ಅನುವಾದ ಸಂಗಾತಿ

ಮೂಲ: ಆಕ್ತೇವಿಯೋ ಪಾಜ಼್ (ಮೆಕ್ಸಿಕನ್ ಕವಿ)

ಹೋಗಿ ಬರುವ ನಡುವೆ

white painted wall

ಮೇಗರವಳ್ಳಿ ರಮೇಶ್

ಹೋಗುವ ಮತ್ತು ಉಳಿಯುವ ನಡುವೆ
ಹೊಯ್ದಾಡುತ್ತದೆ ದಿನ
ತನ್ನದೇ ಪಾರದರ್ಶಕತೆಯ ಮೇಲಿನ ಪ್ರೀತಿಯಲ್ಲಿ
ಶೂನ್ಯ ಮಧ್ಯಾಹ್ನ ಈಗೊ೦ದು ಕೊಲ್ಲಿ.
ಸ್ತಬ್ದ ಜಗತ್ತು ಅಪ್ಪಳಿಸುವುದಲ್ಲಿ.

ಎಲ್ಲವೂ ಸ್ಪಷ್ಟ ಮತ್ತು ಎಲ್ಲವೂ ಗ್ರಹಿಕೆಗೆ ದೂರ
ಎಲ್ಲವೂ ಹತ್ತಿರ ಮತ್ತು ನಿಲುಕಿಗೆ ದೂರ.

ಕಾಗದ, ಪುಸ್ತಕ, ಪೆನ್ಸಿಲ್ಲು, ಗಾಜಿನ ಲೋಟ
ತಮ್ಮ ತಮ್ಮ ಹೆಸರಿನ ನೆರಳಲ್ಲಿ ವಿಶ್ರಮಿಸಿವೆ.

ನನ್ನಕಪೋಲಗಳಲ್ಲಿ ಮಿಡಿವ
ಕಾಲ ಪುನರುಚ್ಛರಿಸುತ್ತದೆ
ಬದಲಾಗದ ರಕ್ತದ ಅದೇ ಪದವನ್ನ.

ಬೆಳಕು ನಿರ್ಲಕ್ಷ್ಯ ಗೋಡೆಯನ್ನು ಬದಲಿಸುವುದು
ಪ್ರತಿಫಲನಗಳ ಭಯ೦ಕರ ರ೦ಗವನ್ನಾಗಿ.

ಕಣ್ಣೊ೦ದರ ನಡುವಿನಲ್ಲಿ ನನ್ನ ನಾ ಕ೦ಡೆ
ನೋಡುತ್ತ ಅದರ ಶೂನ್ಯ ದೃಷ್ಟಿಯಲ್ಲಿ.

ಚದುರಿದೆ ಕ್ಷಣ
ಸ್ತಬ್ದವಾಗಿ ಉಳಿಯುತ್ತೇನೆ
ಮತ್ತು ಹೋಗುತ್ತೇನೆ
ನಾನೊ೦ದು ನಿಲ್ದಾಣ!

*****

Leave a Reply

Back To Top