ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹಚ್ಚಿಟ್ಟ ಹಣತೆ ಎದೆಯನ್ನು ಸುಡುವಾಗ ಬೆಳಕಿನ ತಾಪವನ್ನು ಏನೆಂದು ಶಪಿಸಲಿ
ಮಾತು ಕಳೆದುಕೊಂಡ ನಾಲಿಗೆ ಜೊತೆಗಿರುವಾಗ ಮೌನದ ನೋವನ್ನು ಏನೆಂದು ಕರೆಯಲಿ

ಎಲ್ಲ ನಾಟಕ ಬರಿ ಪೊಳ್ಳು ಬಾಳ ಬಯಲಾಟದಲ್ಲಿ ನಡೆಯುತಿದೆ ತಾಲೀಮು ದಿಕ್ಕೆಟ್ಟು
ಇರುಳ ಬೆಳಕಿನಾಟದಲ್ಲಿ ರಾತ್ರಿ ಸಾವು ಹಗಲಿಗೆ ಹುಟ್ಟು ಕೂಡಿರುವಾಗ ಪ್ರೀತಿಯನ್ನು ಏನೆಂದು ಹೆಸರಿಸಲಿ

ಹುಚ್ಚರ ಸಂತೆಯಲ್ಲಿ ತತ್ರಾಣಿ ಕನಸು ಸೋತು ಗೆಲುವಿನ ಕಂದೀಲು ಅಬ್ಬರಿಸುತ್ತಿದೆ
ಜಾತಿ ಧರ್ಮ ಪ್ರೇಮಕ್ಕೆ ಕಾಮದ ಹಣೆಪಟ್ಟಿ ಕಟ್ಟಿರುವಾಗ ಬದುಕನ್ನು ಏನೆಂದು ಬಣ್ಣಿಸಲಿ.

ಮೆಚ್ಚಿಸೊ ಹುಚ್ಚು ಹಂಗಿಸೊ ಆಸೆ ಇರದ ಭಾವಗಳು ಜನ್ನತ್ ಗೆ ಧಾವಿಸುತ್ತಿವೆ
ಒಂದು ದಿನದ ಸಾವು ಸೋಲಾಗಿ ಕೈಹಿಡಿವಾಗ ಬಾಳ ಬಣ್ಣವನ್ನು ಏನೆಂದು ತಿಳಿಯಲಿ.

ಮೂರ್ಖರ ಮಧ್ಯೆ ಸ್ವರ್ಗಕ್ಕೆ‌ ದಾರಿಕೇಳಬೇಡ ವಾಣಿ ಏಕತಾರಿ ನುಡಿಸುತ್ತ ಸಾಗು
ಆತ್ಮದ ಬಾಗಿಲು ಮುಕ್ತಿಯನ್ನೇ ಬೇಡುವಾಗ ಕುಹಕಿಗಳ‌ ಮನವನ್ನು ಏನೆಂದು ಚಿತ್ರಿಸಲಿ.


About The Author

Leave a Reply

You cannot copy content of this page

Scroll to Top