ಕವಿತೆ
ಹುಡುಕಾಟ
ಕೆ.ಸುನಂದಾ
ಇಂದೆನ್ನ ಮನಸೇಕೊ ನನ್ನ ಮಾತಲ್ಲಿಲ್ಲ
ಅದೇನೋ ತಳಮಳ ತಿಳಿಯುತ್ತಿಲ್ಲ
ದುಗುಡ ದುಮ್ಮಾನದ ತಾಕಲಾಟ
ನನ್ನವನಿಗಾಗಿ ನಿಲ್ಲದ ಹುಡುಕಾಟ
ಇಂದೇಕೆ ಕಾಡುತಿರುವೆ ಮುಂಗುರುಳೆ
ಅವನ ಸುಳಿವು ಸಿಕ್ಕಿತೇನು ಹೇಳೆ
ಬಾ ಎಂದು ಹೇಳಬಾರದೇನೆ ನಲ್ಲಗೆ
ಮತ್ತೆ ಮತ್ತೆ ಹಾರಿ ಕುಕ್ಕುವೆ ಏಕೆ ಕೆನ್ನೆಗೆ
ಆಡಿದ ಮಾತು ಮರಳಿ ನೋಯಿಸುತಿವೆ
ಮರೆಯಲಾಗದೆ ನೆನಪು ಕಾಡುತ್ತಿವೆ
ಶೃಂಗರಿಸಿ ಕೊಂಡು ಮಾಸಿದೆ ನೀಬಾರದೆ
ಅದೆಂತ ನಿನ್ನ ಶಕ್ತಿ ಕಾಣದೆ ಹಿಂಡುತಿದೆ
ಪ್ರೇಮವೆನ್ನಲೆ ಕಾಮವೆನ್ನಲೆ ನಿಜವ ಹೇಳು
ರಾಧೆಮಾಧವರ ಪ್ರೀತಿಗಾಗಿಯೇ ಈ ಬಾಳು
ಹುಸಿ ಮಾಡದಿರು ನನ್ನಾಸೆಯ ಈ ಪ್ರೀತಿಗೆ
ನಿನ್ನ ಹೆಸರು ನೆನೆದಾಗಲೆಲ್ಲ ಪುಳಕ ಎನ
**********************************************
ಕವಿತೆ ಬಹಳ ಚೆನ್ನಾಗಿದೆ
ತುಂಬಾ ಚೆನ್ನಾಗಿದೆ