ಕಾವ್ಯ ಸಂಗಾತಿ
ಹಮೀದ್ ಹಸನ್ ಮಾಡೂರು
“ಜಿರಳೆ ದಂಗೆ ಸಾರಿದೆ”


ಜಿರಳೆ ಬಂತಯ್ಯ ಜಿರಳೆ
ಎಲ್ಲೆಡೆಯು ಗದ್ದಲ ಎಬ್ಬಿಸಿ
ದುಷ್ಟ ಸ್ವಾರ್ಥಿಗಳ ನಿದ್ದೆಗೆಡಿಸಿ
ಅತ್ತಿತ್ತ ವಾಟ್ಸಾಪ್ ತುಂಬ ಹರಿದಾಡಿಸಿ,!
ದುಷ್ಟ ರಾಜಕೀಯ ನೀತಿಗೆ
ಧರ್ಮ ರಾಜಕೀಯ ಕ್ರಾಂತಿಗೆ
ಕೊಳಕು ಬಾಯಿಯ ಮತಿಭ್ರಾಂತಿಗೆ
ಗೆದ್ದಲು ಸಾಮ್ರಾಜ್ಯಶಾಹಿ ಅವನತಿಗೆ,!
ಯುವ ಜನಾಂಗದ
ಶೋಷಿತ, ತುಳಿತಕ್ಕೊಳಗಾದ
ಅಲ್ಪಸಂಖ್ಯಾತ,ನೊಂದವರಿಗಾದ
ನ್ಯಾಯದ ಪರ ಹೋರಾಡ ಬಂದಿದೆ,!
ಸರ್ವಾಧಿಕಾರಿಗಳ ಮಸ್ತಕ
ನುಸುಳಿ ಮೆದಳಿಗೆ ನೋಯಿಸಿ
ಸತ್ತಂತಿಹರನು ಇದೀಗ ಬಡಿದೆಬ್ಬಿಸಿ
ನ್ಯಾಯಕ್ಕಾಗಿ ಜಿರಳೆ ಧಂಗೆಯ ಸಾರಿದೆ,!
ಕುರ್ಚಿಯಾಸೆಗೆ
ಆಡಳಿತೆಯ ದುರಾಸೆಗೆ
ಮನುಜ ಮನಸುಗಳ ಕೊಳಚೆಗೆ
ದೂಡಿ ಬಿಟ್ಟವರ ಬೆನ್ನಟ್ಟುತ್ತ ಬಂದಿದೆ.!
ಹಮೀದ್ ಹಸನ್ ಮಾಡೂರು



