ಟಿ. ಎಸ್. ಶ್ರವಣಕುಮಾರಿ ಕವಿತೆ ಖಜಾನೆ
ಶ್ರವಣ ಕುಮಾರಿ ಕವಿತೆಗಳು
ಡಾ. ನಿರ್ಮಲ ಬಟ್ಟಲ ಕವಿತೆ ಖಜಾನೆ
ನಿರ್ಮಲಾ ಬಟ್ಟಲ ಕವಿತೆಗಳು
ಸುರಿಯಲಿ ಮಳೆ
ನಗುವ ಹರಡಿ
ನಾವೇ ಮಳೆಯಾಗೋಣ
ದಿಲೀಪ್ ಕುಮಾರ್ ಕವಿತೆ ಖಜಾನೆ
ದಿಲೀಪ್ ಕುಮಾರ್ ಕವಿತೆಗಳು
ಸಂತೆಬೆನ್ನೂರು ಫೈಜ್ನಟ್ರಾಜ್ ಕವಿತೆ ಖಜಾನೆ
ಸಂತೆಬೆನ್ನೂರು ಫೈಜ್ನಟ್ರಾಜ್ ಕವಿತೆಗಳು
ಧಾರಾವಾಹಿ ಆವರ್ತನ ಅದ್ಯಾಯ-43 ಗುರೂಜಿಯವರ ಧಾರ್ಮಿಕ ಕಾರ್ಯಕ್ಕೆ ಸುಂದರವಾಗಿ ರಂಗೋಲಿಯಿಟ್ಟು ಶೃಂಗಾರಗೊಂಡ ಜಾಗದಲ್ಲಿದ್ದ ದೈತ್ಯ ಮರಗಳು ತಂತಮ್ಮ ಅಂತ್ಯ ಕಾಲ ಸಮೀಪಿಸಿತೆಂಬುದನ್ನು ನೆನೆದು ಭಯ, ದುಃಖದಿಂದ ತರತರ ಕಂಪಿಸುತ್ತ ಕೆಲವುಕ್ಷಣ ಆಮ್ಲಜನಕವನ್ನು ಸ್ರವಿಸುವುದನ್ನೇ ಮರೆತು ಇಂಗಾಲವನ್ನು ಕಕ್ಕುತ್ತಿವೆಯೇನೋ ಎಂಬಂತೆ ಅಲ್ಲಿನ ಪರಿಸರವು ಒಮ್ಮೆಲೇ ಮಲೀನಗೊಂಡಿತು. ಅದರೊಂದಿಗೆ ಕಾಡಿನ ಸೆರಗಿನಲ್ಲಿದ್ದ ಸರೋವರವೂ ತಲ್ಲಣಿಸುತ್ತ, ಸ್ಫಟಿಕದಂಥ ಜಲರಾಶಿಯು ಮಂದವಾಗಿ ಮೇಲ್ಪದರದಲ್ಲಿ ಹಳದಿಮಿಶ್ರಿತ ಕೆಂಬಣ್ಣದ ದಟ್ಟ ಪದರವೊಂದು ಸೃಷ್ಟಿಯಾಗಿ ಸೇವಿಸಲಯೋಗ್ಯವಾಗಿಬಿಟ್ಟಿತು. ಗುರೂಜಿಯವರ ಚಟುವಟಿಕೆ ನಡೆಯಲಿದ್ದ ಸ್ಥಳದ ಒಂದು ಮೂಲೆಯಲ್ಲಿ ನಿಂತುಕೊಂಡು ಅವರನ್ನು ಕಾಯುತ್ತಿದ್ದ ಭೂಮಾಲಕರ ಮತ್ತು ಊರ ಭಕ್ತಾದಿಗಳ ಗುಂಪು ಅಲ್ಲಿ ಸೃಷ್ಟಿಯಾದ ವಿಷಮ ವಾತಾವರಣವನ್ನು ಕಂಡು ತೀವ್ರ ಗಾಬರಿಗೊಂಡಿತು. ಕೆಲವರಿಗೆ ಕಾಡಿಗೆ ಕಾಡೇ ನೊಂದು ರೋಧಿಸುವಂತೆಯೂ ಭಾಸವಾಗಿ ಭಯವಾಯಿತು. ಇತ್ತ ಹುಚ್ಚೆದ್ದು ಧಾವಿಸುತ್ತಿದ್ದ ಬಿರುಗಾಳಿಯು ರಪ್ಪನೆ ಜನರ ಗುಂಪಿನತ್ತ ನುಗ್ಗಿತು. ತಾನು ಬಾಚಿ ಹೊತ್ತು ತಂದಿದ್ದ ಕಸಕಡ್ಡಿ ಕಶ್ಮಲಗಳನ್ನೆಲ್ಲ ಕ್ರೋಧವೆತ್ತಂತೆ ರಪರಪನೇ ನೆರೆದವರ ಮೇಲಪ್ಪಳಿಸುತ್ತ ಸುಳಿಯಿತು. ಆ ಜನರು ಭೀತಿಯಿಂದ ದಿಕ್ಕುದೆಸೆ ತಪ್ಪಿ ಓಡುತ್ತ ಸಿಕ್ಕಸಿಕ್ಕ ಮರಗಿಡಗಳ ಮರೆಗೆ ಸರಿದು ಅಡಗಿಕೊಳ್ಳತೊಡಗಿದರು. ಅಷ್ಟರಲ್ಲಿ ಗುರೂಜಿಯವರ ತಂಡವೂ ಕಾಡಿನೊಳಗೆ ಅಡಿಯಿಟ್ಟಿತು. ಅವರನ್ನು ಕಂಡ ಬಿರುಗಾಳಿಯ ರಭಸವು ದುಪ್ಪಟ್ಟಾಗುವುದಕ್ಕೂ ನಂದಿಮರದ ದೊಡ್ಡ ಒಣ ರೆಂಬೆಯೊಂದು ಗುರೂಜಿಯವರ ನೆತ್ತಿಯ ನೇರಕ್ಕೆ ಮುರಿದು ಬೀಳುವುದಕ್ಕೂ ಸರಿಹೋಯಿತು. ಆದರೆ ಅದನ್ನು ತಟ್ಟನೆ ಗಮನಿಸಿದ ಗುರೂಜಿಯವರು ಹೌಹಾರಿ ಒಂದೇ ಉಸಿರಿಗೆ ಹಿಂದೆ ನೆಗೆದು ಅದೇ ವೇಗದಲ್ಲಿ ಹಿಂದಿರುಗಿ ಓಡಲಿದ್ದರು. ಆದರೆ ಅದು ಹೇಗೋ ಕಷ್ಟಪಟ್ಟು ಸಂಭಾಳಿಸಿಕೊಂಡು ನಿಂತರು. ಆದರೆ ಆಕ್ಷಣ ಅವರ ಗಟ್ಟಿ ಹೃದಯವನ್ನು ಯಾರೋ ಬಿರುಸಾಗಿ ತಿವಿದಂಥ ನೋವೊಂದು ಕಾಣಿಸಿಕೊಂಡಿತು. ಎದೆಯ ಭಾಗನ್ನು ರಪ್ಪನೆ ಅಮುಕಿ ಹಿಡಿದುಕೊಂಡು ಅವುಡುಗಚ್ಚಿ ನೋವು ನುಂಗಿದರು. ಬಿರುಗಾಳಿಯ ರೌದ್ರ ನರ್ತನ ತಣ್ಣಗಾಗುವವರೆಗೆ ಮರವೊಂದನ್ನು ಬಿಗಿಯಾಗಿ ಹಿಡಿದು ನಿಂತು ಸುಧಾರಿಸಿಕೊಂಡರು. ಅತ್ತ ಅಲ್ಲೊಂದು ತಮಾಷೆಯೂ ನಡೆದಿತ್ತು. ರಾಘವ ಉಟ್ಟಿದ್ದ ಬಿಳಿಯ ಪಂಚೆಯೂ ಹೆಗಲ ಮೇಲೆ ಹೆಮ್ಮೆಯಿಂದ ನೇತಾಡಿಸಿಕೊಂಡಿದ್ದ ಉತ್ತರೀಯವೂ ಬಿರುಗಾಳಿಗೆ ಸಿಲುಕಿ ಹಾರಿ ಹೋಗಿ ಮರದ ಎತ್ತರದ ಕೊಂಬೆಯೊಂದಲ್ಲಿ ನೇತಾಡುತ್ತಿದ್ದವು. ಅವನ ಅವಸ್ಥೆಯನ್ನು ಕಂಡ ಕೆಲವರಿಗೆ ಅಂಥ ಸ್ಥಿತಿಯಲ್ಲೂ ನಗು ಉಕ್ಕಿತು. ಅವರೆಲ್ಲ ಮುಸಿಮುಸಿ ನಕ್ಕಾಗ ಉಳಿದವರೂ ಜೋರಾಗಿ ನಗತೊಡಗಿದರು. ಆಗ ರಾಘವನಿಗೆ ತೀರಾ ಅವಮಾನವೆನಿಸಿತು. ಆತ ಕೂಡಲೇ ಪಂಚೆಯಿದ್ದ ಮರವೇರಲು ಮುಂದಾದ. ಆದರೆ ಮತ್ತೇನೋ ಹೊಳೆದು ಕಾರಿನತ್ತ ಓಡಿದ. ಅಲ್ಲಿದ್ದ ಹಳೆಯ ಪಂಚೆಯೊಂದನ್ನು ಉಟ್ಟುಕೊಂಡು ಹಿಂದಿರುಗಿದ. *** ದೇವರಕಾಡಿನಲ್ಲಿ ಭುಗಿಲೆದ್ದ ಬಿರುಗಾಳಿಯು ಸ್ವಲ್ಪಹೊತ್ತಿನಲ್ಲಿ ನಿಧಾನಕ್ಕೆ ಬಿಸಿಯೇರಿ ಕಾಡಿನೊಳಗಿನ ಮನುಷ್ಯ ಕ್ರಿಮಿಗಳನ್ನೆಲ್ಲ ಉಸಿರುಗಟ್ಟಿಸಿ ಹೊರಗೋಡಿಸಲೆತ್ನಿಸಿತು. ಆದರೆ ಅಷ್ಟರಲ್ಲಿ ಗೂರೂಜಿಯವರ ಮಹತ್ವಾಕಾಂಕ್ಷೆಯೂ ಜಾಗ್ರತಗೊಂಡಿದ್ದರಿಂದ ಬಿರುಗಾಳಿಯು ಮೆಲ್ಲನೆ ತನ್ನ ತೀಕ್ಷ್ಣತೆಯನ್ನು ಕಳೆದುಕೊಂಡು ಕಣ್ಮರೆಯಾಯಿತು. ಪರಿಸ್ಥಿತಿ ಶಾಂತವಾಗುತ್ತಲೇ ಗುರೂಜಿಯವರು ಜೀರ್ಣೋದ್ಧಾರದ ನಾಂದಿಗೆ ಬಂದು ಸೇರಿದ್ದ ಭಕ್ತಾದಿಗಳನ್ನುದ್ದೇಶಿಸಿ ಮಾತಾಡಲಿಚ್ಛಿಸಿದರು. ‘ಉಙಂ…ಉಙಂ…!’ ಎಂದು ಗಂಟಲು ಸರಿಪಡಿಸಿಕೊಳ್ಳುತ್ತ ಎಲ್ಲರನ್ನೂ ಎಚ್ಚರಿಸಿದರು. ಆಗ ಜನರೂ ಅಷ್ಟರವರೆಗೆ ತಮ್ಮನ್ನು ಕಾಡುತ್ತಿದ್ದ ಆತಂಕವನ್ನು ಬದಿಗೊತ್ತಿ ಗುರೂಜಿಯವರ ಮಾತುಗಳನ್ನು ಆಲಿಸತೊಡಗಿದರು. ‘ನೋಡಿ ಭಕ್ತಾದಿಗಳೇ… ಈಗ ಸ್ವಲ್ಪಹೊತ್ತಿನ ಮುಂಚೆ ಈ ಪವಿತ್ರ ಸನ್ನಿಧಿಯಲ್ಲಿ ನಡೆದ ವಿಚಿತ್ರ ಘಟನೆಗೆ ನೀವೆಲ್ಲ ಸಾಕ್ಷಿಯಾಗಿದ್ದೀರಿ ಅಂತ ಹೇಳಲು ನಮಗೆ ಸಂತೋಷವಾಗುತ್ತಿದೆ. ಯಾವ ಮಹಾಶಕ್ತಿಯನ್ನು ನಾವು ಶ್ರದ್ಧಾಭಕ್ತಿಯಿಂದ ಪೂಜಿಸಿಕೊಂಡು ಬರಲು ಇಚ್ಛಿಸಿದ್ದೇವೋ ಅದೇ ಶಕ್ತಿಯು ಇವತ್ತು ನಮಗೆಲ್ಲರಿಗೂ ಎಂಥ ವಿಶೇಷ ಸ್ವಾಗತವನ್ನು ನೀಡಿತು ಎನ್ನುವುದನ್ನು ನೀವೆಲ್ಲ ಕಣ್ಣಾರೆ ನೋಡಿರುವಿರಿ. ಆದರೂ ನಿಮಗೆ ನಾವದನ್ನು ಸ್ವಲ್ಪ ವಿವರಿಸಿ ಹೇಳಬೇಕು. ನಮ್ಮೆಲ್ಲರ ಈ ನಿರ್ಧಾರದಿಂದ ನಾಗದೇವನಿಗೆ ಆದಂಥ ಅಪರಿಮಿತ ಸಂತೋಷವು ಬಿರುಗಾಳಿಯ ರೂಪದಲ್ಲಿ ಕಾಣಿಸಿಕೊಂಡರೆ ನಂದಿಮರದ ಒಣ ಗೆಲ್ಲೊಂದು…!’ ಎಂದು ಮಾತು ನಿಲ್ಲಿಸಿದವರು, ‘ಭಕ್ತಾದಿಗಳೇ ಗಮನವಿಟ್ಟು ಕೇಳಿಸಿಕೊಳ್ಳಿ! ನಾವು ಹೇಳುತ್ತಿರುವುದು ಗಟ್ಟಿಮುಟ್ಟಾದ ಹಸಿ ಗೆಲ್ಲಿನ ಬಗ್ಗೆ ಅಲ್ಲ…, ಒಣಗಿ ಕುಂಬಾದ ಗೆಲ್ಲು! ಅದು ಒಂದುವೇಳೆ ನಾಡಿದ್ದು ಜೀರ್ಣೋದ್ಧಾರದ ಸಮಯದಲ್ಲೆಲ್ಲಾದರೂ ಮುರಿದು ಬೀಳುತ್ತಿದ್ದರೆ ಎಂಥ ಅನಾಹುತವಾಗುತ್ತಿತ್ತು ಅಂತ ನೀವೇ ಊಹಿಸಿಕೊಳ್ಳಿ! ಅಂಥ ಕುಂಬು ರೆಂಬೆಯೊಂದು ನಮ್ಮೆಲ್ಲರ ಕಣ್ಣಮುಂದೆಯೇ ಮುರಿದು ಬಿದ್ದಿರುವುದು ಇಲ್ಲಿನ ದೈವಭೂತಗಳೂ ನಮ್ಮೆಲ್ಲರ ಮೇಲೆ ಇಟ್ಟಿರುವ ಕೃಪಾಕಟಾಕ್ಷಕ್ಕೆ ಸಣ್ಣದೊಂದು ಉದಾಹರಣೆ ಎಂದೇ ತಿಳಿಯಬೇಕು. ಆದ್ದರಿಂದ ಮುಂದೆ ನಡೆಯಲಿರುವ ಮಹತ್ಕಾರ್ಯಕ್ಕೆ ಇಲ್ಲಿನ ಸರ್ವಶಕ್ತಿಗಳ ಸಂಪೂರ್ಣ ಸಹಕಾರ ನಮಗಿದೆ ಎನ್ನುವುದೇ ಈ ಘಟನೆಯ ಒಳಾರ್ಥ. ಹಾಗಾಗಿ ನಮ್ಮ ಪಾಲಿಗೆ ಇದಕ್ಕಿಂತ ಶುಭಗಳಿಗೆ ಇನ್ನೊಂದು ಬರಲಾರದು. ಆದಷ್ಟು ಬೇಗ ಕೆಲಸ ಆರಂಭಿಸುವ ಬನ್ನಿ…!’ ಎಂದು ನಗುತ್ತ ಹೇಳಿದವರು ರಾಘವನತ್ತ ತಿರುಗಿ ಮುಂದಿನ ಕಾರ್ಯಕ್ಕೆ ಅಣಿ ಮಾಡುವಂತೆ ಸಂಜ್ಞೆ ಮಾಡಿದರು. ರಾಘವನು ಕೂಡಲೇ ಜಾಗದ ಹಿರಿಯನೊಬ್ಬನನ್ನು ಕರೆದುಕೊಂಡು ನೀರು ತರಲು ಸಮೀಪದ ಮದಗದತ್ತ ಹೋದ. ಆದರೆ ಆ ಸರೋವರದ ನೀರು ಹಳದಿ ಬಣ್ಣಕ್ಕೆ ತಿರುಗಿತ್ತು. ಅಷ್ಟಲ್ಲದೇ ಯಾವುದೋ ಪ್ರಾಣಿಯೊಂದು ಸತ್ತು ಕೊಳೆತ ದುರ್ವಾಸನೆ ಬೀರುತ್ತಿದ್ದ ನೀರಿನ ಮೇಲೆ ಹಿಂಡುಹಿಂಡು ನೊಣಗಳು ಗುಂಯ್ಯಿಗುಟ್ಟುತ್ತಿದ್ದವು. ಅದನ್ನು ಕಂಡ ಆ ಹಿರಿಯನಿಗೆ ಆತಂಕವಾಯಿತು. ಎಂದೂ ಹೀಗೆ ಮಲೀನವಾಗದಿದ್ದ ನಿರ್ಮಲ ಸರೋವರಕ್ಕೆ ಇಂದೇನಾಯಿತು? ಎಂದು ಚಿಂತಿಸಿದವನು ರಾಘವನನ್ನು ತಡೆದು ಗುರೂಜಿಯವರಿಗೆ ವಿಷಯ ತಿಳಿಸಿ ಬರಲು ಸೂಚಿಸಿದ. ರಾಘವ ತಕ್ಷಣ ಹೋಗಿ ಗುರೂಜಿಯ ಕಿವಿಯಲ್ಲಿ ವಿಷಯವನ್ನರುಹಿದ. ಅದನ್ನು ಕೇಳಿದ ಗುರೂಜಿಯವರ ಮುಖವು ವಿವರ್ಣವಾಯಿತು. ಆದ್ದರಿಂದ ಅವರು ಕ್ಷಣಹೊತ್ತು ಧ್ಯಾನಮಗ್ನರಾಗಿಬಿಟ್ಟರು. ಬಳಿಕ ತಮ್ಮ ಚೀಲದಿಂದ ಮಣ್ಣಿನ ಸಣ್ಣ ಪೊಟ್ಟಣವೊಂದನ್ನು ತೆಗೆದು ಅವನ ಕೈಗಿತ್ತು,‘ಇದು ಮೂಲ ನಾಗನ ಹುತ್ತದ ಪ್ರಸಾದ. ಭಕ್ತಿಯಿಂದ ಪ್ರಾರ್ಥಿಸಿಕೊಂಡು ಮದಗಕ್ಕೆ ಚೆಲ್ಲಿ ಅದೇ ಜಾಗದ ನೀರನ್ನು ತೆಗೆದುಕೊಂಡು ಬಾ!’ ಎಂದು ಆಜ್ಞಾಪಿಸಿದರು. ರಾಘವ ಆ ಪ್ರಸಾದವನ್ನು ಕೊಂಡೊಯ್ದು ಹಾಗೆಯೇ ಮಾಡಿದ. ಆಶ್ಚರ್ಯ! ಆ ಮಣ್ಣಿನ ಪ್ರಸಾದ ಬಿದ್ದ ಜಾಗದಷ್ಟು ನೀರು ತಕ್ಷಣ ಶುದ್ಧವಾದಂತೆ ತೋರಿತು! ಇಬ್ಬರಿಗೂ ವಿಸ್ಮಯವಾಯಿತು. ಅವರು ಗುರೂಜಿಯವರ ಮಹಿಮೆಯನ್ನು ಕೊಂಡಾಡುತ್ತ ನೀರು ಹೊತ್ತುಕೊಂಡು ಹಿಂದಿರುಗಿದರು. ಹಿಂದಿರುಗಿ ಬಂದ ಹಿರಿಯ ತಾನು ಕಂಡ ವಿಚಿತ್ರವನ್ನು ಉಳಿದ ಭಕ್ತಾದಿಗಳಿಗೂ ವಿವರಿಸಿದ. ಅವರೂ ಅಚ್ಚರಿಗೊಂಡು ಭಯಭಕ್ತಿಯಿಂದ ಪುಳಕಿತರಾದರು. ಗುರೂಜಿಯವರು ಭಕ್ತಾದಿಗಳ ಸಮ್ಮುಖದಲ್ಲಿ ತಮ್ಮ ಮುಂದಿನ ಚಮತ್ಕಾರವನ್ನು ತೋರಿಸಲು ಸಿದ್ಧರಾದರು. ಕಾಡಿನ ನಡುವೆ ಪ್ರಶಸ್ತ ಸ್ಥಳವೊಂದರಲ್ಲಿ ಹೋಮ ಕುಂಡವನ್ನು ಸ್ಥಾಪಿಸಲಾಯಿತು. ಗುರೂಜಿಯವರು ತಮ್ಮೊಂದಿಗೆ ಕರೆದು ತಂದಿದ್ದ ಏಳು ಮಂದಿ ಸಹಾಯಕರೊಂದಿಗೆ ಹೋಮ ಕುಂಡದೆದುರು ಪದ್ಮಾಸೀನರಾಗಿ ಕುಳಿತು ಮಂತ್ರೋಚ್ಛರಣೆಯಲ್ಲಿ ತೊಡಗಿದರು. ಸುಮಾರು ಅರ್ಧ ಗಂಟೆಯ ಕಾಲ ವಿಶೇಷ ಹೋಮವೊಂದು ನಡೆದು ಪೂರ್ಣಾಹುತಿ ಕೊಟ್ಟು ಎದ್ದು ನಿಂತ ಗುರೂಜಿಯವರು ತಮ್ಮ ಮೈತುಂಬಾ ಇಳಿಯುತ್ತಿದ್ದ ಬೆವರನ್ನು ಒರೆಸಿಕೊಳ್ಳುತ್ತ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡರು. ಬಳಿಕ ಮುಂದಿನ ವಿಶೇಷ ವಿಧಿಗೆ ಮುಂದಾದರು. ಗುರೂಜಿಯವರ ಸಹಾಯಕರು ಅವರ ಇಂಗಿತವನ್ನು ಅರ್ಥೈಸಿಕೊಂಡು ಮುಂದೆ ಬಂದು ಅವರ ಅಕ್ಕಪಕ್ಕ ಕೈಮುಗಿದು ನಿಂತುಕೊಂಡರು. ಮುಂದಿನಕ್ಷಣ ಗುರೂಜಿಯವರು ನಾಗದೇವನೇ ಮೈಮೇಲೆ ಬಂದಂತೆ ಆವೇಶಭರಿತರಾಗಿ ನಡುಗತೊಡಗಿದರು. ಹತ್ತಾರು ಕಪ್ಪು ಮಚ್ಚೆಗಳಿಂದ ಕೂಡಿದ ಅವರ ಕೆನ್ನಾಲಿಗೆಯು ಕ್ಷಣಕ್ಷಣಕ್ಕೂ ಹೊರ ಒಳಗೆ ಹರಿದಾಡುತ್ತ ಭಯ ಹುಟ್ಟಿಸುವಂಥ ಹಾವಿನ ವರ್ತನೆಯಂತೆಯೇ ಭಕ್ತಾದಿಗಳಿಗೆ ಭಾಸವಾಯಿತು. ಎಲ್ಲರೂ ಭೀತರಾಗಿ ನೋಡುತ್ತಿದ್ದರು. ಅಷ್ಟರಲ್ಲಿ ಗುರೂಜಿಯವರ ಆವೇಶವು ಸ್ವಲ್ಪ ತಗ್ಗಿತು. ರಾಘವ ಅದನ್ನೇ ಕಾಯುತ್ತಿದ್ದವನಂತೆ ರಪ್ಪನೆ ಸಿಪ್ಪೆ ಸುಲಿದ ಕಾಯಿಯೊಂದನ್ನೂ, ಕತ್ತಿಯನ್ನೂ ತಂದು ಅವರ ಕೈಗಿತ್ತು ಗೋಣು ಬಗ್ಗಿಸಿ ಹಿಂದೆ ಸರಿದು ಕೈಕಟ್ಟಿ ನಿಂತುಕೊಂಡ. ಗುರೂಜಿಯವರು ಕಣ್ಣುಮುಚ್ಚಿ ವಿಚಿತ್ರ ಮಂತ್ರವೊಂದನ್ನು ತಾರಕಸ್ವರದಲ್ಲಿ ಪಠಿಸುತ್ತ ಕಾಯಿಯನ್ನು ಒಂದೇ ಏಟಿಗೆ ಎರಡು ಹೋಳಾಗಿ ಒಡೆದರು. ಬಳಿಕ ಊರ ಗುರಿಕಾರನತ್ತಲೂ ಜಾಗದ ವಾರಸುದಾರರತ್ತಲೂ ಮತ್ತು ಭಕ್ತಾದಿಗಳತ್ತಲೂ ಗಂಭೀರವಾಗಿ ದಿಟ್ಟಿಸುತ್ತ ಕಣ್ಣಸನ್ನೆಯಿಂದಲೇ ಅವರೆಲ್ಲರ ಅಪ್ಪಣೆ ಕೋರಿದರು. ಆಗ ಎಲ್ಲರೂ ಭಕ್ತಿಯಿಂದ ಅನುಮತಿ ಸೂಚಿಸಿದರು. ಗುರೂಜಿಯವರು ಅದೇ ಮಂತ್ರವನ್ನು ಮರಳಿ ಉಚ್ಛರಿಸುತ್ತ ಕಾಯಿಯ ಹೋಳುಗಳನ್ನು ಬೀಸಿ ಎದುರಿನ ಒಂದಷ್ಟು ದೂರಕ್ಕೆಸೆದರು. ಅದರಲ್ಲೊಂದು ಜುಟ್ಟಿನ ಹೋಳು ರುಮ್ಮನೆ ಹಾರಿ ಹೋಗಿ ರೆಂಜೆ ಮರದ ಬುಡಕ್ಕೆ ಬಡಿದು ಅಂಗಾತ ಬಿದ್ದಿತು. ನೆರೆದ ಭಕ್ತಾದಿಗಳು ಮುಂದೆ ನಡೆಯಲಿದ್ದ ಸೋಜಿಗವನ್ನು ಕಾಣಲು ಉಸಿರು ಬಿಗಿದು ಹಿಡಿದು ನಿಂತಿದ್ದರು. ಗುರೂಜಿಯವರು ನಿಧಾನವಾಗಿ ಕಣ್ಣು ತೆರೆದರು. ಜಾಗಕ್ಕೆ ಸಂಬಂಧಿಸಿದ ಒಂದಿಬ್ಬರು ಮಧ್ಯ ವಯಸ್ಕರನ್ನು ತೀಕ್ಷ್ಣವಾಗಿ ದಿಟ್ಟಿಸಿದರು. ಗುರೂಜಿಯವರ ನೋಟಕ್ಕೆ ಆ ಬಡಪಾಯಿಗಳ ಹೃದಯಗಳು ಜೋರಾಗಿ ಬಡಿದುಕೊಳ್ಳಲಾರಂಭಿಸಿದವು. ಅಷ್ಟರಲ್ಲಿ ಗುರೂಜಿಯವರು, ‘ಭಯಪಡಬೇಡಿ ಭಕ್ತಾದಿಗಳೇ ಮುಂದೆ ಬನ್ನಿ…!’ ಎಂದು ಅವರಿಗೆ ಆಜ್ಞಾಪಿಸಿದರು. ಅವರು ಅಳುಕುತ್ತ ಮುಂದೆ ಬಂದರು. ‘ಓ ಅಲ್ಲಿಗೆ ಹೋಗಿ ಆ ರೆಂಜೆಮರದ ಕೆಳಗೆ ನಾಗನು ಎಸೆದ ಪ್ರಸಾದ ಬಿದ್ದಿದೆಯಲ್ಲಾ ಆ ಸ್ಥಳವನ್ನು ಪೂರ್ಣ ಭಕ್ತಿಯಿಂದ ಅಗೆಯಿರಿ. ಹ್ಞೂಂ, ಹೊರಡಿ!’ ಎಂದು ಒರಟಾಗಿ ಸೂಚಿಸಿದರು. ಅವರಿಬ್ಬರೂ ಗುರೂಜಿಯ ಸಾಕು ಪ್ರಾಣಿಗಳಂತೆ ತಲೆಯಲ್ಲಾಡಿಸಿ ಕೈಮುಗಿದು ಹೋಗಿ ಅಗೆಯತೊಡಗಿದರು. ಉಳಿದ ಭಕ್ತಾದಿಗಳು ಅವರ ಕ್ರಿಯೆಯನ್ನು ಭಯಾಸಕ್ತಿಯಿಂದ ನೋಡತೊಡಗಿದರು. ಕೆಲಹೊತ್ತಲ್ಲಿ, ಅಗೆಯುವವರ ಪಿಕ್ಕಾಸಿಗೆ ಕಲ್ಲಿನಂಥ ವಸ್ತುವೊಂದು ಟಣ್ಣೆಂದು ತಗುಲಿತು. ಅವರು ತಟ್ಟನೆ ಕೆಲಸ ನಿಲ್ಲಿಸಿ, ‘ಮುಂದೇನು…?’ ಎಂಬಂತೆ ಗುರೂಜಿಯವರನ್ನು ದಿಟ್ಟಿಸಿದರು. ಗುರೂಜಿಯವರು ಕೆಲಸ ಮುಂದುವರೆಸುವಂತೆ ಸನ್ನೆ ಮಾಡಿದರು. ಅವರು ಮರಳಿ ಅಗೆಯತೊಡಗಿದರು. ಸ್ವಲ್ಪಹೊತ್ತಿನಲ್ಲಿ ಹೊಂಡದಲ್ಲಿದ್ದ ನಾಗನಕಲ್ಲುಗಳೂ ಮತ್ತು ದೈವದ ಕುರುಹುಗಳೂ ಒಂದೊಂದಾಗಿ ಕಾಣಿಸಿಕೊಂಡವು. ಆಕೂಡಲೇ ಗುರೂಜಿಯವರು ಮುಂದೆ ಬಂದು ಅವರನ್ನು ತಡೆದು, ‘ಹ್ಞೂಂ ಹ್ಞೂಂ…! ನೀವು ಮುಟ್ಟಬೇಡಿ. ಇನ್ನು ನಿಮ್ಮ ಕೆಲಸವಾಯಿತು. ಮೇಲೆ ಬನ್ನಿ!’ ಎಂದು ಹೇಳಿ ರಾಘವನನ್ನು ಕರೆದು ಆ ಕಲ್ಲುಗಳನ್ನು ಹೊರಗೆ ತೆಗೆದಿರಿಸಿದರು. ಆಗ ಊರ ಜನರೂ ಜಾಗದ ಮಾಲಕ ತಂಡವೂ ವಿಸ್ಮಯದಿಂದ ಮೂಕರಾಗಿ ಆ ಕಲ್ಲುಗಳಿಗೂ, ಗುರೂಜಿಯವರ ಪಾದಗಳಿಗೂ ದಡಬಡನೇ ಸಾಷ್ಟಾಂಗ ಬಿದ್ದರು. ‘ಹ್ಞೂಂ! ಇಲ್ಲಿಗೆ ನಮ್ಮ ಕೆಲಸ ಮುಗಿಯಿತು. ದೇವರು ದೊಡ್ಡವನು. ಎಲ್ಲರಿಗೂ ಕಾರಣಿಕವನ್ನು ತೋರಿಸಿಕೊಟ್ಟ! ಇನ್ನು ಈ ಸ್ಥಳದಲ್ಲಿ ಅವನನ್ನು ಮತ್ತು ಅವನ ಪರಿವಾರವನ್ನು ನಂಬುವುದು, ಬಿಡುವುದು ನಿಮಗೆ ಸೇರಿದ್ದು!’ ಎಂದ ಗುರೂಜಿಯವರು ಹೊರಡಲನುವಾದರು. ಆಗ ಜಾಗ ವಾರಿಸುದಾರರಿಗೂ ಭಕ್ತಾದಿಗಳಿಗೂ ಆತಂಕವೆದ್ದಿತು. ಅವರೆಲ್ಲ ಕೆಲಹೊತ್ತು ತಂತಮ್ಮೊಳಗೆ ಚರ್ಚಿಸಿಕೊಂಡರು. ಕೊನೆಯಲ್ಲಿ ಗುರಿಕಾರನು ಮುಂದೆ ಬಂದು ಗುರೂಜಿಯವರನ್ನು ಕುಳಿತುಕೊಳ್ಳಲು ವಿನಂತಿಸಿ, ಜೀರ್ಣೋದ್ಧಾರದ ಮಾತುಕತೆಗೆ ಬೇಡಿಕೊಂಡ. ಅದರಿಂದ ಗುರೂಜಿಯವರು ಒಳಗೊಳಗೇ ಆನಂದಪಟ್ಟರು. ಎಲ್ಲರನ್ನೂ ಕರೆದು ತಮ್ಮೆದುರು ಕುಳ್ಳಿರಿಸಿಕೊಂಡರು. ಅವರಲ್ಲಿ ಅನೇಕರನ್ನು ಆಯ್ದು, ‘ಭಾಗಿವನ ನಾಗಬನ ಜೀರ್ಣೋದ್ಧಾರ ಸಮಿತಿ!’ ಎಂಬ ತಂಡವನ್ನು ರಚಿಸಿದರು. ಅದರಲ್ಲೂ ಮೂರು ಪಂಗಡವನ್ನು ಮಾಡಿದರು. ಒಂದನ್ನು ಹಣಕಾಸು ಹೊಂದಿಸಲು ಮತ್ತೊಂದನ್ನು ವ್ಯವಹಾರ ನಿರ್ವಹಿಸಲು ನೇಮಿಸಿದರು. ನಾಗಬನ ಜೀರ್ಣೋದ್ಧಾರದ ಉಸ್ತುವಾರಿಯನ್ನು ಉಳಿದೊಂದು ತಂಡಕ್ಕೊಪ್ಪಿಸಿದರು. ಮುಂದಿನ ಕೆಲಸಕ್ಕೆ ಸದ್ಯದಲ್ಲೇ ‘ಕೆಸರುಗಲ್ಲು ಹಾಕುವ ಭರವಸೆಕೊಟ್ಟು ಎಲ್ಲರಿಗೂ ಆಶೀರ್ವಚನ ನೀಡಿ ಹಿಂದಿರುಗಿದರು. (ಮುಂದುವರೆಯುವುದು) ಗುರುರಾಜ್ ಸನಿಲ್ ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್‍ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ […]
ಸುಧಾರಾಣಿ ಕವಿತೆಗಳು
ಸುಧಾರಾಣಣಿಯವರ ಕವಿತೆಗಳು
ಕವಿತೆ ಖಜಾನೆ
ಕವಿತೆ ಖಜಾನೆಯಲ್ಲಿ ಶ್ರೀನಿವಾಸರ ಕವಿತೆಗಳು
ಈಗ ಆಕೆ ಇರಬೇಕಾಗಿತ್ತು….
ಸದಾ ತನ್ನ ಗುಂಗಿನಲ್ಲೆ ನನ್ನ ಹಿಡಿದಿಡುವ ಒಲವಿನ ಬಲೆ
ತನ್ನುಸಿರ ಕೊನೆಯಲ್ಲೂ ನನ್ನ ಹೆಸರನೇ ಉಸುರಿದ
ಆಕೆ ಈಗ ಇರಬೇಕಾಗಿತ್ತು
ನಿನ್ನ ಹೆಸರು
ಬೆಳಕಿನ ಕಿರಣದಲಿ ನಿನ್ನ ಹೆಸರು.