ಪುಸ್ತಕ ಸಂಗಾತಿ
ವೀರ ಸಿಂಧೂರಲಕ್ಷ್ಮಣ
ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಸಾವಿರಾಉ ಜನ ವೀರರಲ್ಕಿ ಶೂ ಸಿಂಧೂರ ಲಕ್ಷ್ಮಣನೂ ಒಬ್ಬ .ಇಂತಹಮಹಾವೀರರ ಕುರಿತು ನಮ್ಮ ಇತಿಹಾಸ ಬರೆದುದು ಕಡಿಮೆ.ಆದರೆ ಜನಪದ ಸಾಹಿತಿಗಳುಇಂತಹ ವೀರರನ್ನು ಅವಗಣನೆ ಮಾಡಿಲ್ಲ.ತಮ್ಮ ನಡುವೆಯೇ ಆಗಿ ಹೋದ ಈಮಹನೀಯರನ್ನು ಕುರಿತು ಸಾಕಷ್ಟು ದಾಖಲೆಗಳನ್ನು ಸೃಷ್ಟಿಸಿದ್ದಾರೆ.ಆದರೆ ನೆಲದ ಒಳಗಿನ ನಿಧಾನದಂತೆ ಅಡಗಿರುವ ಆ ನಿಧಿಯನ್ನು ಹೊರಗೆ ತಗೆದು ಅದನ್ನು ನಮಗೆಲ್ಲಾ ತೋರಿಸುವ ಕಾರ್ಯವನನ್ನು ಇಂದಿನ ಇತಿಹಾಸಕಾರರು ಸಂಶೋಧಕರು ಮಾಡಬೇಕಿದೆ.
ಅಂತಹ ಅಪರೂಪದ ಕೆಲಸ ಮಾಡಿದವರು ರಾಮದುರ್ಗದ ಸರಕಾರಿ ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರು ಯುವ ಸಾಹಿತಿಗಳಲ್ಲಿ ಸಂಶೋಧನೆ ಯಂತಹ ಕಠಿಣ ಮಾರ್ಗವನ್ನೇ ಹಿಡಿದು ಅದರ ದಾರಿ ಯಲ್ಲಿಯೇ ಕ್ರಮಿಸುತ್ತಿರುವ ಯುವ ಸಂಶೋಧಕರೂ ಆದ ಸ್ನೇಹಿತ ಡಾ ಚಂದ್ರು ತಳವಾರ ಅವರು.ಅವರ ಹೊಸ ಸಂಶೋಧನೆ ಕೃತಿ ಜನಪದ ಸಾಹಿತ್ಯದಲ್ಲಿ ವೀರ ಸಿಂಧೂರ ಲಕ್ಷ್ಮಣ.ಇದು ಧಾರಚಮವಾಡದ ಬಸು ಪ್ರಕಾಶನದಿಂದ ೨೦೨೦ರಲ್ಲಿ ಪ್ರಕಟವಾಗಿದೆ.
ಈಗಾಗಲೇ ಹತ್ತಾರು ಸಂಶೋಧನ ಕೃತಿಗಳಿಂದ ಕನ್ನಡದ ಗಂಭೀರ ಓದುಗರ ಪ್ರೀತಿ ,ಗೌರವಕ್ಕೆ ಪಾತ್ರರಾಗಿರುವ ಡಾ.ಚಂದ್ರು ತಳವಾರ ಅವರು ಜಾನಪದ ಅಕಾಡೆಮಿಗೆ ಸಲ್ಲಿಸಿದ ಸಂಶೋಧನ ಪ್ರಾಜೆಕ್ಟಿನ ಫಲವಾಗಿ ಈ ಕೃತಿ ರೂಪಗೊಂಡಿದೆ.
ಕನ್ಮಡದಲ್ಲಿ ಅವಜ್ಞೆಗೊಳಗಾದ ವೀರ ಸಿಂಧೂರ ಲಕ್ಷ್ಮಣ ಅವನನ್ನು ಕುರಿತು ಈವರೆಗೆ ಅಷ್ಟೇನೂ ಅಧ್ಯಯನ ವಾಗಿರಲಿಲ್ಲ.ಇದನ್ನು ಮನಗಂಡ ಡಾ ಚಂದ್ರು ಅವರು ಈ ಕಿರು ಸಂಶೋಧನಪ್ರಾಜೆಕ್ಟನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಿದ್ದಾರೆ ಮಾತ್ರವಲ್ಲಕೃತಿ ರೂಪದಲ್ಲಿಯೂ ಪ್ರಕಟಿಸಿದ್ದಾರೆ.
ಸಂಶೋಧನಾ ಪ್ರಾಜೆಕ್ಟಿಗಾಗಿ ಸಿದ್ಧಪಡಿಸಿರುವ ಪ್ರಬಂಧವಾದುದರಿಂದ ಆ ಮಾದರಿಯಲ್ಕಿಯೇ ಈ ಕೃತಿ ರಚಿತವಾಗಿದೆಮೊದಲ ಅಧ್ಯಾಯ ಒಂದುವರೆ ಪುಟದ್ದಾಗಿದ್ದು ಅಧ್ಯಯನದ ಉದ್ದೇಶ ವ್ಯಾಪ್ತಿಯನ್ನು ಸೂಚಿಸಿದೆ. ಎರಡನೆಯ ಅಧ್ಯಾಯ ಮೌಖಿಕ ಪರಂಪರೆ ಮತ್ತು ಲಿಖಿತ ಪರಂಪರೆ ಎನ್ನುವದು ಜನಪದ ಸಾಹಿತ್ಯದಲ್ಲಿ ಸುಳಿಯುವ ಐರಮತಿಹಾಸಿಕ ಅಂಶಗಳ ಕುರಿತು ಕೆಲವುಮಹತ್ದದ ಮಾತುಗಞಲನ್ನು ಹೇಳಿದೆ.ಮೂರನೆಯ ಅಧ್ಯಾಯದಲ್ಲಿ ಜನಪದ ಸಾಹಿತ್ಯಮತ್ತು ಇತಿಹಾಸಗಳ ಅಂತರವಸಂಧ ಎನ್ನುವದು ಕನ್ನಡದ ಪ್ರಮುಖ ಇತಿಹಾಸ ಪರುಷರನ್ನು ಜನಪದ ಸಾಹಿತ್ಯ ಕಟ್ಟಿಕೊಟ್ಟ ರೀತಿಯನ್ನು ಸಂಕ್ಷೇಪವಾಗಿ ವಿವರಿಸಿದೆ .ಇತಿಹಾಸದ ಘಟಣೆಗಳಿಗೆ ನಮ್ಮ ಜನಪದರು ಪ್ರತಿಸ್ಪಂದಿಸಿದ ರೀತಿಯನ್ನು ವಿವರಿಸಿದೆ.ವಾಸ್ತವದಲ್ಲಿ ೧೦೩ ಪುಟಗಳ ಈ ಸಂಪ್ರಬಂಧದಲ್ಲಿ ಮೊದಲಿನ ಈ ೪೦ ಪುಟಗಳು ಜನಪದ ಮತ್ತು ಇತಿಹಾಸದ ಸಂಭಂಧ ಚರ್ಚೆಗೆ ಮೀಸಲಾಗಿವೆ.ಸಿಂಧೂರ ಲಕ್ಷ್ಮಣನ ಕುರಿತ ಚರ್ಚೆ ಆರಂಭವಾಗುವದು ನಾಲ್ಲಕನೆಯ ಅಧ್ಯಾಯದಲ್ಲಿಯೇ.ಹಾಗೆ ನೋಡಿದರೆ ಈ ಕೃತಿಯ ಪ್ರಧಾನ ಭಾಗ ಈ ೪,೫,೬,೭ ನೆಯ ನಾಲ್ಕು ಅಧ್ಯಾಯಗಳೇ ಆಗಿವೆ.ನಾಲ್ಕನೆಯ ಅಧ್ಯಾಯ ಸಿಂಧೂರ ಲಕ್ಷ್ಮಣನ ಜೀವನ ಪರಿಚಯ ಎಂಬ ಶೀರ್ಷಿಕೆ ಹೊಂದಿದ್ದು ಸಿಂಧುರ ಲಕ್ಷ್ಮಣನ ಹುಟ್ಟು ಬಾಲ್ಯ ಕುರಿತು ಕಥೆಯೊಂದನ್ನುನಿರೂಪಿಸುವ ಶೈಲಿಯಲ್ಲಿ ಆಕರ್ಷಕವಾಗಿ ಕಟ್ಟಿಕೊಡುತ್ತಾರೆ ಆರಂಭದಲ್ಲಿ ನೀಡಿದ ಸಿಂಧೂರ ಲಕ್ಷ್ಮಣನ ವಂಶಾವಳಿಯ ರೇಖಾಚಿತ್ರ ಉಪಯುಕ್ತವಾಗಿದೆ.ಇಂದಿನ ಮಹಾರಾಷ್ಡ್ರ ಸಾಂಗಲಿ ತಾಲೂಕಿನ ಒಂದು ಗ್ರಾಮ ಸಿಂಧೂರ.ಬೀಳೂರ,ದೇವನಾಳ ಕ಼ೊಹ಼ಳ್ಳಿ,ಬಸರಗಿ ಬ್ಯಾಡರಟ್ಟಿ ಉಮರಾಣಿ ಗೂಗ್ವಾಡ ಈ ಊರುಗಳ ನಡುವಣ ಗ್ರಾಮ.ಸಿಂಧೂರಿನ ಬಡ ಬೇಡರ ಕುಟುಂಬ ಸಾಬಣ್ಣ ನರಸವ್ವರದು ಅನುರೂಪದ ದಾಂಪತ್ಯ.ಸಾಬಣ್ಣ ಊರ ವಾಲಿಕಾರ.ಬ್ರಿಟಿಶರು ನಮನ್ನಾಳುವ ಸಮಯ.ಬಡ ವಾಲಿಕಾರರಾದ ಆ ದಂಪತಿಗಳು ತಮ್ಮಮನೆದೇವರು ತುಳಸಿಗೇರಿ ಹಣಮಂತ ದೇವರಿಗೆ ಭಕ್ತಿಯಿಂದ ನಡೆದುಕೊಂಡು ಲಕ್ಷ್ಮಣನನ್ನು ಪಡೆಯುತ್ತಾರೆ.ಲಕ್ಷ್ಮಣ ಹೆಸರಿಗೆ ತಕ್ಕಂತೆ ವೀರನಾಗಿ ಬೆಳೆದ ಚರಿತ್ರೆಯನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡುತ್ತಾರೆ.
ಐದನೆಯ ಅಧ್ಯಾಯದಲ್ಲಿ ಲೇಖಕರು ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷ್ಮಣನ ಪಾತ್ರವನ್ನು ಕುರಿತು ವಿವೇಚಿಸಿದ್ದಾರೆ.ಸಹಜವಾಗಿಯೇ ನಮ್ಮ ಇತಿಹಾಸಕಾರರು ಉತ್ತರ ಭಾರತದ ವೀರರ ಬಗ್ಗೆ ಕೊಟ್ಟಷ್ಟು ಗಮನವನ್ನು ದಕ್ಷಿಣ ಭಾರತದ ವೀರರ ಇತಿಹಾಸ ಬರೆಯಲು ನೀಡಿಲ್ಲದಿ ರುವ ದರ ಬಗ್ಗೆ ಆಕ್ರೋಶ ವ್ಯಕ್ತ ಮಾಡುತ್ತಾರೆ.ಸಿಂಧೂರ ಲಕ್ಷ್ಮಣ ಅಜಾನುಬಾಹು ಶರಿರಿ.ಮನೆಯ ನಿರ್ವಹಣೆಗಾಗಿ ದುಡಿಯುತ್ತಿದ್ದ ನಟ್ಡು ಕಡಿಯುವದು ಕೆರೆ ಕಡಿಯುವ ಕೆಲಸ ಇಂಥವನ್ನು ಮಾಡುತ್ತಿದ್ದ.ಆದರೆ ಬ್ರಿಟೀಷರು ಕಂದಾಯವನ್ನು ಲೆಕ್ಕವಿಲ್ಲದಂತೆ ಏರಿಸಿದಾಗ ಅವರ ಕಂದಾಯ ನೀತಿಯ ವಿರುದ್ಧ ಬಂಡೆದ್ದನುಮುಖ್ಯವಾಗಿ ಕೆಲವು ಭಾರತೀಯ ಶ್ರೀಮಂತರು ಬ್ರಿಟಿಷರ ಚೇಲಾಗಳಾಗಿಬಡವರನ್ನು ಶೋಷಣೆ ಮಾಡುತ್ತಿದ್ದರು.ಅವರ ಮನೆಗಳಿಗೆ ಕನ್ನ ಹಾಕಿದ ದರೋಡೆಮಾಡಿದ ಲಕ್ಷ್ಮಣ ಆ ಹಣವನ್ಜು ಬಡವರಿಗೆ ಹ಼ಂಚತೊಡಗಿದುದನ್ನು ಗುರುತಿಸುತ್ತಾರೆ.ಅವನ ಅಳಿಯ ನರಸೂ ,ಗೋಪಾಲ, ಸಾಬೂ, ದುಂಡಪ್ಪ ಇವರೆಲ್ಲ ಸೇರಿ ಸಂಡು ಕಟ್ಟಿದರು.ಅವರು ಲಕ್ಷ್ಮಣನ ತಾಯಿಯ ತವರುಮನೆ ಅಥಣಿ ತಾಲೂಕಿನ ರಡರಟ್ಟಿಯವರು.ಅವರೆಲ್ಲರೂ ಸೇರಿ ಸಾಹುಕಾರರ ವಿರುದ್ದ ಬಂಡಾಯ ಹೂಡಿದ್ದು ಮಿತಿಮೀರಿದಾಗ ಅವರೆಲ್ಲ ಬ್ರಿಟಿಷ ಅಧಿಕಾರಿಗಳಿಗೆ ದೂರು ನೀಡಿದರು.ಆದರೆ ಊರವರ ಸಹಾಯ ಸಹಕಾರ ಗುಡ್ಡ ಗಹ್ವರದಲ್ಲಿ ತಪ್ಪಿಸಿಕೊಂಡು ತಿರುಗುವ ಅವರು ನೀಡುವ ಅನ್ನ ಆಸರೆಯಿಂದ ಇವರು ಬ್ರಿಟಿಷರ ಕೈಗೆ ಸಿಗಲಿಲ್ಲ.ಊರಿನ ಗರತಿಯರು ಮೊದಲು ಮಾಡಿ ಇವರನ್ನು ರಕ್ಷಿಸುತ್ತಿದ್ದರಿಲು .ಒಮ್ಮೆಯಞಮತೂ ಒಂದು ದಿಮ ಒಡ್ಡ ಮನೆತನದ ಸೊಸೆ ಇವರನ್ನು ನವಣಿಯ ಮೆದಿಯಲ್ಲಿ ಮುಚ್ಚಿ ರಕ್ಷಿಸಿದ್ದಳು.ಇಂಥ ಘಟಣೆಗಳು ಅದೆಷ್ಟೋ ನಡೆದಿದ್ದವು.ಏಕೆಂದರೆ ಶ್ರೀ ಮಂತರಿಂದ ಲೂಟಿಮಾಡಿದ ಸಂಪತ್ತನ್ಜುಲಕ್ಷ್ಮಣ ಬಡವರಿಗೆ ಹಂಚುತ್ತಿದ್ದ.ಕೊನೆಗೆ ದಾರಿಕಾಣದ ಬ್ರಿಟಿಷ ಅಧಿಕಾರಿಗಳು ಲಕ್ಷ್ಮಣನ ಹಿಡಿದು ತಂದು ಕೊಟ್ಟವರಿಗೆ ಹತ್ತುಸಾವಿರ ರೂಪಾಯಿ ಬಹುಮಾನ ಘೋಷಿಸಿದರು.
ಬೀಳಗಿ ತಾಲೂಕಿನ ತೆಗ್ಗಿಯ ನಾಯಕರು ಅವನಿಗೆ ಸದಾ ಸಂರಕ್ಷಕರಾಗಿದ್ದರು.ಇದನ್ನು ತಿಳಿದ ಗಾರ್ಮನ್ ಸಾಹೆಬ ತೆಗ್ಗಿಯ ನಾಯಕರಿಗೆ ಆಮಿಷ ಒಡ್ಡಿದರು ಹಿಡಿದು ಕೊಡದಿದ್ದರೆ ನಿಮ್ಮನ್ನೆ ಎಳೆದಬೇಕಾಗುತ್ತದೆ ಒತ್ತಡ ತಂದರು.
” ನಾಯಕರು ಲಕ್ಷ್ಮಣ ಮತ್ತು ಅವನ ಪರಿವಾರವನ್ನುಕಪ್ಪರ ಪಡಿಯವ್ವನ ಗುಡಿಗೆ ಊಟಕ್ಕೆ ಕರೆಯುವದು,ಊಟಕ್ಕೆ ಕುಳಿತಾಗ ಲಕ್ಷ್ಮಣನಮುಂದೆ ಕತ್ತಲಲ್ಕಿ ಕಂದಿಲು ಇಡುವದುಸಮಯ ಸಾಧಿಸಿ ಅವಙ್ನು ಕೊಲ್ಲುವದು ಈ ಚಕ್ರವ್ಯೂಹದ ಬಲೆ ಹೆಣೆದುರು”
೧೯೨೨ ಜುಲೈ ೧೫ ರಂದು ಅವನ ಎದೆಗೆ ನೇರ ಗುಂಡು ಹೊಡೆದು ಕ್ರಾಂತಿಕಾರನೊಬ್ಬನ ಬಲಿ ತಗೆದುಕೊಂಡ ಈ ಕಥೆಯನ್ನು ಲೇಖಕರು ಕಟ್ಟಿಕೊಡುತ್ತಾರೆ.
ಆರನೆಯ ಅಧ್ಯಾಯದಲ್ಲಿ ಜನಪದ ಸಾಹಿತ್ಯದಲ್ಲಿ ಸಿಂಧೂರ ಲಕ್ಷ್ಮಣ ಎಂಬ ಶೀರ್ಷಿಕೆಯಡಿಯಲ್ಲಿ ಲಕ್ಷ್ಮಣನ ವೀರ ಬದುಕನ್ನು ಜನಪದರು ಹಿಡಿದಿಡುವ ರೀತಿಯನ್ನು ವಿವರಿಸಿದ್ದಾರೆ.ಲಾವಣಿಪದ,ಡೊಳ್ಳಿನ ಪದ, ಭಜನೆ ಪದ, ಕೋಲಾಟ ಪದ, ಬೀಸುಕಲ್ಲಿನ ಪದ ಮುಂತಾದವುಗಳನ್ನು ಹೆಸರಿಸುತ್ತಾರಾದರೂ ಇಲ್ಲಿ ಸಂಶೋಧಕರು ಕೇವಲ ಈಗಾಗಲೇ ಮುದ್ರಿತವಾಗಿರುವ ಡಾ. ಆರ.ಸಿ. ಮುದ್ದೇಬಿಹಾಳರವರ ಸಿಂಪಧೂರ ಲಕ್ಷ್ಮಣ ಮಹಾಕಾವ್ಯವನ್ನು ವಿಶ್ಲೇಷಣೆಗೆ ಎತ್ತಿಕೊಂಡಿದ್ದಾರೆ.ಲಕ್ಷ್ಮಣನನ್ನು ಬೀಳಗಿಯ ಬಳ್ಳೂರು ದಾರಿಯಲ್ಲಿರುವ ಸನಾದಿ ಅಪ್ಪಣ್ಣನ ಸಮಾಧಿತಮಯ ಹತ್ತಿರ ಮಣ್ಣು ಮಾಡಿದುದನ್ನು ಹೇಳುತ್ತಾರೆ.ಮುಂದಿನ ಞಬಾಗದಲ್ಲಿ ಬಿದರಿ ಗ್ರಾಮದ ಬಸವಪ್ರಭು ಅವರು ಹಾಡಿದ ಲಾವಣಿಗಳನ್ನು ಯುಟ್ಯೂಬ್ ನಿಂದ ಸಂಗ್ರಹಿಸಿದ್ದಾರೆ.ಇನ್ನೊಂದು ಪ್ರಸಿದ್ಧ ಡೊಳ್ಳಿನ ಹಾಡನ್ನು ಅವರಾದಿಯ ಪ್ರಸಿದ್ದ ಡೊಳ್ಳಿನ ಹಾಡುಗಾರ ಶ್ರೀ ಸಿದ್ದುಮೋಟೆಯವರು ಹಾಡುವ ಹಾಡನ್ನು ಎತ್ತಿಕೊಂಡಿದ್ದಾರೆ.ಇದನ್ನು ಶ್ರೀಮೋಟೆಯವರು ಮದರಖಂಡಿಯ ಶ್ರೀ ಯಲ್ಲಪ್ಪ ಹೊಲೇರಬರೆದಂತೆ ಸೂಚಿಸಿದ್ದಾರೆ.ಮತ್ತೆ ಇನ್ನೊಂದಿಷ್ಟು ಜನಪದ ಹಾಡುಗಳ ಹೆಸರಿನಲ್ಲಿ ಗುರಪ್ಪ ಹನಮಂರಕತಪ್ಪ ಹಳ್ಳೂರ ಗುರುಸಿದ್ದವ್ವ ಗೌಡಶಾನಿ ಮೊದಲಾದವರು ಹಾಡಿದ ಹಾಡುಗಳನ್ನು ಸಂಗ್ರಹಿಸಿದ್ದಾರೆ.ಈ ಎಲ್ಲ ಹಾಡುಗಳು ಲಕ್ಷ್ಮಣ್ಣನ ಸಾಹಸ ಗುಣವನ್ನು ಬಣ್ಣಿಸುತ್ತವೆ.ಉದಾಹರಣೆ ಒಂದೆರಡು ಪದ್ಯ ನೋಡುವದಾದರೆ
ಸಿಂಧೂರ ಲಕ್ಷ್ಮಣಗ ಹಿಂದಿಲ್ಲ .ಮುಂದಿಲ್ಲ
ಬಂಗಾಎಮರದ ಖಡ್ಗ ಕೈಯಾಗ /ಹಿಡಕೊಂಡ
ಹಿಂಡಲಗ ಜೇಲ ಜಿಗಿದಾನ//
ಸಿಂಧೂರ ಲಕ್ಷ್ಮಣನ ದುಂದೆಷ್ಟು ಹೇಳಲಿ
ಜೋಡ ಬಾರಿನ ಬಂದೂಕ / ಹಿಡಕೊಂಡ
ಜಮಖಂಡಿ ಜೇಲ ಮುರದಾನ
ಹೀಗೆ ಅವನ ಸಾಹಸದ ಬದುಕನ್ನೇ ವಿವರಿಸಿವೆ ಡೊಳ್ಳಿನ ಹಾಡುಗಳ ಭಾಗದಲ್ಲಿ ಇಂಗಳೇಶ್ವರದ ಬೀರಪ್ಪ ,ಅವರಾದಿಯ ಸಿದ್ದು ಮೋಟೆ ಇಂತಹ ಹಾಡುಗಾರರಿಂದ ಹಾಡು ಸಂಗ್ರಹಿಸಿ ಇಲ್ಲಿ ನೀಡಿದ್ದಾರೆ.ಜಿಕೆ ತಳವಾರ ಅವರ ಸಂಗ್ರಹದಿಂದ ಕೋಲಾಟ ಪದವನ್ನು ನೇರವಾಗಿ ಎತ್ತಿಕೊಞಮಡು ಇಲ್ಲಿ ಬಳಸಿದುದನ್ನು ಹೇಳಿದ್ದಾರೆ.ಒಟ್ಟಾರೆ ಅಲ್ಲಲ್ಲಿ ಹರಡಿ ಹೋಗಿದ್ದ ಲಕ್ಷ್ಮಣನ ಕುರಿತ ಜನಪದ ಹಾಡುಗಳನ್ನು ಡಾ ಚಂದ್ರು ಅವರು ಇಲ್ಲಿ ಸಂಗ್ರಹಿಸಿರುವರಾದರೂ ಅವುಗಳ ವಿಶ್ಲೇಷಣೆಯನ್ನು ಮಾಡಿಲ್ಲದಿರುವದು ಒಂದು ಕೊರತೆಯಾಗಿದೆ.
ಪ್ರಬಂಧದ ಏಳನೆಯ ಅಧ್ಯಾಯ ಜನಪದ ಸಂಸ್ಕೃತಿಯಲ್ಲಿ ಸಿ಼ಂಧೂರ ಲಕ್ಷ್ಮಣ ಎಂಬ ಅದ್ಯಾಯವಾಗಿದ್ದು ಎರಡುಮೂರು ಪುಟದಲ್ಲಿ ಲಕ್ಷ್ಮಣನ ವ್ಯಕ್ತಿತ್ವದ ವಿಶೇಷತೆಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.
” ಸಿಂಧೂರಿನ ಈ ಯುವಕ ಬಡತನದ ಬೆ಼ಂಕಿಯಲ್ಲಿ ಅರಳಿದವ. ಶ್ರೀಮಂತಿಕೆಯನ್ನು ತನ್ನ ಜೀವನದ ಗುರಿಯಾಗಿರಿಸಿಕೊಂಡ ಪರಿಶ್ರಮಿ.( ಈ ಸಾಲು ಉಚಿತವೇ ಯೋಚನಾರ್ಹ) ತಂದೆ ಸಾಬಣ್ಣನ ವಾಲಿಕಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸಿದ ಬಲಶಾಲಿ ಯುವಕ.ಬೆನ್ನಿಗೆ ಬಿದ್ದವರನ್ನು ಬದುಕಿಸಿದವ.ಬಡವರ ಬಂಧುವಾಗಿ ಅವರ ಕಷ್ಟಗಳಿಗೆ ಬದುಕಿನ ಉಸಿರನ್ನು ನೀಡಿದ ಮಾನವೀಯತೆಯ ಶ್ರೀಮಂತನೆಂದು ಈತನ ಧೈರ್ಯ ಸಾಹಸವನ್ನು ಜನರೂ ಇಞಮದಿಗೂ ಹಾಡಿ ಹೊಗಳಿದ್ದಾರೆ.”(ಪು-೯೯)
ಮಾತುಗಳು ಅವರ ಅಧ್ಯಯನದ ಫಲಿತವಾಗಿವೆ.
ಸಮಾರೋಪದಲ್ಲಿ ಲಕ್ಷ್ಮಣನ ಹತ್ಯೆಯ ನಂತರವೂ ಆ ಭಾಗದ ಜನ ಕ್ಷ್ಮಣನನ್ನು ಅವನ ಅಳಿಯರನ್ನು ಕೂಡ) ಸಾಂಸ್ಕೃತಿಕ ವೀರನಾಗಿ ನೆನೆಯಲ್ಪಡುವದನ್ನು ಹೇಳಿದ್ದಾರೆ” ಲಕ್ಷ್ಮಣನ ಹೋರಾಟದ ಹೆಜ್ಜೆ ಗುರುತಿಸಲು ನಮ್ಮ ಜನಪದರು ಹಾಡಿ ಹೋದ ಹಾಡುಗಳೇ ಅನನ್ಯ ಆಕರಗ಼ಳು .ಸಿಂಧೂರ ವೀರನ ತ್ಯಾಗ ಬಲಿದಾನ ಯಾವ ಸ್ವಾತಂತ್ರ್ಯ ಹೋರಾಟಗಾರನಿಗೂ ಕಡಿಮೆ ಇಲ್ಲ. ಈತನಲ್ಲಿರುವ ದೇಶ ಭಕ್ತಿ ಬಡವರ ಮೇಲೆ ಇಟ್ಟಿರುವ ಅನುಕಂಪ ಸಹೋದರತ್ವ ಅದ್ವಿತಿಯವಾದುದು” ಎಂಬ ಸಾಲುಗಳು ನಿಜಕ್ಕೂ ಲಕ್ಷ್ಮಣನ ಅಪರೂಪದ ತ್ಯಾಗಕ್ಕೆ ಬಲಿದಾನಕ್ಕೆ ಬರೆದ ವ್ಯಾಖ್ಯಾನವಾಗಿವೆ.
ಈ ಅಧ್ಯಯನವು ಇನ್ನಷ್ಟು ಕ್ಷೇತ್ರಕಾರ್ಯವನ್ನು ಅಪೇಕ್ಷಿಸುವದೇನೋ ಎಂಬ ಕೊರತೆ ಆಗಾಗ ಇಣುಕಿದರೆ ಅದನ್ನು ಲೇಖಕರು ತಪ್ಪು ಭಾವಿಸಬಾರದು .ಬೀಳಗಿ, ಸಿಂಧೂರ ಜತ್ತ, ತುಳಸಿಗೇರಿ ತೆಗ್ಗಿ ಮೊದಲಾದೆಡೆ ಹುಡುಕಿದರೆ ಇನ್ನೂ ಲಕ್ಷ್ಮಣನ ಕುರಿತಾದ ಕೆಲವು ಜನಪದ ಹಾಡಿನ ರೂಪದ ದಾಖಲೆಗಳಾದರೂ ಸಿಗಬಹುದು. ಆದರೆ ಇಷ್ಟಾದರೂ ಸಾಧ್ಯವಾಗಿದೆಯಲ್ಲ ಎಂಬ ಸಂತೋಷ ನನಗೂ ಇದೆಯಂಬುದನ್ನು ಮುಚ್ಚಿಡಲಾರೆ.
ಯಾವು ಯಾವುದೋ ಹಾಡುಗಾರರ ದನಿಗಳಲ್ಲಿ ಅವರು ಬರೆದಿಟ್ಟ ಚೋಪಡಿ ಪುಸ್ತಕಗಳಲ್ಲಿ ಉಳಿದು ಹೋಗುತ್ತಿದ್ದ ಇಂಥ ಮೌಲಿಕ ವಿಷಯವನ್ನು ಹೆಕ್ಕಿ ತಗೆದು ನಮ್ಮ ಮುಂದಿನ ಯುವ ಪೀಳಿಗೆಗೆ ಒಬ್ಬ ಕ್ರಾಂತಿಕಾರಿ ದೇಶಭಕ್ತನ ಜೀವನವನ್ನು ಅನಾವರಣಗೊಳಿಸಿದ ಸಂಶೋಧಕ ಡಾ.ಚಂದ್ರು ತ಼ಳವಾರ ಅವರು ಅಭಿನಂದನೀಯರಾಗಿದ್ದಾರೆ.
***********************************************
ಡಾ.ಯ.ಮಾ.ಯಾಕೊಳ್ಳಿ