ಚಂದ್ರನೆಂಬ ವೈಜ್ಞಾನಿಕ ವಿಸ್ಮಯ

ಲೇಖನ

ಚಂದ್ರನೆಂಬ ವೈಜ್ಞಾನಿಕ ವಿಸ್ಮಯ

Full moon and white clouds on black night sky. Scene stock photo

ಆಶಾ ಸಿದ್ದಲಿಂಗಯ್ಯ

ಭೂಮಿ ಮತ್ತು ಚಂದ್ರನ ನಡುವೆ ಸರಾಸರಿ ದೂರವು 384,399 ಕಿ.ಮೀ.ಗಳು. ಈ ದೂರದಲ್ಲಿ, ಚಂದ್ರನಿಂದ ಪ್ರತಿಫಲಿತವಾದ ಬೆಳಕು ಭೂಮಿಯನ್ನು ತಲುಪಲು ಸುಮಾರು 1.3 ಕ್ಷಣಗಳು ಹಿಡಿಯುತ್ತದೆ.

ಚಂದ್ರನ ವ್ಯಾಸವು 3,474 ಕಿ.ಮೀ.ಗಳಿದ್ದು (2,159 ಮೈಲಿಗಳು),(ಭೂಮಿಗಿಂತ ೩.೭ ಪಟ್ಟು ಕಡಿಮೆ),

 ಇದು ಸೌರಮಂಡಲದ ೫ನೇ ಅತಿ ದೊಡ್ಡ ಮತ್ತು ೫ನೇ ಅತಿ ಭಾರವಾದ ಉಪಗ್ರಹವಾಗಿದೆ.

ಭೂಮಿಯ ಮೇಲಿನ ಉಬ್ಬರವಿಳಿತಗಳಿಗೆ ಚಂದ್ರನ ಗುರುತ್ವಾಕರ್ಷಣೆಯೇ ಕಾರಣ.

ಚಂದ್ರನು ಭೂಮಿಯ ಸುತ್ತ ೨೭.೩ ದಿನಗಳಿಗೊಮ್ಮೆ ಪರಿಭ್ರಮಿಸುತ್ತದೆ.

ಭೂಮಿಯನ್ನುಳಿದು ಮಾನವರು ನಡೆದಾಡಿರುವ ಏಕೈಕ ಆಕಾಶಕಾಯವೆಂದರೆ ಚಂದ್ರ.

ನೀಲ್ ಆರ್ಮ್‌ಸ್ಟ್ರಾಂಗ್ (ಜನನ: ೫ ಆಗಸ್ಟ್, ೧೯೩೦) ಅಮೇರಿಕಾ ಸಂಯುಕ್ತ ಸಂಸ್ಥಾನದ ಅಂತರಿಕ್ಷಯಾನಿ ಮತ್ತು ವೈಮಾನಿಕ. ನೀಲ್ ಆರ್ಮ್‌ಸ್ಟ್ರಾಂಗ್ ಭೂಮಿಯ ಉಪಗ್ರಹವಾದ ಚಂದ್ರನ ಮೇಲೆ ಕಾಲಿರಿಸಿದ ಮೊದಲ ಮಾನವ . ೧೯೬೬ರಲ್ಲಿ ಅಂತರಿಕ್ಷ ನೌಕೆಯಾದ ಜೆಮಿನಿ ೮ರ ಚಾಲಕರಾಗಿ ಹಾಗು ೧೯೬೯ರರಲ್ಲಿ ಚಂದ್ರಯಾನ ಮಾಡಿದ ನೌಕೆ ಅಪೊಲೊ ೧೧ರ ಮುಖ್ಯಸ್ಥರಾಗಿ ಒಟ್ಟು ಎರಡು ಬಾರಿ ಅಂತರಿಕ್ಷಯಾನ ಮಾಡಿದರು.

Moon Landing, Astronaut Walk, Space, Lunar Surface. An astronaut walk or walks on the lunar surface during a moon landing. Outer space and planet earth is in the royalty free stock images

 ಚಂದ್ರನನ್ನು ತಲುಪಿದ ಮೊದಲ ಮಾನವರಹಿತ ಗಗನನೌಕೆಯೆಂದರೆ ರಷ್ಯಾದ ಲೂನ ಕಾರ್ಯಕ್ರಮದ ನೌಕೆ. ಲೂನಾ ೧ ಭೂಮಿಯ ಗುರುತ್ವದಿಂದ ಮುಕ್ತಿ ಪಡೆದು ಚಂದ್ರನ ಬಳಿ ಹಾರಿಹೋದ ಮೊಟ್ಟಮೊದಲ ಮಾನವ ನಿರ್ಮಿತ ವಸ್ತು. ಲೂನಾ ೨ ಚಂದ್ರನ ಮೇಲ್ಮೈ ತಲುಪಿದ ಮೊಟ್ಟಮೊದಲ ಮಾನವ ನಿರ್ಮಿತ ವಸ್ತು. ಸಾಮಾನ್ಯವಾಗಿ ಮರೆಯಾಗಿರುವ ಚಂದ್ರನ ಹಿಮ್ಮುಖವನ್ನು ಲೂನಾ ೩ ಚಿತ್ರೀಕರಿಸಿತು. ಈ ೩ ಘಟನೆಗಳೂ ೧೯೫೯ರಲ್ಲಿ ಆದವು. ಚಂದ್ರನ ಮೇಲೆ ನಿಧಾನವಾಗಿ ಇಳಿದ ಪ್ರಪ್ರಥಮ ನೌಕೆ ಲೂನಾ ೯ ಮತ್ತು ಚಂದ್ರನನ್ನು ಪರಿಭ್ರಮಿಸಿದ ಪ್ರಪ್ರಥಮ ಮಾನವರಹಿತ ನೌಕೆ ಲೂನಾ ೧೦. ಇವೆರಡೂ ೧೯೬೬ರಲ್ಲಿ ನಡೆದವು.

ಚಂದ್ರಯಾನ-1 ಎಂದರೆ ಚಂದ್ರನ ಮೇಲೆ ಪ್ರಯಾಣಿಸುವ, ಅಥವಾ ಚಂದ್ರ ವಾಹನ. ಇದು ಭಾರತದ ಮೊಟ್ಟಮೊದಲ ಮಾನವರಹಿತ ಚಂದ್ರ ಶೋಧಕ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವಿಜ್ಞಾನಿಗಳು ಇದನ್ನು ಅಕ್ಟೋಬರ್‌ 2008ರಲ್ಲಿ ಬಾಹ್ಯಾಕಾಶಕ್ಕೆ ಉಡಾಯಿಸಿದರು. ಇದು ಆಗಸ್ಟ್‌ 2009ರ ತನಕ ಕಾರ್ಯನಿರ್ವಹಿಸಿತ್ತು. ಈ ಯಾತ್ರೆಯಲ್ಲಿ ಚಂದ್ರನ ಉಪಗ್ರಹ ಮತ್ತು ಒಂದು ಇಂಪ್ಯಾಕ್ಟರ್ ಸಹ ಸೇರಿದ್ದವು. PSLVಯ ನವೀಕೃತ ಆವೃತ್ತಿಯಾದ PSLV C11ಮೂಲಕ ಗಗನನೌಕೆಯನ್ನು 22 ಅಕ್ಟೋಬರ್‌ 2008ರಂದು 06:22 IST ಸಮಯದಲ್ಲಿ (00:52 UTC) ಉಡಾಯಿಸಲಾಯಿತು.

Chandrayaan-2, India's historic Moon mission, launches successfully |  NewsBytes

 ಚೆನ್ನೈನಿಂದ 80 ಕಿಮೀ ಉತ್ತರದಲ್ಲಿರುವ, ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಶ್ರೀಹರಿಕೋಟಾ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಈ ಗಗನನೌಕೆಯನ್ನು ಉಡಾಯಿಸಲಾಯಿತು. ಚಂದ್ರನ ನೆಲವನ್ನು ಶೋಧಿಸಲು ಭಾರತವು ತನ್ನದೇ ಆದ ತಂತ್ರಜ್ಞಾನ ಸಂಶೋಧಿಸಿ ಅಭಿವೃದ್ಧಿಗೊಳಿಸಿದ್ದರಿಂದ ಚಂದ್ರಯಾನ ಯೋಜನೆಯಿಂದ ಭಾರತದ ಬಾಹ್ಯಾಕಾಶ ಯೋಜನೆಗೆ ಮಹತ್ವದ ಉತ್ತೇಜನ ಲಭಿಸಿತು.

Satish Dhawan Space Centre (SDSC) SHAR - ISRO

8 ನವೆಂಬರ್‌ 2008ರಂದು ಚಂದ್ರಯಾನಕ್ಕೆ ತೆರಳಿದ ವಾಹನವನ್ನು ಚಂದ್ರನ ಕಕ್ಷೆಯಲ್ಲಿ ಯಶಸ್ವಿಯಾಗಿ ಅಳವಡಿಸಲಾಯಿತು.

14 ನವೆಂಬರ್‌ 2008ರಂದು 20:06 IST ಸಮಯಕ್ಕೆ,ಮೂನ್ ಇಂಪ್ಯಾಕ್ಟ್ ಪ್ರೋಬ್(ಚಂದ್ರನಿಗೆ ಘರ್ಷಿಸುವ ಶೋಧಕ) ಚಂದ್ರಯಾನ ಉಪಗ್ರಹದಿಂದ ಪ್ರತ್ಯೇಕವಾಗಿ ನಿಯಂತ್ರಿತ ರೀತಿಯಲ್ಲಿ ದಕ್ಷಿಣ ಧ್ರುವಕ್ಕೆ ಬಡಿಯಿತು. ಹಾಗಾಗಿ, ಭಾರತವು ಚಂದ್ರನ ಮೇಲೆ ತನ್ನ ಧ್ವಜ ನೆಡುವ ನಾಲ್ಕನೆಯ ದೇಶವಾಯಿತು. ಸಮಯ 20:31ಕ್ಕೆ ಪ್ರೋಬ್ ಷ್ಯಾಕ್ಲ್‌ಟನ್‌ ಕಂದಕ‌ ಬಳಿ ಬಡಿದು, ಚಂದ್ರನ ನೆಲಗರ್ಭದಿಂದ ಮಣ್ಣಿನ ಧೂಳೆಬ್ಬಿಸಿತು. ಚಂದ್ರನಲ್ಲಿ ಘನೀಕೃತ ನೀರಿನ ಉಪಸ್ಥಿತಿಯನ್ನು ಪತ್ತೆಹಚ್ಚಲು ಇದನ್ನು ವಿಶ್ಲೇಷಿಸಬಹುದಾಗಿದೆ.

ಈ ಯೋಜನೆಯ ಅಂದಾಜು ವೆಚ್ಚ ₹೩೮೬ ಕೋಟಿ (ಯುಎಸ್$೯೦ ದಶಲಕ್ಷ).

ದೂರ ಸಂವೇದಿ ಚಂದ್ರ ಉಪಗ್ರಹವು ಉಡ್ಡಯನದ ಸಮಯದಲ್ಲಿ 1,380 ಕಿಲೋಗ್ರಾಂನಷ್ಟು (3,042 lb)1,380 kilograms (3,042 lb)ತೂಕವನ್ನು ಹೊಂದಿತ್ತು ಹಾಗೂ ಚಂದ್ರನ ಕಕ್ಷೆಯಲ್ಲಿ 675 ಕಿಲೋಗ್ರಾಂ (1,488 lb)675 kilograms (1,488 lb)ತೂಕ ಹೊಂದಿತ್ತು. ಇದು ಅಧಿಕ ಸ್ಪಷ್ಟತೆಯ ದೂರಸಂವೇದಿ ಉಪಕರಣವನ್ನು ದೃಷ್ಟಿಗೋಚರತೆಗೆ ಹಾಗೂ ನಿಯರ್ ಇನ್ಫ್ರಾರೆಡ್ ಹಾಗೂ ಮೃದು ಮತ್ತು ಕಠಿಣ ಕ್ಷಕಿರಣ ತರಂಗಾಂತರಗಳನ್ನು ಹೊಂದಿತ್ತು. ಎರಡು ವರ್ಷಗಳ ಕಾಲಾವಧಿಯಲ್ಲಿ, ಚಂದ್ರನ ಮೇಲ್ಮೈಯ ಸರ್ವೇಕ್ಷಣೆ ನಡೆಸಿ, ಅದರ ರಾಸಾಯನಿಕ ಗುಣಗಳು ಹಾಗೂ ಮೂರು ಆಯಾಮಗಳ ಪ್ರದೇಶದ ಸಂಪೂರ್ಣ ನಕ್ಷೆಯನ್ನು ತಯಾರಿಸುವ ಉದ್ದೇಶವಿತ್ತು. ಧ್ರುವ ವಲಯಗಳಲ್ಲಿ ನೀರ್ಗಲ್ಲು ಇರಬಹುದೆಂಬ ಕಾರಣ ಅವು ವಿಶೇಷ ರೀತಿಯಲ್ಲಿ ಗಮನ ಸೆಳೆಯವಂತಹದ್ದಾಗಿತ್ತು.

ಚಂದ್ರ ಅಭಿಯಾನದಲ್ಲಿ ISROದ ಐದು ಉಪಕರಣಗಳು, ಹಾಗೂ, NASA, ESA ಮತ್ತು ಬಲ್ಗಾರಿಯನ್ ಏರೊಸ್ಪೇಸ್‌ ಏಜೆನ್ಸಿ ಸೇರಿದಂತೆ ಇತರೆ ಬಾಹ್ಯಾಕಾಶ ಸಂಸ್ಥೆಗಳಿಂದ ಆರು ಉಪಕರಣಗಳನ್ನು ಉಚಿತವಾಗಿ ಒಯ್ಯಲಾಯಿತು.

ᐈ Half moon stock pictures, Royalty Free half moon photos | download on  Depositphotos®

ಸ್ಟಾರ್ ಸಂವೇದಕಗಳ ವೈಫಲ್ಯ ಹಾಗೂ ಬಹಳ ಕಳಪೆ ಮಟ್ಟದ ಉಷ್ಣತಾ ರಕ್ಷಣಾ ಕವಚ ಸೇರಿದಂತೆ ಹಲವು ತಾಂತ್ರಿಕ ಸಮಸ್ಯೆಗಳಿಗೆ ಈಡಾದ ಚಂದ್ರಯಾನವು, 29 ಆಗಸ್ಟ್‌ 2019ರಂದು 01:30 IST ಸಮಯಕ್ಕೆ ಸಂಪೂರ್ಣವಾಗಿ ವಿಫಲಗೊಂಡು ಯಾವುದೇ ರೇಡಿಯೊ ಸಂಕೇತಗಳನ್ನು ರವಾನಿಸುವುದನ್ನು ನಿಲ್ಲಿಸಿತು. ಕೂಡಲೇ ISRO ಅಧಿಕೃತವಾಗಿ ಈ ಯಾತ್ರೆಯು ಅಂತ್ಯಗೊಂಡಿತೆಂದು ಘೋಷಿಸಿತು. ಉದ್ದೇಶಿತ ಎರಡು ವರ್ಷಗಳ ಬದಲಿಗೆ ಚಂದ್ರಯಾನ ಕೇವಲ 312 ದಿನಗಳ ಕಾಲ ಕಾರ್ಯನಿರ್ವಹಿಸಿದರೂ ಸಹ, ತನ್ನ ಯೋಜಿತ ಉದ್ದೇಶಗಳ ಪೈಕಿ 95%ರಷ್ಟನ್ನು ಸಾಧಿಸಿತು. ಇದರ ಮಹತ್ವದ ಸಾಧನೆಗಳ ಪೈಕಿ ಚಂದ್ರನ ನೆಲದಲ್ಲಿ ನೀರಿನ ಕಣಗಳ ವ್ಯಾಪಕ ಉಪಸ್ಥಿತಿಯನ್ನು ಶೋಧಿಸಿದ್ದು ಸಹ ಒಂದಾಗಿದೆ.

*************************************************

Leave a Reply

Back To Top