ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಸ್ನೇಹ ಅಂದ್ರೆ ಏನಂತಿರಾ?
ಸ್ಕೂಲ್ ಬೆಲ್ ಹೊಡೆದ ತಕ್ಷಣ  
“ಊಟ ತಂದ್ಯಾ?” ಅಂತ ಕೇಳೋದು.

ಸ್ನೇಹ ಅಂದ್ರೆ ನೀನು ಫೇಲ್ ಆದಾಗ
“ಪರವಾಗಿಲ್ಲ ಕಣೇ/ಣೋ” ಅಂತ  
ನಿನಗಿಂತ ಜೋರಾಗಿ ಬೇಜಾರು
ಮಾಡಿಕೊಳ್ಳುವುದು.  
ನೀನು ಪಾಸ್ ಆದಾಗ ನಿನಗಿಂತ
ಜೋರಾಗಿ ಚಪ್ಪಾಳೆ ತಟ್ಟೋದು.

ಸ್ನೇಹ ಅಂದ್ರೆ  
ಅರ್ಧ ರಾತ್ರಿ “ನಿದ್ದೆ ಬರ್ತಿಲ್ಲ” ಅಂದ್ರೆ  
ಎರಡು ಗಂಟೆ ಮಾತಾಡಿ “ಮಲ್ಕೊ” ಅಂತ ಹೇಳೋದು. ಜಗಳ ಆಡಿ, ಮತ್ತೆ ಐದು
ನಿಮಿಷದಲ್ಲಿ ತಪ್ಪಿರದಿದ್ದರೂ “ಸಾರಿ ಕಣೇ” ಅನ್ನೋದು
ಬೇಜಾರು ಮಾಡೋದೆ ಇರದು.

ಅದು ರಕ್ತದ ಸಂಬಂಧ ಅಲ್ಲ,  
ಆದ್ರೂ ರಕ್ತಕ್ಕಿಂತ ಗಟ್ಟಿ.  
ಅದು ಮಾತಿನ ಒಪ್ಪಂದ ಅಲ್ಲ,  
ಆದ್ರೂ ಮಾತಿಲ್ಲದೆ ಅರ್ಥ ಆಗೋ ಬಂಧ.

ಸ್ನೇಹ ಇದ್ರೆ ಬದುಕು ಸುಲಭ.  
ಬೀಳುವಾಗ ಹಿಡಿಯೋ ಕೈ,  
ನಗುವಾಗ ಜೊತೆಗಿರುವ ನೆರಳು,  
ಅಳುವಾಗ ಒರಗಲೊಂದು ಭುಜ
ಕಣ್ಣೀರೊರೆಸುವ ನಿಷ್ಕಲ್ಮಶ ಹೃದಯಗಳು.

ನಿನ್ನ ಬದುಕಲ್ಲಿ ಅಂತಹ ಒಬ್ಬ ಸ್ನೇಹಿತ
ಇದ್ದಾನಾ?/ಳಾ?
ಅವರಿಗೆ ಈಗಲೇ “ಥ್ಯಾಂಕ್ಸ್ ಕಣೆ/ಣೊ”
ಅಂತ ಹೇಳ್ಬಿಡು ಮನಸಾರೆ ಶರಣೆಂದು ಬಿಡು.
ಇಂದೊಂದಿನಕ್ಕೆ ಸೀಮಿತ ಅಲ್ಲ ಈ ಜನುಮ ಪ್ರತಿ ಜನುಮದಲ್ಲೂ ಜೊತೆಯಾದ ಸ್ನೇಹಕ್ಕೆ.


About The Author

Leave a Reply

You cannot copy content of this page

Scroll to Top