ಕಾವ್ಯ ಸಂಗಾತಿ
ವಿಜಯಲಕ್ಷ್ಮಿ ಹಂಗರಗಿ
“ಸಾಗರದಾಳದ ಅದ್ಬುತ ಲೋಕ”


ಸಾಗರದಾಳದ
ಅದ್ಭುತ ಲೋಕ,
ನೀಲಿಮೆಯ ಹೊದಿಕೆಯ
ಕನಸಿನ ದೀಪ,
ಅಲೆಗಳ ಏರಿಳಿತದ
ನಾದದಲ್ಲಿ
ಪ್ರಕೃತಿಯ ಗೀತೆ
ಮಿಡಿಯುತಿದೆ ಸೊಗಸಾಗಿ//
ಸಾಗರ ಹರವು
ವಿಲಕ್ಷಣ ರಮ್ಯ,
ಎಲ್ಲೆಡೆ ಜಲಧಿಯ
ವೈಭವ ಕಂಗೊಳಿಸೆ,
ತಂಗಾಳಿಯ ಸ್ಪರ್ಶ
ಮನ ತಣಿಸುತ,
ಅಲೆಗಳ ನಗು
ಹೃದಯ ತೇಲಿಸುತಿದೆ//
ನೋಡಲಷ್ಟು ಮನೋಹರ
ನಿನ್ನ ರೂಪ,
ಶಾಂತ ಲೋಕವೊಂದನ್ನು
ಸೃಜಿಸಿದ ಮಹಿಮೆ,
ಜಲಚರ ಜೀವಿಗಳ
ಸುಂದರ ತಾಣ,
ಬಣ್ಣ ಬಣ್ಣದ ಕನಸಿನ
ಹೊದಿಕೆ ನೀನು//
ಮುತ್ತು, ರತ್ನ
ಹವಳಗಳ ಆಗರ,
ಅಗಾಧ ಗರ್ಭದ
ಅಮೂಲ್ಯ ನಿಧಿ,
ನಿನ್ನೊಳಗಿನ
ರಹಸ್ಯಗಳ ಸಾಲು
ಮಾನವ ಮನವನು
ಸೆಳೆಯುತಿದೆ ಸದಾ//
ಚಂದ್ರನ ಬೆಳಕಲಿ
ಬೆಳ್ಳಿ ತರಂಗ,
ಸೂರ್ಯ ಕಿರಣದಲ್ಲಿ
ಚಿನ್ನದ ಹೊಳಪು,
ಸಾಗರವೇ ನೀ
ಪ್ರಕೃತಿಯ ಕಾವ್ಯ,
ನಿನ್ನ ಸೌಂದರ್ಯ
ಶಾಶ್ವತ ಅದ್ಭುತ//
ವಿಜಯಲಕ್ಷ್ಮಿ ಹಂಗರಗಿ



