ತೀಡುವ ತಂಗಾಳಿಯಲ್ಲಿ ನಿನ್ನ ದನಿಯು ಕೇಳಿದೆ

ಕವಿತೆ

ತೀಡುವ ತಂಗಾಳಿಯಲ್ಲಿ ನಿನ್ನ ದನಿಯು ಕೇಳಿದೆ

ನಾಗರಾಜ್ ಹರಪನಹಳ್ಳಿ.

Woman wearing colourful bangles on the street in India

ಆಗೋ ನೋಡು
ಈ ಉರಿಬಿಸಿಲಲ್ಲಿ ಸಮುದ್ರ ನಿದ್ದೆ ಹೋಗಿದೆ ||
ತೀಡುವ ತಂಗಾಳಿಯಲ್ಲಿ ನಿನ್ನ ದನಿಯು ಕೇಳಿದೆ||

ತಂಗಾಳಿ ನಿನ್ನ ಪ್ರೀತಿಯ ಮಿಂದು ಬಂದಿದೆ ||
ಈ ಕಾರಣ
ಮರಗಿಡಗಳು ಹೂ ಬಟ್ಟೆ ತೊಟ್ಟಿದೆ ||
ಮೈತುಂಬಿದ ಮಾವು
ಬಯಲಲಿ ನಿಂತು ನಕ್ಕಿದೆ ||

ನೀನಲ್ಲಿ ಕೈ ತುಂಬಾ ಬಳೆ ತೊಟ್ಟು ||
ತೆಳು ನೀಲಿ ಮಿಶ್ರಿತ ಹಳದಿ ಬಣ್ಣದ ರೇಶಿಮೆ‌ ಸೀರೆಯುಟ್ಟು ||
ಹೊಸದಾಗಿ ತಂದ ಬಂಗಾರದ ಓಲೆ ತೊಟ್ಟು ||
ನಿನ್ನ ನೀನೇ ಕನ್ನಡಿಯಲ್ಲಿ ದೃಷ್ಟಿ ನೆಟ್ಟು ||
ಹಣೆಗಿದೆ ‌ನೋಡು ನನ್ನದೇ ಕುಂಕುಮ ಬೊಟ್ಟು ||

ಮಗಳ ಮದುವೆಯ ಸಂತಸವ ತೊಟ್ಟು ||
ದೂರದೂರಲಿ ನಾ ನಿನ್ನ ಸಂಭ್ರಮವ ಎದೆಯಲಿಟ್ಟು ||

ಶಬ್ದಮಿಂದ ಹಕ್ಕಿ ಹಾಡು ಪ್ರೇಮವ ಹೊತ್ತು ಭೂಮಿ‌ ಸುತ್ತ ತಿರುಗಿದೆ ||
ನದಿಯೊಳಗಿನ ಮೀನು ಗಗನದಿ ಹಕ್ಕಿಯ ಕಂಡು ನಲಿದಿದೆ ||

ಹಾಡು ಹಬ್ಬ ಪ್ರೇಮ ಪ್ರೀತಿ
ಇಡಿ ಜಗವ ತುಂಬಲಿ ||
ನನ್ನ ನಿನ್ನ ಭೇಟಿಗಾಗಿ ಇಡೀ ಪ್ರಕೃತಿ ಎದೆತುಂಬಿ ಹರಸಲಿ ||

**********************************************

Leave a Reply

Back To Top