ಅಪ್ಪನ ಕವಿತೆಗಳು

ಅಪ್ಪನ ಕವಿತೆಗಳು

ಉಸಿರನಿತ್ತ ಒಡಲು ಜಗದಿ ಬಯಸೊದು ಬೊಗಸೆ ಪ್ರೀತಿ
ಮರುಗದಿರಲಿ ಆತನೊಡಲು ನಿದಿರೆಯ ನಿಟ್ಟುಸಿರಲಿ
ನಮ್ಮ ಬಯಕೆ ಹೊನ್ನು ಚಿಂತೆಯ ಹೊರೆಯಾಗದಿರಲಿ ಆತಗೆ.

ಹಾಲು ಎಲ್ಲಿ ಕೊಳ್ಳುವುದು?

ಅಪರೂಪಕ್ಕೊಮ್ಮೆ ಹಸುಕರು ಹಾಕಿದಾಗ ಗಿಣ್ಣು ಹಾಲು ಉಚಿತವಾಗಿ ವರ್ತನೆಯವರು ಕೊಡುತ್ತಿದ್ದರು.ಮನೆಯ ಕ್ಯಾಲೆಂಡರ್ ನಲ್ಲಿ ನೆಂಟರು ಬಂದಾಗ ಹೆಚ್ಚಿಗೆ ತೊಗೊಂಡ ಹಾಲಿನ ಲೆಕ್ಕ ಗುರುತಿಸುವ ಕೆಲಸ ಮಕ್ಕಳಿಗೆ.ತಿಂಗಳ ಕೊನೆಗೆ ಲೆಕ್ಕ ಹಾಕಿ ಚುಕ್ತಾ ಮಾಡಿದರಾಯಿತು.

ತನ್ನಿಂದಲೇ ಜೀವ-ಜೀವನ ಸಾಗಿಸುವವರು ತಪ್ಪು ಮಾಡಿದಾಗ ತಿದ್ದಿಕೊಳ್ಳದಿದ್ದರೆ ಅವನ ಮಾತು ಕೇಳದಿದ್ದರೆ ಮನುಷ್ಯ ಯಾವ ಕೆಳಹಂತಕ್ಕಾದರೂ ಪಿಶಾಚಿಯಾದರೂ ಸರಿ ಹಿಂಜರಿಯಲ್ಲ ಅಂತ ಸಾರಾಳ ಕಥೆಯು ಒಂದು ಪಾಠವಾಗಲಿದೆ ಎಂದರೂ ತಪ್ಪಾಗಲಾರದು.

ರಂಗದ ಮೇಲಿನ ಕೆಮಿಸ್ಟ್ರಿಗೆ, ರಂಗದ ಕೆಳಗಿನ ಕಲಾವಿದರ ಅನ್ಯೋನ್ಯತೆ, ಕಾಳಜಿ, , ಹಾಸ್ಯ ಲಾಸ್ಯಗಳು ಅತ್ಯಂತ ಅಗತ್ಯ ಜೀವತಂತುಗಳು ಎಂಬುದನ್ನು ನಾನು ನಿಧಾನವಾಗಿ, ಪಾರಿವಾಳ ಒಂದೊಂದೇ ಕಾಳುಗಳನ್ನು ಹೆಕ್ಕಿ ನುಂಗುವಂತೆ, ಕಲಿಯುತ್ತಲೇ ಇದ್ದೆ.

ಚಂದನ ಅವರ ಎರಡು ಕವಿತೆಗಳು

ನನ್ನ ಅಸ್ತಿತ್ವದ ಕೋಟೆಯನ್ನು
ಧ್ವಂಸ ಮಾಡಿದಾಗಲೆಲ್ಲ
ನಿನ್ನ ಪೂಜಿಪ ವೃಕ್ಷಸ್ಥಳವನ್ನು
ಮತ್ತಷ್ಟು ಕಲ್ಲಾಗಿಸುತ್ತಿದ್ದೇನೆ

ಬೆಂಗಾಡಾದ ಬದುಕಿನ ಕೊರಡು ಮತ್ತೆ ಕೊನರುತ್ತೆ

ಜೀವನದಿ ಶಾಂತವಾಗಿ ಹರಿಯುತ್ತಿದೆಯೆಂದು ನಾವಂದುಕೊಳ್ಳುವಾಗ ದೊಡ್ಡ ಸುಳಿ ಬಂದು ದೋಣಿ ಅಲ್ಲಾಡಿಸಿ ಬಿಡುತ್ತದೆ. ಬದುಕಿನ ಬಂಡಿ ನಿರಾಳವಾಗಿ ಸಾಗುತ್ತದೆ ಎನ್ನುತ್ತಿರುವಾಗಲೇ ವಿಧಿಗೆ ಅದನ್ನು ಸಹಿಸಲಾಗುವುದಿಲ್ಲ.ಅಂಥ ಪರಿಸ್ಥಿತಿಯಲ್ಲಿ ಇಕ್ಕಳದಲ್ಲಿ ಸಿಕ್ಕಂತೆ ಒದ್ದಾಡುವಂತಾಗುತ್ತದೆ.

ಗಜಲ್

ನಿರ್ಭಯದಿ ಉಸಿರಾಡುವ ದಿನಗಳು ಸೇರಿಹೋಗಿವೆ ಭೂತಕ್ಕೆ
ಕಾಲನ ತುಳಿತಕೆ ಸತ್ತವನೂ ಅರಸಲೇಬೇಕಿದೆ ಮಸಣದಿ ತಾವು

ಅಪ್ಪಾಜಿ ನೀಡಿದ ನವಿಲು ಗರಿ

ಸಣ್ಣ ಕಥೆ ಅಪ್ಪಾಜಿ ನೀಡಿದ ನವಿಲು ಗರಿ ವೈಷ್ಣವಿ ಪುರಾಣಿಕ್ ಪುಸ್ತಕ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ. ನಮ್ಮ ಬಾಲ್ಯದ ದಿನಗಳಲ್ಲಿ ನಮ್ಮ ಮುದ್ದು ಕೋಣೆಯಲ್ಲಿ ಹಾಗೆ ತಮ್ಮ ದಿನನಿತ್ಯದಲ್ಲಿ ನಡೆಯುವ ಸಾವಿರಾರು ಘಟನೆಗಳನ್ನು ಒಂದು ಪುಸ್ತಕದಲ್ಲಿ ಬರೆಯುವ ಪರಿಪಾಠ ನನ್ನದು….      ಹೀಗೆ ಒಮ್ಮೆ ನಮ್ಮ ತೋಟದಲ್ಲಿ ಸುತ್ತಿಕೊಂಡು ಬರೋಣ ಎಂದು ಹೊರಟ ನನ್ನ ಮನಕ್ಕೆ ಅಲ್ಲಿ ಏನೋ ಒಂದು ರೀತಿಯಾದ ಹೊಳೆಯುವ ವಸ್ತು ಕಂಡಂತೆ ಆಯಿತು ಏನು ಇರಬಹುದು ಎಂದು ನೋಡುವಾಗ…..        ನವಿಲುಗರಿ […]

ವೀರ ಸಿಂಧೂರ‌ಲಕ್ಷ್ಮಣ

ಯಾವು ಯಾವುದೋ ಹಾಡುಗಾರರ ದನಿಗಳಲ್ಲಿ ಅವರು ಬರೆದಿಟ್ಟ ಚೋಪಡಿ ಪುಸ್ತಕಗಳಲ್ಲಿ ಉಳಿದು ಹೋಗುತ್ತಿದ್ದ ಇಂಥ ಮೌಲಿಕ ವಿಷಯವನ್ನು ಹೆಕ್ಕಿ ತಗೆದು ನಮ್ಮ ಮುಂದಿನ ಯುವ ಪೀಳಿಗೆಗೆ ಒಬ್ಬ ಕ್ರಾಂತಿಕಾರಿ ದೇಶಭಕ್ತನ ಜೀವನವನ್ನು ಅನಾವರಣಗೊಳಿಸಿದ ಸಂಶೋಧಕ ಡಾ.ಚಂದ್ರು ತ಼ಳವಾರ ಅವರು ಅಭಿನಂದನೀಯರಾಗಿದ್ದಾರೆ.

Back To Top