ಕವಿತೆ
ಮುಂದಿನ ಪೀಳಿಗೆಗೂ
ಡಾನವೀನ್ ಕುಮಾರ ಎ.ಜಿ
ಒಂದೊಮ್ಮೆ ನಾ
ನಡೆಯುತ್ತಿರುವಾಗ ಒಬ್ಬನೇ !
ಕಂಡೆ ಅಲ್ಲಲ್ಲಿ
ಕೊಳೆತುನಾರುವ ಹೊಲಸು ತುಂಬಿದ
ಮನದ ಮಾತಿನ ಜನರನ್ನ //
ಅಧಿಕಾರದಾಸೆಗೆ, ಕರಜೋಡಿಸದ
ಕರುಣಾ ಹೀನರು.
ಉಪಕಾರದ ಉಪದೇಶ ನೀಡುವ
ಡೋಂಗಿತನದವರು,
ಕೈಬಾಯಿ, ಕಚ್ಚೆಹರುಕ ನಾಟಕಕಾರರು//
ಸಹೋದರರೇ ತಲೆಹಿಡುಕರು !
ವಂಚಕರು, ಬಂಧು ಬಳಗದವರು
ಹತ್ತಿರದಲ್ಲೆ ಇರುವ ಮೋಸಗಾರರು
ಒಳಗೊಳಗೇ ದ್ವೇಷಕಾರುವವರು
ಜೊತೆಜೊತೆಯಲಿದ್ದು ವೈಷಮ್ಯ ತೋರುವರು ! //
ಅಕ್ಷರ ಲೋಕದ ಜ್ಞಾನವಂತ ಪಂಡಿತರು
ಸಮಾಜದ ಚುಕ್ಕಾಣಿ ಹಿಡಿದವರು
ಬೋಧಕರು , ವೈದ್ಯರು, ಆಡಳಿತಗಾರರು
ಸ್ವಾಥ೯ಕ್ಕೆ ತಮ್ಮತನವ ಮಾರಿಕೊಂಡಿಹರು//
ಬರಬೇಕು,ಬದಲಾಗಬೇಕು
ಬರುಯ ಭ್ರಮೆಯು ಕಲ್ಪನೆಯು !
ಬಾಯಿ ಮಾತಿನ ಬಡಿವಾರವು
ಸರ್ವರೋಳಗೆ ಜಗದೊಳಗೆ
ಇದೇ ಸತ್ಯ ಇಂದು- ಮುಂದಿನ ಪೀಳಿಗೆಗೂ ! //
ಮಾರ್ಮಿನ ನುಡಿಗವನ ಸೂಕ್ಷ್ಮ ಭಾವ ನೈಸ್
ಅತಿ ಉತ್ತಮ ಕವನ ಸರ್.
ನೈಜತೆಯ ಅನಾವರಣ….. ಪ್ರತಿಬಿಂಬವೂ……
ನಿಮ್ಮ ಕವನವು ಚೆನ್ನಾಗಿದೆ ಸರ್
ತುಂಬಾ ಅರ್ಥಗರ್ಭಿತ. ಸುತ್ತಮುತ್ತಲಿನ ಕೊಳೆಯನ್ನು ತೊಳೆಯುವ ಒಂದು ಕಿರುಪ್ರಯತ್ನ.
ವಾಸ್ತವದ ಸತ್ಯವನ್ನು ಅದ್ಭುತವಾಗಿ ಬಿಚ್ಚಿಟ್ಟಿದ್ದಿರಿ ಗುರುಗಳೆ.
super sir
ಬಹಳ ಚೆನ್ನಾಗಿ ಮೂಡಿಬಮದಿದೇ.
ವಾಸ್ತವ
ವಾಸ್ತವ
ಎಕ್ಸಲೆಂಟ್