ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಚಂದನ ಅವರ

ಎರಡು ಕವಿತೆಗಳು

ಚಂದನ ಜಿ ಪಿ

man standing on boulders

ಸೂರ್ಯನಂತಹ..

brown rock formation on body of water during sunset

ಇವ ಚಂದ್ರನಂತಹ ಕೋಮಲನಲ್ಲ
ಉರಿದುರಿದು ಸಲಹುವ ಸೂರ್ಯನಂತೆ
ಬಯಸಿ ಹೋದವರಾರು ಮರಳಿಲ್ಲ
ರಹಸ್ಯ ಸುಳಿಯ ಬೇಧಿಸಲಾಗಿಲ್ಲ
ಅಹಲ್ಯೆಯ ತಾಳ್ಮೆಗೂ ಮೀರಿ
ಶತಕೋಟಿ ವರ್ಷ ತಟಸ್ಥಳಾಗಬೇಕು
ಇವನು ತಣ್ಣಗಾಗಲು!
ಯೋಚನಾ ಸುಳಿಯ ಜಯಿಸಬೇಕು
ಇವನ ಸೇರಲು!
ಅತ್ಯುಚ್ಚ ಬೆಳಕಲಿ ಮಿಂದೆಳಬೇಕು
ಬಯಸಿದ್ದು ಭಾಗ್ಯವಾಗಲು!


ಪ್ರತೀಕ್ಷೆ

rock formation near body of water with green trees

ನನ್ನ ನಂಬಿಕೆ ನಿರೀಕ್ಷೆಗಳನ್ನು
ನೀನು ಛಿದ್ರ ಮಾಡಿದಾಗಲೆಲ್ಲ
ಕಂಡ ಕನಸು ಆಸೆಗಳನ್ನು
ಇನ್ನಷ್ಟು ಭದ್ರವಾಗಿಸಿದ್ದೇನೆ

ನನ್ನ ಅಸ್ತಿತ್ವದ ಕೋಟೆಯನ್ನು
ಧ್ವಂಸ ಮಾಡಿದಾಗಲೆಲ್ಲ
ನಿನ್ನ ಪೂಜಿಪ ವೃಕ್ಷಸ್ಥಳವನ್ನು
ಮತ್ತಷ್ಟು ಕಲ್ಲಾಗಿಸುತ್ತಿದ್ದೇನೆ

ನಿನ್ನ ಹೊಡೆತಕೆ ಈ ಕಲ್ಲು
ಶಿಲೆಯಾಗಲೂ ಬಹುದು
ಅಥವಾ ಸಿಡಿದು ಸ್ಫೋಟಗೊಂಡು
ಪುಡಿ ಪುಡಿಯಾಗಬಹುದು

******************

About The Author

Leave a Reply

You cannot copy content of this page

Scroll to Top