ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಅಮ್ಮನ ಪ್ರಲಾಪವದು ಕುಶನನ್ನು ದಂಗುಬಡಿಸಿತು. ಕಾರಣ ಕೇಳಿದ ಅವಳ ಅಳುವಿಗೆ. ಲವ ಕುದುರೆಯನ್ನು ಕಟ್ಟಿಹಾಕಿದ್ದು, ಸೈನಿಕರು ಯುದ್ಧಕ್ಕೆ ಬಂದದ್ದು, ರಥದಲ್ಲಿ ಕುಶನನ್ನು ಹೊತ್ತೊಯ್ದದ್ದು ಎಲ ್ಲವನ್ನೂ ಹೇಳಿದಳು ಸೀತೆ. ರೋಷ ಹುಟ್ಟಿತು ಕುಶನಲ್ಲಿ. ಕವಚ, ಖಡ್ಗ, ಬಿಲ್ಲು, ಬಾಣ, ಕಿರೀಟ ಎಲ್ಲವನ್ನೂ ತರಹೇಳಿದ ತಾಯಿಯಲ್ಲಿ. ತಂದುಕೊಟ್ಟಳು. ‚ಲವನನ್ನು ಹೊತ್ತೊಯ್ದವನು ಯಾರೇ ಆಗಿದ್ದರೂ ಅವನನ್ನು ಎದುರಿಸಿ, ಲವನನ್ನು ಎದುರಿಸಿಕೊಂಡು ಬರುತ್ತೇನೆ‛ ಎಂದ ಕುಶ ವೀರಭಾವದಲ್ಲಿ ಹೊರಟ. ಸುತನನ್ನು º Àರಸಿ ಕಳುಹಿಸಿಕೊಟ್ಟಳು ಸೀತೆ.
ವಾಯುವೇಗದಿಂದ ಹೋದ ಕುಶ ಶತ್ರುW À್ನ ¸ ೆÃನೆಯನ್ನು ಕಾಣುತ್ತಲೇ ಮುನ್ನುಗ್ಗಿದ. ಶತುಘ್ನನ ದಳಪತಿಯ ಮೇಲೆ ಬಾಣಗಳನ್ನು ಒಂದರ ಹಿಂದೆ ಒಂದರAತೆ ಬಿಟ್ಟ. ದಳಪತಿಗೆ ನಗ ಹೆಸರಿನ ತಮ್ಮನೊಬ್ಬನಿದ್ದ. ಅವನು ಕುಶನನ್ನು ಎದುರಿಸುವ ಉತ್ಸುಕತೆ ತೋರಿದ. ಕುಶನ ಬಾಣದ ಹೊಡೆತಕ್ಕೆ ಕೈಗಳನ್ನೂ, ಕಾಲುಗಳನ್ನೂ, ಅಂತಿಮವಾಗಿ ಶಿರವನ್ನೂ ಕಳೆದುಕೊಂಡು ಪ್ರಾಣಬಿಟ್ಟ.
ಕ್ರೋಧಭಾವದವನಾದ ಶತ್ರುಘ್ನ. ಒಂಭತ್ತು ಬಾಣಗಳನ್ನು ಏಕಕಾಲಕ್ಕೆ ಪ್ರಯೋಗಿಸಿದ, ಕುಶನ ಮೇಲೆ. ಬಾಣಪುಂಜಗಳು ಪುಡಿಪುಡಿಯಾದವು ಪುಟ್ಟ ಪೋರ ತೋರಿದ ಪರಾಕ್ರಮಕ್ಕೆ. ಕುಶನ ಬಲು ಬಿರುಸಿನ ಬಾಣವದು ಬೀಳಿಸಿತು ಶತ್ರುಘ್ನನನ್ನು ಭೂಮಿಯ ಮೇಲೆ. ಎಲ ್ಲರ ಭುಜಬಲವನ್ನೂ ಮೀರಿನಿಲ್ಲುವ ದಿಟ್ಟತನವನ್ನು ತೋರಿದನಾಗ ರಾಮಸುತ.
ಅಷ್ಟರಲ್ಲಿ ಲವನಿಗೆ ಪ್ರಜ್ಞೆ ಬಂತು. ಅಣ್ಣ ತಮ್ಮಂದಿರು ಜೊತೆ ಸೇರಿ ª ÀÄತ್ತೆ ಕುದುರೆಯನ್ನು ಕಟ್ಟಿಹಾಕಿದರು. ಈ ಮೊದಲಿಗಿಂತಲೂ ಹುರುಪಿನಿಂದ ಯುದ್ಧಕ್ಕೆ ಸಿದ್ಧರಾಗಿ ನಿಂತರು.
‚ಒಡೆಯಾ, ನಿನ್ನ ಯಜ್ಞದ ಕುದುರೆಯದು ಭೂಮಿಯನ್ನು ವಿಘ್ನವಿಲ್ಲದೆ ಸುತ್ತಾಡಿತು. ಬಳಿಕ ಅದನ್ನು ಲವನೆಂಬ ಬಾಲಕ ಕಟ್ಟಿಹಾಕಿದ. ಬಿಡಿಸುವುದಕ್ಕೆ ಹೋದ ಸೇನೆಯನ್ನು ನಾಶಮಾಡಿದ. ಆಗ ಶತ್ರುಘ್ನ ಅವ£ Àನ್ನು ಸೆರೆಹಿಡಿದು ಕರೆತರುತ್ತಿರಬೇಕಾದರೆ ಯಾರೋ ಒಬ್ಬ ಬಾಲಕ ಬಂದು, ಬಾಣವನ್ನು ಪ್ರಯೋಗಿಸಿ, ನಿನ್ನ ತಮ್ಮ ಶತ್ರುಘ್ನನನ್ನು ರಥದಿಂದ ಬೀಳಿಸಿದ‛ ಎಂಬ ಸಂದೇಶ ರಾಮನನ್ನು v Àಲುಪಿತು.
ಶ್ರೀರಾಮ ಆ ಮಾತನ್ನು ನಂಬಲಿಲ್ಲ. ಶತ್ರುಘ್ನನಂತಹ ಬಲಶಾಲಿಯನ್ನು ಗೆಲ್ಲುವವರಿಲ್ಲ ಈ ಲೋಕದಲ್ಲಿ ಎಂಬ ನಂಬಿಕೆ ಅವನದ್ದು. ಹುಸಿ ಸಂದೇಶವಿದು ಎಂದುಕೊAಡ. ಆದರೆ ಅದು ನಿಜವಾದದ್ದು ಎಂದು ತಿಳಿದಾಗ ಪರಮಾಶ್ಚರ್ಯಗೊಂಡ. ಲವಣಾಸುರನೆಂಬ ರಾಕ್ಷಸನನ್ನೇ ಕೊಂದ ಶತ್ರುಘ್ನನಿಗೆ ಬಾಲಕರಿಬ್ಬರು ಸವಾಲಾಗಿ ನಿಂತಿದ್ದಾರೆAದರೆ ಅವರು ಸಾಮಾನ್ಯದವರಲ್ಲ ಎನ್ನುವುದು ಸ್ಪಷ್ಟವಾಯಿತು ಅಂi ÉÆÃಧ್ಯಾಪತಿಗೆ. ಲಕ್ಷö್ಮಣನನ್ನು ಯುದ್ಧಕ್ಕೆ ಕಳುಹಿಸಿಕೊಟ್ಟ.
ಕಾಲಜಿತುವೆಂಬ ಸೇನಾಧಿಪತಿಯನ್ನು ಜೊತೆಮಾಡಿಕೊಂಡು ಚತುರಂಗ ಬಲ ಸಹಿತನಾಗಿ ಕುಶ ಲವರ ವಿರುದ್ಧದ ಯುದ್ಧಕ್ಕೆ ಬಂದ ಲಕ್ಷö್ಮಣ. ಸಾವಿರ ಆನೆಗಳು. ಅದಕ್ಕೆ ನೂರು ಪಟ್ಟು ಹೆಚ್ಚು ರಥಗಳು. ರಥಗಳ ನೂರು ಪಟ್ಟಿನಷ್ಟು ಕುದುರೆಗಳು. ಕುದುರೆಗಳ ನೂರು ಪಟ್ಟಿನಷ್ಟು ಸೈನಿಕರು. ಇಂತಹ ಒಂದು ¸ ÉÃನೆಯನ್ನು ಹೊಂದಿದವರು ಭ್ರಮಿಗಳು ಎನಿಸಿಕೊಳ್ಳುತ್ತಿದ್ದರು. ಇಂತಹ ಸಾವಿರ ಭ್ರಮಿಗಳನ್ನು ಒಳಗೊಂಡಿತ್ತು ಲಕ್ಷö್ಮಣ ಸಾರಥ್ಯದ ಹಿರಿದು ಸೇನೆ.
ಎದುರು ನಿಂತ ಅಗಾಧ ಸೇನೆ ಕುಶ ಲವರ ಕಣ್ಣಿಗೆ ರಾಚಿತು. ಅಮೋಘವಾದ ಅಸ್ತçವೊಂದಿಲ್ಲದೆ ಜಯಿಸುವುದು ಅಸಾಧ್ಯ ಎಂದು ತೋರಿತು ಲವನಿಗೆ. ಸಹೋದರನಲ್ಲಿ ಗುಟ್ಟಾಗಿ ತಾನು ಸೂಂi ÀÄðದೇವನ ಪ್ರಾರ್ಥನೆ ಮಾಡಿ ಕೋದಂಡವನ್ನು ಪಡೆದುಕೊಳ್ಳುವುದಾಗಿ ಹೇಳಿದ. ಪ್ರಾರ್ಥಿಸಿದ. ಲವನ ಮುಗ್ಧಭಕ್ತಿಗೆ ಒಲಿದ ಸೂಂi ÀÄðದೇವ. ದಿವ್ಯಾಸ್ತçವನ್ನು ಲವನಿಗೆ ಕೊಟ್ಟ.
ಅದನ್ನು ಸಂತಸದಲ್ಲಿ ಕುಶನಿಗೆ ತೋರಿದ ಲವ. ಅಣ್ಣ ತಮ್ಮಂದಿರಿಬ್ಬರೂ ಬಲು ಹುರುಪಿನಲ್ಲಿ ಶತ್ರು ಸೈನ್ಯದೆಡೆಗೆ ದೃಷ್ಟಿ ಹರಿಸಿದರು. ನಿಮಿಷದಲ್ಲಿಯೇ ನಾಶಹೊಂದಿತು ಲಕ್ಷö್ಮಣ ಸೇನೆ.
ಲಕ್ಷö್ಮಣ ಕುಶನೆದುರು ಹೋರಾಟಕ್ಕೆ ನಿಂತ. ಲವನನ್ನು ಎದುರಿಸುವ ಮನಸ್ಸು ಮಾಡಿದ ಸೇನಾಧಿಪತಿ ಕಾಲಜಿತು. ಸಂಪೂರ್ಣ ಸೇನೆಯೇ ಅತಿ ರೋಷದಿಂದ ಇಬ್ಬರು ಬಾಲಕರ ಮೇಲೆರಗಿತು. ಮೇಲೆ ಬಿದ್ದವರನ್ನೆಲ್ಲಾ ಕೊಂದುಹಾಕಿದ ಲವ. ಎಲ್ಲೆಲ್ಲೂ ಬಾಣಗಳ ಹಾರಾಟ. ಸೇನಾಗಡಲಿನಲ್ಲಿ ಕುಶ ಲವರ ಸಾಹಸದ ಈಜಾಟ. ಆನೆ ಕುದುರೆಗಳು ಧರೆಗುರುಳಿದವು. ಸೈನಿಕರ ಶಿರಗಳು ಅಳಿದುಹೋದವು.
ಹೀಗೆ ಲವ ಕುಶರ ಸಾಹಸ ಸಾಗುತ್ತಿದ್ದಾಗಲೇ ಎದುರಾದವನು ರುಧಿರನೆಂಬ ಮಹಾ ರಾಕ್ಷಸ. ಶತ್ರುಘ್ನನಿಂದ ಮಡಿದಿದ್ದ ಲವಣಾಸುರನ ಸೋದರ ಮಾವನಾಗಿದ್ದ ಆತನ ಕಣ್ಣುಬಿದ್ದದ್ದು ಲವನ ಕೈಯ್ಯಲ್ಲಿದ್ದ ಕೋದಂಡದ ಮೇಲೆ. ಅದನ್ನು ಬಿರುಸಾಗಿ ಹಿಡಿದೆಳೆದವನು ಅಪಹರಿಸಿಕೊಂಡು ಗಗನ ಮಾರ್ಗವಾಗಿ ಹೊರಟ. ಲವ ಅಳುಕಲಿಲ್ಲ. ವಾಲ್ಮೀಕಿ ಮಹರ್ಷಿಗಳು ಬೋಧಿಸಿದ್ದ ಅಗ್ನಿಮಂತ್ರಧ್ಯಾನ ಮಾಡಿದ. ಸೇನೆಯನ್ನು ಎದುರಿಸುತ್ತಲೇ ರುಧಿರನನ್ನು ಕೊಂದು ತನ್ನ ದಿವ್ಯಾಸ್ತçವನ್ನು ಮರಳಿ ಪಡೆದುಕೊಂಡ.
ಇತ್ತ ಲಕ್ಷö್ಮಣನ ಜೊತೆಗೆ ಯುದ್ಧ ಮಾಡುತ್ತಿದ್ದ ಕುಶ. ಸೀತಾಸುತನ ಬಾಣದ ಏಟಿಗೆ ಊರ್ಮಿಳಾ ರಮಣನ ರಥವದು ಎರಡು U Àಳಿಗೆ ಸತತವಾಗಿ ತಿರುಗಿತು. ‘ಬಾಲಕನಿವನು ಪರಾಕ್ರಮಿ’ ಎಂದು ಮೆಚ್ಚಿತು ಕುಶನನ್ನು, ಲಕ್ಷö್ಮಣನ ಮನಸ್ಸು. ತನ್ನ ಶೌರ್ಯವಷ್ಟೂ ಬೇಕು ಇವನನ್ನು ಸೋಲಿಸಲು ಎಂದು ತೋರಿತು ಸುಮಿತ್ರಾಸುತನಿಗೆ. ಬಲವಾಗಿಯೇ ಬಾಣ ಪ್ರಯೋಗಿಸಿದ. ಕುಶನ ಕಿರೀಟ ಕವಚಗಳು ಕೆಳಗೆ ಬಿದ್ದವು. ಎದುರಾದ ಆಘಾತವನ್ನು ಸರಳವಾಗಿಸಿಕೊಂಡ ಸೀತಾಸುತ. ‚ಕಿರೀಟ ಕವಚಗಳ ಕಾಟವಿಲ್ಲದೆ ನಿರಾಳನಾಗಿ ಯುದ್ಧ ಮಾಡಬಹುದಿನ್ನು‛ ಎಂದು ನಗುತ್ತಾ ನುಡಿದವನು ಲಕ್ಷö್ಮಣನ ಮೇಲೆ ಅಮೋಘಾಸ್ತçವನ್ನು ಪ್ರಯೋಗಿಸಿದ. ಪ್ರಜ್ಞೆ ಕಳೆದುಕೊಂಡು ಭೂಮಿಯನ್ನಪ್ಪಿದ ಶ್ರೀರಾಮ ಸಹೋದರ.
ಕುಶ ಲವರ ಆರ್ಭಟಕ್ಕೆ ಲಕ್ಷö್ಮಣ ಸೇನೆಯದು ದಿಕ್ಕುದಿಕ್ಕಿಗೆ ಚೆಲ್ಲಾಪಿಲ್ಲಿಯಾಯಿತು. ಕುದುರೆಯನ್ನು ಕಟ್ಟಿಹಾಕಿದ್ದ ಬನದೆಡೆಗೆ ರಥವನ್ನು ಓಡಿಸಿದರು ಸೀತಾಸುತರು…


About The Author

Leave a Reply

You cannot copy content of this page

Scroll to Top