ಡಾ ಡೋ ನಾ ವೆಂಕಟೇಶ-Metamorphosis
ಕಾವ್ಯ ಸಂಗಾತಿ
Metamorphosis
ಡಾ ಡೋ ನಾ ವೆಂಕಟೇಶ
ಡಾ ಶಶಿಕಾಂತ ಪಟ್ಟಣ ಇವರಿಗೆ ಡಾ . ಡಿ ಎಸ್ ಕರ್ಕಿ ಪ್ರತಿಷ್ಠಾನ ಪ್ರಶಸ್ತಿ
ಪ್ರಶಸ್ತಿ
ಡಾ ಶಶಿಕಾಂತ ಪಟ್ಟಣ ಇವರಿಗೆ
ಡಾ . ಡಿ ಎಸ್ ಕರ್ಕಿ ಪ್ರತಿಷ್ಠಾನ ಪ್ರಶಸ್ತಿ
ಹಮೀದಾ ಬೇಗಂ ದೇಸಾಯಿ-ಗಜಲ್
ಒಳಿತು ಜಗದಿಂದ ಹೋಗುತಿವೆ ಬೇಸರದಿಂದ
ಕೆಡುಕು ಹರಿದು ತುಂಬುತಿವೆ ನಲಿವಿನಿಂದ
ವಿಶ್ವಾಸವೆಲ್ಲಿ ಉಳಿದಿದೆ ವಿಷವರ್ತುಲದಿ
ಒಡಕು ಮಾತುಗಳೇ ಬರುತಿವೆ ಕುಹಕದಿಂದ
ಮಮತೆ ವಾತ್ಸಲ್ಯ ಕಳೆದು ಹೋಗಿವೆ
ಹಣದ ಸದ್ದುಗಳೇ ಕೇಳುತಿವೆ ಥೈಲಿಗಳಿಂದ
ಸೋಗಿನ ವಂಚನೆಯ ಮುಖವಾಡ ಸುತ್ತಲೂ
ಸ್ನೇಹದ ಬಂಧಗಳೇ ಕಳಚಿವೆ ಮನಗಳಿಂದ
ಆಯುಸ್ಸು ಸರಿಯುತಿದೆ ದುಸ್ತರದಿ ಬೇಗಂ
ಒಲವಿನ ಗಳಿಗೆಗಳೇ ಮರೆಯಾಗಿವೆ ಬದುಕಿನಿಂದ
ಎನ್.ಆರ್.ರೂಪಶ್ರೀ ಕವಿತೆ-ಕನ್ನಡಿಯಲ್ಲಿ ಕಂಡ ಮುಖ!
ಕಾವ್ಯಸಂಗಾತಿ
ಕನ್ನಡಿಯಲ್ಲಿ ಕಂಡ ಮುಖ!
ಎನ್.ಆರ್.ರೂಪಶ್ರೀ
ಟಿ.ದಾದಾಪೀರ್ ಕವಿತೆ-ಚಂದ್ರಿಕೆ ನಿನಗೆಂತಹ ಗ್ರಹಣ
ಕಾವ್ಯ ಸಂಗಾತಿ
ಚಂದ್ರಿಕೆ ನಿನಗೆಂತಹ ಗ್ರಹಣ
ಟಿ.ದಾದಾಪೀರ್
ಮಮತಾ ಶಂಕರ್ ಪ್ರಬಂಧ-ಸಲಹುವ ಕಾಯಿಲೆಗಳು……!
ಪ್ರಬಂಧ ಸಂಗಾತಿ
ಸಲಹುವ ಕಾಯಿಲೆಗಳು……!
ಮಮತಾ ಶಂಕರ್
ಅಂಕಣ ಸಂಗಾತಿ
ಒಲವ ಧಾರೆ
ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರ ಅಂಕಣ
ಕವಿಗೆ ಸಮಾಜದ ನೋವುಗಳಿಗೆ ಮಿಡಿಯುವ ಒಲವಿನ ಮನಸ್ಸಿರಲಿ
ಸರ್ಕಾರಗಳು ತಪ್ಪು ಮಾಡಿದಾಗ, ತಪ್ಪು ಹೆಜ್ಜೆಯನ್ನು ಆಡಳಿತದಲ್ಲಿಟ್ಟಾಗ ಅದನ್ನು ಪ್ರಶ್ನಿಸುವ, ವಿರೋಧಿಸುವ ವ್ಯವಸ್ಥೆಯನ್ನು ಸರಿಪಡಿಸಲು ಮಾಡುವ ‘ವಿರೋಧ ಪಕ್ಷದ’ ಸ್ಥಾನ ಬಹಳ ಮುಖ್ಯ. ಅಂತಹ ಮಹತ್ವದ ಸ್ಥಾನವನ್ನು ಹೊಂದಿದ ವಿರೋಧ ಪಕ್ಷವು ಕೆಲವು ಸಲ ಆಡಳಿತ ಪಕ್ಷದೊಂದಿಗೆ ಕೈಜೋಡಿಸಿ ಜನಸಾಮಾನ್ಯರ ನೋವುಗಳಿಗೆ ಕಾರಣವಾಗಿ ಬಿಡುತ್ತದೆ. ಆಗ ಸಾಹಿತಿಯಾದವನು ಕವಿಯಾದವನು, ಬರಹಗಾರನು ಅತ್ಯಂತ ಜಾಗೃತದಿಂದ ಆಡಳಿತ ಪಕ್ಷವನ್ನು ಎಚ್ಚರಿಸಬೇಕಾಗಿದ್ದು ಅಗತ್ಯವಾದ ಕರ್ತವ್ಯವಾಗಿದೆ.