ಅಪ್ಪಾಜಿ ನೀಡಿದ ನವಿಲು ಗರಿ

ಸಣ್ಣ ಕಥೆ

ಅಪ್ಪಾಜಿ ನೀಡಿದ ನವಿಲು ಗರಿ

ವೈಷ್ಣವಿ ಪುರಾಣಿಕ್

ಪುಸ್ತಕ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ. ನಮ್ಮ ಬಾಲ್ಯದ ದಿನಗಳಲ್ಲಿ ನಮ್ಮ ಮುದ್ದು ಕೋಣೆಯಲ್ಲಿ ಹಾಗೆ ತಮ್ಮ ದಿನನಿತ್ಯದಲ್ಲಿ ನಡೆಯುವ ಸಾವಿರಾರು ಘಟನೆಗಳನ್ನು ಒಂದು ಪುಸ್ತಕದಲ್ಲಿ ಬರೆಯುವ ಪರಿಪಾಠ ನನ್ನದು….


     ಹೀಗೆ ಒಮ್ಮೆ ನಮ್ಮ ತೋಟದಲ್ಲಿ ಸುತ್ತಿಕೊಂಡು ಬರೋಣ ಎಂದು ಹೊರಟ ನನ್ನ ಮನಕ್ಕೆ ಅಲ್ಲಿ ಏನೋ ಒಂದು ರೀತಿಯಾದ ಹೊಳೆಯುವ ವಸ್ತು ಕಂಡಂತೆ ಆಯಿತು ಏನು ಇರಬಹುದು ಎಂದು ನೋಡುವಾಗ…..


       ನವಿಲುಗರಿ ಎಷ್ಟು ಸಂತೋಷ ಎಂದರೆ ಜೋರಾಗಿ ಹೋ ಎಂದಾಗ ಅಲ್ಲಿ ನೆರೆದಿದ್ದ ಸಾವಿರಾರು ಕೆಲಸಗಾರರು ನನ್ನ ಬಳಿ ಏನು ಆಯಿತು? ಎಂದು ಪ್ರಶ್ನೆ ಮಾಡಿದಾಗ ಇಲ್ಲಿ ನೋಡಿ ಎಂದಾಗ ಅವರು ನವಿಲು ಗರಿ ತೋರಿಸಿದಾಗ….


    ನಮಗೆ ಕೋಡಿ ಅಮ್ಮ ಎಂದಾಗ ನಾನು ಕೊಡುವುದಿಲ್ಲ ಎಂದು ಅವರಿಂದ ತಪ್ಪಿಸಿಕೊಂಡು ಕೋಣೆಯ ಕದವನ್ನು ಹಾಕಿಕೊಂಡು ನನ್ನ ಪುಸ್ತಕದಲ್ಲಿ ಇಡುವಾಗ ಕೋಣೆಯ ಕದವನ್ನು ಬಟ್ಟಿದ ಹಾಗೆ ಆಯಿತು……


     ಯಾರು ಎಂದು ನೋಡಿದಾಗ ನಮ್ಮ ಮುದ್ದು ಚೇತು ಎಂದರೆ ನಮ್ಮ ಮುದ್ದು ಬೆಕ್ಕು ಅಷ್ಟು ಜೋರಾಗಿ ಬತ್ತೀದೆಯಾ ಎನಿಸುವಾಗ ನಮ್ಮ ಮುದ್ದು ಅಪ್ಪಾಜಿ ಬಂದು ನನಗೆ ನಿನ್ನ ಗಣಕಯಂತ್ರ ಕೊಡುತ್ತೀಯಾ ನನಗೆ ಸಾಕಷ್ಟು ಕೆಲಸ ಇದೆ ಎಂದಾಗ ನೀವು ಎಲ್ಲೇ ಮಾಡುತ್ತೀರಾ ನಾನು ನಿಮಗೆ ಪಾನಕ ಮಾಡಿಕೊಂಡು ಬರುತ್ತೇನೆ ಎಂದಾಗ……..


   ಅಗತ್ಯವಾಗಿ ಎಂದಾಗ ನಮ್ಮ ಚಿನ್ನು ನನ್ನ ಹಿಂದೆ ಬರುತ್ತಾ ಇದ್ದಿದನ್ನು ಕಂಡು ಬಾ ಎಂದು ಕರೆದುಕೊಂಡು ಹೋದಾಗ ನಮ್ಮ ಅಪ್ಪಾಜಿ ಇಷ್ಟು ಸುಂದರವಾಗಿ ಕೋಣೆಯನ್ನು ಇಟ್ಟುಕೊಂಡಿದ್ದಾಳೆ ಎಂದು ಹೇಳುವ ಹೊತ್ತಿಗೆ……..


      ಆ ಪುಸ್ತಕ ಅವರ ಕಣ್ಣಿಗೆ ಬಿದ್ದಿದನ್ನು ಕಂಡು ಅದನ್ನು ತೆರೆಯಲು ಅವರಿಗೆ ನವಿಲುಗಿರಿ ಕಂಡು ಒಳ್ಳೇ ಹುಡುಗಿ ಎಂದು ನುಡಿಯುವ ಹೊತ್ತಿಗೆ ನಾನು ಪಾನಕ ತಂದು ಕೊಡುವಾಗ……


    ಅಪ್ಪಾಜಿ ಅವರು ಪುಸ್ತಕ ತೆಗೆದುಕೊಂಡಿದ್ದನ್ನು ಗಮನಿಸಿದೆ ಅವರು ನನ್ನ ಬಳಿಯಲ್ಲಿ ಒಂದು ಇದೆ ಎಂದು ಕೊಟ್ಟಾಗ ಅದು ಇನ್ನೊಂದು ಮರಿ ಹಾಕಿದೆ ಎಂದಾಗ ಅಪ್ಪಾಜಿ ಅವರಿಗೆ ನಗು ಬಂದಿತು.

************

Leave a Reply

Back To Top