ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ನಿಲ್ಲದಿರುವವರಿಗೆ

ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ

Black White artwork - large abstract painting art for sale

ಪ್ರಶ್ನಿಸುವಿರಾ…ಕೇಳಿರಿ
ತೂಕವ….!
ಇರುವಿಕೆ ಅಳೆದು,
ಭಾರ ಹಗುರಾಗಲಿ

ಹೋಗುವಿರಾ…ಹೋಗಿ
ನಿಮ್ಮ ಅನುಕೂಲ
ನೋಡಿಕೊಳ್ಳಿ ಜಾಗ
ಸಾಲವನ್ನೆಲ್ಲ ನಮ್ಮದೆಗಿಳಿಸಿ

ಓಡುವಿರಾ…ಓಡಿರಿ
ಒಡಲೊಳಗೆ
ಹದ ಮೂಡಿ
ಬಿಡುಗಡೆಯಾಗಿರಿ

ಕಾಡುವಿರಾ..ಕಾಡಿರಿ
ಸಂಕೋಚ ಚಿವುಟಿ,
ಮಡುಗಟ್ಟಲಿ ಮೌನ
ಮೂಕ ರಾಗದಲಿ

ಇರುವಿರಾ…ಇರಿ
ಹೆತ್ತವರಿಗೆ ನೆರಳಾಗಿ
ಪದೇ…ಪದೇ…
ಕಲ್ಲಾಗಿ

ಜೊತೆಗಿದ್ದರೆ ನೀವು
ತೊಟ್ಟಿಲು ಕಟ್ಟಿ,
ಜೋಗುಳ ಹಾಡುತ್ತೇವೆ
ಕಣ್ಣಲ್ಲಿ ಕಣ್ಣ ನೆಟ್ಟು-
ಕನಸುಳಿಸುತ್ತೇವೆ.

******************

About The Author

Leave a Reply

You cannot copy content of this page

Scroll to Top