ಪ್ರಸ್ತುತ

ಪ್ರಸ್ತುತ

ಪ್ರಕೃತಿ ಹೇಳಿದ ಪಾಠ ಗಣೇಶ್ ಭಟ್ ಕೊರೊನಾ ಮುಖಾಂತರ ಪ್ರಕೃತಿ ಹೇಳಿದ ಪಾಠ ವ್ಯಕ್ತಿ ಅಥವಾ ಸಮುದಾಯದ ಬದುಕಿನಲ್ಲಿ ನಡೆಯುವ ಯಾವ ಘಟನೆಯೂ ಆಕಸ್ಮಿಕವಲ್ಲ. ಪ್ರತಿಯೊಂದಕ್ಕೂ ಒಂದು ಕಾರಣವಿರುತ್ತದೆ; ಅದು ತಿಳಿಯದಾಗ ನಾವು ಆಕಸ್ಮಿಕ ಎಂದು ಹೇಳುತ್ತೇವೆ ಅಥವಾ ಹಾಗೆ ಭಾವಿಸುತ್ತೇವೆ. ಇಡೀ ಮಾನವ ಕುಲವನ್ನು ನಡುಗಿಸುತ್ತಿರುವ ಕೊರೊನಾ ಸಾಂಕ್ರಾಮಿಕ ಪಿಡುಗೂ ಕೂಡಾ ಆಕಸ್ಮಿಕವಲ್ಲ. ಪ್ರಕೃತಿಯ ಮೇಲೆ ಮಾನವ ನಡೆಸಿದ, ನಡೆಸುತ್ತಿರುವ ದೌರ್ಜನ್ಯದ ಪ್ರತಿಕ್ರಿಯೆ ಅಷ್ಟೇ. ಕಳೆದ ಮೂರು ಶತಮಾನಗಳಿಂದ ಮಾನವ ನಿರ್ಮಿಸಿಕೊಂಡಿದ್ದ ಆರೋಗ್ಯ ಸೌಲಭ್ಯಗಳು, ಆಧುನಿಕ […]

ಕಾವ್ಯಯಾನ

ಬದುಕು ಬೀಸುವ ಗಾಳಿ ಹಾರುವ ಮುಂಗುರುಳು ಮತ್ತೆ ನೀಡಬಹುದು ಹೊಸ ಸಂತೋಷ. ಬಾನ ಚುಕ್ಕಿ ಹೊಳೆಯುವ ಚಂದಿರ ಮತ್ತೆ ಬರಬಹುದು ಆನಂದ. ಹಕ್ಕಿಯ ಗಾನ ಮರಗಳ ಕಲರವ ಮತ್ತೆ ತರಬಹುದು ಚೇತನ. ತಿಳಿ ನೀರ ಅಲೆಗಳಲ್ಲಿ ತೇಲುತ್ತಾ ಸಾಗುವ ಗುಳ್ಳೆಗಳ ನಡುವೆ ಮತ್ತೊಮ್ಮೆ ಚಿಮ್ಮಬಹುದು ಚಿಲುಮೆ. ಇಂತಹ ಎಲ್ಲಾ ಆಶಾ ಭಾವನೆಗಳ ನಡುವೆ ಜೀವಿಸಲೇಬೇಕಾದ ಅನಿವಾರ್ಯತೆ. ಇದ್ಯಾವುದೂ ಆಗದಿದ್ದರೂ ಆಗುತ್ತದೆ ಎನ್ನುವ ನಂಬಿಕೆ ಬಹುಶ: ಇದೇ ಇರಬಹುದು ಬದುಕು. ******

ಕಾವ್ಯಯಾನ

ಕೊನೆಯ ಸತ್ಯ 6 ಶಾಲಿನಿ ಆರ್. ಮುಳ್ಳು ಗಿಡಗಂಟಿಗಳ ಜಾಡು ಮುಗಿಯದ ದಾರಿಯಿದು ಬರಿ ಕಾಡು, ಪಾಚಿ ಗಟ್ಟಿದ ನೆಲಕೆ ಆರದ ನೋವ ಜಾರುತಿರುವ ಸಂಬಂಧಗಳ  ಅವಯವ, ಅಂತರಂಗಕಿದು ಆಳದ ಅರಿವಿಲ್ಲ ಬರಿ ಹೂಳು ತುಂಬಿದೆ ಆಳದೆಲ್ಲೆಲ್ಲ, ಬೆಚ್ಚಗಿನ ನೆನಪಿಗು ಚಳಿಯ ಜಾಡು ಸದ್ದಿಲದೆ ಮುರಿಯುತಿದೆ ಮನದ ಎಲುಬಿನ ಗೂಡು, ತರ ತರದ ಪ್ರೀತಿಗು ಮುಖವಾಡದ  ತುತ್ತು, ಬಿಂಕದಲಿ ಬೀಗುತಿದೆ ಭ್ರಮೆ’ ನನ್ನ ಸೊತ್ತು, ಹೂಳ ತೆಗೆಯದ ಹೊರತು ಕೇಳ, ತಿಳಿಯದು ಅಂತರಾಳದ ಮೇಳ, ಅರಿಯಲಾರದ ನಿಜತನ […]

ಅನುವಾದ ಸಂಗಾತಿ

ಮೂಲ: ಆಕ್ತೇವಿಯೋ ಪಾಜ಼್ (ಮೆಕ್ಸಿಕನ್ ಕವಿ) ಹೋಗಿ ಬರುವ ನಡುವೆ ಮೇಗರವಳ್ಳಿ ರಮೇಶ್ ಹೋಗುವ ಮತ್ತು ಉಳಿಯುವ ನಡುವೆಹೊಯ್ದಾಡುತ್ತದೆ ದಿನತನ್ನದೇ ಪಾರದರ್ಶಕತೆಯ ಮೇಲಿನ ಪ್ರೀತಿಯಲ್ಲಿಶೂನ್ಯ ಮಧ್ಯಾಹ್ನ ಈಗೊ೦ದು ಕೊಲ್ಲಿ.ಸ್ತಬ್ದ ಜಗತ್ತು ಅಪ್ಪಳಿಸುವುದಲ್ಲಿ. ಎಲ್ಲವೂ ಸ್ಪಷ್ಟ ಮತ್ತು ಎಲ್ಲವೂ ಗ್ರಹಿಕೆಗೆ ದೂರಎಲ್ಲವೂ ಹತ್ತಿರ ಮತ್ತು ನಿಲುಕಿಗೆ ದೂರ. ಕಾಗದ, ಪುಸ್ತಕ, ಪೆನ್ಸಿಲ್ಲು, ಗಾಜಿನ ಲೋಟತಮ್ಮ ತಮ್ಮ ಹೆಸರಿನ ನೆರಳಲ್ಲಿ ವಿಶ್ರಮಿಸಿವೆ. ನನ್ನಕಪೋಲಗಳಲ್ಲಿ ಮಿಡಿವಕಾಲ ಪುನರುಚ್ಛರಿಸುತ್ತದೆಬದಲಾಗದ ರಕ್ತದ ಅದೇ ಪದವನ್ನ. ಬೆಳಕು ನಿರ್ಲಕ್ಷ್ಯ ಗೋಡೆಯನ್ನು ಬದಲಿಸುವುದುಪ್ರತಿಫಲನಗಳ ಭಯ೦ಕರ ರ೦ಗವನ್ನಾಗಿ. ಕಣ್ಣೊ೦ದರ […]

ಕಾವ್ಯಯಾನ

ಗಝಲ್ ಈರಪ್ಪ ಬಿಜಲಿ ಮನದ ಕತ್ತಲು ಕಳೆದು ಜ್ಯೋತಿ ಬೆಳಗುವದು ಪುಸ್ತಕ ನಿಜ ಸಂಗಾತಿ ಜೀವದ ಭಾವನೆಗಳ ಭಾವನಾಲೋಕದಲಿ ತೇಲಿಸುವದು ಪುಸ್ತಕ ನಿಜ ಸಂಗಾತಿ।। ವ್ಯಕ್ತಿಯ ವ್ಯಕ್ತಿತ್ವದ ನಿರ್ಮಾಣವನು ಚೆಂದದಿ ಮಾಡುವುದು, ಯುಕ್ತಿಯ ಬಳಕೆಮಹತ್ವ ಸಾರುವ ಸಾಧನವಿದು ಪುಸ್ತಕ ನಿಜ ಸಂಗಾತಿ ।। ಮನುಜನನ್ನು ಸುಸಂಸ್ಕೃತನಾಗಿ ಪರಿವರ್ತನೆಗೊಳಿಸುವದು, ನಾಗರಿಕತೆ ಬೆಳೆಸಿ ಅನಾಗರಿಕತೆ ತೊಲಗಿಸುವದು ಪುಸ್ತಕ ನಿಜ ಸಂಗಾತಿ ।। ಜ್ಞಾನಕೋಶವನು ನಿತ್ಯ ತುಂಬಿಸಿ ಜ್ಞಾನಭಂಡಾರ ವೃದ್ಧಿಸುವದು, ಅಜ್ಞಾನದಿಂದ ಸುಜ್ಞಾನದ ಕಡೆಗೆ ಸಾಗಿಸುವದು ಪುಸ್ತಕ ನಿಜ ಸಂಗಾತಿ ।। […]

ಕಾವ್ಯಯಾನ

ಕವಿತೆಗೀಗ ಪುರುಸೊತ್ತಿಲ್ಲ! ವೈ.ಎಂ. ಯಾಕೋಳ್ಳಿ ಮತ್ತೆ ಮತ್ತೆ ಹರಿದು ಬರುವ ಕೆನ್ನೆತ್ತರ ಕಾವಲಿಯಲ್ಲಿ ಬಲಿಯಾದ ತನ್ನ ಕರುಳ ಕುಡಿಯ ಅರಸುತ್ತಿದೆ ಕವಿತೆ ಅದಕ್ಕೀಗ ಪದ ವಾಗಲು ಪುರುಸೊತ್ತಿಲ್ಲ ಅಪ್ಪನ ಬೆವರ ಹನಿ ಅವ್ವನ ಕೈತುತ್ತು ತಿಂದು ,ಪಾಠಶಾಲೆಯ ಪುಸ್ತಕದ ನಡುವೆ ಓದಿದ ಆದರ್ಶಗಳ ನೆಟ್ಟ ದಾರಿಯಲಿ ನಡೆದ ಕವಿತೆಗೆ ಎರಡು ಹೊತ್ತಿನ ಕೂಳು ಸಿಗದೆ ಪರದಾ ಡು ತ್ತಿದೆ ಅದಕ್ಕೀಗ ಪದ ವಾಗಲೂ ಪುರುಸೊತ್ತಿಲ್ಲ ತನ್ನದೇ ಓನಿಯ ಎಳೆಯ ಎದೆಗಳು ಎಲ್ಲಿಯೋ ಜೈಕಾರ ಹಾಕಿ,ಎಲ್ಲಿಯೋ ಮಲಗಿ ಯಾರದೋ […]

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-6 ಭವಿಷ್ಯವೇನೋ ಭಗವಂತ ಬಲ್ಲ… ಇನ್ನೊಂದೇ ಪರೀಕ್ಷೆ ಮುಗಿದರೆ ನನ್ನ ಪಿಯುಸಿ ಶಿಕ್ಷಣ ಮುಗಿಯುತ್ತದೆ ಅಮ್ಮಾ ಎಂದೊಬ್ಬ ಮಗ ಹೇಳಿದರೆ, ಇನ್ನೊಬ್ಬ ಅಮ್ಮನ ಮಗ ಹತ್ತನೆಯ ತರಗತಿಯ ಪರೀಕ್ಷೆಗೆ ಓದುತ್ತಿದ್ದ. ಒಬ್ಬಳ ಮಗಳು ಎಂಟನೆಯ ಪರೀಕ್ಷೆಗೆ ಓದುತ್ತಿದ್ದರೆ ಮತ್ತೊಬ್ಬಳ ಮಗಳು ಡಿಗ್ರಿ ಪರೀಕ್ಷೆಗೆ ಓದುತ್ತಿದ್ದಳು. ಎಲ್ಲ ಶಾಲಾ ಕಾಲೇಜು ಬಾಗಿಲುಗಳು ಮುಚ್ಚಿ ‘ಕೊರೊನಾ ದೆಸೆಯಿಂದ ನಿಮಗೆ ಅನಿರ್ದಿಷ್ಟ ಅವಧಿಯವರೆಗೆ ರಜಾ’ ಎಂದವು. ಅನೇಕರು ಪರೀಕ್ಷೆ ಬರೆಯದೇ […]

ಕಾವ್ಯಯಾನ

ಗಝಲ್  ಶಿವರಾಜ್. ಡಿ ನಮ್ಮ ಅಪಮಾನ ಅವಮಾನಗಳು ಇನ್ನೂ ಸತ್ತಿಲ್ಲ ಅಸ್ಪೃಶ್ಯತೆ ಅನಾಚರ ಅಜ್ಞಾನಗಳು ಇನ್ನೂ ಸತ್ತಿಲ್ಲ ನಿಮ್ಮ ಕಾಲಿನ ಚಪ್ಪಲಿ ಹೊಲೆದವರು ನಾವು ಚಪ್ಪಲಿ ಮೆಟ್ಟು ಬೆನ್ನಿಗೆ ಹೊದ್ದ ದರ್ಪ ಇನ್ನೂ ಸತ್ತಿಲ್ಲ ಮೀಸಲಾತಿ ಸ್ವಾಭಿಮಾನ ವಿರೋಧಿಸಿದವರು ನೀವು ನಮ್ಮನ್ನು ತುಳಿದ ನಿಮ್ಮ ದುರಭಿಮಾನ ಇನ್ನೂ ಸತ್ತಿಲ್ಲ ನಿಮ್ಮ ಮನೆಯ ಹೊಲ ಗದ್ದೆ ಚಾಕರಿಗೆ ಬೇಕು ನಾವು ನಮ್ಮನ್ನು ಹೊರಗಿಟ್ಟವರ ಮಡಿವಂತಿಕೆ ಇನ್ನೂ ಸತ್ತಿಲ್ಲ ನಿಮ್ಮ ಮಲಮೂತ್ರಗಳ ಹೊಲಸು ಹೊತ್ತವರು ನಾವು ಶ್ವಪಚರೆಂದು ಜರಿದ ಕೊಳಕು […]

ಪುಸ್ತಕ ದಿನ

ಇವತ್ತು ಪುಸ್ತಕ ದಿನ ಶಿವಲೀಲಾ ಹುಣಸಗಿ “One Best Book is equal to Hundred Good Friends one Good Friend is equal to library”                            -APJ Abdul kalam. ಇಂದು ವಿಶ್ವ ಪುಸ್ತಕ ದಿನವಾಗಿ ಇಡೀ ವಿಶ್ವವ್ಯಾಪಿ ಪ್ರಜ್ಞಾವಂತ ಪುಸ್ತಕಪ್ರೇಮಿಗಳು ಆಚರಿಸುತ್ತಿರುವುದು. ಅನೇಕ ಗ್ರಂಥಾಲಯಗಳಲ್ಲಿ ಉಚಿತ ಪುಸ್ತಕ ನೀಡಿ  ಓದಲು ಮುಕ್ತ ಅವಕಾಶ ಕಲ್ಪಿಸುತ್ತಿರುವುದು.ಒಂದು ಓದಿನ ಪರಂಪರೆಗೆ ಹೊಸ ಅಧ್ಯಾಯ ತೆರೆದಂತೆ.ಯ್ಯಾರು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡಿರುವರೋ ಅವರಿಗೆ ಮಾತ್ರ ಓದಿನ […]

ಕಾವ್ಯಯಾನ

ಮಾಯಾ ಪೆಟ್ಟಿಗೆ ಮತ್ತು ಬಾಂಬರುಗಳು    ನೂರುಲ್ಲಾ ತ್ಯಾಮಗೊಂಡ್ಲು ಅದೊ ಮಾಯಾ ಪೆಟ್ಟಿಗೆಯಿಂದವತರಿಸಿ  ಧಗ್ಗನೆದ್ದು ಬಂದಿವೆ  ಗೋದಿ ಗಾವಿಲರು, ಕೋತಿಗಳು ಅಥವ ಕಿಲಬುಕಾರರು  ಅಂದು ಕುಂಪಣಿಯ ಛೇಲಗಳಂತಿವರು  ಇಂದು ಈ ಹೊತ್ತಿಗೆ  ಅಲ್ಲಾವುದ್ದೀನನ ಚಿರಾಗ್ ಬೆಳಕಲಿ  ವಿಸ್ಮಯ ಲೋಕಕಂಡಿದ್ದ ಬಾಲ್ಯದಿನಗಳೇ ಚೆಂದ  ಇಂದು ಈ ೨೪/7 ನ ಪೆಟ್ಟಿಗೆಯಿಂದ ಪೊಳ್ಳು ಅಥವ ಬೆಂಕಿ ಕೆಕ್ಕರಿಸುವ  ದಿನಗಳು ಲೋಕವನ್ನೇ ಸುಡುತಿದೆ  ಅದೊ ಅಲ್ಲಿ ರಂಜನೆ, ರಮ್ಯಕಾಮ, ವಿನೋದ ವೂ ಉಂಟಲ್ಲ ಎಂದವನಿಗೆ ದುರಿತ ಕಾಲದ ವಿವೇಚನೆವಿಲ್ಲವೆಂದು ಮೌನವಾದೆ  ಗಡಿಗಳು ದೇಶಕೋಶಗಳಲಿ  ವಿಷವೇ ವಾಹಿನಿಯಾಗಿ […]

Back To Top