ಕವಿತೆಗೀಗ ಪುರುಸೊತ್ತಿಲ್ಲ!
ವೈ.ಎಂ. ಯಾಕೋಳ್ಳಿ
ಮತ್ತೆ ಮತ್ತೆ ಹರಿದು ಬರುವ
ಕೆನ್ನೆತ್ತರ ಕಾವಲಿಯಲ್ಲಿ
ಬಲಿಯಾದ ತನ್ನ ಕರುಳ ಕುಡಿಯ
ಅರಸುತ್ತಿದೆ ಕವಿತೆ
ಅದಕ್ಕೀಗ ಪದ ವಾಗಲು ಪುರುಸೊತ್ತಿಲ್ಲ
ಅಪ್ಪನ ಬೆವರ ಹನಿ ಅವ್ವನ ಕೈತುತ್ತು ತಿಂದು ,ಪಾಠಶಾಲೆಯ ಪುಸ್ತಕದ ನಡುವೆ ಓದಿದ ಆದರ್ಶಗಳ ನೆಟ್ಟ ದಾರಿಯಲಿ ನಡೆದ ಕವಿತೆಗೆ
ಎರಡು ಹೊತ್ತಿನ ಕೂಳು ಸಿಗದೆ
ಪರದಾ ಡು ತ್ತಿದೆ
ಅದಕ್ಕೀಗ ಪದ ವಾಗಲೂ ಪುರುಸೊತ್ತಿಲ್ಲ
ತನ್ನದೇ ಓನಿಯ ಎಳೆಯ ಎದೆಗಳು
ಎಲ್ಲಿಯೋ ಜೈಕಾರ ಹಾಕಿ,ಎಲ್ಲಿಯೋ ಮಲಗಿ
ಯಾರದೋ ತೆವಲಿಗೆ ಹರೆಯವ ಹಾಳು ಮಾಡಿಕೊಳ್ಳುವದು ಕಂಡು
ಕವಿ ತೆಯ ಎದೆಯಲ್ಲಿ ಅಳು ಜಿನುಗುತ್ತದೆ
ಸಂದನಿಯೊಳಗೆ ತನ್ನದೇ ಕುಡಿ ಸಿಕ್ಕು
ಗುರುತು ಸಿಗದೆ ಪರದಾಡುವ ಕವಿತೆಗಿಗ ಎದೆ ಭಾರವಾಗಿದೆ
ಅದಕ್ಕೀಗ ಪದವಾಗಲು ಪುರುಸೊತ್ತಿಲ್ಲ
ಮನೆಯ ಬಣ್ಣದ ಪರದೆಯ ಮೇಲೆ ಹರಿದು ಬರುತ್ತಿರುವ ಮತ್ತದೇ ಆ ಶ್ವಾಸನೆಗಳು, ಮಾತಿನ ಮಹಲಗಳು ಕವಿತೆಯನ್ನು ದಿಕ್ಕೆಡಿಸುತ್ತಿವೆ
ಸುತ್ತಲಿನ ಹರೆಯಗಳು ಕೈಯ ಬಣ್ಣದ ಪಾಟಿಯ ಮೇಲಿನ ಕೀಲಿ ಮನೆಗಳ ಮೇಲೆ ಅಸ್ತವ್ಯಸ್ತವಾಗಿ ಮುಳುಗಿ
ಕಾಲ ಮನೆ ಜಗತ್ತೇ ಮರೆತಿರುವುದು ಕಂಡು ಕವಿತೆ ದಿಗ್ಭ್ರಮೆ ಯಾಗಿದೆ
ಅದಕ್ಕೀಗ ಪದವಾಗಲು
ಪುರುಸೊತ್ತಿಲ್ಲ
ಕಣ್ಣು ಕಾಣದ ಹಗಲು, ಕಣ್ಣೆ ಮುಚ್ಚದ ಇರುಳು,
ರಾತ್ರಿಯ ಜಾಗದಲ್ಲಿಗ ಹಗಲು,
ಹೊತ್ತೆರುವವರೆಗು ಮಲಗಿ
ಹೊತ್ತು ಮುಳುಗಿದಂತೆ ಕಣ್ಣ ಕಿಲಿಸುತ್ತ ಕುಣಿವ ಕಂಗಳು
ಸರಿಯಾಗಿ ಹದಿನಾರು ತುಂಬದ ಕೈ ಗಳಲ್ಲಿಗ ಎಂತೆಂಥದೋ ಬಣ್ಣದ ಗಾಜುಗಳು
ಹೆಣ್ಣೋ ಗಂಡೋ ತಿಳಿಯದ ಕತ್ತಲೆಯಲ್ಲಿ ಮೈಮರೆತ ಮೈಗಳು
ಕಾಣೆಯಾಗಿರುವ ತನ್ನದೇ ಕೂಸು ಅರಸುತ್ತಾ ಹೊರಟ
ಕವಿತೆ
ತನ್ನ ಮನೆದೇವರ ಮುಂದೆ ಬಿಕ್ಕಿ ಅಳುತ್ತಿದೆ
ಸೋತು ಹೋದ ಕವಿತೆ ಎದೆಯ ಪದವಾ ದಿತು ಹೇಗೆ?
ಎದೆ ತೆರೆದು ಹಾಡಿತು ಹೇಗೆ?
******************************************