ಗಜಲ್
ರೇಮಾಸಂ


ಹಳೆಯ ಹೊಸತುಗಳ ಜಗಳದಲಿ ಬೆಸೆದಿರಲಿ ಸಮರಸ/
ಬೆರೆತು ಅರಿತ ಬಾಳುವೆಯಲಿ ಜಿನುಗುತಿರಲಿ ಮಧುರಸ//
ಹಮ್ಮು ಬಿಮ್ಮಿನ ಜಗ್ಗಾಟದಲಿ ನುಗ್ಗಾಗದಿರಲಿ ಜೀವನ/
ಪ್ರೀತಿಯು ಸವೆಯಲು ಬಿಡದೆ ಚಿಮ್ಮುತಿರಲಿ ಪ್ರೇಮರಸ//
ಹೂಡಿಕೆಯಾಗಲಿ ಅನುರಾಗದ ರಿಂಗಣವು ಅನುದಿನವು/
ನೋವುಗಳು ಬೇವು ಬೆಲ್ಲದಂತೆ ಸುರಿಯುತಿರಲಿ ನವರಸ//
ವಿರಸವು ತರುವ ಮಾತಿಗೆಲ್ಲ ವಿರಾಮದ ಚಿಹ್ನೆ ಇಡುತಿರಲಿ/
ಸರಸ-ಸಲ್ಲಾಪದ ಪದಗಳು ಪುಟಿದು ಚೆಲ್ಲುತಿರಲಿ ಗಾನರಸ//
ತಾಯಿಯ ಸೆರಗು ಹೊದಿಕೆಯಂತಿರಲಿ ಪ್ರೇಮದ ಚಪ್ಪರವು/
ಗಂಧದಂತೆ ಜೀವಗಳು ಪಸರಿಸುತ ತೇಯುತಿರಲಿ ದ್ರವ್ಯರಸ/
***************************