ಒಂದು ಅನುವಾದಿತ ಕವನ

ದಾರಾವಾಹಿ ಆವರ್ತನ ಅದ್ಯಾಯ-29 ಅಂದು ಸುಮಿತ್ರಮ್ಮನ ಮನೆಯಲ್ಲಿ ನಾಗದೋಷ ನಿವಾರಣೆಯ ಅಂಗವಾಗಿ ನಡೆದ ಚರ್ಚಾಕೂಟದಲ್ಲಿ ಗೋಪಾಲ ದಂಪತಿಯ ಮೇಲಿನ ಹಗುರಭಾವನೆಯನ್ನು, ಅವರಿಂದ ಮುಂದೆ ಕೋಳಿಯ ಲಾಭವನ್ನು ಪಡೆಯಲಿದ್ದವರು ಮಾತ್ರವೇ ಬದಲಾಯಿಸಿಕೊಂಡರು. ಆದರೆ ವಠಾರದವರೆದುರು ಮುಖಭಂಗವಾಗುವಂತೆ ಮಾತಾಡಿದ ಅವರ ಮೇಲೆ ಸುಮಿತ್ರಮ್ಮ ಮಾತ್ರ ಒಳಗೊಳಗೇ ಕುದಿಯುತ್ತಿದ್ದರು. ಹಾಗಾಗಿ ಅವರು ತಮ್ಮ ಕೋಪವನ್ನು ತೀರಿಸಿಕೊಳ್ಳಲು ಬೇರೊಂದು ದಾರಿಯನ್ನು ಹಿಡಿದರು. ಮರುದಿನದಿಂದಲೇ ರಾಜೇಶನಂಥ ಆಪ್ತ ನೆರೆಕರೆಯ ಮನೆಗಳಿಗೆ ಹೋಗುತ್ತ ಅವರ ಅಂಗಳ ಮತ್ತು ಪಾಗಾರದ ಹೊರಗಡೆ ನಿಂತುಕೊಂಡು ಒಂದಿಷ್ಟು ಸುಖಕಷ್ಟ ಮಾತಾಡುತ್ತ […]

ಸ್ಮಿತಾ ಭಟ್ ಅವರ ಕವಿತೆಗಳು

ಸ್ಮಿತಾ ಭಟ್ ಅವರ ಕವಿತೆಗಳು ನಾನು ಒಂಟಿಯಾಗುತ್ತೇನೆ ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆಸುತ್ತುಗಟ್ಟಿದ ನೋವುಗಳ ನಡುವೆದೂರದಲ್ಲೇ ಉಳಿದ ನಗುವಿನೊಂದಿಗೆ ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆಮಾತು ಬಿಕ್ಕಿ,ಮೌನ ಉಕ್ಕಿಯಾವ ಕಿವಿಗಳೊಳಗೂ ಹೊಕ್ಕದ ನಿಟ್ಟುಸಿರಿನೊಂದಿಗೆ. ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆ,ನನ್ನದೇ ಭಾವಗಳೊಳಗೆ ಯಾರೋ ಪ್ರತಿಭಟಿಸಿಸೆಟೆದು ನಿಲ್ಲುವ ಬಿರುಸಿನ ಮಾತುಗಳೊಂದಿಗೆ. ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆಹೆಣೆದ ದಾರದ ಮಧ್ಯ-ಸಿಲಕಿದ ಕೀಟದ ಅಮಾಯಕತೆಯೊಂದಿಗೆ. ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆ,ಬರುವ ಕಿರಣಗಳ ತಡೆದುಕದವಿಕ್ಕಿದ ಕೋಣೆಯ ನೀರವತೆಯೊಂದಿಗೆ. ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆಸಮಾಧಿ ಮೇಲೆ ಇಟ್ಟ ಹೂಗಾಳಿಗೆ ಮೈ ಒಡ್ಡಿ ಇಷ್ಟಿಟ್ಟೇ ಸರಿದುಬೆರ್ಪಟ್ಟುಖಾಲಿ ಖಾಲಿ […]

ನಾನು-ನೀನು

ಕಾವ್ಯಯಾನ ನಾನು-ನೀನು ಅನಿತಾ ಕೃಷ್ಣಮೂರ್ತಿ ಸುಡುವ ಬೆಂಕಿಯ ಮೇಲಿರುವಬಾಣಲಿಯಲಿ ಪಟಪಟನೆಮೇಲೇರುವ ಅರಳಿನಂತೆಮಾತನಾಡುವ ನಾನು…ನಿನ್ನೆದುರಿಗೆ ಮಾತುಬಾರದ ಮೂಕಿ! ಕಾಡುವ ತಂಗಾಳಿಗೆ, ಮುಂಗುರುಳುಪ್ರತಿಭಟಿಸದೆ ಅತ್ತಿಂದಿತ್ತಸರಿದಾಡಿ, ಭಾವ ತನ್ಮಯಗೊಳಿಸುವ ನಾನು..ನಿನ್ನೆದುರಿಗೆ ಬೆದರಿ, ನಾಚಿ..ಕಣ್ಮುಚ್ಚುವ ಕುರುಡಿ! ಹುಣ್ಣಿಮೆಯ ಚಂದಿರನಿಗಾಗಿಹಾರಿ, ಹಾರಿ ಧುಮ್ಮಿಕ್ಕುವ ಅಲೆಯಂತೆ,ಚಂಗನೆ, ಸರಸರನೆ ಜಿಗಿಯುವ ನಾನು..ನಿನ್ನೆದುರಿಗೆ ಕಪ್ಪೆಚಿಪ್ಪಲಿ ಮುದುರಿ ಕುಳಿತ ಮುತ್ತು **********************

ರೇಖಾ ಭಟ್ ಅವರ ಕವಿತೆಗಳು

ಅವರೀಗ ಮತ್ತೆ ಕತ್ತಲು
ಹಾದಿಯಲ್ಲಿ ಸಾಗುತ್ತಿದ್ದಾರೆ
ಮತ್ತಷ್ಟು ಬೆಳಕಿನ ಬಿಲ್ಲೆಗಳ ಆಯಲೆಂದು

ಪೂರ್ಣಚಂದ್ರ ತೇಜಸ್ವಿ ಅವರು ‘ಮರವೆನ್ನುವ ಕಾರ್ಖಾನೆ’ ಎಂಬ ಬರಹದಲ್ಲಿ “ಮರಗಳು ತಮ್ಮ ಜಟಿಲವಾದ ಬೇರಿನ ಜಾಲದಿಂದ ನೂರಾರು ಅಡಿ ಎತ್ತರಕ್ಕೆ ನೆಲದಿಂದ ನೀರನ್ನೆತ್ತುತ್ತವೆ. ಒಂದು ಸಾಧಾರಣ ಮರ ಎಲೆಗಳ ಮುಖಾಂತರ ಜೈವಿಕ ಕ್ರಿಯೆಯಲ್ಲಿ ಆವಿಯಾಗಿ ಬಿಡುಗಡೆ ಮಾಡುವ ನೀರಿನ ಪ್ರಮಾಣ ದಿನಕ್ಕೆ ಐವತ್ತು ಲೀಟರ್! ಈ ಕ್ರಿಯೆಯಲ್ಲಿ ಒಂದು ಮರ ತಿಂಗಳಿಗೆ ಸರಾಸರಿ ಹದಿನಾಲ್ಕು ಟನ್ ನೀರನ್ನು ನೆಲದಾಳದಿಂದ ಮೇಲಕ್ಕೆತ್ತಿ ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ”

ಕೆಲವೇ ದಿನಗಳಲ್ಲಿ ಒಂದು ದಿನ “ನಾಗಮ್ಮತ್ತೆ ರಾತ್ರಿ ಮಲಗಿದವಳು ಮುಂಜಾನೆ ನಾಪತ್ತೆಯಾಗಿದ್ದಾಳೆ” ಎಂಬ ಆತಂಕದ ಸುದ್ದಿ ತಂದರು. ಅಪ್ಪ ನಮ್ಮ ದಾಯಾದಿ ಇಬ್ಬರು ಚಿಕ್ಕಪ್ಪಂದಿರೊಂದಿಗೆ ಹಿಲ್ಲೂರಿಗೆ ಹೋದರು. ಅಲ್ಲಿ ಮತ್ತೆರಡು ದಿನಗಳವರೆಗೆ ಬೆಟ್ಟ, ಗುಡ್ಡ, ನದಿ, ಕೆರೆ, ಬಾವಿ ಇತ್ಯಾದಿ ಎಲ್ಲ ಕಡೆಗಳಲ್ಲಿಯೂ ಹುಡುಕಾಟ ಮಾಡಿದ್ದಾರೆ. ಆಗಲೂ ಮಂತ್ರವಾದಿಗಳು “ಅವಳು ಬದುಕಿದ್ದಾಳೆ… ಉತ್ತರ ದಿಕ್ಕಿನಲ್ಲಿ ಇದ್ದಾಳೆ…” ಇತ್ಯಾದಿ ಭವಿಷ್ಯ ನುಡಿದು ಹುಡುಕಾಟದ ತಂಡವನ್ನು ಅಲೆದಾಡಿಸಿ ನೋಡಿದರಲ್ಲದೆ ಅತ್ತೆಯು ಎಲ್ಲಿಯೂ ಕಾಣಸಿಗಲಿಲ್ಲ.

Back To Top