ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಬುದ್ಧಿವಂತನಾದವನು ಬೇರೆಯವರ ಅನುಭವಗಳಿಂದ ತಾನು ಕಲಿಯುತ್ತಾನೆ.ಕೆಲವರಿಗೆ ಬೇರೆಯವರ ಅನುಭವಗಳನ್ನು ನೋಡಿ ಕಲಿಯುವಂತಾದರೆ,ಕೆಲವರಿಗೆ ತಮ್ಮ ಸ್ವಂತ ಅನುಭವದಿಂದಲೇ ಕಲಿಯುವ ಅವಕಾಶ.ಸೋತವರ ಅನುಭವಗಳಿಂದ ಕಲಿತರೆ ಗೆಲ್ಲುವ ಸಾಧ್ಯತೆಯಿದೆ.ಹೀಗೆ ಅಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಾ ತನ್ನ ಬದುಕಿನಲ್ಲಿ ತಾನು ವೀಕ್ಷಸಿದ,ವಿದ್ಯಾರ್ಥಿಗಳ ನೋವನ್ನು ನೋಡಿ ನಮಗೆ ಅವುಗಳನ್ನು ಹೇಳಿ ನಮ್ಮ ಕಣ್ತೆರೆಸುವಂತಹ ಬರಹಗಳ ಮೂಲಕ ʼಸ್ವಾವಲಂಬಿ ಬದುಕಿನಾಚೆʼಲೇಖನಗಳ ಸಂಕಲನದ ಮೂಲಕ ಲೇಖಕಿ ಮಾಲಾ ಮ.ಅಕ್ಕಿಶೆಟ್ಟಿಯವರು ಸಾಹಿತ್ಯಲೋಕಕ್ಕೆ ಕೊಡುಗೆ ನೀಡಿದ್ದಾರೆ.ಪ್ರೊ.ನಾಗ.ಎಚ್.ಹುಬ್ಳಿಯವರ ಮುನ್ನುಡಿಯೊಂದಿಗೆ ಬಂದ ಈ ಲೇಖನ ಲೇಖಕಿಯ ಮೊದಲ ಕೃತಿ.

  ಮಹಿಳಾಪರ ಲೇಖನಗಳ ಮೂಲಕ ಮಹಿಳೆಯರ ಕುರಿತು ಕಾಳಜಿ,ಅವರು ವಹಿಸಬೇಕಾದ ಎಚ್ಚರ,ಮನೆ-ಕೆಲಸ ಎರಡೂ ಒಟ್ಟಿಗೆ ನಿಭಾಯಿಸಬೇಕಾದಾಗ ಬೇಕಾಗುವ ಎಚ್ಚರಿಕೆ,ಯೌವನದ ದಿನಗಳಲ್ಲಿ ಮೊಬೈಲ್‌ ಸ್ನೇಹದಿಂದ ಆಗಬಹುದಾದ ಪ್ರಮಾದಗಳು,ಸ್ನೇಹ,ಪ್ರೀತಿಯಲ್ಲಿರಬೇಕಾದ ಎಲ್ಲೆ,ವಿವಾಹ ಬಂಧನವನ್ನು ಗಟ್ಟಿಗೊಳಿಸಬೇಕಾದ ಗುಟ್ಟುಗಳು ಹೀಗೆ ಮಹಿಳೆಯರಿಗೆ ಒಬ್ಬ ಸೋದರಿಯಾಗಿ ಎಚ್ಚರಿಕೆ ನೀಡುತ್ತಾರೆ,ಮಹಿಳೆಯರಿಗಾಗಿ ನೀಡಿದ ಎಚ್ಚರ ಎಂದುಕೊಳ್ಳುವುದಕ್ಕಿಂತ ಇಂದಿನ ಯುವಜನಾಂಗಕ್ಕೆ ನೀಡುವ ಕಿವಿಮಾತುಗಳು,ಅವುಗಳನ್ನು ಕಿವಿಮಾತಿನಂತೆ ಹೇಳದೇ ನಯವಾಗಿ,ನಾಜೂಕಾಗಿ ನಾವು ಅಳವಡಿಸಿಕೊಂಡು ಎಚ್ಚೆತ್ತುಕೊಳ್ಳುವಂತೆ ಹೇಳುವ ಅವರ ಶೈಲಿ ನಮಗೆ ಇಷ್ಟವಾಗುತ್ತದೆ.

  ೪೨ ಲೇಖನಗಳ ಮೂಲಕ ಕೃತಿಯಲ್ಲಿ ಅವರು ನೀಡುತ್ತಿರುವ ಸಲಹೆ ಸೂಚನೆಗಳು ಇಂದಿನ ಯುವಜನಾಂಗಕ್ಕೆ ಅಗತ್ಯ .ಕೆಲವೊಮ್ಮೆ ಗಂಡಸರ ಕುರಿತು ನಾವು ತಪ್ಪು ತಿಳುವಳಿಕೆ ಹೊಂದಿದ್ದು ಅವರ ಬಗ್ಗೆ ಇರುವ ಒಳ್ಳೆಯ ಗುಣಗಳನ್ನು ಉದಾಹರಣೆ ಸಮೇತ ನೀಡುತ್ತಾ ಅವರ ಸಾಹಾಯಕ್ಕೆ ವಂದಿಸುತ್ತಾ ಎಲ್ಲ ಗಂಡಸರು ಕೆಟ್ಟವರಲ್ಲ,ಅವರ ಬಗ್ಗೆ ತಿಳಿದು ವ್ಯವಹರಿಸಬೇಕು ಎಂದು ಎಚ್ಚರಿಕೆಯನ್ನು ನೀಡುತ್ತಾರೆ.ಬಸ್ಸಿನಲ್ಲಿ ನಡು ಸೀಟಿನಲ್ಲಿ ಕುಳಿತು ನಿದ್ರೆಯ ಮಂಪರಿನಲ್ಲಿ ಪಕ್ಕದಲ್ಲಿ ಕುಳಿತ ಹುಡುಗಿಯತ್ತ ವಾಲುವ ಪರಿಸ್ಥಿತಿಯಲ್ಲಿ ಕಿಟಕಿಯ ಪಕ್ಕ ಕುಳಿತ ಹುಡುಗನ ಬಳಿ ಮನವಿಮಾಡಿ ತಾನು ಆ ಸೀಟಿಗೆ ಹೋಗಿ ನಿದ್ರಿಸುವ ಸನ್ನಿವೇಶ ಹೀಗೆ ಅನೇಕ ಉದಾಹರಣೆ ನಮ್ಮ ಮುಂದೆ ಇಡುತ್ತಾರೆ.

 ಇವೆಲ್ಲ ಲೇಖನಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳೇ ಅದರೂ ಎಲ್ಲ ಲೇಖನಗಳನ್ನು ಒಂದೇ ಕಡೆ ಓದುವ ಸದವಕಾಶ ನಮ್ಮ ಪಾಲಿಗಿದೆ.ಮನೆಕೆಲಸವೆಂದರೆ ತಾತ್ಸಾರ ತೋರುವ ಮಹಿಳೆಯರಿಗೆ ಕಿವಿಮಾತು,ಹಿರಿಯರೊಂದಿಗೆ ನಡೆದುಕೊಳ್ಳಬೇಕಾದ ರೀತಿ ಹೀಗೆ ಅನೇಕ ಕಿವಿಮಾತುಗಳನ್ನು ಹೇಳುತ್ತಾ ಸಾಗುವ ಲೇಖಕಿಯ ಎಲ್ಲಾ ಲೇಖನಗಳೂ ಚೆನ್ನಾಗಿ ಮೂಡಿ ಬಂದಿದ್ದು ನಮ್ಮನ್ನು ಓದಲು ಪ್ರೇರೆಪಿಸುತ್ತವೆ.  


ಪುಸ್ತಕ: ಸ್ವಾವಲಂಬಿ ಬದುಕಿನಾಚೆ
ಲೇಖಕರು :ಮಾಲಾ.ಮ.ಅಕ್ಕಿಶೆಟ್ಟಿ
ಬೆಲೆ:೧೭೦
ಪುಟ:೧೨೮+೧೬
ಪ್ರಕಾಶನ:ಎಸ್‌,ಎಲ್.ಎನ್.ಪಬ್ಲಿಕೇಷನ್

About The Author

Leave a Reply

You cannot copy content of this page

Scroll to Top