ್ಟೆ ನೇಯುವ ಮೂರು ದೊಡ್ಡ ಮಿಲ್ಲುಗಳು ತಮಿಳುನಾಡಿನಲ್ಲಿವೆ. ವಿವಿಧ ವ್ಯಾಪಾರ ಸಂಘಟನೆಗಳ ನಾಯಕರನ್ನು ವಶೀಕರಿಸುವ ಮಾದಕ ವಸ್ತುಗಳಿವೆ. ಒಂದು […]
ಕಾವ್ಯಯಾನ
ಗಝಲ್ ಅಮೃತ ಎಂ ಡಿ ಕಣ್ಮುಚ್ಚಿ ನೋವುಗಳನ್ನೇ ಸಹಿಸಿಕೊಳ್ಳುವೆ ಗೆಳೆಯ ನಿನ್ನ ಹೆಸರಲ್ಲಿ ನನ್ನಯ ಉಸಿರುಂಟು ಗೆಳೆಯ ಆಗಾಗ ಉಸಿರಾಡೋ ಗಾಳಿಯಲ್ಲಿ ನಿನ್ನಯ ಹೆಸರನ್ನೇ ಹುಡುಕುವ ಹುಚ್ಚಾಟದ ಅತಿರೇಕವುಂಟು ಗೆಳೆಯ ಶ್ರೀಗಂಧದ ಘಮಲು ಕೂಡ ಪೈಪೋಟಿ ನೀಡುತ್ತಿರುವಾಗ ಚಂದದ ಮೋರೆಗೆ ಎಲ್ಲಿಲ್ಲದ ಅಂದವುಂಟು ಗೆಳೆಯ ನಿನ್ನೊಲವ ನೆರಳಲ್ಲಿ ಮುಳ್ಳು ಹಾದಿಯು ಕೂಡ ಹೂವಿನ ಹಾಸಿಗೆ ಆಗುವುದೆಂಬ ಆಸೆವುಂಟು ಗೆಳೆಯ “ಅಮ್ಮು”ವಿನ ಸಂತೋಷದ ಪರಿಛಾಯೆಯು ನಿನ್ನ ಸಂಪ್ರೀತಿಯ ಸಾಂಗತ್ಯದಲ್ಲೇ ಉಂಟು ಗೆಳೆಯ ************
ಕಾವ್ಯಯಾನ
ಬೊಗಸೆಯೊಳಗಿನ ಬಿಂದು ಎನ್. ಶೈಲಜಾ ಹಾಸನ ಬಿಟ್ಟು ಬಿಡು ಗೆಳೆಯನನ್ನಷ್ಟಕ್ಕೆ ನನ್ನರೆಕ್ಕೆ ಹರಿದ ಹಕ್ಕಿಹಾರಿಹೋಗುವುದೆಲ್ಲಿಇಷ್ಟಿಷ್ಟೆ ಕುಪ್ಪಳಿಸಿಅಲ್ಲಲ್ಲೆ ಅಡ್ಡಾಡಿನಿನ್ನ ಕಣ್ಗಾವಲಲ್ಲಿಯೇಸುತ್ತಿ ಸುಳಿದುಒಂದಿಷ್ಟೆ ಸ್ವಚ್ಛಗಾಳಿಸೋಕಿದಾ ಕ್ಷಣಧನ್ಯತೆಯ ಪುಳಕತಣ್ಣನೆಯ ನಡುಕಎದೆಯ ತಿದಿಯೊಳಗೆನೀನೇ ಒತ್ತಿದ ಕಾವುಭಾವನೆಗಳ ಬೇಯಿಸಿಮನವೀಗ ಚಿತೆಯೊಳಗೆಬೆಂದ ಕುಂಭಬಿಟ್ಟರೂ ಬಿಡಲಾರೆಎನುವ ಮಾಯೆಅಟ್ಟಾಡಿಸುತ್ತಿದೆಗೆಲುವಿನ ಹಾದಿಯನೀನೇ ಹಾರ ಬಿಟ್ಟರೂರೆಕ್ಕೆ ಇಲ್ಲದ ನಾನುಮತ್ತೇ ನಿನ್ನ ಉಡಿಗೆಬೊಗಸೆಯೊಳಗಿನ ಬಿಂದುಮುಷ್ಠಿಯೊಳಗೆ ಆವಿಎತ್ತತ್ತ ಸರಿದರೂಮತ್ತೆ ಅಲ್ಲಿಗೇಪಯಣದ ಹಾದಿದೂರ ದೂರಕೆ ********