ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಪ್ಪಾ ಹಗಲಿನ ಸೂರ್ಯನಂತೆ ,
ಸಲಿಗೆ , ಸಾಮೀಪ್ಯ ಇರದ ,
ಹತ್ತಿರ ಹೋಗಲು ಒಂದು ರೀತಿಯ ಭೀತಿ ,
ಮಾತಿನಲ್ಲಿ ಬಿಗಿಯಾದ ಗತ್ತು , ಗಾಂಭೀರ್ಯ.
ಒಮ್ಮೆ ತಣ್ಣಗಿನ ಮುಖ ಛಾಯೆ ,
ಮರು ಘಳಿಗೆ ಕೆಂಡಾಮಂಡಲ ,
ಆದರೂ ಅವನಿಲ್ಲದೆ ಬಾನು ಇಲ್ಲ
ಬದುಕು ಇಲ್ಲ…….

ಅವ್ವಾ ರಾತ್ರಿಯ ಚಂದಿರನಂತೆ ,
ಸದಾ ಸುಸೂವ ಚಂದ್ರಿಕೆಯ ತಂಪು ,
ಮಂದವಾಗಿ ಬೆಳಗುವಳು ನಿರಂತರ .
ಎಂದೂ ಕುಪಿತಳಾಗದ ಹಸನ್ಮುಖಿ ,
ಮಕ್ಕಳನು ಮುದ್ದಿಸಿ , ಬಾಚಿ ತಬ್ಬುವಳು ,
ಅಪ್ಪಾ ಇದ್ದಾಗ ಅವಳಿಗೆ ಸ್ವತಂತ್ರ ಇಲ್ಲ…….

ನಾವು ಮಕ್ಕಳು ಅವರಿಬ್ಬರ ಬೆಳಕಿನಲ್ಲಿ
ನಲಿಯುವ ತಾರೆಗಳು.
ಅಪ್ಪನ ಆಸರೆ ಹಗಲಿಗೆ ,
ಅವ್ವನ ಆಸರೆ ಇರುಳಿಗೆ ,
ಇಬ್ಬರು ಇದ್ದರೆ ಮಾತ್ರ
ನಮ್ಮ ಅಸ್ತಿತ್ವ ಜೀವ ಕಳೆ ……

ಬಾಳ ಬಾನಿನ ಸುಖಿ ಕುಟುಂಬ
ನಮ್ಮದೇಂಬ ಹೆಮ್ಮೆ ನನ್ನದು…..                                    .


About The Author

Leave a Reply

You cannot copy content of this page

Scroll to Top