ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಈ ಸಂದರ್ಭದ ಮಾತುಗಳಂದ್ರ ಮಳಿ ಮತ್ತು ಜಿರಲೆಗಳು.ಮಳಿಗಾಲ ಶರು ಆಗಿ ಎರಡು ತಿಂಗಳಾದಮ್ಯಾಲ ಈಗ ನಮ್ಮ ಕಲ್ಬುರ್ಗಿ ಕಡಿ ಮಳಿ ಬರಲತದ. ಬಿತ್ತಿದ ಉದ್ದು ಹೆಸರು ಬೆಳೆಗಳು ಮಳಿ ಇಲ್ದೆ ಬಾಡಿ ಹೋದ್ವು.ಈಗ ಬಿತ್ತಿದ ತೊಗರಿ ಅತೀ ಮಳೆಯಿಂದ ಎನಾಗತದೋ , ಪ್ರತಿ ವರ್ಷ ಇದೇ ಕತಿ .ಅತಿವೃಷ್ಟಿ ಅಥವಾ ಅನಾವೃಷ್ಟಿ , ಆಹಾರ ಹೆಂಗಾದ್ರೂ ಮಾಡ್ಬಹುದು. ಬೋರ್ವೆಲ್ ಗಳದಾಗೆಲ್ಲ ಅಂತರ್ಜಲ ಮಟ್ಟ ಕುಸದು ನೀರು ಬತ್ತಿ ಹೋಗಿದ್ವು. ಇನ್ನೂ ಸ್ವಲ್ಪ ದಿನ ಮಳಿ ಬರದಿದ್ರ ನೀರಿನ ಬರಗಾಲ ಕಾಣಬೇಕಾಗಿತ್ತು.ಮಳಿ ಕರುಣೆ ತೋರಿಸ್ತು.

ಇದರ ಜೋತೆಗೆ ನಮ್ಮ ದೇಶದ ಯುವ ಜಿರಲೆಗಳ ಹರತಾಳ ಒಂದು ರೀತಿ ಯಶಶ್ವಿ ಆಯ್ತು.ಈಗಿನ ಯುವ ಪಿಳಗಿ ಜೆನ್ ಝಿ ಗಳ ಒಂದು ರೀತಿ ಹಠಮಾರಿಗಳು.ಅವರ ವಿದ್ಯ ಬಗ್ಗೆ ಹೇಳಬೆಕಂದ್ರ ಈಗ ಎಲ್ಲರೂ ಓದಿದವ್ರೆ.ಓದಲಾರದವ್ರು ಕೂಡ ಸೋಸಿಯಲ್ ಮಿಡಿಯಾದ ಪ್ರಭಾವದಿಂದ ವುದ್ಯಾವಂತ್ರೆ.ಯಾಕಂದ್ರ ಇಂಗ್ಲಿಷ್ ಓದಕ್ಕ ಬರೆಯಕ್ಕ ಬರದಿದ್ರೂ ಇವರು ಪೋನ್ ನಲ್ಲಿ ಇಂಗ್ಲಿಷ್ ಒದ್ತಾರ.ಮತ್ತ ಟೈಪ್ ಕೂಡ ಮಾಡತಾರ.ಇದು ಝನ್ ಝಿ ಗಳ ಕರಾಮತ್ತು. ನಮ್ಮ ನ್ಯಾಯವಾದುಗಳು ಈಗಿನ ನಿರುದ್ಯೋಗಿ ಯುವ ಪಿಳಿಗಿ ಜಿರಲೆಗಳಂತೆ ಎಲ್ಲರ ಮ್ಯಾಲ ಎಗರಿ ಬಿಳತಾರ ಅಂತ ಹೆಳಿದ್ರು.ಆದ್ರ ಅದು ಸುಳ್ಳು. ಝನ್ ಝಿ ಗಳು ತಮ್ಮ ಪಾಡಿಗಿ ತಾವು ಯಾವಾಗ್ಲೂ ಪೋನ್ ನಲ್ಲಿ ಮುಳಗಿರತಾವ.ಅವರಿಗೆ ಭವಿಷ್ಯದ ಬಗ್ಗೆ ಅತೀ ನಿರೀಕ್ಷೆ ಗಳಿಲ್ಲ. ಯಾರ ಜೋತೆ ಹೆಚ್ಚು ಮಾತಿಲ್ಲ , ಎಕಾಂಗಿಯಾಗೆ ಇರತಾರ.ಮನಿಗಿ ಯಾರಾದ್ರೂ ಅಥಿತಿ ಗಳು ಬಂದ್ರ ಸುಮ್ನ ಮಾರಿ ತೋರ್ಸಿ ರೂಂ ನೊಳಗ ಹೋಗಿ ಸೇರಿಕೊಂಡು ಬಿಡತಾವ.ಅವ್ರು ಗೆಳೆಯರೊಂದಿಗೆ ಆಪ್ತ ಆಗಿ ಇರುವಷ್ಟು ಹೆತ್ತವರೊಂದಿಗೂ ಇರಲ್ಲ.ತಮ್ಮ ಮನದಾಳ ಗೂಗಲ್ ಅಥವಾ ಅಲೆಕ್ಸಾ ಗ ಹೇಳತಾರ ಹೊರತಾಗಿ ಹೆತ್ತವರಿಗಿ ಹೇಳಲ್ಲ. ಆದ್ರ ಅವರಿಗಿ ಒತ್ತಾಯಿಸಿದ್ರ ದಬ್ಬಾಳಿಕಿ ಮಾಡಿದ್ರ , ಕಿಡಿಕಿಡಿ ಆಗತಾರ. ಆತ್ಮಹತ್ಯೆಗಳಂತ ನಿರ್ಧಾರ ಕ್ಕೂ ಕೂಡ ಯುವ ಜನ ಅಂಜತಿಲ್ಲ.ಇದು ಶೋಚನೀಯ ವಿಷಯ. ಈಗಿನ ಯುವ ಜನ ಗೌಪ್ಯತೆ ಇಷ್ಟ ಪಡತಾರ.ಯಾರೊಂದಿಗೂ ಹೆಚ್ಚು ಎನನ್ನು ಹಂಚಿಕೊಳ್ಳಲ್ಲ. ಎಕಾಂತ ಮತ್ತು ಪೋನ್ ಗಳೆ ಅವ್ರ ಆಪ್ತ ಸಂಗಾತಿಗಳು.

ಇನ್ನೂ ಶಿಕ್ಷಣದ ವಿಷಯ ಬಂದ್ರೆ ಯುವ ಜನ ಅದರ ಬಗ್ಗೆ ಸಂತುಷ್ಟರಾಗಿಲ್ಲ.ಎಷ್ಟೇ ಓದಿ ಎರಡೆರಡು ಡಿಗ್ರಿ ತಗೊಂಡ್ರು ಉದ್ಯೋಗದ ಭರವಸೆಗಳಿಲ್ಲ.ಗ್ರಾಮೀಣ ಭಾಗದಲ್ಲಿ ಓದಿದ ವಿದ್ಯಾರ್ಥಿಗಳು ಕಾರ್ಪೊರೇಟ್ ನೌಕರಿಗಾಗಿ ದೊಡ್ಡ ಊರು ಸೇರಿ ಪಟ್ಟಣದವರೊಂದಿಗೆ ಸೆಣಸಿ ತಮ್ಮ ನೌಕರಿ ಉಳಿಸಿಕೊಳ್ಳಲು ಹರಸಾಹಸ ಪಡಬೇಕು.ಇನ್ನೂ ಸರ್ಕಾರಿ ನೌಕರಿ ಸೇರಬೇಕಾದ್ರ ವಶೀಲಿ ಅಥವಾ ದುಡ್ಡಿನ ಆಧಾರ ಬೇಕು. ಸರ್ಕಾರಿ ನೌಕರಿ ಸಿಕ್ರು ನೆಮ್ಮದಿ ಇಲ್ಲ.ವ್ಯವಸ್ಥೆ ವಿರುದ್ದ ಹೋಗಲಾರದೆ , ತಮ್ಮಿಷ್ಟದಂತೆ ಕೆಲಸ ಮಾಡ್ಲಿಕ್ಕಾಗ್ದೆ ಅಶಾಂತಿ ಯಲ್ಲೆ ಇರತಾರ.

ಶಿಕ್ಷಣ ಯುವಜನಕ್ಕೆ ಯಾವ ರೀತಿ ಉಪಯೋಗ ಆಗ್ತಾ ಇದೆ ಅಂತ ಚಿಂತಿ ಆಗತದ.ಬಿ ಎ . ಬಿ ಕಾಂ ನಂತಹ ಡಿಗ್ರಿ ಮಾಡಿ ಮುಂದೆ ಏನ್ ಮಾಡ್ಬೇಕು . ಅದಕ್ಕ ಎಲ್ರೂ ಡಾಕ್ಟರ್ ಇಂಜಿನಿಯರ್ ಗಳೆ ಆಗಬೇಕು ಅಂತ ಹೆತ್ತವರ ಆಸೆ.ಮಕ್ಕಳಿಗಿ ಇಷ್ಟ ಇರಲಿ ಬಿಡ್ಲಿ , ಆಸ್ತಿ ಮಾರಿ ಸಾಲ ಮಾಡಿಯಾದ್ರೂ ಮಕ್ಕಳಿಗಿ ಡಾಕ್ಟರ್ ಇಂಜಿನಿಯರ್ ಮಾಡ್ಬೇಕು ಎಂಬುದೇ ಹೆತ್ತವರ ಉದ್ದೇಶ. ಡಾಕ್ಟರ್ ಇಂಜಿನಿಯರ್ ಓದಿದವ್ರು ಈಗ ನಿರುದ್ಯೋಗಿಗಳು.ಇನ್ನೂ ಆರ್ಟ್ಸ್ , ಕಾಮರ್ಸ್ ಮಾಡಿದವ್ರ ಪಾಡು ಕೆಳೋದೇ ಬ್ಯಾಡ.ಇಂತಹ ಸಂದರ್ಭದಾಗ ಯುವಜನತೆಯ ಮನಸ್ಥಿತಿ ಏನಾಗಿರತದ..! ಮಾಡಲು ಕೆಲಸ ಇಲ್ದೆ ಭವಿಷ್ಯದ ಬಗ್ಗೆ ನಿರುತ್ಸಾಹಿತರಾಗತಾರ.ಇದಕ್ಕ ಯಾರು ಹೊಣೆ..! ಈಗಿನ ಯುವ ಪಿಳಿಗಿ ಓದುವ ವಿಷಯಕ್ಕೆ ಎಲ್ರು ಜಾಣರೆ ಇದ್ದಾರ.ಹಗಲೂ ರಾತ್ರಿ ಓದ್ತಾರ.ಡಾಕ್ಟರ್ ಇಂಜಿನಿಯರ್ ಆಗ್ಲೇಬೇಕು ಅಂತ ಅತೀ ಆಕಾಂಕ್ಷೆ ಇಟ್ಟುಕೊಂಡು ಓದ್ತಾರ.
ಅಂತದ್ದರಲ್ಲಿ ಈ ಪೇಪರಗಳು ಪರೀಕ್ಷೆಗೆ ಮೊದಲೆ ಸೋರಿ ಕಣ್ಣಾಗ ಎಣ್ಣಿ ಹಾಕ್ಕೊಂಡು ಓದಿದವ್ರಿಗೆ ಹತಾಶ ಭಾವ ಉಂಟುಮಾಡತದ.ಸಹಜ , ಒಂದಲ್ಲ ಎರಡಲ್ಲ , ಮ್ಯಾಲಿಂದ ಮ್ಯಾಲ ಪೇಪರ್ ಲೀಕ್ ಆಗೋದು.ಪರಿಕ್ಷೆಗಳು ಮತ್ತ ನಡೆಯೊದು ಇವೆಲ್ಲ ವಿದ್ಯಾರ್ಥಿಗಳಿಗಿ ಒತ್ತಡ ಉಂಟು ಮಾಡತದ. ಭವಿಷ್ಯದ ಬಗ್ಗೆ ಹತಾಶರಾಗಿ ಆತ್ಮಹತ್ಯೆ ಗೆ ಶರಣಾಗತಿದ್ದಾರ. ಇದಕ್ಕೆಲ್ಲ ಯಾರು ಹೊಣೆ..! ಸರ್ಕಾರ.

ಯುವಕರಿಗೆ ಉದ್ಯೋಗವಕಾಶಗಳನ್ನು ಮೊದಲು ಒದಗಿಸಬೇಕು.ಒಂದರನಂತರ ಒಂದು ಹೋಸ ಹೋಸ ಕಾಲೇಜ್ ಗಳಿಗಿ ಪರವಾನಗಿ ಕೊಟ್ಡು ವಿದ್ಯಾವಂತ ನಿರಿದ್ಯೋಗಿಗಳನ್ನು ಸರ್ಕಾರ ಸೃಷ್ಟಿ ಮಾಡಲತದ.ಹೆಚ್ಚು ಹೆಚ್ಚು ಶಿಕ್ಷಣ ಸಂಸ್ಥೆ ಗಳು ಬೆಳೆದಂದ ಉದ್ಯೋಗ ಗಳನ್ನು ಒದಗಿಸ್ರಿ. ಡಿಗ್ರಿ ಕೊಡೊದಷ್ಟೆ ನಮ್ಮ ಕೆಲಸ ಅಂತ ಸರ್ಟಿಫಿಕೇಟ್ ಕೊಟ್ಟು ಕಳಸಿದ್ರ.. ಹೊರಗ ಬಂದಮ್ಯಾಲ ಯುವಜನತೆ ಏನು ಮಾಡ್ಬೇಕು..! ಇದಕ್ಕೆಲ್ಲ ಉತ್ತರಾನೆ ಇಲ್ಲ ಬಿಡ್ರಿ.

ಈಗ ಅತೀ ವಿದ್ಯಾವಂತ್ರೆ ಹೆಚ್ಚು ಆತ್ಮಹತ್ಯೆ ಗಳಿಗೆ ಶರಣಾಗತಿದ್ದಾರ.ವಿದ್ಯ ವ್ಯಕ್ತಿತ್ವ ವಿಕಸನ ಮಾಡುವ ಬದಲಾಗಿ ವ್ಯಕ್ತಿತ್ವವನ್ನು ಹತಾಶೆಗೊಳಿಸ್ತಿದೆ.ಹಂಗಾದ್ರೆ ಮುಂದಿನ ಪಿಳಿಗೆಯ ಭವಿಷ್ಯ..!

ಇಂತಹ ವಿಷಯಗಳು ಮಾತಾಡ್ಬೇಕಾದ ಸರ್ಕಾರ ಮೌನವಾಗಿದ್ರ ಯುವಜನ ದಂಗೆ ಏಳಲಾರಧ ಮತ್ತೆನು ಮಾಡ್ಬೇಕು. ಪ್ರಶ್ನೆ ಪತ್ರಿಕೆ ಸೋರಿಕೆ ಎಲ್ಲಾ ಸರ್ಕಾರದ ಅವಧಿಯಲ್ಲೂ ಆಗಿರಬಹುದು.ಅದಕ್ಕಾಗಿ ದ್ವನಿ ಎತ್ತುವ ಸಮಯ ಈಗ ಬಂದಿತ್ತು.ಆ ವಿಷಯದ ಚರ್ಚೆಗಾಗಿ ಸರ್ಕಾರದ ಸಿದ್ದವಿರಲಾರದಕ್ಕ ಪರಿಸರ ಹೋರಾಟಗಾರ ಸೋನ್ಂ ವಾಂಗ್ಚೂಕ್ ವಿದ್ಯಾರ್ಥಿ ಗಳ ಪ್ರತಿನಿಧಿ ಯಾಗಿ ಉಪವಾಸ ಸತ್ಯಾಗ್ರಹ ಆರಂಬಿಸಿದ್ರು. ಆಗಲಾದ್ರೂ ಸರ್ಕಾರ ಅವರೊಂದಿಗೆ ಚರ್ಚೆಗೆ ಬರಬೇಕಾಗಿತ್ತು.ಒಬ್ಬ ವ್ಯಕ್ತಿ ದೇಶದ ವಿಷಯದ ಬಗ್ಗೆ ಉಪವಾಸ ಸತ್ಯಾಗ್ರಹ ಮಾಡತಿದ್ರೆ ಸರ್ಕಾರದ ಕರ್ತವ್ಯ ಆಗತಿರದ ಆ ವ್ಯಕ್ತಿಗೆ ಭೇಟಿ ಮಾಡಿ ಸಮಸ್ಯೆ ಆಲಿಸಿ ಅದರ ಪರಿಹಾರಕ್ಕಾಗಿ ನಾವು ನೀವು ಕೂಡಿ ಪ್ರಯತ್ನಿಸೋಣ ಎಂದು ಹೇಳೊದು.

ಆದ್ರ ನಮ್ಮ ಸರ್ಕಾರ ಇದರ ಬಗ್ಗೆ ಚರ್ಚಿಸೋದು ಇರಲಿ.ಒಬ್ಬ ವ್ಯಕ್ತಿ ಉಪವಾಸ ಮಾಡಿ ಸಾಯುವ ಸ್ಥಿತಿಗೆ ಬರತಿದ್ದಾನ ಅಂತ ಗೊತ್ತಿದ್ದೂ ಆ ವಿಷಯದ ಬಗ್ಗೆ ಚಕಾರ ಎತ್ತದೆ ಇರೊದ್ರೀಂದ ಜನರ ಅದರಲ್ಲೂ ಯುವಜನರ ವಿರೋಧ ಎದಿರಿಸಬೇಕಾಯ್ತು. ನಮ್ಮ ದೇಶದ ಬಿಜೆಪಿ ಸರ್ಕಾರಕ್ಕೆ ಯಾಕ ಇಷ್ಟು ಆತ್ಮ ಪ್ರತಿಷ್ಟೆ..! ನಾವು ಏನು ಮಾಡಿದ್ರು ನಡಿತದ ಎಂಬ ದೋರಣೆ. ನಾವು ಮಾಡಿದ್ದೆಲ್ಲ ಸರಿ ಇರತದ ಎಂಬ ಅತೀ ಆತ್ಮ ವಿಶ್ವಾಸ. ಇಂಥ ಸರ್ವಾಧಿಕಾರಿ ದೋರಣೆ ನಮ್ಮ ದೇಶದ ಯುವಜನರನ್ನ ರೊಚ್ಚಿಗೆಬ್ಬಿಸ್ತು. ಮೊದಲೆ ಶಿಕ್ಷಣ ವ್ಯವಸ್ಥೆ ಯಿಂದ , ನಿರುದ್ಯೋಗ ದಿಂದ ಒದ್ದಾಡತಿರೋ ವಿದ್ಯಾರ್ಥಿಗಳು , ತಮಗಾಗಿ ಉಪವಾಸ ಸತ್ಯಾಗ್ರಹ ಮಾಡುವರ ಪರ ಆದ್ರು.ಸರ್ಕಾರದ ವಿರುದ್ದ ದಂಗೆ ಎದ್ರು.

ಸತ್ಯಾಗ್ರಹ ಗಳಲ್ಲಿ ಮುಷ್ಕರ ಗಳಲ್ಲಿ ದಂಗೆಗಳಾಗತ್ತವ.ಕೆಲವು ದಂಗೆಕೋರರು ಇಂತಹ ಅವಕಾಶ ಬಳಸಿಕೊಳ್ಳಲಿಕ್ಕೆ ಕಾಯ್ತಿರತಾರ. ವಿದ್ಯಾರ್ಥಿ ಗಳು ಮಾಡತಿರೋ ಮುಷ್ಕರ ದಲ್ಲಿ ಕಿಡಿಗೇಡಿಗಳು ಪೋಲಿಸ್ ರ ಮೇಲೆ ಹಲ್ಲೆ ಮಾಡಿದಕ್ಕೆ ವಿದ್ಯಾರ್ಥಿ ಸಮೂಹದ ಮ್ಯಾಲ ಲಾಠಿ ಚಾರ್ಜ್ ಮಾಡಿ ಹೊಡೆಯೊದು ಅಮಾನುಷ ವರ್ತನೆ. ಹೊಡೆತ ತಿಂದ ವಿದ್ಯಾರ್ಥಿಗಳು ಮತ್ತಷ್ಟು ದಂಗೆ ಎದ್ರು.ಇದನ್ನು ನಿತಂತ್ರಿಸಲಿಕ್ಕೆ ಪೋಲಿಸರು ಮತ್ತಷ್ಟು ಲಾಠಿ ಚಾರ್ಜ್ ಮಾಡಿದ್ರು.
ಈ ಘರ್ಷಣೆ ಗೆ ಸರ್ಕಾರ ಹೊಣೆ.ನಮ್ಮ ಪ್ರಧಾನ ಮಂತ್ರಿ ಯ ಮೌನದಿಂದಲೇ ಇಷ್ಟೆಲ್ಲಾ ಆಯ್ತು.ಇನ್ನೂ ಮುಷ್ಕರ ದಲ್ಲಿ ಯುವಕ ಯುವತಿಯರ ವರ್ತನೆಗಳ ಬಗ್ಗೆ ಎಲ್ಲಾ ಸಕಾರಾತ್ಮಕವಾಗೆ ಹೇಳಲಿಕ್ಕಾಗಲ್ಲ.ಯುವ ಪಿಳಗಿ ಅಂದ್ರ ಒಂದು ರೀತಿ ಕಪಿಗಳಂಗ.ಕೆಣಕಿದ್ರ ಮೈಮ್ಯಾಲ ಬರತಾವ.ತಮಗಾದ ಅನ್ಯಾಯಕ್ಕೆ ಎನಾದ್ರೂ ಸಮಾಧಾನ ಆಗುವಹಂಗ ಮಾತಾಡಿ ರಮಿಸ್ತಾರ ನಮ ಪ್ರಧಾನ ಮಂತ್ರಿಗಳು ಅಂತ ಆಪೇಕ್ಕಾ ಪಟ್ರ ತಮಗ ಲಾಠಿಯಿಂದ ಹೊಡ್ಸತಾರ ಅಂತ ಮತ್ತಿಟು ಸಿಟ್ಟಾದ್ವು. ಆಗ ನಮ್ಮ ಪ್ರ ಮಂ ಗಳಿಗಿ ಗೊತ್ತಾಯ್ತು.ಈ ಝನ್ ಝಿ ಪಿಳಗಿ ಲಾಠಿ ಏಟಗಿ ಬಗ್ಗವು ಅಲ್ಲ.ಇವಕ್ಕೆ ಪ್ರೀತಿಯಿಂದ ಅವ್ರ ಭಾಷಾದಾಗೆ ಒಲಿಸಿಕೊಳ್ಳಬೇಕು ಅಂತ ಪೋನ್ ಮಾರಿ ಮುಂದ ಹಿಡಕೊಂಡು ರಾತ್ರಿ ಅವರಾತ್ರಿ ರೀಲ್ ಮಾಡಿ ಝನ್ ಝಿ ಆಗಲಿಕ್ಕ ಪ್ರಯತ್ನಿಸಿದ್ರು.ಇದೇ ಮೊದಲೆ ಮಾಡಿದ್ರ ಆಗ್ತಿತ್ತು..
ಆದ್ರ ನಾನೇ ಶ್ರೇಷ್ಠ ಅಂದಕೊಳ್ಳೋರಿಗೆ ಸಮಯನೆ ಪಾಠ ಕಲಿಸ್ತದಂತ.


About The Author

Leave a Reply

You cannot copy content of this page

Scroll to Top