ಗಜಲ್
ಗಜಲ್ ರೇಮಾಸಂ ಹಳೆಯ ಹೊಸತುಗಳ ಜಗಳದಲಿ ಬೆಸೆದಿರಲಿ ಸಮರಸ/ಬೆರೆತು ಅರಿತ ಬಾಳುವೆಯಲಿ ಜಿನುಗುತಿರಲಿ ಮಧುರಸ// ಹಮ್ಮು ಬಿಮ್ಮಿನ ಜಗ್ಗಾಟದಲಿ ನುಗ್ಗಾಗದಿರಲಿ ಜೀವನ/ಪ್ರೀತಿಯು ಸವೆಯಲು ಬಿಡದೆ ಚಿಮ್ಮುತಿರಲಿ ಪ್ರೇಮರಸ// ಹೂಡಿಕೆಯಾಗಲಿ ಅನುರಾಗದ ರಿಂಗಣವು ಅನುದಿನವು/ನೋವುಗಳು ಬೇವು ಬೆಲ್ಲದಂತೆ ಸುರಿಯುತಿರಲಿ ನವರಸ// ವಿರಸವು ತರುವ ಮಾತಿಗೆಲ್ಲ ವಿರಾಮದ ಚಿಹ್ನೆ ಇಡುತಿರಲಿ/ಸರಸ-ಸಲ್ಲಾಪದ ಪದಗಳು ಪುಟಿದು ಚೆಲ್ಲುತಿರಲಿ ಗಾನರಸ// ತಾಯಿಯ ಸೆರಗು ಹೊದಿಕೆಯಂತಿರಲಿ ಪ್ರೇಮದ ಚಪ್ಪರವು/ಗಂಧದಂತೆ ಜೀವಗಳು ಪಸರಿಸುತ ತೇಯುತಿರಲಿ ದ್ರವ್ಯರಸ/ ***************************
ಅಂಕಣ ಬರಹ ಕಾಲೆಳೆವ ಕೈಗಳೇ ಮೆಟ್ಟಿಲಾಗಲಿ ಸಾಮಾನ್ಯವಾಗಿ ಕಾಲೆಳುವುದು ಅಥಬಾ ಲೆಗ್ ಪುಲ್ಲಿಂಗ್ ಎಂದರೆ ಕೀಟಲೆ ಮಾಡುವುದು ಅಥವಾ ಇಲ್ಲದ್ದನ್ನು ಇದೆ ಎಂದು ತಮಾಷೆಗಾಗಿ ನಂಬಿಸುವುದು ಎಂದರ್ಥವಿದೆ. ಆದರೆ ಇಲ್ಲಿ ಕಾಲೆಳುವುದೆಂದರೆ ಹಗುರ ಅರ್ಥದಲ್ಲಿ ಇಲ್ಲ. ಮುನ್ನಡೆವವನ ದಾರಿಗೆ ಅಡ್ಡ ಹಾಕುವುದಿ ಎಂಬರ್ಥದಲ್ಲಿ ಬಳಸಲಾಗಿದೆ. ಬಹಳ ಹಿಂದೆ ಕೇಳಿದ್ದ ಕಥೆಯೊಂದು ನೆನಪಾಗುತ್ತಿದೆ. ಒಂದು ಕಾಡಿನಲ್ಲಿ ಒಂದು ಬಾವಿ. ಆ ಬಾವಿಯಲ್ಲಿ ನೂರಾರು ಕಪ್ಪೆಗಳು. ಬಾವಿಯನ್ನೇ ಪ್ರಪಂಚವೆಂದುಕೊಂಡು ನೆಮ್ಮದಿಯಿಂದಿದ್ದವು. ಒಮ್ಮೆ ಅಲ್ಲಿದ್ದ ಒಂದು ಕಪ್ಪೆಗೆ ಯಾಕೋ ಆ […]
ಲಾಕ್ಡೌನ್ ಕಾಲಘಟ್ಟದ ದಾಂಪತ್ಯ
ಲೇಖನ ಲಾಕ್ಡೌನ್ ಕಾಲಘಟ್ಟದ ದಾಂಪತ್ಯ ಅಂಜಲಿ ರಾಮಣ್ಣ ಬೆಳಗಿನಲ್ಲಿ ಅವನು ಬಲು ಸುಭಗ. ರಾತ್ರಿಯಾಯಿತೆಂದರೆ ಕೀಚಕನೇ ಮೈಯೇರಿದ್ದಾನೆ ಎನ್ನುವಂತೆ ಇರುತ್ತಿದ್ದ. ಅವಳ ಮೈಮೇಲಿನ ಹಲ್ಗುರುತು, ಉಗುರ್ಗೆರೆ, ಸಿಗರೇಟಿನ ಬೊಟ್ಟು ಕತ್ತಲಲ್ಲೂ ಮಿರಮಿರ ಉರಿಯುತ್ತಿತ್ತು. ಸಹಿಸುತ್ತಲೇ ಅವಳ ದಾಂಪತ್ಯಕ್ಕೆ ಮೂರು ವರ್ಷ ಕಳೆದುಹೋಗಿತ್ತು. ಸ್ನಾನದ ನೀರು ಬಿದ್ದರೆ ಧಗಧಗ ಎನ್ನುವ ದೇಹ ದಹನಕ್ಕೆ ಹೆದರಿದ್ದ ದಾಕ್ಶಾಯಣಿ ಅವಳು ಅದೆಷ್ಟೋ ದಿನಗಳಿಗೆ ಒಮ್ಮೆ ಸ್ನಾನ ಮಾಡುತ್ತಿದ್ದಳು. ಕತ್ತಲಲ್ಲಿ ಅವಳಾತ್ಮವನ್ನು ಹೀಗೆ ಚರ್ಮದಂತೆ ಸಂಸ್ಕರಿಸುತ್ತಿದ್ದವ ಬೆಳಕಿನಲ್ಲಿ ಬೆಕ್ಕಿನ ಮರಿಯಂತೆ ಆಗುತ್ತಿದ್ದ. ಆಫೀಸಿನಲ್ಲಿ […]
ಪರಿಣಾಮ
ಲೇಖನ ಪರಿಣಾಮ ಡಾ. ಅರಕಲಗೂಡು ನೀಲಕಂಠ ಮೂರ್ತಿ ಮನುಷ್ಯ ಸಾಮಾನ್ಯವಾಗಿ ಯಾವುದೇ ಕೆಲಸ ಮಾಡಬೇಕಾದರೆ, ಅಥವ ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮೊದಲು, ಅದರ ಪರಿಣಾಮದ ಬಗ್ಗೆ ಖಂಡಿತ ಕೂಲಂಕುಷವಾಗಿ ಚಿಂತಿಸುತ್ತಾನೆ. ಆದರೆ ಎಂಥ ಸಂದರ್ಭಗಳಲ್ಲೂ ಸಹ ಕೆಲವರು, ಉಡಾಫೆ ಬದುಕಿನವರು, ಪ್ರಪ್ರಥಮವಾಗಿ ಆಳವನ್ನೂ ಅಂದಾಜಿಸದೆ, ನೇರ ಭಾವಿಗೇ ದಿಢೀರಂತ ಧುಮಿಕಿಬಿಡುತ್ತಾರೆ. ನಂತರ ಪರಿಣಾಮದತ್ತ ಗಮನ ಹರಿಸಿದ ಹಾಗೆ, ಕೈಕಾಲುಗಳನ್ನು ಆತುರಾತುರವಾಗಿ ಬಡಿಯತೊಡಗುತ್ತಾರೆ. ಆಗ ತುಂಬ ತಡವಾಗಿ ಪಶ್ಚಾತ್ತಾಪ ಪಟ್ಟು ಸಂಕಟದ ಕೆಸರೊಳಗೆ ಒದ್ದಾಡುತ್ತಾರೆ. ಬಹಳ ಒಳ್ಳೆಯ, ಆದರೆ […]
ನಾನು ದೀಪ ಹಚ್ಚಬೇಕೆಂದಿದ್ದೆ ಕವನಗಳು
ಪುಸ್ತಕ ಸಂಗಾತಿ ನಾನು ದೀಪ ಹಚ್ಚಬೇಕೆಂದಿದ್ದೆ ಕವನಗಳು ಈಗಾಗಲೇ ಆರು ಕೃತಿಗಳನ್ನು ಬರೆದಿರುವ ಅಕ್ಷತಾ ಕೃಷ್ಣಮೂರ್ತಿ ನಾಡಿಗೆ ಚಿರಪರಿಚಿತರು. ನಾನು ದೀಪ ಹಚ್ಚಬೇಕೆಂದಿದ್ದೆ ಇವರ ಏಳನೇ ಪುಸ್ತಕ. ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ ಪಡೆದ ಕೃತಿ ಇದು. ಅಂಕಣ, ವ್ಯಕ್ತಿಚಿತ್ರ, ವಿಮರ್ಶೆ, ಸಂಪಾದನೆ, ಕವಿತೆ ಹೀಗೆ ಅಕ್ಷತಾ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ೪೨ ಕವಿತೆಗಳ ಈ ಸಂಕಲನದಲ್ಲಿ ಮಕ್ಕಳ ಕವನಗಳು ಇವೆ. ನನ್ನ `ವಿಷಕನ್ಯೆ’ಯ `ಅವನು’ ಇಲ್ಲಿಯೂ ಪ್ರಧಾನವಾಗಿರುವುದು ನನಗೆ ಖುಷಿಯೆನಿಸಿತು. ಹರೆಯದ […]
ಮಣ್ಣು ,ಅನ್ನ ಮತ್ತು ಪ್ರಭು
ಕವಿತೆ ಮಣ್ಣು ,ಅನ್ನ ಮತ್ತು ಪ್ರಭು ಬಿ.ಶ್ರೀನಿವಾಸ ನೆಲಕೆ ಬಿದ್ದರೆ ಅನ್ನದಾತದಂಗೆಯೇಳುತ್ತದೆ ಅನ್ನ * ಮಕ್ಕಳ ಮುಂದೆ ಅಪ್ಪ ಅಳಬಾರದು ಅಪ್ಪನ ಮುಂದೆ ಮಕ್ಕಳು ಸಾಯಬಾರದು ಪ್ರಭುಗಳ ಮುಂದೆ ಪ್ರಜೆಗಳು ನರಳಬಾರದು ಸುಳ್ಳಾಯಿತುಲೋಕರೂಢಿಯ ಮಾತು. * ಮಣ್ಣಿನೆದೆಯ ಮೇಲೆಯೆ ಇದ್ದವು ಪಾದಗಳುನೆಲದ ಮೇಲಿರುವ ತನಕ ಅದೇ ಮಣ್ಣಿನ ಮೃದು ಪಾದಗಳುನೆಲದಡಿಗೆ ಸೇರಿದವನ ಎದೆಯ ಮೇಲೆ * ಮಣ್ಣಿಗೂಅಪ್ಪನಿಗೂ ಸಂಬಂಧ ಕೇಳುವಿರಿ ನೀವು ಇದೆಅಜ್ಜ-ಮೊಮ್ಮಗನ ಸಂಬಂಧ! * ಉಣ್ಣುವ ಅನ್ನದ ಕಣ್ಣುಎದುರಿಸಲಾಗದ ಕೊಲೆಗಾರ ಹೇಡಿಹೇಡಿಯೆಂದು ಕಿರುಚಾಡುತ್ತಾನೆ * ಕಳಚಿ […]
ತೀಡುವ ತಂಗಾಳಿಯಲ್ಲಿ ನಿನ್ನ ದನಿಯು ಕೇಳಿದೆ
ಕವಿತೆ ತೀಡುವ ತಂಗಾಳಿಯಲ್ಲಿ ನಿನ್ನ ದನಿಯು ಕೇಳಿದೆ ನಾಗರಾಜ್ ಹರಪನಹಳ್ಳಿ. ಆಗೋ ನೋಡುಈ ಉರಿಬಿಸಿಲಲ್ಲಿ ಸಮುದ್ರ ನಿದ್ದೆ ಹೋಗಿದೆ ||ತೀಡುವ ತಂಗಾಳಿಯಲ್ಲಿ ನಿನ್ನ ದನಿಯು ಕೇಳಿದೆ|| ತಂಗಾಳಿ ನಿನ್ನ ಪ್ರೀತಿಯ ಮಿಂದು ಬಂದಿದೆ ||ಈ ಕಾರಣಮರಗಿಡಗಳು ಹೂ ಬಟ್ಟೆ ತೊಟ್ಟಿದೆ ||ಮೈತುಂಬಿದ ಮಾವುಬಯಲಲಿ ನಿಂತು ನಕ್ಕಿದೆ || ನೀನಲ್ಲಿ ಕೈ ತುಂಬಾ ಬಳೆ ತೊಟ್ಟು ||ತೆಳು ನೀಲಿ ಮಿಶ್ರಿತ ಹಳದಿ ಬಣ್ಣದ ರೇಶಿಮೆ ಸೀರೆಯುಟ್ಟು ||ಹೊಸದಾಗಿ ತಂದ ಬಂಗಾರದ ಓಲೆ ತೊಟ್ಟು ||ನಿನ್ನ ನೀನೇ ಕನ್ನಡಿಯಲ್ಲಿ ದೃಷ್ಟಿ […]
ದಾರಾವಾಹಿ- ಅದ್ಯಾಯ-12 ತನ್ನ ಕುತಂತ್ರಕ್ಕೆ ಬಲಿಯಾಗಿ ಬೀದಿ ಬಿಕಾರಿಯಾದ ಸಂತಾನಪ್ಪ, ಇಂದಲ್ಲ ನಾಳೆ ರಾತ್ರೋರಾತ್ರಿ ಊರು ಬಿಟ್ಟೇ ಓಡಿ ಹೋಗುತ್ತಾನೆ ಅಥವಾ ಮುಂಚಿನಂತೆಯೇ ಬಾಲ ಮುದುರಿ ಕೂಲಿನಾಲಿ ಮಾಡಿಕೊಂಡು ಬದುಕುತ್ತಾನೆ ಎಂದು ಭಾವಿಸಿದ್ದ ಶಂಕರನ ಯೋಚನೆಯು ಪರಮೇಶನ ಬಿಸಿಬಿಸಿ ಸುದ್ದಿಯಿಂದ ಪೂರ್ತಿ ತಲೆಕೆಳಗಾಗಿಬಿಟ್ಟಿತು. ಬಯಲುಸೀಮೆಯ ಒಣಹವೆಯನ್ನೂ ಖಡಕ್ ಜೋಳದ ರೊಟ್ಟಿಯೊಂದಿಗೆ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಯಂಥ ವ್ಯಂಜನವನ್ನು ಜಜ್ಜಿ ಜಗಿದುಣ್ಣುತ್ತ ಒರಟು ಮಂದಿಯ ನಡುವೆ ಹುಟ್ಟಿ ಬೆಳೆದ, ಆರಡಿ ಎತ್ತರದ ಆಜಾನುಬಾಹು ಸಂತಾನಪ್ಪ ಬಡತನದ ಬೇಗೆಯಿಂದ ಮುಗ್ಧ […]
ಬದರ್
ಪುಸ್ತಕ ಸಂಗಾತಿ ಬದರ್ (ಅಬಾಬಿಗಳ ಸಂಕಲನ) ಮೂಲ ಲೇಖಕರ ಪರಿಚಯ ಇವರ ಪೂರ್ಣ ಹೆಸರು ಷೇಕ್ ಕರೀಮುಲ್ಲಾ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ವಿನುಕೊಂಡ ಪಟ್ಟಣದಲ್ಲಿ ಜೂನ್ 01, 1964ರಲ್ಲಿ ಜನಿಸಿದರು. ವೃತ್ತಿಯಿಂದ ಶಿಕ್ಷಕರಾಗಿದ್ದಾರೆ. ಕಾವ್ಯವೇ ಇವರ ಅಚ್ಚುಮೆಚ್ಚಿನ ಸಾಹಿತ್ಯ ಪ್ರಕಾರ. 2006ನೇ ಇಸವಿಯಲ್ಲಿ ಮುಸ್ಲಿಂ ಬರಹಗಾರರ ಸಂಘವನ್ನು ಸ್ಥಾಪಿಸಿ ವ್ಯವಸ್ಥಾಪಕರಾಗಿ ಮುಸ್ಲಿಂ ಸಾಹಿತಿಗಳನ್ನು ಒಂದೇ ವೇದಿಕೆಗೆ ಕರೆದುತರುವ ಮಹತ್ವವಾದ ಕಾರ್ಯಕ್ಕೆ ನಾಂದಿ ಹಾಡಿದರು. ಪ್ರಗತಿಪರ ಮುಸ್ಲಿಂ ಬರಹಗಾರರಾಗಿ ಇವರು ಜನಮಾನಸವನ್ನು ಸೂರೆಗೊಂಡಿದ್ದಾರೆ. ಕೆಳ ಮತ್ತು ಮಧ್ಯಮ ವರ್ಗದ […]
ಆತ್ಮ ಚೈತನ್ಯ
ಕವಿತೆ ಆತ್ಮ ಚೈತನ್ಯ ವಸುಂಧರಾ ಕದಲೂರು ಹೌದು,ಸದಾ ಚೈತನ್ಯಶೀಲರಾಗಿರುವನಾವು ಆಗಾಗ್ಗೆ ಮಂಕಾಗುತ್ತೇವೆ. ಚೈತನ್ಯವು ಬೇರುಬಿಟ್ಟ ಆಲದಮರದ ಬಿಳಲುಗಳೇನಲ್ಲ! ಆಗಸದ ವಿಸ್ತಾರದ ಕ್ಯಾನ್ವಸ್ಸಿನಹಿನ್ನೆಲೆಯಲಿ ರಂಗು ರಂಗಿನೋಕುಳಿಆಡುವ ಚಿತ್ತಾರದ ಮೇಘಮಾಲೆ;ಕ್ಷಣ ಕ್ಷಣವೂ ಬದಲಾಗುವಗಡಿಯಾರದ ಮುಳ್ಳಿನ ಚಲನೆ; ಹಕ್ಕಿ ಗೂಡೊಳಗಿನ ಜೀವಂತಿಕೆಯಕಾವಿಗೆ ಕಾದು ಕೂತ ಪುಟ್ಟ ಮೊಟ್ಟೆ.ರೆಕ್ಕೆ ಬಲಿತ ಮೇಲೆ ಗಗನ ಗಾಮಿ. ಚೈತನ್ಯವು ನಿತ್ಯ ನೂತನವೂ ನಿರಂತರತಾರುಣ್ಯಪೂರ್ಣವೂ ಆಗಿರಲುಸಾಧ್ಯವಿಲ್ಲ. ಸತ್ಯದ ಒಳ ಹೂರಣದಮೇಲೆ ಹುಸಿ ಸುಳ್ಳಿನ ಹೊರಕವಚ. ಚೈತನ್ಯದ ವಾಸ್ತವತೆ ಸಾವಿನಂತೆ.ಮರುಹುಟ್ಟಿನ ನಿರೀಕ್ಷಣೆಯಲ್ಲಿಅಲೆವ ಆತ್ಮಜ್ಯೋತಿ! ಜನ್ಮಾಂತರಗರ್ಭದೊಳಗಿನ ಭ್ರೂಣ ಪ್ರಣತಿ! ******************************************