ಕಾವ್ಯಸಂಗಾತಿ
ಕನ್ನಡಿಯಲ್ಲಿ ಕಂಡ ಮುಖ!
ಎನ್.ಆರ್.ರೂಪಶ್ರೀ
ಮನಸ್ಸಿನ ಕನ್ನಡಿಯಲ್ಲಿ
ಅಸ್ಪಷ್ಟ ಮುಖಗಳು
ಕಣ್ಣಿಗೆ ತುಸುವೇ ಗೋಚರ
ಎಲ್ಲೋ ಹರಿದಾಡಿದ ಹಾಗೆ
ಪಕ್ಕದಲ್ಲೆ ತೆವಳಿದ ಹಾಗೆ
ನಸುನಗುತ್ತಾ ಮುಗುಳ್ನಗೆ
ಬೀರಿದ ಹಾಗೆ
ಮತ್ತೆ ಕನ್ನಡಿ ಸರಿ ಮಾಡಿ
ಧೂಳು ಒರೆಸಿ ಹಿಡಿದರೆ ಮತ್ತದೇ
ಅಸ್ಪಷ್ಟ ಮುಖಗಳು
ಮಾತಿನಲ್ಲಿ ಮರೆತ
ಮೌನದ ಮುಖಗಳು
ಸುಕ್ಕು ಸುಕ್ಕಾದ ನೆರಿಗೆಯ ಮುಖಗಳು
ಅರೇ, ಪಕ್ಕದ ಮನೆಯ ಮಲ್ಲಿಯ ಮುಖ, ಇಲ್ಲ,
ಸರಿಯಾಗಿ ಕಾಣುತ್ತಿಲ್ಲ
ಮನಸ್ಸಿನಲ್ಲಿ ಗೋಚರಿಸುತ್ತಿಲ್ಲ
ಅಳು, ನಗು, ಕೋಪ ,ತಾಪ
ಕನ್ನಡಿಯಲ್ಲಿ ಬಂದು
ಸುಳಿದು ಹೋಯಿತು.
ಬಸವಳಿಯಿತು.
ಕನ್ನಡಿಯಲ್ಲಿ ಕಣ್ಣಿಟ್ಟು ನೋಡಿದರೆ ಎದುರಿಗಿರುವುದು ಪರಿಚಿತ ಮುಖ
ಬೆವರಿಳಿಯಿತು
ಬೆಚ್ಚಿದಂತಾಯಿತು
ನಗೆಯಿಲ್ಲದ ಖುಷಿಯಿಲ್ಲದ
ಭರವಸೆಯ ಕುಡಿಗಳಿಲ್ಲದ
ಇದ್ದು ಇಲ್ಲದಂತಿರುವ
ಅಸ್ಥಿ ಪಂಜರಗಳು
ಸಂಬಂಧಗಳ ಸಹಚರಗಳು.
ಕನ್ನಡಿ ನಗುತ್ತಿತ್ತು
ಮುಂದಿನ ಮುಖದ ಹುಡುಕಾಟದಲ್ಲಿ ತಾಖಲಾಟದಲ್ಲಿ
ದ್ವಂದ್ವಗಳ ಹೊಯ್ದಾಟದಲ್ಲಿ.
ಎನ್.ಆರ್.ರೂಪಶ್ರೀ