ನಿನ್ನ ಪಾಪದ ಹೆಣ
ಕವಿತೆ ನಿನ್ನ ಪಾಪದ ಹೆಣ ಬೆಂಶ್ರೀ. ರವೀಂದ್ರ ಹೇಳಿ ಬಿಡಬಹುದಿತ್ತು ಈ ಮಾತುಗಳಪ್ರತಿಮೆ ರೂಪಕಗಳಲ್ಲಿಕತೆಯೊಂದರ ಮುಸುಕಿನಲ್ಲಿಪುರಾಣಗಳ ಪುಣ್ಯಕತೆಗಳ ಅವತರಣಿಕೆಗಳಲಿಅಥವಾಆಧುನಿಕತೆಯ ಹೆಸರಿನಲಿಎಲ್ಲೆ ಮುರಿದಿದ್ದನ್ನು ತರ್ಕಿಸಿ ಸುಸಂಬದ್ಧಗೊಳಿಸಬಹುದಿತ್ತು.ಪ್ರಾಣಿಗಳ ಹುಟ್ಟುಗುಣವಿದು ಎಂದು ಮನಶ್ಶಾಸ್ತ್ರದ ಮೆರಗನೀಯಬಹುದಿತ್ತು ಹೇಳಿಬಿಡುತ್ತೇನೆ ಎಲ್ಲವೀಗಬಟಾಬಯಲಲ್ಲಿ ನಿಂದುನಿನಗೆ ನಿನ್ನಂತವರಿಗೆ ಹಿಂದಿನವರಿಗೆ ಮುಂದಿನವರಿಗೆ ಸಾಕು ಸಾಕಾಗಿದೆನಿಶಸ್ತ್ರಿಯ ಮೇಲೆ ದುರಹಂಕಾರದ ನಿನ್ನ ಶಸ್ತ್ರವ ತೂರಿ ಆಕ್ರಮಿಸುವುದನ್ನು ಸಹಿಸಹಿಸಿ. ಮತ್ತಿಂದುಪೋಲಿಸು ಠಾಣೆಗಳಲ್ಲಿ, ಪತ್ರಿಕೆಗಳಲಿ, ಮುಗಿಲಿಗೆ ಲಗ್ಗೆ ಹಾಕಿದ ಭುಗಿಲುಮಾಧ್ಯಮಗಳಲಿಗುಪ್ತ ವಿಚಾರಣೆಗಳಲಿ ನ್ಯಾಯಾಲಯಗಳಲಿ ಮತ್ತೆನನ್ನ ನಗ್ನಗೊಳಿಸಿ ಹುರಿದು ಮುಕ್ಕುವ ನಿನಗೆ ಹಳೆಯದು,ಹೊಸದಾಗಿ ಹೊಸೆದ ಹಳೆಯಶಾಸ್ತ್ರಗಳ ಧಿಕ್ಕರಿಸಿ […]
ಬೆರಳಿಗೆ ಶಾಯಿ ಬಳಿಸಿಕೊಳ್ಳುವ ಸೋಜಿಗ
ಲೇಖನ ಬೆರಳಿಗೆ ಶಾಯಿ ಬಳಿಸಿಕೊಳ್ಳುವ ಸೋಜಿಗ ಅಂಜಲಿ ರಾಮಣ್ಣ ಅವತ್ತು ನನಗೆ 18 ತುಂಬಿದ ಮಾರನೆಯ ದಿನವೇ ಮತದಾರ ಗುರುತಿನ ಚೀಟಿ ಮಾಡಿಸಿಕೊಟ್ಟರು ನನ್ನ ತಂದೆ. ಇದೊಂದೇ ಗುರುತಿಗಾಗಿ 18 ಆಗುವುದನ್ನೇ ಕಾಯುತ್ತಿದ್ದೆ. ಆಗ ತಿಳಿದೇ ಇರಲಿಲ್ಲ ಕಾಲ ಮತ್ತು ಹರೆಯ ಇಬ್ಬರದ್ದೂ ಗಳಸ್ಯ ಕಂಠಸ್ಯ ಜೋಡಿ ಎಂದು ಮತ್ತು ಅವರುಗಳ ಬಂಡಿಗೆ ರಿವರ್ಸ ಗೇರ್ ಇರುವುದಿಲ್ಲ ಎಂದು. ಕೈಯಲ್ಲಿ ವೋಟರ್ಸ್ ಐಡಿ ಇತ್ತು, ಮತ ಹಾಕಲೇ ಬೇಕು ಎನ್ನುವ ಹಠವೂ ಜೊತೆಯಾಗಿತ್ತು. ಆದರೇನು ಮಾಡುವುದು ಆಗ […]
ದಾರಾವಾಹಿ- ಅದ್ಯಾಯ-11 ಅದೃಷ್ಟದಿಂದಲೋ, ದೈವಕೃಪೆಯಿಂದಲೋ ಮನುಷ್ಯನಿಗೆ ದೊರಕುವ ಸುಖ ಸಂಪತ್ತು ಕೆಲವೊಮ್ಮೆ ಅವನನ್ನು ಎಂಥ ಕಾರ್ಯಕ್ಕಾದರೂ ಪ್ರೇರೇಪಿಸಬಲ್ಲದು ಎಂಬುದಕ್ಕೆ ಸಂತಾನಪ್ಪ ಕಿಲ್ಲೆಯೇ ಸಾಕ್ಷಿಯಾಗುತ್ತಾನೆ. ಅವನು ತನ್ನ ದಿಢೀರ್ ಶ್ರೀಮಂತಿಕೆಯಿಂದಲೂ, ಗಂಡಸುತನದ ಕೊಬ್ಬಿನಿಂದಲೂ ಮಸಣದ ಗುಡ್ಡೆಯ, ತನಗಿಂತ ಇಪ್ಪತ್ತು ವರ್ಷ ಕಿರಿಯಳಾದ ದ್ಯಾವಮ್ಮ ಎಂಬ ಹುಡುಗಿಯನ್ನು ಒಲಿಸಿ ತನ್ನವಳನ್ನಾಗಿಸಿಕೊಂಡ ವಿಷಯವು ಅವಳ ಪ್ರಿಯಕರ ಪರಮೇಶನಿಗೆ ತಿಳಿದುಬಿಟ್ಟಿತು. ಪರಮೇಶ ದ್ಯಾವಮ್ಮಳನ್ನು ಪ್ರಾಣಕ್ಕಿಂತ ಮಿಗಿಲಾಗಿ ಪ್ರೀತಿಸುತ್ತಿದ್ದವನು ಕಂಗಾಲಾಗಿಬಿಟ್ಟ. ಸಂತಾನಪ್ಪ ತನ್ನ ಹುಡುಗಿಯನ್ನು ಯಾವತ್ತು ಮರುಳು ಮಾಡಿ ಬಗಲಿಗೆಳೆದುಕೊಂಡನೋ ಆವತ್ತಿನಿಂದ ಪರಮೇಶನಿಗೆ ಜೀವನದಲ್ಲಿ […]
ಅಂಕಣ ಬರಹ ಹೊಸ್ತಿಲಾಚೆಗಿನ ರಂಗಜೀವಿ ಬದುಕ ರಂಗವನ್ನು ಆತ್ಮ ತೊರೆದಿತ್ತು. ಮನೆಯ ಉದ್ದದ ಚಾವಡಿಯಲ್ಲಿ ಅತ್ತೆಯ ಶರೀರ ಮಲಗಿತ್ತು. ತಲೆಯ ಬದಿಯಲ್ಲಿ ತೆಂಗಿನ ಕಾಯಿಯ ಒಂದು ಭಾಗದೊಳಗೆ ದೀಪ ಮೌನವಾಗಿ ಉರಿಯುತ್ತಿತ್ತು. ರಾಶಿ ಮೌನಗಳನ್ನು ದರದರನೆ ಎಳೆತಂದು ಕಟ್ಟಿ ಹಾಕಿದ ರಾಕ್ಷಸ ಮೌನ ಘೀಳಿಡುತ್ತಿತ್ತು. ಎದೆ ಒತ್ತುವ, ಕುತ್ತಿಗೆ ಒತ್ತುವ ನಿರ್ವಾತಕ್ಕೆ ಅಂಜಿ ಮುಂಬಾಗಿಲಿಗೆ ಬಂದೆ. ಶರೀರವನ್ನು ಉದ್ದಕ್ಕೆ ನೆಲಕಂಟಿಸಿ ಮುಖವನ್ನು ಅಡ್ಡಕ್ಕೆ ಬಾಗಿಸಿ ‘ಪೀಕು’ ಮಲಗಿದ್ದಾಳೆ. ನಾನು ಅಲ್ಲಿರುವುದು ತಿಳಿದಿಲ್ಲವೇ? ಯಾವಾಗಲೂ ನಡಿಗೆಯ ಪದತರಂಗವನ್ನು ಗಬಕ್ಕೆಂದು […]
ಅಂಕಣ ಬರಹ . ರಾಮಕೃಷ್ಣ ಗುಂದಿ ಅವರ ಆತ್ಮಕಥೆ—20 ಆತ್ಮಾನುಸಂಧಾನ ಸಂಸ್ಕೃತವನ್ನು ಓದಗೊಡದ ಸಂಸ್ಕೃತ ಮೇಷ್ಟ್ರು ನಾನು ‘ಜೈಹಿಂದ್’ ಹೈಸ್ಕೂಲು ವಿದ್ಯಾರ್ಥಿಯಾಗಿ ಪ್ರವೇಶ ಪಡೆದ ಬಳಿಕ ವಿಷಯ ಆಯ್ಕೆಯ ಸಂದರ್ಭದಲ್ಲಿ ಒಂದು ತಪ್ಪು ಮಾಡಿದೆ. ಬಾಲ್ಯದಿಂದಲೂ ಯಕ್ಷಗಾನದ ಪ್ರಭಾವಕ್ಕೆ ಪಕ್ಕಾಗುವ ವಾತಾವರಣದಲ್ಲಿ ಬೆಳೆದ ನಾನು ಹಿರಿಯ ಅರ್ಥಧಾರಿಗಳು ಅರ್ಥ ಹೇಳುವಾಗ ಮಾತಿನ ಮಧ್ಯೆ ಅಲ್ಲಲ್ಲಿ ಬಳಸುವ ಸಂಸ್ಕೃತ ಶ್ಲೋಕಗಳನ್ನು ಕೇಳುವಾಗ ಅದು ತುಂಬ ಅದ್ಭುತವೆನ್ನಿಸುತ್ತಿತ್ತು. ಇಂಥ ಸಂಸ್ಕೃತ ಉಕ್ತಿಗಳನ್ನು ಮಾತಿನ ಮಧ್ಯೆ ಬಳಸುವವರು ತುಂಬಾ ಜಾಣರು, ಬಹಳಷ್ಟು […]
ಕೊಡಲಾಗದ್ದು – ಪಡೆಯಲಾಗದ್ದು
ಮರೀಚಿಕೆಯಾದ ಪ್ರೀತಿಗಾಗಿ ಹಂಬಲವೋ
ದೂರ ಸರಿದವರಿಗಾಗಿ ಬೇಡುವಿಕೆಯೋ
ಪ್ರಶ್ನಿಸಿದ ಮನಕೆ
ಅವಳದು ನಿರುತ್ತರ
ಸಿಲುಕಬಾರದು
ದುಡಿದು ಕಾಯಸವೆಸಿ ಕಾಲವನೂ ದೂಡಿಬಿಡಬಹುದೇನೋ
ನೆನಪುಗಳ ಅಬ್ಬರದ ಅಲೆಗಳ
ಒಳಗೆ ನುಸುಳಿಕೊಳ್ಳಬಾರದು
ಅರಣ್ಯ ರೋಧನ
ಕರೆದು ಮಣೆ ಹಾಕಿ
ಭೂರೀ ಭೋಜನ ಬಡಿಸಿ
ಕಿರೀಟವಿಟ್ಟು ಮೆರೆಸುವರೆ ಮಂದಿ
ಮುಂದಿನ ಪೀಳಿಗೆಗೂ
ಒಳಗೊಳಗೇ ದ್ವೇಷಕಾರುವವರು
ಜೊತೆಜೊತೆಯಲಿದ್ದು ವೈಷಮ್ಯ ತೋರುವರು ! //
ಹುಡುಕಾಟ
ಆಡಿದ ಮಾತು ಮರಳಿ ನೋಯಿಸುತಿವೆ
ಮರೆಯಲಾಗದೆ ನೆನಪು ಕಾಡುತ್ತಿವೆ
ಶೃಂಗರಿಸಿ ಕೊಂಡು ಮಾಸಿದೆ ನೀಬಾರದೆ
ಅದೆಂತ ನಿನ್ನ ಶಕ್ತಿ ಕಾಣದೆ ಹಿಂಡುತಿದೆ