ಕಾವ್ಯಯಾನ
ನಾನು-ನೀನು
ಅನಿತಾ ಕೃಷ್ಣಮೂರ್ತಿ
ಸುಡುವ ಬೆಂಕಿಯ ಮೇಲಿರುವ
ಬಾಣಲಿಯಲಿ ಪಟಪಟನೆ
ಮೇಲೇರುವ ಅರಳಿನಂತೆ
ಮಾತನಾಡುವ ನಾನು…
ನಿನ್ನೆದುರಿಗೆ ಮಾತುಬಾರದ ಮೂಕಿ!
ಕಾಡುವ ತಂಗಾಳಿಗೆ, ಮುಂಗುರುಳು
ಪ್ರತಿಭಟಿಸದೆ ಅತ್ತಿಂದಿತ್ತ
ಸರಿದಾಡಿ, ಭಾವ ತನ್ಮಯಗೊಳಿಸುವ ನಾನು..
ನಿನ್ನೆದುರಿಗೆ ಬೆದರಿ, ನಾಚಿ..
ಕಣ್ಮುಚ್ಚುವ ಕುರುಡಿ!
ಹುಣ್ಣಿಮೆಯ ಚಂದಿರನಿಗಾಗಿ
ಹಾರಿ, ಹಾರಿ ಧುಮ್ಮಿಕ್ಕುವ ಅಲೆಯಂತೆ,
ಚಂಗನೆ, ಸರಸರನೆ ಜಿಗಿಯುವ ನಾನು..
ನಿನ್ನೆದುರಿಗೆ ಕಪ್ಪೆಚಿಪ್ಪಲಿ ಮುದುರಿ ಕುಳಿತ ಮುತ್ತು
**********************