ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕೊರಳು ಕಂಪಿಸಿ ಬಿಗಿಯಾದರೆ ಪ್ರೇಮ
ಕಣ್ಣೆರಡು ಮಿಳಿಸಿ ಹಸಿಯಾದರೆ ಪ್ರೇಮ

ಮನದ ಬಯಲಲ್ಲೆಲ್ಲಾ ಅರಳಿ ಮಲ್ಲಿಗೆ
ಜೀವ ಆಲಾಪಿಸಿ ಬಿಸಿಯಾದರೆ ಪ್ರೇಮ

ದೇಹದರಮನೆಯ ತುಂಬಾ ಸಂಚಲನ
ಭಾವ ಬಯಸಿ ಖುಷಿಯಾದರೆ ಪ್ರೇಮ

ಹಂಬಲದಲೆ ಬೋರ್ಗರೆದು ಅಪ್ಪಳಿಸಿ
ಆಸೆ ಅಂಕುರಿಸಿ ಹಸಿಯಾದರೆ ಪ್ರೇಮ

ಬಯಕೆ ಬಾಂದಳ ಕುಣಿಕುಣಿದು ನಲಿದು
ಮಿಡಿವ ಎದೆ ಕಲಕಿ ತೃಷೆಯಾದರೆ ಪ್ರೇಮ

ನರನಾಡಿಗಳಲಿ ನಾದಂತರಂಗ ಮೃದಂಗ
ಹೃದಯ ಮಂಪರಿಸಿ ನಿಶೆಯಾದರೆ ಪ್ರೇಮ

ಅನುಳ ಪ್ರೀತಿಯ ಶಿಶೆ ತುಂಬಿ ತುಳುಕುತ್ತಿರೆ
ಬಾನು ಭುವಿ ರಮಿಸಿ ಒಂದಾದರೆ ಪ್ರೇಮ


About The Author

Leave a Reply

You cannot copy content of this page

Scroll to Top