ಗಜಲ್‌

ಗಜಲ್‌

ಗಜಲ್ ರತ್ನರಾಯಮಲ್ಲ ಮಕ್ಕಳಾಡುವ ಅದಲು-ಬದಲು ದೊಡ್ಡವರು ಆಡುತಿದ್ದಾರೆ ಇಂದುದಡ್ಡತನದಿಂದ ಸಮಾಜದ ನೆಮ್ಮದಿಗೆ ವಿಷ ಹಾಕುತಿದ್ದಾರೆ ಇಂದು ತಲೆ ಹಿಡಿಯುವವರ ದಂಡು ಕೌರವರನ್ನೂ ಮೀರಿಸುತ್ತಿದೆ ಇಂದುಸಾಕ್ಷರರೆ ಮೌಲ್ಯಗಳನು ರಣಹದ್ದುಗಳಂತೆ ತಿನ್ನುತಿದ್ದಾರೆ ಇಂದು ಶೀಲವು ಹಣದ ನಶೆಯಲ್ಲಿ ಶಿಥಿಲವಾಗುತಿರುವುದೆ ಹೆಚ್ಚು ಇಂದುವಾಸನೆಯಲ್ಲಿ ಪರಿಚಿತರೆ ಅಪರಿಚಿತರಾಗಿ ಕೊಲ್ಲುತಿದ್ದಾರೆ ಇಂದು ಮಾಂಸ ಮಾರುವ ಸಂತೆಯಲ್ಲಿ ಮನಸ್ಸು ಅನಾಥವಾಗಿ ನರಳುತಿದೆನಮ್ಮವರೇ ನಮ್ಮ ಮಾನ ಹರಾಜು ಮಾಡಲು ಕಾಯುತಿದ್ದಾರೆ ಇಂದು ಕಲಬೆರಕೆಯ ತಾಂಡವ ಪ್ರೀತಿಯಲ್ಲಿ ಸಹಿಸಲು ಆಗುತಿಲ್ಲ ‘ಮಲ್ಲಿ’ಯಾರನ್ನೂ ದೂರಲಾಗದೆ ಜನರು ದಿನಾಲೂ ಸಾಯುತಿದ್ದಾರೆ ಇಂದು […]

ರಿಂಗಣ

ಕವಿತೆ ರಿಂಗಣ ನೀ. ಶ್ರೀಶೈಲ ಹುಲ್ಲೂರು ವಿರಮಿಸದ ಮನವೆ ನೀನುರಮಿಸಬೇಡ ಹೀಗೆ ನನ್ನಕೆನ್ನೆ ತಟ್ಟಿ ತುಟಿಯ ಮುಟ್ಟಿಹೇಳಬೇಡ ‘ನೀನೆ ಚೆನ್ನ’ ಏಕೆ ಹೀಗೆ ಲಲ್ಲೆಗರೆವೆ ?ಮೆಲು ದನಿಯಲಿ ನನ್ನ ಕರೆವೆನಿನ್ನ ಬಳಿಗೆ ಬರುವೆ ನಾನುಒಲವ ತೋರಿ ನನ್ನೆ ಮರೆವೆ ಬಾನ ದಾರಿಗುಂಟ ನಡೆವೆನಿನ್ನ ತೋಳ ಮೇಳದಲ್ಲಿಚಂದ್ರ ತಾರೆ ಹಿಡಿದು ತರುವೆಕಣ್ಣ ಬಿಂಬದಾಳದಲ್ಲಿ ನಭಕು ನೆಲಕು ಸೆರಗ ಹಾಸಿಚುಕ್ಕಿ ಚಿತ್ರ ಬರೆವೆ ನಾನುನನ್ನ ಅಂದ ಕಂಡು ಹಿಗ್ಗಿಹೊತ್ತು ಒಯ್ವೆ ನನ್ನ ನೀನು ಹೀಗೆ ಇರಲಿ ನಮ್ಮ ಒಲವುಸುರಿಸುತಿರಲಿ ಜೇನು […]

ಅಂಕಣ ಬರಹ ಎಡವಿದವನಿಗೂ ಸಣ್ಣ ಸಹಾನುಭೂತಿ ಸಿಗಲಿ ಬಹುಶಃ ನಾನವಾಗ ನಾಲ್ಕನೆಯ ತರಗತಿಯಲ್ಲಿದ್ದೆ. ಅಂದು ಭಾನುವಾರ. ಅವತ್ತು ನಾವೆಲ್ಲ ಹೀಗೇ ಆಟ ಆಡುತ್ತಿದ್ದೆವು. ಶಾಲೆಯ ಸುತ್ತಮುತ್ತ ನಾನು, ಶ್ರುತಿ, ಸ್ವಪ್ನ ಮತ್ತೆ ಇನ್ನೂ ಒಂದಿಷ್ಟು ಗೆಳತಿಯರು, ಆಡಿ ಆಡಿ ಸುಸ್ತಾದೆವು. ಕೊನೆಗೆ ನೀರು ಕುಡಿಯಬೇಕೆನಿಸಿತು ಎಲ್ಲರಿಗೂ. ಅಲ್ಲಿಯೇ ಇದ್ದ ಬೋರನ್ನು ಹೊಡೆಯತೊಡಗಿದೆವು. ನೀರು ಬಂತು. ಒಬ್ಬೊಬ್ಬರೇ ನೀರು ಹೊಡೆಯುವುದು, ಉಳಿದೆಲ್ಲರು ಸರತಿಯಲ್ಲಿ ಮುಖತೊಳೆದು ನೀರುಕುಡಿಯುವುದು ಮಾಡುತ್ತಿರುವಾಗ, ನಾನೊಂದಿಷ್ಟು ಬೋರು ಹೊಡೆಯುವ ಉಳಿದವರು ಕುಡಿಯಲಿ ಎಂದು ಹಿಂದೆ ಬಂದೆ. […]

ಮಣ್ಣಿಗೆ ವಿದಾಯ ಹೇಳುತ್ತೇವೆ!

ಕವಿತೆ ಮಣ್ಣಿಗೆ ವಿದಾಯ ಹೇಳುತ್ತೇವೆ! ಅಲ್ಲಾಗಿರಿರಾಜ್ ಕನಕಗಿರಿ ಗುಟ್ಕಾ- ತಂಬಾಕು ಬೀರ್ – ಬ್ರಾಂಡಿಮಾರುವವರು ದೇಶವಾಳುತ್ತಿದ್ದಾರೆ.ಅವರ ವಸ್ತುವಿಗೆ ಅವರೇ ಬೆಲೆ ನಿಗದಿ ಮಾಡಿಕೊಂಡು. ಆದರೆ ನಾವು ಇಡೀ ದೇಶಕ್ಕೆ ಅನ್ನ ಕೊಡುತ್ತೇವೆ.ಬೆಳೆಗೂ ಬದುಕಿಗೂ ಬೆಲೆ ಇಲ್ಲದೆ ಬೀದಿ ಪಾಲಾಗಿದ್ದೇವೆ. ಅನ್ನ ಉಂಡವರು ಒಂದು ಸಲ ಯೋಚಿಸಿ ನೋಡಿ.ಅನ್ನದಾತನ ನೋವು ಸಾವು ಸಂಕಟ ಏನೆಂದು. ಇಲ್ಲವೆಂದರೆ ನಾವೇ ಮಣ್ಣಿಗೆ ವಿದಾಯ ಹೇಳುತ್ತೇವೆ.ಮಕ್ಕಳ ಹೆಗಲ ಮೇಲೆ ಇಡಬೇಕೆಂದ ನೇಗಿಲು,ನಿಮ್ಮ ಮ್ಯೂಸಿಯಂನಲ್ಲಿ ಇಟ್ಟು ಸಲಾಂ ಹೊಡೆಯುತ್ತೇವೆ ***************************

ಎದೆಯಲ್ಲಿ ಅಡಗಿದ ಬೆಳಕು

ಕವಿತೆ ಎದೆಯಲ್ಲಿ ಅಡಗಿದ ಬೆಳಕು ಡಾ ರೇಣುಕಾ ಅರುಣ ಕಠಾರಿ ನನಗೆ ನಾನಾಗುವಾಸೆನಿನ್ನನೂ ಒಳಗೊಂಡು ನೋವಿನ ನಡುವೆಯೂನನ್ನೆದೆಯಲಿ ಹೂವರಳಿಸಿನಕ್ಷತ್ರ ಪುಂಜಗಳ ಕಣ್ತಂಬಿಸಿಆ ಆಕಾಶದಲ್ಲಿ ದಾರಿ ಕಾಣುವಾಸೆ ಹೆಚ್ಚಾಗಿದೆ. ನನ್ನ ಪ್ರೀತಿ-ನೀತಿದುಃಖ-ದುಮ್ಮಾನಗಳ ನಡುವೆಆಸೆ ನಿರಾಸೆಗಳ ಕೇಂದ್ರದ ಸಾಗರದಲ್ಲಿಯುಬದುಕಿನ ಸಾಂದ್ರ ನೀನೇ. ಪುಟಿದೇಳುವುದು ಒಮ್ಮೊಮ್ಮೆ ನಿನ್ನಲೂಆರ್ಭಟ ದುರಂಕಾರಎದೆಯಲ್ಲಿ ಅಡಗಿದಶ್ರೇಷ್ಠತೆಯ ಹಾವ ಭಾವದಲ್ಲಿಅಲ್ಲಗಳಿದಾಗಲೆಲ್ಲ ನಾನುಅನುದಿನವು ಸಾಯುತಲಿರುವೆ. ಆಗಾಗಸಂಜೆಯ ತಂಗಾಳಿಯ ಬೊಗಸೆಯಲಿಕೆನ್ನೆಗಳ ತುಂಬಿಸಿಎದೆಗೇರಿಸಿಕೊAಡಾಗನಿನ್ನೆದೆಯ ಬಡಿತದ ಸದ್ದುಗಳಲೆಕ್ಕ ಹಾಕುವೆನು. ಪ್ರತಿ ಮಿಡಿತವೂಬದುಕಿನಜಮಾ ಖರ್ಚಿನ ಪುಟಗಳೇ.ಪುಟಗಳ ಲೆಕ್ಕವೆ ಮೀರಿ ನಿಂತಿರುವಚಿಲುಮೆಯ ಸಾಕ್ಷತ್ಕಾರ ನೀನು. ಇದಕ್ಕೆಎಲ್ಲವುಗಳ ನಡುವೆನಿನ್ನನೂ […]

ಪಾತ್ರೆಗಳು ಪಾತ್ರವಾದಾಗ

ಕವಿತೆ ಪಾತ್ರೆಗಳು ಪಾತ್ರವಾದಾಗ ಶಾಲಿನಿ ಆರ್. ಬೇಳೆ ಬೇಯಿಸೋಕೆಪಾತ್ರೆ ಬೇಕೆ ಬೇಕು!ಹೊಟ್ಟೆ ತುಂಬಿಸೋಕೆಮನದ ಅಗಣಿತಭಾವಗಳತಣಿಸೋಕೆ? ಹುಟ್ಟಿದ ಹಸಿವಿಗೆತಿನುವ ಹಂಬಲಕೆರುಚಿ ನೋಡೋಕೆಕಾದ ಮನಗಳಿಗೆಉಣ ಬಡಿಸೋಕೆಹೇಗಾದರೂ ಸರಿ! ಹದವಾದ ರುಚಿತರಿಸಬೇಕು,ಬೆಂದ ಬೇಳೆಗಳಬತ್ತಿಸಿ,ಕರಗಿಸಿಗುರಾಡಿ ,ಬಾಡಿಸಿಮತ್ತಷ್ಟು ನೀರುಣಿಸಿನೆಪಕ್ಕೊಂದು ಪಾತ್ರೆಯಿರಿಸಿ! ಹಸಿದವರಿದ್ದರೆಹೇಳಿ?ಬೆಂದ ಬೇಳೆಗಳ ರುಚಿಗೆ!ಹಸಿವಿಲ್ಲದವರನ್ನುಕರೆತನ್ನಿ ,ಹಸಿವ ಇಂಗಿಸಲೋ?ಇಲ್ಲವಾದರೆ,ರುಚಿ ಸವಿಯಲು! ಸ್ವಲ್ಪ ಹುಳಿ,ಖಾರಒಗ್ಗರಣೆ ಸಾಕು!ಇನ್ನಿತರ ಮಸಾಲಪದಾರ್ಥಗಳುಬೇಕಿದ್ದರೆಪಾತ್ರಕ್ಕೊಪ್ಪುವಂತೆ!ರುಚಿಗೆ ಇಂತಿಷ್ಟೇ ಉಪ್ಪು,ಮುಖ ಕಿವುಚದಂತೆ ಮತ್ತೆ! ಹಿತ ಮಿತವಾದಪದಾರ್ಥಗಳುಪಾತ್ರಗಳ ಸೋಕಿನಾಲಿಗೆಯ ರುಚಿ!ಮನಕಿಳಿದ ಗೆಲುವೋ?ಬೆಂದ ಬೇಳೆಯದೋಮನದಗಲದಪಾ(ತ್ರೆ)ತ್ರ ದೋ??? ****************************************************

ಸಾಧನೆಯ ಹಾದಿಯಲ್ಲಿ

ಎಂಭತ್ತರ ದಶ ಕದಲ್ಲಿ ಇನ್ನು ಗ್ರಾಮೀಣ ಭಾಗದ ಮಹಿಳೆಯರು ಅಕ್ಷರ ಲೋಕಕ್ಕೆ ಅಂಬೆಗಾಲಿಡುತ್ತ ಸಾಗುತ್ತಿದ್ದ ದಿನಗಳಲ್ಲಿ ಇವರು ಉನ್ನತ ಶಿಕ್ಷಣ ಪಡೆದು ಮಹಿಳಾ ಅಧಿಕಾರಿಯಾಗಿ ಆಯ್ಕೆ ಯಾಗಿ ಬೀದರ್ ನಂತಹ ಹಲವಾರು ಸಮಸ್ಯೆ ಇರುವ ಜಿಲ್ಲೆಗೆ ಅಧಿಕಾರಿಯಾಗಿ ವೃತ್ತಿ ಆರಂಭಿಸಿರುವುದು ಗುರುತ್ತ ರವಾದ ಹೆಜ್ಜೆ

ಬದುಕು ಬಂದಂತೆ

ಕಥೆ ಬದುಕು ಬಂದಂತೆ ಅನಸೂಯ ಎಂ.ಆರ್. ಲತ ಮನೆಗೆ ಬಂದಾಗ ಎಂದಿನಂತೆ  ಸುಶೀಲಮ್ಮನು ಬಾಗಿಲು ತೆರೆಯದೆ  ಮನು ಬಂದಾಗ “ಅಜ್ಜಿ ಎಲ್ಲೊ” ಎಂದಳು. ” ಅಜ್ಜಿ ಮಲಗಿದಾರಮ್ಮ” ಎಂದ ಕೂಡಲೇ ವ್ಯಾನಿಟಿ ಬ್ಯಾಗ್ ಮತ್ತು ಲಂಚ್ ಬಾಕ್ಸ್ ನ್ನು ಟೇಬಲ್ ಮೇಲಿಟ್ಟು “ಅತ್ತೆ” ಎನ್ನುತ್ತಾ ರೂಂ ನೊಳಗೆ ಹೋದಳು ಮುಸುಕು ಹಾಕಿ ಮಲಗಿದ್ದ ಸುಶೀಲಮ್ಮ ಮುಸುಕನ್ನು ತೆಗೆಯುತ್ತಾ “ಯಾಕೋ, ಜ್ವರ ಬಂದಂತಾಗಿದೆ ಕಣಮ್ಮ” ಎಂದರು. ಅವರ ಹಣೆಯ ಮೇಲೆ ಕೈಯಿಟ್ಟು ನೋಡಿದ ಲತಾ ” ಬಹಳ ಜ್ವರ […]

ಚಂದ್ರನೆಂಬ ವೈಜ್ಞಾನಿಕ ವಿಸ್ಮಯ

ಭಾರತವು ತನ್ನದೇ ಆದ ತಂತ್ರಜ್ಞಾನ ಸಂಶೋಧಿಸಿ ಅಭಿವೃದ್ಧಿಗೊಳಿಸಿದ್ದರಿಂದ ಚಂದ್ರಯಾನ ಯೋಜನೆಯಿಂದ ಭಾರತದ ಬಾಹ್ಯಾಕಾಶ ಯೋಜನೆಗೆ ಮಹತ್ವದ ಉತ್ತೇಜನ ಲಭಿಸಿತು.

ಪ್ರಪಂಚದಲ್ಲಿ ಬಹುಶಃ ತಪ್ಪೇ ಮಾಡದಿರುವ ಒಬ್ಬನೇ ಒಬ್ಬ ವ್ಯಕ್ತಿ ಇರಲಿಕ್ಕಿಲ್ಲ. ಯಾವುದಾದರೂ ಒಂದು ಸಂದರ್ಭದಲ್ಲಿ ಏನಾದರೂ ಒಂದು ತಪ್ಪನ್ನು ಮಾಡಿರಲೇ ಬೇಕು. ಮಾಡಿದ ತಪ್ಪನ್ನು ಒಪ್ಪಿಕೊಳ್ಳದೆ , ತಾನು ಯಾವಾಗಲೂ ಸರಿ ಎಂಬ ವರ್ತನೆಯನ್ನು ತೋರಿಸುವ ಬಹಳಷ್ಟು ಮಂದಿಯಿದ್ದಾರೆ

Back To Top