ಕಾವ್ಯ ಸಂಗಾತಿ
ಚಂದ್ರಿಕೆ ನಿನಗೆಂತಹ ಗ್ರಹಣ
ಟಿ.ದಾದಾಪೀರ್
ಚಂದ್ರಿಕೆ ನಿನಗೆಂತ
ಚಂದ್ರ ಗ್ರಹಣ
1)
ಜನ ಆಕಾಶ ನೋಡಿ
ಚಂದ್ರ ಗ್ರಹಣ ಎಂದರು
ಜ್ಯೋತಿಷಿಗಳು
ಜಗತ್ತಿಗೆ ಭೀತಿ ಎಂದರು
ವಿಜ್ಞಾನಿಗಳು ಇದು
ಖಗೋಳದ ನೀತಿ ಎಂದರು
ನಾನು ಮಾತ್ರ ಅವಳು
ಮತ್ತೆ ಮತ್ತೆ
ಶೃಂಗಾರಗೊಳ್ಳುವ
ರೀತಿ ಅಂದೆ
2)
ವಿಜ್ಞಾನಿಯ ಮಾತು ಕೇಳಿ
ದುಬಿ೯ನು ಹಿಡಿದು
ನಿನ್ನ ನೋಡಲಿ ಏಕೇ ?
ಕಣ್ಣು ಮುಚ್ಚಿದರು
ಕಾಡುವುದು ನಿನ್ನ ಬಿಂಬ
3)
ನನ್ನ ಕಾವ್ಯಗಳಲ್ಲಿ
ಶೃಂಗಾರಗೊಂಡ
ಚೆಲುವ ಚಂದ್ರಿಕೆಯೇ
ನಿನ್ನ ಬರಿಗಣ್ಣಿನಲ್ಲಿ
ನೋಡುವುದು
ಅಪಾಯ ಎನ್ನುವುದು
ಸೌಂದಯ೯ ವಿರೋಧಿಗಳ
ಸಂಚಲ್ಲವೇ..?
4)
ನಿನ್ನ ಬರಿಗಣ್ಣಿ
ನೋಡಿದರು
ಹಾನಿಯಾಗೋದು
ಮಾತ್ರ ಹೃದಯಕ್ಕೆ