ಕಾವ್ಯ ಸಂಗಾತಿ
ಡಾ.ಗೀತಾ ದಾನಶೆಟ್ಟಿ
“ನಿಜವನರಿತು ನಿಶ್ಚಿಂತನಾಗಿರು”


ಹೆದರದಿರು ಮನವೆ ಬೆದರದಿರು ತನುವೆ
ನಡೆ-ನುಡಿಯೊಳಗೊಂದಾಗಿ
ಹಮ್ಮು ಬಿಮ್ಮುಗಳ ಬಿಟ್ಟು
ನಿಶ್ಚಿಂತನಾಗಿರು
ಸತ್ಯ-ಶುದ್ಧ ಕಾಯಕದೊಳೊಂದಾಗಿ
ತ್ರಿವಿಧ ದಾಸೋಹ ಗೈಯುತ ನಿಶ್ಚಿಂತನಾಗಿರು
ಅರಿವು ಅನುಭಾವದಳೊಂದಾಗಿ
ಅಂಧಶೃದ್ಧೆ ಆಡಂಬರ ಅಳಿಸುತ ನಿಶ್ಚಿಂತನಾಗಿರು
ಮನುಷ್ಯ ಮನುಷ್ಯರೊಂದಾಗಿ
ಜಾತಿ ಜಾಡ್ಯವ ತೊಲಗಿಸುತ ನಿಶ್ಚಿಂತನಾಗಿರು
ನೋವು-ನಲಿವುಗಳಲೊಂದಾಗಿ
ಮಧರ ಮನವ ಅರಳಿಸುತ ನಿಶ್ಚಿಂತನಾಗಿರು
ಬಡವ-ಬಲ್ಲಿದರೊಳಗೊಂದಾಗಿ
ಮಾನವೀಯತೆ ಮೆರೆಯುತ ನಿಶ್ಚಿಂತನಾಗಿರು
ಆಚಾರ-ವಿಚಾರಗಳಲೊಂದಾಗಿ
ನಿಜವನರಿತು ನಿಶ್ಚಿಂತನಾಗಿರು
ಡಾ.ಗೀತಾ ದಾನಶೆಟ್ಟಿ
ಬಾಗಲಕೋಟೆ




