ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ನಡೆಯಬಾರದ ನೋವು ಮರೆಯಬೇಕು ಆದರೆ ಮರೆಯಲಾಗಲಿಲ್ಲ.
ನಂಬಿದವರು ಕೈ ಕೊಟ್ಟಾಗ ಮರೆಯಬೇಕು? ಆದರೆ ಮರೆಯಲಾಗಲಿಲ್ಲ.
ಹೆಜ್ಜೆ ಹೆಜ್ಜೆಗೂ ಅಪಮಾನ ಮಾಡಿದರೂ ಮರೆಯಬೇಕು ಆದರೆ ಮರೆಯಲಾಗಲಿಲ್ಲ.
ದಡ್ಡ ದಡ್ಡ ಡಂಗುರ ಬಾರಿಸಿದರೂ ಮರೆಯಬೇಕು ಆದರೆ ಮರೆಯಲಾಗಲಿಲ್ಲ.
ಮಗಳು ಜೀವ ಬಿಟ್ಟಾಗ ಮರೆಯಬೇಕು ಆದರೆ ಮರೆಯಲಾಗಲಿಲ್ಲ..
ಆಸ್ಪತ್ರೆಗೆ ಹೋದ ಅಣ್ಣ ಶವವಾಗಿ ಬಂದಾಗ ಮರೆಯಬೇಕು ಆದರೆ ಮರೆಯಲಾಗಲಿಲ್ಲ.
ಮಗನ ಸಾವಿನಲ್ಲಿ ಅಪ್ಪ ಜೀವ ಬಿಟ್ಟಾಗ ಮರೆಯಬೇಕು ಆದರೆ ಮರೆಯಲಾಗಲಿಲ್ಲ.
ಸಣ್ಣ ಸಣ್ಣ ಮಕ್ಕಳು ಹಾದಿ ಬೀದಿಯಲ್ಲಿ ಸತ್ತಾಗ ಮರೆಯಬೇಕು ಆದರೆ ಮರೆಯಲಾಗಲಿಲ್ಲ.
ಬಡವರ ನೋವು ಕಂಡಾಗ ಮರೆಯಬೇಕು ಆದರೆ ಮರೆಯಲಾಗಲಿಲ್ಲ.
ಅಳುವು ದುಃಖ ಮರೆಯಬೇಕು ಆದರೆ ಮರೆಯಲಾಗಲಿಲ್ಲ…


About The Author

Leave a Reply

You cannot copy content of this page

Scroll to Top