ಲೇಖನಿ
ಕಾವ್ಯ ಸಂಗಾತಿ ಲೇಖನಿ ಅನಿತಾ ಸಿಕ್ಕಿತೊಂದು ಜಾದೂ ಲೇಖನಿಹಣೆಬರಹ ಅಳಿಸಿ, ಮತ್ತೊಮ್ಮೆ ಬರೆಯಬಹುದಿತ್ತು, ಆ ವಿಧಾತನ ದನಿ ಅಳುಬರಹ ಒರೆಸಿನೋವು, ನಲಿವಾಗಿಸಿ ಬದುಕುಬದಲಾಯಿಸಬೇಕೆಂದಿತುಆಕಾಂಕ್ಷೆಯ ತಾಸು! ಸಿರಿವಂತಿಕೆ, ಬಡತನದ್ವೇಷ, ಪ್ರೀತಿ, ಮೇಲು ಕೀಳುಕಣ್ಮುಂದೆ ಹಾದುಹೋಗುತ್ತಿತ್ತುಅಂತರಾಳದ ಕನಸು! ರವಿವರ್ಮನ ಕುಂಚದ ಬಣ್ಣತುಂಬಿ, ನವಿರಾದ ಎಳೆಗಳಿಗೆರಂಗುರಂಗಿನ ಹೊಸತನಮೂಡಿಸುವ ಹುಮ್ಮಸ್ಸು! ಅವೇನು ಕಠಿಣ ಕಾರ್ಯವಾಗಲಿಲ್ಲಜೀವ, ಜೀವಂತಿಕೆಯ ಒಳಗೆಮಾರ್ಪಾಟಾಗಿತ್ತು ಹಲವು ಮಜಲು! …. ಆಯಸ್ಸು ಮೆಟ್ಟಿಲೊಳಗೆ ಇಳಿಯಲಾಗದೆಸಾವಿನ ಕ್ಷಣ ಮುಂದೂಡಲಾಗದೆ…
ಗಜಲ್
ಕಚ್ಚುವ ಕೆರವುಗಳು ದಾರಿಯನು ತಪ್ಪಿಸುತಿದೆ/
ಮೆಚ್ಚುವ ನಡತೆಯು ಕನಸಂತೆ ಮುಗಿಯುತಿದೆ//
ಗ್ಲೋಬಲ್ ವಿಲೇಜ್
ಜಗತ್ತೇ ಒಂದು ವಿಲೇಜ್ ಆಗಿ
ಮಿಥ್ಯ ಸತ್ಯ…
ನಾನು ನೀನಿನ ಎರಡು ತಂತಿಗಳು ಪಸರಿಸಿ
ಹರಿದು ಮೀಟಿ ಪದೇಪದೇ ಜೋಡಿಸಿ
ಸಾವಿರಾರು ತಂತಿಗಳ ನಾದ ಭಾವ ಕಲರವ
ನಾನು ನೀನು ಮಿಥ್ಯ ನಾವು ನಮ್ಮ ಭಾವ
ಅಭಿನಂದನೆಗಳು
ಅಭಿನಂದನೆಗಳು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ದೇವಿಕೊಪ್ಪ ಸರ್ಕಾರಿ ಪ್ರೌಢಶಾಲೆ ಯಲ್ಲಿ ಹಿಂದಿ ಭಾಷಾ ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸುತ್ತಿರುವ ನಿರ್ಮಲಾ ಶೆಟ್ಟರ ನಮ್ಮ ಸಂಗಾತಿ ಪತ್ರಿಕೆಯ ಬರಹಗಾರರೂ ಆಗಿದ್ದಾರೆ.ಅವರ 2020 ರಲ್ಲಿ ಪ್ರಕಟವಾದ ಸರಹದ್ದುಗಳಿಲ್ಲದ ಭೂಮಿಯ ಕನಸು ಕೃತಿಗೆ ಈ ಮೊದಲೇ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ಮುದ್ದಣ ರತ್ನಾಕರವರ್ಣಿ ಅನಾಮಿಕ ದತ್ತಿ ಬಹುಮಾನ ಸಂದಿರುತ್ತದೆ. ಈಗ ಸೇಡಂನಿಂದ ಕೊಡಮಾಡುವ ಅಮ್ಮ ಪ್ರಶಸ್ತಿಯು ಲಭಿಸಿದ್ದು, ಇದೇ ತಿಂಗಳು 26ನೇ ದಿನಾಂಕ ದಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.ಈ […]
ಅನುವಾದಿತ ಅಬಾಬಿಗಳು
ಅನುವಾದ ಸಂಗಾತಿ ಅನುವಾದಿತ ಅಬಾಬಿಗಳು ಆಕರ : ಕಾಲಂ ಸಾಕ್ಷಿಗಾ(ತೆಲುಗು ಅಬಾಬಿಗಳ ಸಂಕಲನ) ಮೂಲ ಲೇಖಕರು : ಷೇಕ್ ಅಬ್ದುಲ್ ಹಕೀಮ್ಕನ್ನಡಾನುವಾದ : ಧನಪಾಲ ನಾಗರಾಜಪ್ಪ ೧೦)ಭಯದಿಂದ ಬದುಕುಗಳು ವಿಲಪಿಸುತ್ತಿವೆಹೊತ್ತು ಕಳೆಯದೆ ಹೊರಳಾಡುತ್ತಿವೆಬಲಿಯಾಗಿತ್ತಿರುವ ಮಾನವ ಜೀವನಗಳುಹಕೀಮಾಸಂತೆಯಲ್ಲಿ ಪ್ರಾಣಿಗಳಂತೆ ಮಾರಾಟವಾಗುತ್ತಿವೆ. ೧೧)ಬಲಹೀನರ ಶೋಷಣೆಗಳುಕುಲಮತಗಳ ದೌರ್ಜನ್ಯಗಳುಮನುಷ್ಯರ ಮಧ್ಯೆ ಕಂದಕಗಳುಹಕೀಮಾದೇಶದಲ್ಲಿ ರಾಜಕೀಯಕ್ಕಿದೇನಾ ಬಂಡವಾಳ? ೧೨)ಒಬ್ಬೊಬ್ಬರದು ಒಂದೊಂದು ವ್ಯಾಪಾರಒಬ್ಬನದೇನೋ ಮತದ ಆಧಿಪತ್ಯಇನ್ನೊಬ್ಬನದೇನೋ ಮತನೋನ್ಮಾದಹಕೀಮಾಎಲ್ಲವೂ ವ್ಯಾಪಾರ ಲೇವಾದೇವಿಗಳೇ ಅಲ್ಲವೆ! *******************************
ಮತ್ತೆ ಮಳೆ….!
ಮತ್ತೊಂದು ನಿರಾಳ ಮೌನ
ಇಬ್ಬರೆದೆಯನು ಸವರಿತು
ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—49 ಯಕ್ಷಗಾನ-ನಾಟಕ ರಂಗಭೂಮಿಯಲ್ಲಿ. ನನ್ನ ಕಾಲೇಜು ಅಧ್ಯಾಪಕರ ವೃತ್ತಿಯೊಡನೆ ನಾನು ಪ್ರೀತಿಯಿಂದ ಎದೆಗೆ ಹಚ್ಚಿಕೊಂಡ ಯಕ್ಷಗಾನ ಮತ್ತು ನಾಟಕ ರಂಗಭೂಮಿಯ ಹವ್ಯಾಸಗಳು ನನ್ನ ವ್ಯಕ್ತಿತ್ವದ ಇನ್ನೊಂದು ಮುಖದ ಬೆಳವಣಿಗೆಗೆ ಕಾರಣವಾದವು. ಈ ನಂಟಿನಿಂದಲೇ ಕಾಲೇಜು ಕ್ಯಾಂಪಸ್ಸಿನ ಆಚೆಯೂ ನನಗೊಂದು ಜನಪ್ರಿಯ ವಲಯ ಸೃಷ್ಟಿಯಾಯಿತು. ಹಾಗೆಂದು ನಾನು ಕ್ರಮಿಸಿದ ಯಕ್ಷಗಾನ ಮತ್ತು ರಂಗಭೂಮಿಯ ದಾರಿ ಕೇವಲ ಸುಗಂಧಯುಕ್ತ ಹೂವಿನ ಹಾಸಿಗೆಯಷ್ಟೇ ಆಗಿರಲಿಲ್ಲ. ಅಲ್ಲಿ ಶ್ಲಾಘನೆಯ ಪರಿಮಳದೊಡನೆ ವಿಮರ್ಶೆಯ ಟೀಕೆ ಟಿಪ್ಪಣಿಗಳ ಕಲ್ಲು […]
ಗಜಲ್
ಗಜಲ್ ನಯನ. ಜಿ. ಎಸ್ ನಗುತಿಹ ಕಂಗಳ ಹಿಂದಿಹುದು ಕಡು ನೋವುಗಳು ಬಲ್ಲವರು ಯಾರುಅರಳು ತುಟಿಗಳೊಡಲಿನ ನೊಂದ ಮಾತುಗಳ ಆಲಿಸುವವರು ಯಾರು ! ನಕ್ಕಾಗ ನಗುತ , ನೊಂದಾಗ ಮೌನದಿ ಅತ್ತು ದಣಿಯುತ್ತಿದೆ ಮನಸ್ಸುಮನವ ಹಿಂಡುತಿದೆ ವ್ಯಂಗ್ಯಗಳ ಹಿಂಸೆ ಇದ ಅಳೆಯುವವರು ಯಾರು ! ನಿಶೆಯ ನಶೆಗೂ ಮರೀಚಿಕೆ ಆದಂತಿದೆ ಸುಖ ಸ್ವಪ್ನಗಳ ಸಿಹಿಯಾದ ನಶೆನೀರವ ಕ್ಷಣಗಳನೂ ಭೀತಿಗೊಳಿಸುತಿದೆ ಅಳಲು ಅರಿಯುವವರು ಯಾರು ! ಆಶೆಗಳ ಕನಸು ಹುಸಿಯಾಗುತಿದೆ ಕಪಟಿಗರ ಕ್ರೌರ್ಯದಿ ನಲುಗಿ ಕೊರಗಿಮನದ ತುಮುಲಗಳು ತಾರಕಕ್ಕೇರಿದೆ […]
ಧಾರಾವಾಹಿ ಆವರ್ತನ ಅದ್ಯಾಯ-42 ಏಕನಾಥ ಗುರೂಜಿಯವರ ಪ್ರಖ್ಯಾತಿ ಬಹಳ ಬೇಗನೇ ತಮ್ಮೂರನ್ನು ದಾಟಿ ದೂರ ದೂರದ ಊರು, ನಗರಗಳಿಗೂ ಹಬ್ಬಿತು. ಹಾಗಾಗಿ ಮುಂದೆ ಈಶ್ವರಪುರದ ಸುತ್ತಮುತ್ತದ ಕೆಲವು ಜಿಲ್ಲೆಗಳ ಹಲವಾರು ಬೃಹತ್ ನಾಗಬನಗಳು ಇವರಿಂದಲೇ ಜೀರ್ಣೋದ್ಧಾರಗೊಳ್ಳಲು ಕ್ಷಣಗಣನೆಯಲ್ಲಿದ್ದವು. ಅವನ್ನೆಲ್ಲ ಆದಷ್ಟು ಬೇಗ ಮುಗಿಸಿಬಿಡಬೇಕೆಂಬ ಆತುರ ಅವರಲ್ಲಿತ್ತು. ಆದರೆ ತಮ್ಮ ಯಶಸ್ಸನ್ನು ಮೆಚ್ಚಿ ಆಗಾಗ ಹರಿದು ಬರುವ ಅಭಿನಂದನೆ ಮತ್ತು ಪ್ರಶಸ್ತಿ ಪುರಸ್ಕಾರಗಳಂಥ ಪ್ರತಿಷ್ಠಿತ ಸಮಾರಂಭಗಳು ಹಾಗೂ ಅವುಗಳ ನಡುವೆ ತಮ್ಮ ಜೀವನೋಪಾಯದ ಧಾರ್ಮಿಕ ಚಟುವಟಿಕೆಗಳೆಲ್ಲವೂ ಕೂಡಿ ಆ […]