ಗಝಲ್
ಈರಪ್ಪ ಬಿಜಲಿ

ಮನದ ಕತ್ತಲು ಕಳೆದು ಜ್ಯೋತಿ ಬೆಳಗುವದು ಪುಸ್ತಕ ನಿಜ ಸಂಗಾತಿ
ಜೀವದ ಭಾವನೆಗಳ ಭಾವನಾಲೋಕದಲಿ ತೇಲಿಸುವದು ಪುಸ್ತಕ ನಿಜ ಸಂಗಾತಿ।।
ವ್ಯಕ್ತಿಯ ವ್ಯಕ್ತಿತ್ವದ ನಿರ್ಮಾಣವನು ಚೆಂದದಿ ಮಾಡುವುದು,
ಯುಕ್ತಿಯ ಬಳಕೆಮಹತ್ವ ಸಾರುವ ಸಾಧನವಿದು ಪುಸ್ತಕ ನಿಜ ಸಂಗಾತಿ ।।
ಮನುಜನನ್ನು ಸುಸಂಸ್ಕೃತನಾಗಿ ಪರಿವರ್ತನೆಗೊಳಿಸುವದು,
ನಾಗರಿಕತೆ ಬೆಳೆಸಿ ಅನಾಗರಿಕತೆ ತೊಲಗಿಸುವದು ಪುಸ್ತಕ ನಿಜ ಸಂಗಾತಿ ।।
ಜ್ಞಾನಕೋಶವನು ನಿತ್ಯ ತುಂಬಿಸಿ ಜ್ಞಾನಭಂಡಾರ ವೃದ್ಧಿಸುವದು,
ಅಜ್ಞಾನದಿಂದ ಸುಜ್ಞಾನದ ಕಡೆಗೆ ಸಾಗಿಸುವದು ಪುಸ್ತಕ ನಿಜ ಸಂಗಾತಿ ।।
ಬಿಜಲಿಯ ಜ್ಞಾನದಾಹ ತೀರಿಸುವ ಶರಧಿಯೇ ಆಗಿರುವದು,
ತಲ್ಲೀನನಾದ ಓದುಗಾರನಿಗೆ ನೂತನ ಅರಿವು ನೀಡುವದು ಪುಸ್ತಕ ನಿಜ ಸಂಗಾತಿ।।
********
ನನ್ನ ಬರಹ /ಗಜಲ್ ನು ಪ್ರಕಟಿಸಿದ ಸಂಗಾತಿ ಸಾಮಾಜಿಕ ಅಂತರ್ಜಾಲದ ತಾಣಕೆ ಹೃತ್ಪೂರ್ವಕವಾದ ಧನ್ಯವಾದಗಳುಸರ