ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಅನುದಿನವೂ ನಿನ್ನ ಜೊತೆ ಕಾಲ ಕಳೆಯಲು ಹಂಬಲಿಸುತಿರುವೆ
ನಿನ್ನಯ ಮಡಿಲಲಿ ಮಗುವಾಗಿ ಮಲಗಲು ಹಂಬಲಿಸುತಿರುವೆ

ದೂರವನ್ನು ದೂರಲಾಗದೆ ಮಂಡಿಯೂರಿ ಕುಳಿತಿರುವೆ ಉಸಿರೆ  
ನಮ್ಮ ಮೈಮನಗಳ ಸಾನಿಧ್ಯದಿ ಪೂಜಿಸಲು ಹಂಬಲಿಸುತಿರುವೆ

ಏಳೇಳು ಲೋಕ ಕೇಳುವಂತೆ ಕೂಗುವ ಆಸೆ ಲವ್ ಯು ಎಂದು
ಜಗದಗಲಕೂ ಆರುಮೆ ಕಂಪನು ಹರಡಲು ಹಂಬಲಿಸುತಿರುವೆ

ಬೇಬಿಮಾ ನಿನ್ನ ಹೆಸರನೆ ಜಪಿಸುತಿರುವೆ ಅವನಿಯಲಿ ಜೀವಿಸಲು
ಹಗಲಿರುಳು ನಾನು ಉಸಿರಾಡುವ ಉಸಿರಲು ಹಂಬಲಿಸುತಿರುವೆ

ಅಡಗಿದೆ ಕಾಲದ ತೆಕ್ಕೆಯಲಿ ಕಿವಿಗೊಡು ಹೃದಯದ ರಿಂಗಣಕೆ
ತನುಮನದಿ ಮಲ್ಲಿಗೆ ಸುಮವಾಗಿ ಅರಳಲು ಹಂಬಲಿಸುತಿರುವೆ


About The Author

Leave a Reply

You cannot copy content of this page

Scroll to Top