ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಬ್ಲರ್ಬ
     “ಇಲ್ಲಿ ಬರೀ ಸಿಮೆಂಟ್ ದೂಳು ಮಳೆಯಾಗಿ ಸುಳಿಯುವುದಿಲ್ಲ; ಬಡತನದ ಒರಟುತನದಲ್ಲೂ ಚಿಗುರಿದ ಶುದ್ಧ ಪ್ರೀತಿಯೊಂದು ಅಂದದ ಜೀವಗಳನ್ನೇ ಬೂದಿ ಮಾಡಿತು!”
   ಹಸಿರಿನಿಂದ ಕಂಗೊಳಿಸುತ್ತಿದ್ದ ಅವಳಿ ನಗರದ ತೋಟದ ಪಕ್ಕ ಕಾರ್ಖಾನೆಯೊಂದು ತಲೆಎತ್ತಿದಾಗ, ಅಲ್ಲಿನ ಪ್ರಕೃತಿಯಷ್ಟೇ ಮನುಷ್ಯರ ಉಸಿರೂ ಕಲುಷಿತವಾಯಿತು. ಅದೇ ದೂಳಿನಲ್ಲಿ ದಿನವಿಡೀ ಬೆವರು ಹರಿಸಿ ದುಡಿಯುವ ಒರಟು ಮೈಯ ಮರಗಪ್ಪ ಮತ್ತು ಶ್ರೀಮಂತ ಸಾವುಕಾರನ ಮುದ್ದಿನ ಮಗಳು ಗೌರಮ್ಮನ ನಡುವೆ ಚಿಗುರಿದ ಮೂಕ ಪ್ರೀತಿ, ವರ್ಗ-ಜಾತಿಯ ಗೋಡೆಗಳನ್ನು ಮೀರಿ ಬೆಳೆಯುತ್ತದೆ.
ಆದರೆ, ವಿಧಿಯ ಕ್ರೂರ ಆಟವೆಂಬಂತೆ, ಅದೇ ಸಿಮೆಂಟ್ ದೂಳು ನಿಧಾನವಾಗಿ ಅವರ ಶ್ವಾಸಕೋಶವನ್ನು ತಿಂದುಹಾಕಿ ಮಾರಕ ‘ಕ್ಯಾನ್ಸರ್’ ಎಂಬ ಮಹಾಮಾರಿಯಾಗಿ ಪರಿಣಮಿಸುತ್ತದೆ. ಸಮಾಜದ ಕಣ್ಣಿಗೆ ಬಿಸುಕಿಸಲ್ಪಟ್ಟ ಆ ಪ್ರೇಮಿಗಳು ಕೊನೆಗೆ ಅದೇ ಬೂದಿ ಮಳೆಯ ನಡುವೆ ಒಂದೇ ಚಿತೆಯಲ್ಲಿ ಅಮರರಾಗುತ್ತಾರೆ.
ಜಾತಿ-ಅಂತಸ್ತಿನ ಅಹಂಕಾರವನ್ನು ಕರಗಿಸಿ, ಓದುಗರ ಕಣ್ಣಾಲೆಗಳನ್ನು ಒದ್ದೆ ಮಾಡುವ ಈ ಕರುಳು ಹಿಂಡುವ ಪ್ರೇಮ ಕಥೆಯೇ  ಸಿಮೆಂಟ್ ಕಾರ್ಖಾನೆಯ ದೂಳಿನಲ್ಲಿ ಅರಳಿದ ಪ್ರೀತಿ…


About The Author

Leave a Reply

You cannot copy content of this page

Scroll to Top